ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಉಡುಪಿನಕೃಷ್ಣ ಸಕಲ ಜಗದೀಶ | ಹಯವದನ | Udupina Krishna Sakala | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)

Kruti:Sri Vadirajaru (Hayavadana)



ಉಡುಪಿನಕೃಷ್ಣ ಸಕಲ ಜಗದೀಶ 
ಬಿಡದೆನ್ನ ಸಲಹೋ ಮಧ್ವಹೃದಯ ವಾಸ ||ಪ||

ವಿಕಸಿತ ನಯನ ಜಲಜಾಸನನ
ಪ್ರಕಟಿತ ತಾತ ದಿತಿಕುಲ ದಮನ
ತ್ರಿಕರಣ ಪರಿಯ ತ್ರಿವಿಧತಾಪ ಶಮನ
ಸುಕುಮಾರರೂಪ ಮೋಹನ ರಮಾರಮಣ  ||೧||

ಎಸೆವ ಕಿರುಡೊಳ್ಳಿನ ಶುಭಾಕಾರ ಗಂಡ
ಪಸುಳೆಯ ಭಾವದಿ ಮೆರೆವ ಪ್ರಚಂಡ
ಶಶಿಸಮವದನ ಕುಂಡಲಶೋಭಿಗಂಡ
ಅಸುರ ಸಂಹಾರ ದೋರ್ಧೃತಪಾಶದಂಡ ||೨||

ಶ್ರುತಿಯರು ಸೇವೆಯರು ಬಿಡದೆ ಬಣ್ಣಿಸುವ
ಪ್ರತಿಯಿಲ್ಲದದುಭುತ ಮಹಿಮನು ದಾವ
ಯತಿಕುಲ ಸೇವ್ಯ ಹಯವದನ ದೇವ
ಪತಿಕರಿಸೊ ನಮ್ಮ ಭವವನ ದಾವ  ||೩||

uDupinakRuShNa sakala jagadIsha 
biDadenna salahO madhvahRudaya vaasa ||pa||

vikasita nayana jalajaasanana
prakaTita taata ditikula damana
trikaraNa pariya trividhataapa shamana
sukumaararUpa mOhana ramaaramaNa  ||1||

eseva kiruDoLLina Subhaakaara gaMDa
pasuLeya bhaavadi mereva pracaMDa
shashisamavadana kuMDalashObhigaMDa
asura saMhaara dOrdhRutapaaSadaMDa ||2||

shrutiyaru sEveyaru biDade baNNisuva
pratiyilladadubhuta mahimanu daava
yatikula sEvya hayavadana dEva
patikariso namma bhavavana daava  ||3||

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru