ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಒಪ್ಪಿತೋ ಹರಿ ನಿಮ್ಮ ಚಲ್ವಿಕೇ | ಹಯವದನ | Oppito Hari Nimma | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಒಪ್ಪಿತೋ ಹರಿ ನಿಮ್ಮ ಚಲ್ವಿಕೇ
ಹೆಚ್ಚಿ ಗೋಕುಲ ಇಂದಿರಾನನೆ ||ಪ||

ರಮಣನಾಥನೇ ಮಲಯದಾಯಕಾ
ಶ್ರಮವ ಕೊಡುವುದು ಅಲ್ಲವೊ ಧರ ||೧||

ಯಮುನೆಯಾರುಷಾ ಸರ್ಪದಾ ಭಯಾ
ವೃಷಭನಾಭಯಾ ರಾಕ್ಷಸಾಭಯ ||೨||

ಏಳು ದಿವಸದಾ ಮಳೆಗಳಾಭಯಾ
ಎಲ್ಲ ಗೆದ್ದೆವೋ ನಿಮ್ಮ ಪರಿಯಲಿ ||೩||

ದರ್ಶನ ಮಾತ್ರದೀ ಪಾಪನಾಶನಾ
ಪದ್ಮಜಾಕ್ಷಿತೋ ಧರಣಿ ಮಂಡಲ ||೪||

ಅತ್ತೆ ಮಾವರಾ ಮಾತು ಕೇಳದೇ
ಇತ್ತ ಬಂದೆವೋ ಚಿತ್ತ ಭ್ರಮೆಯಲಿ ||೫||

ಕೃಷ್ಣವಿರಹದೀ ಬಂದೆವಲ್ಲದೇ
ಮಂದಮಾರುತ ಗಾಳಿ ಬೀಸಲು ||೬||

ಕೃಷ್ಣ ಬಂದನೇ ಫಲವ ತಂದನೇ
ಸಖಿಯರೆಲ್ಲರು ಸಂತೋಷಕಾದರು ||೭||

ಪೀತಾಂಬರಧಾರಿಯಾ ದಿವ್ಯ ಮಾಲಿಕೇ
ಕೃಷ್ಣರಾಯರಾ ಕೊರಳಿಗ್ಹಾಕಲು ||೮||

ಇದು ಭಾಗವತವೆನ್ನಿ
ಇದು ಗೋಪಿಕಾ ಗೀತಾ ||೯||

ಇದ ಹೇಳಿ ಕೇಳಿದಂತ ಸಜ್ಜನರಿಗೆ
ಹಯವದನನು ಮುಕ್ತಿಕೊಡುವನು ||೧೦|| 

oppitO hari nimma calvikE
hecci gOkula iMdiraanane ||pa||

ramaNanaathanE malayadaayakaa
Sramava koDuvudu allavo dhara ||1||

yamuneyaaruShaa sarpadaa bhayaa
vRuShabhanaaBayaa raakShasaabhaya ||2||

ELu divasadaa maLegaLaabhayaa
ella geddevO nimma pariyali ||3||

darshana maatradI paapanaaSanaa
padmajaakShitO dharaNi maMDala ||4||

atte maavaraa maatu kELadE
itta baMdevO citta bhrameyali ||5||
 
kRuShNavirahadI baMdevalladE
maMdamaaruta gaaLi bIsalu ||6||

kRuShNa baMdanE phalava taMdanE
saKiyarellaru saMtOShakaadaru ||7||

pItaaMbaradhaariyaa divya maalikE
kRuShNaraayaraa koraLig~haakalu ||8||

idu bhaagavatavenni
idu gOpikaa gItaa ||9||

ida hELi kELidaMta sajjanarige
hayavadananu muktikoDuvanu ||10|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru