Posts

Showing posts from June, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಂದ ಕೃಷ್ಣ ಚಂದದಿಂದ | ವಾಸುದೇವ ವಿಠ್ಠಲ | Banda Krishna | Vasudeva Vithala

Image
ರಚನೆ: ಶ್ರೀ ವಾಸುದೇವ ವಿಠ್ಠಲ ದಾಸರು  Kriti :Sri Vasudeva Vittala Dasaru ಬಂದ ಕೃಷ್ಣ ಚಂದದಿಂದ|  ಬಂದ ನೋಡೇ ಗೋಪವೃಂದದಿಂದಾ- ನಂದಿಸುತ್ತ ಬಂದ ನೋಡೇ ||ಪ|| ಗೋವ ಮೇವನೀವ ದೇವ ಬಂದ ನೋಡೇ| ಸ್ವಾಮಿ  ದೇವತಾವಾದ್ಯಗಳಿಂದ ಬಂದ ನೋಡೇ ||೧|| ಪಾಪ ಪೋಪ ಗೋಪ ರೂಪ ಬಂದ ನೋಡೇ| ಸ್ವಾಮಿ  ತಾಪಲೋಪ ಲಾಪಟೋಪ ಬಂದ ನೋಡೇ ||೨|| ಭೂಸುರ ಸುಖ ಸೂಸುತ್ತ ಬಂದ ನೋಡೇ| ಸ್ವಾಮಿ  ವಾಸುದೇವ ವಿಠ್ಠಲ ತಾ ಬಂದ ನೋಡೇ ||೩|| baMda kRuShNa caMdadiMda|  baMda nODE gOpavRuMdadiMdA- naMdisutta baMda nODE ||pa||   gOva mEvanIva dEva baMda nODE| svAmi  dEvatAvAdyagaLiMda baMda nODE ||1||   pApa pOpa gOpa rUpa baMda nODE| svAmi  tApalOpa lApaTOpa baMda nODE ||2||   BUsura suKa sUsutta baMda nODE| svAmi  vAsudEva viThThala tA baMda nODE ||3||

ಮಂದಿರಕ್ಕೆ ಬಾ ಬಾ ಹರಿ | ಶ್ರೀ ಕಮಲೇಶ ವಿಠ್ಠಲ | Mandirakke Ba Ba Hari | Sri Kamalesha Vithala

Image
ಸಾಹಿತ್ಯ :    ಶ್ರೀ ಕಮಲೇಶ ವಿಠಲ ದಾಸರು   Kruti: Sri Kamalesha Vithala Dasaru ಮಂದಿರಕ್ಕೆ ಬಾ ಬಾ ಹರಿ ಮನ ಮಂದಿರಕ್ಕೆ ಬಾ ಬಾ || ಪ || ವಾರಿಜಭವ ಮೊದಲಾದ ಅಮರರ ಪರಿವಾರ ಸಹಿತ ಸುಖ ತೋರುವಂತೆ || ೧ || ದಯ ಮಾಡೆನ್ನಲಿ ಇಭಗೊಲಿದವನೆ ಮೋದಗೊಳಿಸು ಪ್ರಹ್ಲಾದವರದ || ೨ || ಶ್ರೀ ಕಮಲೇಶ ವಿಠ್ಠಲ ಪಾಲಿಸೊ  ಅನುಮಾನ ಬೇಡ ತವ ದಾಸನೆನಿಸೊ || ೩ || maMdirakke baa baa hari mana maMdirakke baa baa || pa || vaarijabhava modalaada amarara parivaara sahita suKa tOruvaMte || 1 || daya maaDennali ibhagolidavane mOdagoLisu prahlaadavarada || 2 || shrI kamalEsha viThThala paaliso anumaana bEDa tava daasaneniso || 3 ||

ಕಾಯಯ್ಯ ಕರುಣಿ | ಹಯವದನ | Kaayayya Karuni | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕಾಯಯ್ಯ ಕರುಣಿ ಮುಕ್ತಿಸರಣಿ ಮೋಹಾಂಧಕಾರ ತರಣಿ ಕರುಣಿ ಕಾಯಯ್ಯ ||ಪ|| ನಾನಾ ಯೋನಿಗಳಲ್ಲಿ ನಿಂದು ನೊಂದೆ ಹೀನತೆಯ ಕಳೆದು ಕಾಯಯ್ಯ ಗೋವಿಂದ ಮುಕುಂದ ಇದೇ ಚೆಂದ ||೧|| ನೀನಲ್ಲದನ್ಯರನು ನಾನರಿಯೆ ಜ್ಞಾನಿಗಳರಸ ಕಾದುಕೊಂಬುದಿನ್ನಾರು  ನಿನ್ನ ತೋರು ಮುಂದಾರು ||೨|| ಶ್ರೀ ಹಯವದನ ಪ್ರಭುವೆ ನೀನು ಸರ್ವಜ್ಞ ನೇಹವನು ಮಾಡು ಎಂದೆಂದು ನಾ ದಾಸ  ಶ್ರೀನಿವಾಸ ಪಾಪನಾಶ ||೩|| kaayayya karuNi muktisaraNi mOhaaMdhakaara taraNi karuNi kaayayya ||pa|| naanaa yOnigaLalli niMdu noMde hInateya kaLedu kaayayya gOviMda mukuMda idE ceMda ||1|| nInalladanyaranu naanariye jnaanigaLarasa kaadukoMbudinnaaru  ninna tOru muMdaaru ||2|| shrI hayavadana praBuve nInu sarvajna nEhavanu maaDu eMdeMdu naa daasa  SrInivaasa paapanaaSa ||3||

ದಯವಾಗೋ ದಯವಾಗೋ | ಜಗನ್ನಾಥ ವಿಠಲ | Dayavago Dayavago | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು  Kruti:Sri Jagannatha Dasaru ದಯವಾಗೋ ದಯವಾಗೋ|  ಹಯಮುಖ ಭಯಕೃದ್ಭಯ ನಾಶ ನೀ | ಖರಮುಖ ನರಕಾದ್ಯರ ಸಂಹರಿಸಿದ |  ಪರಮ ಪುರುಷ ಸರ್ವದ ಭಯ ಹರನೆ |೧| ದ್ರೌಪದಿ ಮೊರೆ ಕೇಳಾಪದ್ಬಾಂಧವ |  ನೀ ಪೊರೆದೆಮ್ಮ ರಮಾಪತಿ ನಿರತ |೨| ಅಪ್ರಮೇಯ ನೀ ಕ್ಷಿಪ್ರದಿ ಒಲಿದು| ಜ- ಯಪ್ರದನಾಗುವ ಪ್ರಹ್ಲಾದ ವರದನೆ |೩| ಶತ್ರುತಾಪನ ಜಗತ್ರಯ ವ್ಯಾಪ್ತ | ಪ-  ವಿತ್ರ ಪಾಣಿ ಸರ್ವತ್ರದಿ ಎಮಗೆ |೪| ಯಾತಕೆ ಎನ್ನನು ಭೀತಿಗೊಳಿಪೆ | ಪುರು- ಹೂತನನುಜ ಜಗನ್ನಾಥ ವಿಠಲ |೫| dayavAgO dayavAgO|  hayamuKa BayakRudBaya nASa nI |   KaramuKa narakAdyara saMharisida |  parama puruSha sarvada Baya harane |1|   draupadi more kELApadbAMdhava |  nI poredemma ramApati nirata |2|   apramEya nI kShipradi olidu| ja- yapradanAguva prahlAda varadane |3|   SatrutApana jagatraya vyApta | pa-  vitra pANi sarvatradi emage |4|   yAtake ennanu BItigoLipe | puru- hUtananuja jagannAtha viThala |5|

ನೋಡಿದೆ ಶ್ರೀ ಕೃಷ್ಣನ | ಹಯವದನ | Nodide Sri Krishna Naa | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನೋಡಿದೆ ಶ್ರೀ ಕೃಷ್ಣನ ನೋಡಿದೆ  || ಪ || ನೋಡಿದೆ ಒಂಭತ್ತು ಗೂಡಿನ ಕಿಟಕಿಯೊಳ್- ಕೂಡಿದ ಮಂದಿಯೊಳ್ಗಾಡಿಕಾರನನಿಂದು || ಅಪ || ನಾರಿಪುರುಷರೊಂದುಗೂಡಿ ಮುಂದೆ ದಾರಿಯ ಬಿಡದೆ ಹೋರ್ಯಾಡಿ ದೇಹ  ಯಾರದಂತೆ ಪುಡಿ ಪುಡಿ ಮತ್ತೆ ಶ್ರೀರಮಣನ ಪಾಡಿಬೇಡಿ ||ಆಹಾ|| ಸುತ್ತ  ಸೇರಿದ ಜನರಿವರ ಮಧ್ಯದಿ  ಚಾರು ಮೌಕ್ತಿಕದ ಮಣಿಹಾರ ಶೃಂಗಾರನ್ನ || ೧ || ಅಂಗದೊಳಿಹ ದಿವ್ಯಾಭರಣ ಕನ ಕಂಗಳೊಪ್ಪಿದ ರವಿಕಿರಣ ಮುನಿ  ಪುಂಗವೆ ವಂದಿಪ ಚರಣಕಮಲಂಗಳ ನೆನೆವರ ಕರುಣಾ ||ಆಹಾ|| ಹಿಂಗದೆ ಪೊರೆವ ಶ್ರೀರಂಗನುತ್ಸವಕೆಂದು  ಮಂಗಳಾರತಿಯಾಗಿ ಸಂಗಡ ಪೊರಡಲು || ೨ || ಭರದಿಂದ ಪಲ್ಲಕ್ಕಿನೇರಿ  ಮಧ್ವಸರೋವರದೆಡೆಯನು ಸಾರಿ ಸುತ್ತ  ಮೆರೆವ ದೀಪದಿಂಬೀರಿ ನೋಳ್ಪಜನರಿಗೆ ಜಲಕ್ರೀಡೆ ತೋರಿ ||ಆಹಾ||  ಸಿರಿ ಅರಸನು ಹಯವದನನೀಪರಿ ಮೆರೆವ ಉಡುಪಿಯೊ- ಳ್ಪರಿಯಾಯ ವಿನೋದವನ್ನು || ೩ || nODide SrI kRuShNana nODide  || pa || nODide oMBattu gUDina kiTakiyo- LkUDida maMdiyoLgADikArananiMdu || apa || nAripuruSharoMdugUDi muMde dAriya biDade hOryADi dEha  yAradaMte puDi puDi matte SrIramaNana pADibEDi ||AhA|| sutta  sErida janarivara madhyadi  cAru mauktikada ...

ಸೂತ್ರನಾಮಕ ಸುಂದರನೇಕ | ವ್ಯಾಸವಿಠಲ | Sootranamaka Sundaraneka | Vyasa Vithala

Image
ಸಾಹಿತ್ಯ : ಶ್ರೀ ವ್ಯಾಸ ವಿಠಲ ದಾಸರು  Kruti:Sri Vyasa Vithala Dasaru ಸೂತ್ರನಾಮಕ ಸುಂದರನೇಕ ಸೂತ್ರನಾಮಕ ||ಪ|| ಸೂತ್ರನಾಮಕ ಸತ್ಪಾತ್ರ ಗರುಡ ಸಿಖಿನೇತ್ರ ವಿನುತ ಶುಭಗಾತ್ರ ಪವಿತ್ರ ||ಅಪ|| ರಾಮ ಪದಾಬ್ಜ ಭೃಂಗ ರಾವಣ ಮದಭಂಗ ಕಾಮಜ ಸಿಂಗ ತಾಮಸ ಕುಲವನ ಧೂಮಕೇತು ಬುಧ ಸೌಮನಸಾಗ್ರಣಿ ಕಾಮಿತ ಫಲದಾ ||೧|| ಪಾಂಡುನಂದನ ಪಾಲಿಸೋ ಎನ್ನ ಅಖಂಡ ಪಾವನ ಅಂಡಜಾಧಿಪನ ಕಂಡು ಭಜಿಪುದೋರ್ದಂಡ ಖಳಕುಲ ಚಂಡ ಪ್ರಚಂಡ ||೨|| ಜ್ಞಾನದಾಯಕ ಆನಂದತೀರ್ಥದೀನ ಪೋಷಕ ಭಾನುಕೋಟಿ ಶ್ರೀ ವ್ಯಾಸವಿಠಲನ ಧ್ಯಾನದೊಳಿಹ ಸನ್ಮಾನಸ ಹಂಸ ||೩|| sUtranAmaka suMdaranEka sUtranAmaka ||pa|| sUtranAmaka satpAtra garuDa siKinEtra vinuta SuBagAtra pavitra ||apa||   rAma padAbja BRuMga rAvaNa madaBaMga kAmaja siMga tAmasa kulavana dhUmakEtu budha saumanasAgraNi kAmita PaladA ||1||   pAMDunaMdana pAlisO enna aKaMDa pAvana aMdajAdhipana kaMDu BajipudOrdaMDa KaLakula caMDa pracaMDa ||2||   j~jAnadAyaka AnaMdatIrthadIna pOShaka BAnukOTi SrI vyAsaviThalana dhyAnadoLiha sanmAnasa haMsa ||3||

ಪಾಲಿಸೇ ಪದುಮಾಲಯೆ | ವಿಜಯ ವಿಠಲ | Paalise Padumaalaye | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಪಾಲಿಸೇ ಪದುಮಾಲಯೆ ನೀನೇ ಗತಿ ||ಪ| ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದಗೋಕುಲ || ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ||ಅಪ|| ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ | ವನು ನಂಬಿದೆ ನೀ ಬಲ್ಲೆ ತಡಮಾಡದೆಲೆ || ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣ ಸಂಪನ್ನ ರಕ್ಕಸನನ್ನು ಸೀಳಿದ ಪನ್ನಗಾದ್ರಿ ನಿವಾಸನ ಪ್ರಿಯೆ ||೧|| ಅರಿಯದ ತರಳನೆಂದು ಶ್ರೀಪತಿ ಸತಿ ಕರುಣದಿ ಸಲಹೆ ಬಂದು ಕಾರುಣ್ಯ ಸಿಂಧು | ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖರು ಸುರರ ಬಾಧಿಸೆ | ಹರಿವರರ ದಂಡೆತ್ತಿ ಬಹು ಮುಖ ದುರುಳನ ಶಿರ ತರಿದನ ಪ್ರಿಯೆ ||೨|| ಅಜಮನಸಿಜ ಜನನಿ ಅಂಬುಜ ಪಾಣಿ ಭುಜಗ ಸನ್ನಿಭ ವೇಣಿ ನಿತ್ಯ ಕಲ್ಯಾಣಿ | ಕುಜನ ಮರ್ಧನ ವಿಜಯವಿಠಲನ ಭಜಿಸಿ ಪಾಡುವ ಭಕ್ತ ಕೂಟವ ನಿಜದಿ ಸಲಹುವೆನೆಂಬ  ಬಿರುದಿನ ವಿಜಯ ಸಾರಥಿ ವಿಶ್ವಂಭರ ಪ್ರಿಯೆ ||೩|| pAlisE padumAlaye nInE gati ||pa|   bAlakanu tAnAgi gOpige lIleyiMdali naMdagOkula || bAleyara mOhisuta asurara kAlanenisida bAlakana priye ||apa||   anyara neneyalolle ninnaya pAda | vanu naMbide nI balle taDamADadele || ciNNa kareyalu Ganna mahimanu unnatada rUpinali guNa saMpanna rakkasanannu sILida pannagAdri nivAsana p...

ವೈದ್ಯನ ನಾನರಿಯೆ ಭವರೋಗಕೆ | ಪುರಂದರ ವಿಠಲ | Vaidya Nanariye | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವೈದ್ಯನ ನಾನರಿಯೆ ಭವರೋಗಕೆ ವೈದ್ಯನು ನೀ ಹರಿಯೆ ||ಪ|| ಕೃಷ್ಣನೇ ಕೈಪಿಡಿದು ಕಪಟದಿ ಉಷ್ಣವಾಯುವ ಜರಿದು ವಿಷ್ಣುಭಕ್ತಿ ನಿನ್ನ ಸೇವಕಗಿತ್ತು ಉತ್ಕೃಷ್ಟನ ಮಾಡೆನ್ನ ಕಷ್ಟವ ಪಡಿಸದೆ ||೧|| ಹರಿ ನಿಮ್ಮ ಶರಣೆಂಬೊ ರಸದಲಿ ಚರಣ ಧ್ಯಾನವನಿತ್ತು  ಗುರುತರ ಮಾತ್ರೆಗಳೆನಗೆ ಕೊಟ್ಟು ದುರಿತ ಪಾರುಗೈವ ಬಂಧು ನೀನಲ್ಲದೆ ||೨|| ನಿನ್ನ ದಾಸ ನಾನು ದುರಿತಗಳೆನ್ನ ಕಾಡುವುದೇನು ಉಚಿತವಯ್ಯ ಘನ್ನ ಶ್ರೀಪುರಂದರವಿಠಲರಾಯನೆ ಎನ್ನ ದುರಿತವ ಹರಿಸುವನಲ್ಲದೆ ||೩||  vaidyana naanariye bhavarOgake vaidyanu nI hariye ||pa|| bhavarOgake baMdhu nIne ||apa|| kRuShNanE kaipiDidu kapaTadi uShNavaayuva jaridu viShNubhakti ninna sEvakagittu utkRuShTana maaDenna kaShTava paDisade ||1|| hari nimma SaraNeMbo rasadali caraNa dhyaanavanittu  gurutara maatregaLenage koTTu durita paarugaiva baMdhu nInallade ||2|| ninna daasa naanu duritagaLenna kaaDuvudEnu ucitavayya Ganna shrIpuraMdaraviThalaraayane enna duritava harisuvanallade ||3|| 

ದೇವರ ದೇವನೆ ಬಾರೋ | ಹಯವದನ | Devara Devane Baaro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾರಾಯಣ ನಾರಾಯಣ ನಾರಾಯಣ ನಾರಾಯಣ ||ಪ|| ದೇವರದೇವನೆ ಬಾರೊ ದೇವಕಿನಂದನ ಬಾರೊ ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ||ಅಪ|| ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ ಸತ್ಯವ್ರತನಿಗೊಲಿದ ಮಚ್ಛ ಬಾರೊ ಹರಿಯೆ ||೧|| ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ ಗಿರಿಯ ಬೆನ್ನಲ್ಲಿ ಪೊತ್ತ ಕೂರ್ಮ ಬಾರೊ ಹರಿಯೆ ||೨|| ಧರೆಯನುದ್ಧರಿಸಲು ವರಾಹನಾದವನೆ ಹಿರಣ್ಯಾಕ್ಷನ ಸೀಳ್ದ ಧೀರ ಬಾರೊ ಹರಿಯೆ ||೩|| ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ - ಕಂಬದಿಂದ ಉದಿಸಿದ ಡಿಂಬ ಬಾರೊ ಹರಿಯೆ ||೪|| ಮಾಣವಕ ವೇಷನಾಗಿ ಕ್ಷೋಣಿ ಅಳೆದವನೆ ದಾನವನ ಸೋಲಿಸಿದ ಜಾಣ ಬಾರೊ ಹರಿಯೆ ||೫|| ಕಡಿದು ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ ಪಿಡಿದುಗ್ರ ಒಡೆಯ ಬಾರೊ ಹರಿಯೆ ||೬|| ವೃಂದಾರಕವಂದ್ಯ ಸೇತುಬಂಧದಿ ದಶಕಂದರನ  ಕೊಂದ ರಾಮಚಂದ್ರ ಬಾರೊ ಹರಿಯೆ ||೭|| ಮಲ್ಲರನೆಲ್ಲ ಸೀಳಿ ಬಲ್ಲಿದ ಮಾವನ ಕೊಂದೆ ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ ||೮|| ಬೌದ್ಧನಾಗಿ ದೈತ್ಯರಿಗೆ ಶುದ್ಧಬದ್ಧ ದಯತೋರಿ ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ ||೯|| ಕರ್ಕಶದ ಖಳರನ್ನು ಕಲ್ಕಿರೂಪನಾಗಿ ಮೂಲೆ _ ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ ||೧೦|| ವಿಜಯ ಹಯವದನ ಭಜಕರ ಭಾಗ್ಯನಿಧಿ ಸುಜನಾಬ್ಧಿ ವಾದಿರಾಜನ ತೇಜ ಬಾರೊ ಹರಿಯೆ ||೧೧|| naaraayaNa naaraayaNa naaraayaNa naaraayaNa ||p...

ಸುಲಭ ರಂಗಯ್ಯನ ಸೇವೆ | ಪುರಂದರ ವಿಠಲ | Sulabha Rangayyana Seve | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸುಲಭ ಸುಲಭ ಸುಲಭ ಸುಲಭ ||ಪ|| ಸುಲಭ ರಂಗಯ್ಯನ ಸೇವೆ ಸುಲಭ ಸುಲಭ  ಸುಲಭ ಕೃಷ್ಣಯ್ಯನ ಸೇವೆ ಸುಲಭ ||ಅಪ|| ಅಡವಿ ಶ್ರೀ ತುಳಸಿಯ ಅನುಗ್ರಹದಿಂದ ತಂದು ಮುಡಿಪು ಹಾಕಿಸಿ ಕೊಂಬೊ ಅಖಿಲ ರಂಗಯ್ಯನ ಸೇವೆ ||೧|| ಮುಷ್ಟಿ ತುಂಬವಲಕ್ಕಿ ಕೊಟ್ಟ ಸುಧಾಮಗೆ ಅಷ್ಟೈಶ್ವರ್ಯ  ಕೊಟ್ಟ ಅಖಿಲ ಕೃಷ್ಣಯ್ಯನ ಸೇವೆ ||೨|| ಬಡವ ಬಲ್ಲಿದನೆಂದು ಕಡೆಗೆ ಸಂಪತ್ತ ಕೊಟ್ಟು  ಕರುಣದಿ ಕಾಯೋ ನಮ್ಮ ಪುರಂದರ ವಿಠಲ  ||೩|| sulabha sulabha sulabha sulabha ||pa|| sulabha raMgayyana sEve sulabha sulabha  sulabha kRuShNayyana sEve sulabha ||apa|| aDavi shrI tuLasiya anugrahadiMda taMdu muDipu haakisi koMbo akhila raMgayyana sEve ||1|| muShTi tuMbavalakki koTTa sudhaamage aShTaishvarya  koTTa akhila kRuShNayyana sEve ||2|| baDava ballidaneMdu kaDege saMpatta koTTu  karuNadi kaayO namma puraMdara viThala  ||3||  

ಹರಿ ಎನ್ನು ಹರಿ ಎನ್ನು | ಪುರಂದರ ವಿಠಲ | Hari Ennu Hari Ennu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹರಿ ಎನ್ನು ಹರಿ ಎನ್ನು ಹರಿ ಎನ್ನು ಪ್ರಾಣಿ ||ಪ|| ಹರಿ ಎನ್ನದಿದ್ದರೆ ನರಹರಿ ಆಣೆ ||ಅಪ|| ಹೆಂಡಿರು ಮಕ್ಕಳು ಎರವೋರು ಪ್ರಾಣಿ|  ಕೊಂಡು ಹೋಗುವಾಗ ಒಬ್ಬರ ಕಾಣೆ ||೧|| ದಾನವಿಲ್ಲದ ದ್ರವ್ಯ ಗಳಿಸಿದ್ಯೋ ಪ್ರಾಣಿ|  ಪ್ರಾಣ ಹೋಗುವಾಗ ಕಾಣೆ ದುಗ್ಗಾಣಿ ||೨|| ನೀರ ಮೇಲನ ಗುಳ್ಳೆ ಸಂಸಾರ ಪ್ರಾಣಿ|  ಪುರಂದರ ವಿಠಲನು ಸಾರಿದ ಪ್ರಾಣಿ ||೩|| hari ennu hari ennu hari ennu prANi ||pa|| hari ennadiddare narahari ANe ||apa|| heMDiru makkaLu eravOru prANi|  koMDu hOguvAga obbara kANe ||1|| dAnavillada dravya gaLisidyO prANi|  prANa hOguvAga kANe duggANi ||2|| nIra mElana guLLe saMsAra prANi|  puraMdara viThalanu sArida prANi ||3||

ಶ್ರೀ ಭಾಗೀರಥಿ ತಾಯೇ | ವಿಜಯ ವಿಠಲ | Sri Bhageerathi Taye | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti:Sri Vijaya Dasaru ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ  ಶ್ರೀ ಭೂರಮಣನ ತನಯೇ ||ಪ|| ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು ಇನ್ನು ನೀ ಮರಿಸದೇ  ಪುಣ್ಯನರನ ಮಾಡೊ ಪೂತೋಭಾವವೆಂದು  ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ ||೧|| ಶಿವ ನಿನ್ನ ಶಿರದಲ್ಲಿ ಧರಿಸಿದ ಕಾರಣ  ಪವಿತ್ರಾಂಗನಾದನೆಂದು  ಅವನಿಯೊಳಗೆ ಮಹಾಕವಿಜನ ಪೇಳಿದ ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ ||೨|| ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ ಹಾರಿಹೋಗುವದು ಸಿದ್ಧಾ ಶ್ರೀರಮಣ ವಿಜಯವಿಠ್ಠಲರೇಯನ ಪಾದ ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವುದು || ೩ || shrI bhaagIrathi taayE shRuMgaara shubhakaaye  shrI bhUramaNana tanayE ||pa|| ninna yaatrigOsuga enna manasu puTTitu innu nI marisadE  puNyanarana maaDo pUtObhaavaveMdu  dhanya jana maanyaa bhaktajana prasannE ||1|| shiva ninna shiradalli dharisida kaaraNa  pavitraaMganaadaneMdu  avaniyoLage mahaakavijana pELida shravaNadiMdali bhakutiyiMdali niMde ||2|| dUradiMdali ninna smarisidavara paapa haarihOguvadu siddhaa shrIramaNa vijayaviThThalarEyana paada vaarija pogaLuvaMte buddhi paalisuvudu...

ಶರಣು ಸಕಲ ಪ್ರಾಣನಾಥ | ಮಧ್ವಪ್ರಸನ್ನವೆಂಕಟ | Sharanu Sakala Prananatha | Madhwa Prasanna Venkata

Image
  ಸಾಹಿತ್ಯ : ಶ್ರೀ ಮಧ್ವಪ್ರಸನ್ನವೆಂಕಟ ದಾಸರು Kruti:Sri Madhwaprasanna Venkata Dasaru ಶರಣು ಸಕಲ ಪ್ರಾಣನಾಥ ಸರಸಿಜಭವ ಪದವಿಭೋಕ್ತ ಮೂರವತಾರಿ ಮುಖ್ಯಪ್ರಾಣ ಹರಿಪರಾಯಣ ತೇ ನಮೋ || ಪ || ರಕ್ತಶಿವನ ಬಿಸುಟು ಜಗದ ಕರ್ತ ರಘು ಪುಂಗವನ ಪದದಿ ಭಕ್ತಿ ಬಲಿದು ಇತರ ವಿಷಯ  ಚಿತ್ತನಾಗದ ಸುಗುಣಧೀ ಹತ್ತು ಹೆಡಕಿನವನ ವನವ ಕಿತ್ತು ಪುರವನುರುಹಿ ಭಯವ ಬಿತ್ತಿ ಜನನಿ ಕುಶಲ ಒಡೆಯ ಗಿತ್ತ ಹನುಮ ತೇ ನಮೋ || ೧ || ಮುಪ್ಪಿನವಳ ಮಗನತರಿದು ಕೃ - ಷ್ಣಾರ್ಪಣವನೆ ಮಾಡಿ ನೃಪರ ಕಪ್ಪ ಹೊರಿಸಿ ತಂದು ಮಖಕೆ ಒಪ್ಪಿಸಿದ ಅಗ್ರಜಾತಗೆ ಭೂಪನಣ್ಣನ ಅಣುಗರನ್ನು ಅಪ್ಪಳಿಸಿ ತಮಸಕೆ ಕಳುಹಿ ತಪ್ಪದೆಂದೂ ರಂಗ ಸೇವೆಯೊ ಳಿಪ್ಪ ಶ್ರೀಭೀಮ ತೇ ನಮೋ || ೨ || ವಿಷ್ಣುಭಟರ ಮತಿಗೆ ಕಲಿಯು ವೇಷ್ಟಿಸಿರಲು ಬ್ರಹ್ಮ ಸೂತ್ರ ಸ್ಪಷ್ಟ ತಿಳುಹಿ ತಾತ್ವಿಕ ಜನ ಶ್ರೇಷ್ಠಿ ನೆರಹಿ ಮಿಥ್ಯರ ಭ್ರಷ್ಟವಚನ ನಿರಾಕರಿಸಿ ನಿ ಜೇಷ್ಟಮತವ ಹೊರೆದೆ ಗುರುವ ರಿಷ್ಟ ಮಧ್ವಪ್ರಸನ್ನವೆಂಕಟ ಕೃಷ್ಣ ಮರ್ತ್ಯ ತೇ ನಮೋ || ೩ || sharaNu sakala praaNanaatha sarasijabhava padavibhOkta mUravataari muKyapraaNa hariparaayaNa tE namO || pa || raktashivana bisuTu jagada karta raghu puMgavana padadi bhakti balidu itara viShaya  cittanaagada suguNadhI hattu heDakinavana vanava kittu puravanuruhi bhayava bitti janani kusha...

ಬಾರೇ ನಮ್ಮನಿ ತನಕ | ಇಂದಿರೇಶ | Baare Nammani Tanaka | Indiresha

Image
ಸಾಹಿತ್ಯ :    ಶ್ರೀ ಇಂದಿರೇಶ ದಾಸರು (ಇಂದಿರೇಶ)  Kruti: Sri Indiresha Dasaru (Indiresha) ಬಾರೇ ನಮ್ಮನಿ ತನಕ ಭಾಗ್ಯದ ದೇವಿ | ಬಾರೇ ನಮ್ಮನೀ ತನಕ ||ಪ|| ಬಾರೇ ನಮ್ಮನೀ ತನಕ ಬಹಳ ಕರುಣಾದಿಂದ | ಜೋಡಿಸಿ ಕರಗಳ ಎರಗುವೆ ಚರಣಕೆ ||ಅಪ|| ಜರದ ಪೀತಾಂಬರ ನಿರಿಗೆಗಳೆಳೆಯುತಾ | ತರಳನ ಮೇಲೆ ತಾಯಿ ಕರುಣಿಸಿ ಬೇಗ ||೧|| ಹರಡಿ ಕಂಕಣದುಂಡು ಕರದಲ್ಲೇ ಹೊಳೆಯುತಾ | ಸರಿಗೆ ಸರವು ಚಂದ್ರ ಹಾರಗಳ್ಹೊಳೆಯುತಾ ||೨|| ಮಂಗಳಾಂಗಿಯೆ ನಿನಗೊಂದಿಸಿ ಬೇಡುವೆ | ಇಂದಿರೇಶನ ಕೂಡಿ ಇಂದು ನಮ್ಮನೀ ತನಕ ||೩|| bArE nammani tanaka BAgyada dEvi | bArE nammanI tanaka ||pa||   bArE nammanI tanaka bahaLa karuNAdiMda | jODisi karagaLa eraguve caraNake ||apa||   jarada pItAMbara nirigegaLeLeyutA | taraLana mEle tAyi karuNisi bEga ||1||   haraDi kaMkaNaduMDu karadallE hoLeyutA | sarige saravu caMdra hAragaLhoLeyutA ||2||   maMgaLAMgiye ninagoMdisi bEDuve | iMdirESana kUDi iMdu nammanI tanaka ||3||

ಒಪ್ಪಿತೋ ಹರಿ ನಿಮ್ಮ ಚಲ್ವಿಕೇ | ಹಯವದನ | Oppito Hari Nimma | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಒಪ್ಪಿತೋ ಹರಿ ನಿಮ್ಮ ಚಲ್ವಿಕೇ ಹೆಚ್ಚಿ ಗೋಕುಲ ಇಂದಿರಾನನೆ ||ಪ|| ರಮಣನಾಥನೇ ಮಲಯದಾಯಕಾ ಶ್ರಮವ ಕೊಡುವುದು ಅಲ್ಲವೊ ಧರ ||೧|| ಯಮುನೆಯಾರುಷಾ ಸರ್ಪದಾ ಭಯಾ ವೃಷಭನಾಭಯಾ ರಾಕ್ಷಸಾಭಯ ||೨|| ಏಳು ದಿವಸದಾ ಮಳೆಗಳಾಭಯಾ ಎಲ್ಲ ಗೆದ್ದೆವೋ ನಿಮ್ಮ ಪರಿಯಲಿ ||೩|| ದರ್ಶನ ಮಾತ್ರದೀ ಪಾಪನಾಶನಾ ಪದ್ಮಜಾಕ್ಷಿತೋ ಧರಣಿ ಮಂಡಲ ||೪|| ಅತ್ತೆ ಮಾವರಾ ಮಾತು ಕೇಳದೇ ಇತ್ತ ಬಂದೆವೋ ಚಿತ್ತ ಭ್ರಮೆಯಲಿ ||೫|| ಕೃಷ್ಣವಿರಹದೀ ಬಂದೆವಲ್ಲದೇ ಮಂದಮಾರುತ ಗಾಳಿ ಬೀಸಲು ||೬|| ಕೃಷ್ಣ ಬಂದನೇ ಫಲವ ತಂದನೇ ಸಖಿಯರೆಲ್ಲರು ಸಂತೋಷಕಾದರು ||೭|| ಪೀತಾಂಬರಧಾರಿಯಾ ದಿವ್ಯ ಮಾಲಿಕೇ ಕೃಷ್ಣರಾಯರಾ ಕೊರಳಿಗ್ಹಾಕಲು ||೮|| ಇದು ಭಾಗವತವೆನ್ನಿ ಇದು ಗೋಪಿಕಾ ಗೀತಾ ||೯|| ಇದ ಹೇಳಿ ಕೇಳಿದಂತ ಸಜ್ಜನರಿಗೆ ಹಯವದನನು ಮುಕ್ತಿಕೊಡುವನು ||೧೦||  oppitO hari nimma calvikE hecci gOkula iMdiraanane ||pa|| ramaNanaathanE malayadaayakaa Sramava koDuvudu allavo dhara ||1|| yamuneyaaruShaa sarpadaa bhayaa vRuShabhanaaBayaa raakShasaabhaya ||2|| ELu divasadaa maLegaLaabhayaa ella geddevO nimma pariyali ||3|| darshana maatradI paapanaaSanaa padmajaakShitO dharaNi maMDala ||4|| atte maavaraa maatu kELadE itta ba...

ಡೀ ಡೀ ಆಡ್ಯಾನೆ ರಂಗ | ವಿಜಯ ವಿಠ್ಠಲ | Di Di Adyane Ranga | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಡೀ ಡೀ ಆಡ್ಯಾನೆ ರಂಗ ಡೀ ಡೀ ಆಡ್ಯಾನೆ ||ಪ|| ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ ಡಿಡಿಕ್ಕ ಡಿಡಿಕ್ಕ ಎಂದು ||ಅಪ|| ಮರಕತ ನವರತ್ನ ವಜ್ರ  ಹರಳು ಕೆತ್ತಿಸಿದ ದ್ಯುಮಣಿ ಕಿರಣ ಮುಕುಟ ಧರಿಸಿದ ಶಿರದಲಿ ಸರಿ ಸರಿ ಸರಿ ಸರಿ ಸರಿ ಸರಿದಾಡುತ ||೧|| ಚಂದ್ರಶೇಖರ ಹಂಸವಾಹನ  ಇಂದ್ರಾದ್ಯರಾಕಾಶದಲ್ಲಿ  ದುಂ ದುಂ ದುಂ ದುಂ ದುಂದುಭಿ ನುಡಿಸೆ ಬಂದೆ ಇಕ್ಕೋ ಬಂದೆ ಬಂದೆ ಎಂದೆನುತ ||೨|| ಹಿಂದಿರುಗಿ ಪೋಗಿ ನೀನು ಅಂತರಿಸಿ ದೂರದಲ್ಲಿ ನಿಂತು ವಿಜಯ ವಿಠ್ಠಲ ರಾಯನು ಇಂತಿರಿ ತಿರಿ ತಿರಿ ತಿರಿ ತಿರಿ ಎಂದು  ||೩|| DI DI ADyaane raMga DI DI ADyaane ||pa|| ODi ODi baMdu haNege nIDi nIDi DiDikka DiDikka DiDikka eMdu ||apa|| marakata navaratna vajra  haraLu kettisida dyumaNi kiraNa mukuTa dharisida Siradali sari sari sari sari sari saridaaDuta ||1|| chaMdrashEkhara haMsavaahana  iMdraadyaraakaaSadalli  duM duM duM duM duMdubhi nuDise baMde ikkO baMde baMde eMdenuta ||2|| hiMdirugi pOgi nInu aMtarisi dUradalli niMtu vijaya viThThala raayanu iMtiri tiri tiri tiri tiri eMdu  ||3||

ನಿತ್ಯವೆಂಬುದು ಕೇಳು ಜೀವ | ಹಯವದನ | Nityavembudu kelu jeeva | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಿತ್ಯವೆಂಬುದು ಕೇಳು ಜೀವ ಬಲು ಅ- ನಿತ್ಯವೆಂಬುದು ಈಗ ಬಾಳುವ ಕಾಯ || ಪ || ಸತ್ಯ ಸತ್ಯ ಸರ್ವ ಜೀವರನಿಟ್ಟುಕೊಂಡು ವಿಸ್ತಾರವಾದೊಂದಾಲದೆಲೆಯಲ್ಲಿ ಮಲಗಿದ್ದು || ಅಪ || ಹರಿ ಹ್ಯಾಗೆ ನಿತ್ಯನೊ ಹಾಗೆ ಜೀವನು ನಿತ್ಯ ಹರಿಯೆಂಬೋ ಧಣಿಗೆ ಈ ಜೀವನು ಭೃತ್ಯ ಹರಿ ಜೀವರೊಳಗೆ ಹೀಗೆ ತಿಳಿದವನೆ ಧರೆಯೊಳಗೆಂದೆಂದಿಗು ಕೃತಕೃತ್ಯನು || ೧ || ಹರಿಯೆಂಬೊ ರಾಜಗೆ ಗುರುಮಾರುತಿ ಮಂತ್ರಿ ಪರಿವಾರ ಇವರಯ್ಯ ಜೀವಂಗಳು ಅರಿತು ಈ ವಿಧದಲ್ಲಿ ನಿರುತ ಪಾಡುವರಿಗೆ ಪರಲೋಕದಲಿ ದಿವ್ಯಭೋಗಂಗಳು || ೨ || ಭಿನ್ನ ಭಿನ್ನ ಜೀವ ಭಿನ್ನ ಭಿನ್ನ ಕರ್ಮ- ವೆನ್ನುವುದೆ ಘನ್ನತತ್ತ್ವಂಗಳು ಅನ್ಯಥಾ ನುಡಿಯಲ್ಲ ಇನ್ನು ಸಂಶಯವಿಲ್ಲ ಎನ್ನೊಡೆಯ ಹಯವದನ ಬಲ್ಲ || ೩ || nityaveMbudu kELu jIva balu a- nityaveMbudu Iga baaLuva kaaya || pa || satya satya sarva jIvaraniTTukoMDu vistaaravaadoMdaaladeleyalli malagiddu || apa || hari hyaage nityano haage jIvanu nitya hariyeMbO dhaNige I jIvanu bhRutya hari jIvaroLage hIge tiLidavane dhareyoLageMdeMdigu kRutakRutyanu || 1 || hariyeMbo raajage gurumaaruti maMtri parivaara ivarayya jIvaMgaLu aritu I vidhadalli niruta paaDuvarige paralOkadali divyabhOga...

ಕೃಷ್ಣ ಭವರೋಗದ ಮದ್ದು | ಹಯವದನ | Krishna Bhavarogada Maddu | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕೃಷ್ಣ ಭವರೋಗದ ಮದ್ದು ಕೃಷ್ಣ ಅಭಿಮಾನವ ಕಾಯ್ವಾತ ನಿಂದಲ್ಲಿದ್ದು ||ಪ|| ದುಷ್ಟ ದನುಜರ ಹುಡಿಗುಟ್ಟಿ ನಂಬಿದ ಸುರರ ದಿಟ್ಟರ ಮಾಡಿದ ಜಗಜಟ್ಟಿ ರಂಗ ಧೀರ ||೧|| ಮತ್ತೆ ಕೌರವರ ಗೆದ್ದು ಚಿತ್ತದಿ ತನ್ನ ನಂಬಿದ ಪಾರ್ಥನ ಪಾಲಿಸಿದ ಸಮರ್ಥ ಪಾದ ||೨|| ಮಧ್ವರ ಪೂಜಿತ ಪಯೋಬ್ಧಿತನುಜೆಯರಸ ಹೃದ್ಯಹಯವದನ ಸಮೃದ್ಧ ವೈಕುಂಠಾಧೀಶ ||೩|| kRuShNa bhavarOgada maddu kRuShNa abhimaanava kaayvaata niMdalliddu ||pa|| duShTa danujara huDiguTTi naMbida surara diTTara maaDida jagajaTTi raMga dhIra ||1|| matte kauravara geddu cittadi tanna naMbida paarthana paalisida samartha paada ||2|| madhvara pUjita payObdhitanujeyarasa hRudyahayavadana samRuddha vaikuMThaadhISa ||3||

ಓದುವುದು ವೇದ | ಶ್ರೀ ವಾದಿರಾಜರು | Oduvudu Veda | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಓದುವುದು ವೇದ ಹಾಕುವುದು ಗಾಳ ||ಪ|| ಮಾಧವನು ತಾನೆ ಗಡ ಮನುಜರನುಸರಣೆ ಗಡ ವ್ಯಾಧಿಗಳು ಬಿಡವು ಗಡ ಸುರನದಿಯ ಯಾತ್ರೆ ಗಡ ||೧|| ಆ ದೇವನೆ ತಮ್ಮ ಮನೆ ಮನೆಗೆ ದೈವ ಗಡ ಪೋದ ನಿಗಮವ ತಂದ ಹಯವದನನೇ ಜವಗ ||೨|| ಕಾದಿಗೆಲಿದನುವ ಗಡ ಎಡರುಗಳು ಬಿಡವು ಗಡ ಕ್ರೋಧದಿ ದೋಷವಲ್ಲದವಸ್ತು ತಾನೆ ಗಡ ||೩|| ಶಿವನಲ್ಲ ಹರಿಯಲ್ಲ ವಿಪ್ರರುಗಳಲ್ಲ ಅವರ ನೋಡಲಿ ಬೇಡ ಅವರಿಗೀಯಲಿ ಬೇಡ ||೪|| ಇಂತೆಂಬ ನುಡಿಯೊಳು ದ್ವೇಷ ಕಾಣಿಸಲು ಸಂತರೆಲ್ಲರು ನೋಡಿ ಹಯವದನನಿದ ಮೆಚ್ಚ ||೫|| Oduvudu vEda haakuvudu gaaLa ||pa|| maadhavanu taane gaDa manujaranusaraNe gaDa vyaadhigaLu biDavu gaDa suranadiya yaatre gaDa ||1|| A dEvane tamma mane manege daiva gaDa pOda nigamava taMda hayavadananE javaga ||2|| kaadigelidanuva gaDa eDarugaLu biDavu gaDa krOdhadi dOShavalladavastu taane gaDa ||3|| shivanalla hariyalla viprarugaLalla avara nODali bEDa avarigIyali bEDa ||4|| iMteMba nuDiyoLu dvESha kaaNisalu saMtarellaru nODi hayavadananida mecca ||5||

ಭಕ್ತಿ ಬೇಕು ಪರಮ ವಿರಕ್ತಿ ಬೇಕು | ಹಯವದನ | Bhakti Beku Parama Virakti Beku | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾರಾಯಣ ನಾರಾಯಣ ನಾರಾಯಣ ನಾರಾಯಣ ||ಪ|| ಭಕ್ತಿ ಬೇಕು ಪರಮ ವಿರಕ್ತಿ ಬೇಕು ಹರಿಸ- ರ್ವೋತ್ತಮನೆಂಬ ನೆನವಿರಬೇಕು ||೧|| ಅರಿಷಡ್ವರ್ಗದ ವಿಜಯ ಬೇಕು ಗುರುಕುಲತಿಲಕ ಗುರುಮಧ್ವಮತ ಬೇಕು ಗುರುಭಕ್ತಿ ಬೇಕು ||೨|| ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ - ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು ||೩|| ವೇದದಭ್ಯಾಸವು ಬೇಕು ಅದರರ್ಥ ಹರಿಯೆಂಬ ಬೋಧವಿರಲುಬೇಕು ಖಳರಳಿಯಲುಬೇಕು ||೪|| ವಾದಿರಾಜನೊಡೆಯ ಹಯವದನನ್ನ ದಿವ್ಯ - ಪಾದ ನಂಬಿಯಿರಬೇಕು ವರಾದಿಗಳ ಬಯಸುವೋರು ||೫|| naaraayaNa naaraayaNa naaraaYaNa naaraayaNa ||pa|| bhakti bEku parama virakti bEku harisa- rvOttamaneMba nenavirabEku ||1|| ariShaDvargada vijaya bEku gurukulatilaka gurumadhvamata bEku gurubhakti bEku ||2|| hariya DiMgarigara saMga bEku SaMkhacakra - dharanaagi irabEku svarUpayOgyate bEku ||3|| vEdadabhyaasavu bEku adarartha hariyeMba bOdhaviralubEku khaLaraLiyalubEku ||4|| vaadiraajanoDeya hayavadananna divya - paada naMbiyirabEku varaadigaLa bayasuvOru ||5||

ಕೋಮಲೆ ರಮಾದೇವಿಯ | ಗೋಪಾಲ ವಿಠಲ | Komale Ramadeviya | Sri Gopala Dasaru

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ಕೋಮಲೆ ರಮಾದೇವಿಯ ನೋಡ ಬನ್ನಿರೇ  ಕಮಲಾರಿ ಸಹೋದರಿಯನೀಗ ಬೇಡ ಬನ್ನಿರೇ || ಪ || ಇಂದು ನಿಭದ ಸುಂದರಿಯರು ಬಂದು ನೋಡಿರೇ | ಈ ಕುಂದರದನೆ ಮಂದರೋಧ್ಧರನರ್ಧಾಂಗಿಯೇ || ೧ || ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇ | ಶಕ್ತಿ ಯುಕ್ತಿಗಳನೆ ಕೊಟ್ಟು ಅರ್ಥಿ ಮಾಳ್ಪಳೇ || ೨ || ದಾಸರಾದರೆ ಶ್ರೀಷನ ರಾಣಿ ಪೋಷಿಸುವಳೇ | ಗೋಪಾಲ ವಿಠಲ ಘಾಸಿಮಾಡದೆ ಪೋಷಿಸೆನುವಳೇ || ೩ || kOmale ramaadEviya nODa bannirE  kamalaari sahOdariyanIga bEDa bannirE || pa || iMdu nibhada suMdariyaru baMdu nODirE | I kuMdaradane maMdarOdhdharanardhaaMgiyE || 1 || bhaktiyiMda bhajiparige mukti koDuvaLE | Sakti yuktigaLane koTTu arthi maaLpaLE || 2 || daasaraadare SrIShana raaNi pOShisuvaLE | gOpaala viThala GaasimaaDade pOShisenuvaLE || 3 ||

ಉಡುಪಿನಕೃಷ್ಣ ಸಕಲ ಜಗದೀಶ | ಹಯವದನ | Udupina Krishna Sakala | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಉಡುಪಿನಕೃಷ್ಣ ಸಕಲ ಜಗದೀಶ  ಬಿಡದೆನ್ನ ಸಲಹೋ ಮಧ್ವಹೃದಯ ವಾಸ ||ಪ|| ವಿಕಸಿತ ನಯನ ಜಲಜಾಸನನ ಪ್ರಕಟಿತ ತಾತ ದಿತಿಕುಲ ದಮನ ತ್ರಿಕರಣ ಪರಿಯ ತ್ರಿವಿಧತಾಪ ಶಮನ ಸುಕುಮಾರರೂಪ ಮೋಹನ ರಮಾರಮಣ  ||೧|| ಎಸೆವ ಕಿರುಡೊಳ್ಳಿನ ಶುಭಾಕಾರ ಗಂಡ ಪಸುಳೆಯ ಭಾವದಿ ಮೆರೆವ ಪ್ರಚಂಡ ಶಶಿಸಮವದನ ಕುಂಡಲಶೋಭಿಗಂಡ ಅಸುರ ಸಂಹಾರ ದೋರ್ಧೃತಪಾಶದಂಡ ||೨|| ಶ್ರುತಿಯರು ಸೇವೆಯರು ಬಿಡದೆ ಬಣ್ಣಿಸುವ ಪ್ರತಿಯಿಲ್ಲದದುಭುತ ಮಹಿಮನು ದಾವ ಯತಿಕುಲ ಸೇವ್ಯ ಹಯವದನ ದೇವ ಪತಿಕರಿಸೊ ನಮ್ಮ ಭವವನ ದಾವ  ||೩|| uDupinakRuShNa sakala jagadIsha  biDadenna salahO madhvahRudaya vaasa ||pa|| vikasita nayana jalajaasanana prakaTita taata ditikula damana trikaraNa pariya trividhataapa shamana sukumaararUpa mOhana ramaaramaNa  ||1|| eseva kiruDoLLina Subhaakaara gaMDa pasuLeya bhaavadi mereva pracaMDa shashisamavadana kuMDalashObhigaMDa asura saMhaara dOrdhRutapaaSadaMDa ||2|| shrutiyaru sEveyaru biDade baNNisuva pratiyilladadubhuta mahimanu daava yatikula sEvya hayavadana dEva patikariso namma bhavavana daava  ||3||

ಮೋಸ ಹೋದೆನಲ್ಲ | ಶ್ರೀಪಾದರಾಜರು | Mosa Hodenalla | Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಮೋಸ ಹೋದೆನಲ್ಲ ಸಕಲವೂ ವಾಸುದೇವ ಬಲ್ಲ ||ಪ||  ಭಾಸುರಾಂಗ ಶ್ರೀವಾಸುಕೀ ಶಯನನ  ಸಾಸಿರನಾಮವ ಲೇಸಾಗಿ ಪಠಿಸದೆ ||ಅಪ|| ದುಷ್ಟಜನರ ಕೂಡಿ ನಾನತಿ ಭ್ರಷ್ಟನಾದೆ ನೋಡಿ  ಶ್ರೇಷ್ಠ ರೂಪ ಮುರ ಮುಷ್ಟಿಕ ವೈರಿಯ  ನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ ||೧|| ಕಾಯವು ಸ್ಥಿರವಲ್ಲ ಎನ್ನೊಳು ಮಾಯೆ ತುಂಬಿತಲ್ಲ  ಪ್ರಾಯಮದದಿ ಪರಸ್ತ್ರೀಯರ ಕೂಡಾಡಿ  ಕಾಯಜ ಜನಕನ ಗಾಯನ ಮಾಡದೆ ||೨|| ಕಂಗಳಿಂದಲಿ ನೋಡೋ ದೇವ ನಿನ್ನಂಗ ಸಂಗವ ನೀಡೋ  ಮಂಗಳ ಮಹಿಮ ಶ್ರೀರಂಗವಿಠ್ಠಲ ಮುಂ- ದಂಗ ಬಾರದಂತೆ ನೀ ದಯ ಮಾಡೋ ||೩|| mOsa hOdenalla sakalavU vAsudEva balla ||pa||  BAsurAMga SrIvAsukI Sayanana  sAsiranAmava lEsAgi paThisade ||apa|| duShTajanara kUDi nAnati BraShTanAde nODi  SrEShTha rUpa mura muShTika vairiya  niShTheyiMda nA dRuShTisi nODade ||1|| kAyavu sthiravalla ennoLu mAye tuMbitalla  prAyamadadi parastrIyara kUDADi  kAyaja janakana gAyana mADade ||2|| kaMgaLiMdali nODO dEva ninnaMga saMgava nIDO  maMgaLa mahima SrIraMgaviThThala muM- daMga bAradaMte nI daya mADO |...

ಬಾರಾ ನಾನರಿಯೆ | ಶ್ರೀ ವಾದಿರಾಜರು | Baara Naanariye | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಾರಾ ನಾನರಿಯೆ ಸಿರಿಧರ ಮಾರ ||ಪ|| ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನು ಹೀನಜನರೊಡನಾಡಿ ಕಡುನೊಂದೆನು ಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದು ದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು ||೧|| ಕಂಡ ಕಂಡವರ ಬೇಡಿ ಬೇಸರಲಾರೆನೊ ತಂದೆ ಪುಂಡರೀಕಾಕ್ಷ ಪುರುಹೂತವಂದ್ಯ ಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನ ತೊಂಡರೊಳಗೆನ್ನನಿರಿಸೊ ದುರುಳರ ಸಂಗವ ಬಿಡಿಸೊ ||೨|| ಶ್ರೀಹಯವದನರಾಯ ಆಶ್ರಿತಜನಸುಖೋಪಾಯ ಮೋಹಾಂಧಕಾರ ಮಾರ್ತಾಂಡ ಶೂರ ನೇಹದಿಂದೆನ್ನ ಕೈವಿಡಿದು ದುಷ್ಟರ ಬಿಡಿಸು ಕಾಹು ಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು ||೩|| baaraa naanariye siridhara maara ||pa|| naanaayOnigaLalli baMdu baMdu baLalidenu hInajanaroDanaaDi kaDunoMdenu shrInaatha ninna sukathaamRutava nenenenedu dInajanaranu poreva piriyaroLu ennanirisu ||1|| kaMDa kaMDavara bEDi bEsaralaareno taMde puMDarIkaakSha puruhUtavaMdya paaMDavapriya paramapuruSha nirdOSha ninna toMDaroLagennaniriso duruLara saMgava biDiso ||2|| shrIhayavadanaraaya AshritajanasukhOpaaya mOhaaMdhakaara maartaaMDa shUra nEhadiMdenna kaiviDidu duShTara biDisu kaahu kaTTaLeya maaDu k...

ಏನು ದಾನವ ಮಾಡಲಿ | ಪುರಂದರ ವಿಠಲ | Enu Danava Madali | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಏನು ದಾನವ ಮಾಡಲಿ ಹರಿಯೇ ಯಾವ ದಾನವ ಮಾಡಲಿ  ಹರಿ ಧ್ಯಾನಕ್ಕೆ ಸಮನಾದ ದಾನಂಗಳುಂಟೆ ||ಪ|| ಶತಕೋಟಿ ಕನ್ಯಾ ಪ್ರದಾನವ ಮಾಡಲಿ ಅತಿಶಯದ ಉದಕ ದಾನವ ಮಾಡಲಿ ಮತಿಶುದ್ಧನಾಗಿ ಭೂದಾನವ ಮಾಡಲಿ ಕೃತಿರಮಣ ನಿನ್ನ ಧ್ಯಾನಕ್ಕೆ ಸರಿಯುಂಟೆ ||೧|| ದಿನಕ್ಕೊಂದು ಸಾವಿರ ಗೋದಾನ ಮಾಡಲಿ ಅನುದಿನ ಅನ್ನದಾನವ ಮಾಡಲಿ ಘನವಾಗಿ ಸುವರ್ಣ ದಾನವ ಮಾಡಲಿ ವನಜನಾಭನೆ ನಿನ್ನ ಧ್ಯಾನಕ್ಕೆ ಸರಿಯುಂಟೆ ||೨|| ಸಾದರದಿ ತರ್ಕ ವ್ಯಾಕರಣ ಪೇಳಲಿ ವೇದಗೀತ ಭಾಷ್ಯವನೋದಲಿ ಸಾಧಿಸಿ ಸ್ನಾನ ಜಪಂಗಳ ಮಾಡಲಿ ಮಾಧವ ನಿನ್ನ ಧ್ಯಾನಕ್ಕೆ ಸರಿಯುಂಟೆ ||೩|| ಉತ್ತಮವಾದ ವಸ್ತ್ರ ದಾನವ ಮಾಡಲಿ ಮುತ್ತು ಮಾಣಿಕ್ಯ ದಾನವ ಮಾಡಲಿ ಅತ್ಯಂತ ವಿದ್ಯಾ ಪ್ರದಾನವ ಮಾಡಲಿ ಚಿತ್ತಜ ಪಿತನ ಧ್ಯಾನಕ್ಕೆ ಸರಿಯುಂಟೆ ||೪|| ನಾನಾ ತೀರ್ಥಗಳಲ್ಲಿ ಸ್ನಾನವ ಮಾಡಲಿ ಕಾನನದೊಳಗೆ ತಪವನು ಮಾಡಲಿ ಜ್ಞಾನದಿಂದ ಶಾಸ್ತ್ರಾರ್ಥ ಮಾಡಲಿ ನಿನ್ನ ಧ್ಯಾನಕ್ಕೆ ಸರಿಯುಂಟೆ ಪುರಂದರ ವಿಠಲ ||೫|| Enu daanava maaDali hariyE yaava daanava maaDali  hari dhyaanakke samanaada daanaMgaLuMTe ||pa|| SatakOTi kanyaa pradaanava maaDali atiSayada udaka daanava maaDali matiSuddhanaagi bhUdaanava maaDali kRutiramaNa ninna dhyaanakke sariyuMTe ||1|| dinakk...

ಆಡಿದನೋ ರಂಗ | ಶ್ರೀ ಪುರಂದರ ದಾಸರು | Aadidano Ranga | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ||ಪ|| ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ  ಮಾಡುತಲಿ ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಅಪ|| ಅಂಬುರುಹೋದ್ಭವ ಅಖಿಳ ಸುರರು ಕೂಡಿ ಅಂಬರದಲಿ ನಿಂತು ಅವರ್ ಸ್ತುತಿಸೆ ರಂಭೆ ಊರ್ವಶಿ ರಮಣಿಯರೆಲ್ಲರು ಚೆಂದದಿಂ ಭರತನಾಟ್ಯವ ನಟಿಸೆ  ಝಂತಟ ತಕಧಿಮಿ ತಧಿಗಿಣಿ ತೊಂ ಎಂದು ಝಂಪೆತಾಳದಿ ತುಂಬುರನೊಪ್ಪಿಸೆ  ಧಾ ಮ ಪ ಪಾ ಧ ಸ ರೀ ಎಂದು ದ್ವನಿಯಿಂದ ನಾರದ ತುಂಬುರರು ಗಾನವ ಮಾಡಲು ನಂದಿಯು ಮದ್ದಲೆ ಚೆಂದದಿ ಹಾಕಲು ||೧|| ಫಣವ ಮೆಟ್ಟಿ ಬಾಲವ ಕೈಯಲ್ಲಿ ಪಿಡಿದು ಫಳಫಳಿಸುತ್ತ ನಾಟ್ಯವನಾಡೆ ಚಂದ್ರಮಂಡಲದಂತೆ ಪೊಳೆಯುವ ಮುಖದೊಳು ಚಲಿಸುವ ನೀಲ ಕೇಶಗಳಾಡೆ  ಕಾಲಲಂದುಗೆ ಗೆಜ್ಜೆ ಘಲಿಘಲಿರೆನುತ ಉಡಿಗೆಜ್ಜೆ ಗಂಟೆಗಳಾಡೆ ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ ಪುಟ್ಟಪಾದವ ಇಟ್ಟು ಶ್ರೀಕೃಷ್ಣನು ಮೆಟ್ಟಿದನು ತಕಧಿಮಿ ತಧಿಕೆನುತ ||೨|| ಸುರರು ಪುಷ್ಪದ ವೃಷ್ಟಿಯ ಕರೆಯಲು ಸುದತಿಯರೆಲ್ಲರು ಪಾಡಲು  ನಾಗಕನ್ನಿಕೆಯರು ನಾಥನ ಬೇಡಲು ನಾನಾ ವಿಧದಿ ಸ್ತುತಿ ಮಾಡಲು ರಕ್ಕಸರೆಲ್ಲರು ಕಕ್ಕಸವನೆ ಕಂಡು ದಿಕ್ಕು ದಿಕ್ಕುಗಳಿಗೆ ಓಡಲು ಚಿಕ್ಕವನಿವನಲ್ಲ ಪುರಂದರ ವಿಠಲ ವೇಂಕಟರಮಣನ ಬೇಗ ಯಶೋದೆ ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ ||೩||  ADidanO raMga adbhutadiMdal...

ಹನುಮ ಭೀಮ ಮಧ್ವ ಮುನಿಯ | ಪುರಂದರ ವಿಠಲ | Hanuma Bhima Madhwa muniya | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ|| ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅಪ|| ಪ್ರಾಣಿಗಳ ಪ್ರಾಣೋದ್ಧಾರ ಜೀವರೋಳುತ್ತಮನು ಮತ್ತೆ ಪ್ರಾಣೋಪಾನ ವ್ಯಾನೋದಾನ ಸಮಾನರೋಳುತ್ಕೃಷ್ಟ || ಕ್ಷೋಣಿ ದೈತ್ಯರನ್ನು ಸೀಳಿ ಪಾಲಿಪ ಸಜ್ಜನರನ್ನು | ಪ್ರಾಣದಿಂದಲಿ ಮೆರೆವ ಬಹು ಜಾಣ ಗುರು ಮುಖ್ಯಪ್ರಾಣ ||೧|| ಕಾಮಧೇನು ಚಿಂತಾಮಣಿ ಕಲ್ಪವೃಕ್ಷನಾದ ಸ್ವಾಮಿ ನೇಮದಿಂದಲಿ ನೆನೆಯುವವರ ಭಾಗ್ಯಕ್ಕೆ ಎಣೆಯುಂಟೆ || ಸಾಮಾನ್ಯವಲ್ಲವೋ ಈತ ಮೋಕ್ಷಾದಿ ಸಂಪದವಿಗಳಿಗೆ | ಆ ಮಹಾ ಅಪರೋಕ್ಷ ಜ್ಞಾನದಾರಢ್ಯ ಭಕುತಿಯ ಕೊಡುವ ||೨|| ಅವತಾರತ್ರಯಗಳಿಂದ ಶ್ರೀಹರಿಯ ಸೇವಿಸುತ್ತ | ತವಕದಿಂದಲಿ ಪೂಜಿಪ ಮಹಾ ಮಹಿಮೆಯುಳ್ಳವನು || ಕವಿತಾವಾಕ್ಯವಲ್ಲವಿದು ಅವಿವೇಕಿಗಳೆಂದೆನಿಸಬೇಡಿ ಭವಬಂಧನವ ಬಿಡಿಸಿ ನಮ್ಮ ಕಾಯ್ವ ಪುರಂದರ ವಿಠಲನ ದಾಸ ||೩|| hanuma BIma madhva muniya nenedu badukirO ||pa|| anumAnaMgaLilladale manOBIShTaMgaLanIva ||apa||   prANigaLa prANOddhAra jIvarOLuttamanu matte prANOpAna vyAnOdAna samAnarOLutkRuShTa || kShONi daityarannu sILi pAlipa sajjanarannu | prANadiMdali mereva bahu jANa guru muKyaprANa ||1||   kAmadhEnu ciMtAmaNi kalpavRukShanAda svA...

ಅಂಬಾ ನೀ ಹೂವ ಪಾಲಿಸೆ | ಭೀಮೇಶಕೃಷ್ಣ | Amba Ni Hoova Palise | Bhimesha Krishna

Image
ಸಾಹಿತ್ಯ :    ಶ್ರೀ ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ)  Kruti: Sri Harapanahalli Bhimavva (Bhimesha Krishna) ಅಂಬಾ ನೀ ಹೂವ ಪಾಲಿಸೆ ವರ ನೀಡೆ ಶ್ರೀ ಜಗದಂಬಾ ನೀ ಹೂವ ಪಾಲಿಸೆ  ಅಂಬಾ ನೀ ಹೂವ ಪಾಲಿಸೆ ಶಂಭು ಶಂಕರನ ರಾಣಿ ರಂಭೆ ಪಾರ್ವತಿ ನಿನ್ನ ಪಾದಾಂಬುಜಕ್ಕೆರಗುವೆ ||ಪ|| ಬಳೆಯು ಕರಿಯಮಣಿ ಕೊರಳ ಮಂಗಳ ಸೂತ್ರ ಸ್ಥಿರವಾಗಿಯಿರುವಂತೆ ಸರ್ವ ಸಂಪತ್ತು ನೀಡೆ ಅಂಬಾ ||೧|| ಮಕ್ಕಳು ಮನೆ ಭಾಗ್ಯ ತೊಟ್ಟಿಲು ತೂಗುವಂತೆ ಮೃಷ್ಟಾನ್ನ ದಾನ ಮಾಡಲಿಷ್ಟಾರ್ಥದ್ವರಗಳ ಅಂಬಾ ||೨|| ರುದ್ರನ ಸತಿಯಳೆ ಬುದ್ಯಾತ್ಮಳೆನಿಸುವಿ  ಭದ್ರೆ ನಿನ್ನಯ ಮುಡಿಯಲ್ಲಿದ್ದ ಮಲ್ಲಿಗೆ ನೀಡೆ ಅಂಬಾ  ||೩|| ಇಂದು ಬೇಡುವೆ ನಿನ್ನ ಸಂಪಿಗೆ ಮುಡಿಮ್ಯಾಲಿ- ದ್ದಂಥ ಕುಸುಮದೊಳು ಸೇವಂತಿಗೆ ಸರವ ||೪||   ಭೀಮೇಶಕೃಷ್ಣನ ನಿಜ ಪಾದಭಜಕಳೆ ನೀ ದಯದಿಂ ಧರ್ಮ ಕಾಮ್ಯಾದಿ ವರಗಳ ನೀಡೆ  ||೫|| aMbaa nI hUva paalise vara nIDe SrI jagadaMbaa nI hUva paalise  aMbaa nI hUva paalise SaMbhu SaMkarana raaNi raMBe paarvati ninna paadaaMbujakkeraguve ||pa|| baLeyu kariyamaNi koraLa maMgaLa sUtra sthiravaagiyiruvaMte sarva saMpattu nIDe aMbaa ||1|| makkaLu mane bhaagya toTTilu tUguvaMte mRuShTaanna daana maaDaliShTaartha varagaL...

ಸೋದಾಪುರದಲಿ ನಿಂತ | ಗುರುಜಗನ್ನಾಥ ವಿಠಲ | Sodapuradali Ninta | Sri Guru Jagannatha Dasaru

Image
ಸಾಹಿತ್ಯ : ಶ್ರೀ ಗುರು ಜಗನ್ನಾಥ ದಾಸರು Kruti:Sri Guru Jagannatha Dasaru ಸೋದಾಪುರದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ ||ಪ||  ಭೂದರ ಹಯಮುಖ ಪಾದವ ಭಜಿಸುವ  ವಾದಿಜಗಕೆ ಮೃಗರಾಜ ಕಾಣಮ್ಮ ||ಅಪ||  ಅಂಚೆವಾಹನ ಪ್ರಪಂಚದಿ ಹೊಳೆವ ವಿರಿಂಚಿಗೆ ಸಮನೇನೆ ಪೇಳಮ್ಮಯ್ಯ ||  ಸಂಚಿತ ಕರ್ಮವ ಕುಂಚಿಸಿ ಭಕ್ತರ ಚಂಚಲ ಬಿಡಿಸುವನ್ಯಾರೇ ||  ಲಾಂಚಿತನಾಗಿಹನ್ಯಾರೇ ಚಂಚಲಾಕ್ಷಿ ತಿಳಿ ಪಂಚ ರೂಪಾತ್ಮಕ,  ಮುಂಚಿಗೆ ಪ್ರಾಣ ವಿರಿಂಚಿ ಕಾಣಮ್ಮ ||೧||  ಮಂದಹಾಸ ಮುಖ ಕುಂದ ಕುಟ್ಮಲದಿಂದ ಶೋಭಿಪನ್ಯಾರೇ ಪೇಳಮ್ಮಯ್ಯ  ವಂದಿಪ ಜನರಘ ವೃಂದ ಕಳೆದು ಆನಂದವ ನೀಡುವನ್ಯಾರೇ,  ಬೃಂದಾವನ ಪ್ರತಿ ಸುಂದರ ಯತಿವರರಿಂದ ಪೂಜಿತನ್ಯಾರೇ ||  ಇಂದು ಮುಖಿಯೇ ಈತ, ಗಂಧವಾಹನನಾಗಿ ಮಂದಜಾಸರ ಪದನೈದುವನಮ್ಮ ||೨||  ಖ್ಯಾತ ಮಹಿಮೆ ಮಾಯಿವ್ರಾತ ವಿಘಾತನ, ಮಾಡಿಹನ್ಯಾರೇ ಪೇಳಮ್ಮಯ್ಯ ||  ಆತುರ ಜನರಿಗೆ ಮಾತಾಪಿತರಂತೆ, ನೀತ ಪಾಲಿಪನ್ಯಾರೇ ||  ದಾತ ಗುರು ಜಗನ್ನಾಥ ವಿಠಲನ ಪ್ರೀತಿಯ ಪಡೆದಿಹನ್ಯಾರೇ ||  ವೀತಭಯ ಪುರುಹೂತ ಪ್ರಮುಖನುತ, ಭೂತನಾಥನ ಪಿತ, ಮಾತರಿಶ್ವನಮ್ಮ ||೩|| sOdApuradali niMta suyativaranyArE pELammayya ||pa||  BUdara hayamuKa pAdava Bajisuva  vAdijagake mRugarAja kANamma ||apa||  aMcevAhana prapaMcadi hoLeva viriMc...

ಕಟಿಯಲ್ಲಿ ಕರವಿಟ್ಟನು | ಪುರಂದರ ವಿಠಲ| Katiyalli Karavittanu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಟಿಯಲ್ಲಿ ಕರವಿಟ್ಟನು | ಪಂಢರೀರಾಯ ||ಪ|| ರಾಜಸೂಯ ಯಾಗದಲ್ಲಿ ರಾಜೇಶ್ವರ | ರಾಜರು ಮೊದಲಾದ ಸುರರೆಲ್ಲರು || ಭೋಜನವನ್ನೇ ಮಾಡಿ ಎಂಜಲು ಮೊದಲಾದ್ದು ರಾಜೀವಾಕ್ಷನು ಎತ್ತಿದಾಯಾಸದಿಂದಲೂ ||೧|| ಸುರಪತನಯಗೆ ಸಾರಥ್ಯವ ತಾ ಮಾಡಿ | ಭರದಿಂದ ಚಕ್ರವ ಪಿಡಿದುದರಿಂದಲೋ | ಪರಿ ಪರಿ ವಿಧದಿಂದ ಕುದುರೆಗಳ ತಾ ತೊಳೆದು | ಪರಿಪರಿ ಕೆಲಸದಿ ಆಯಾಸದಿಂದಲೂ ||೨|| ಮಮತೆಯಿಂದಲಿ ಭಕ್ತ ಜನರು ತಮ್ಮ ಚರಣ | ಕಮಲಯುಗವನ್ನು ಸ್ಮರಿಸುತ್ತಲಿರಲು || ಮಮತೆಯಿಂದಲಿ ಅವರ ಭವವ ಕಳೆವೆನೆಂದು | ಕಮಲನಾಭ ಶ್ರೀ ಪುರಂದರ ವಿಠಲ ತಾ ||೩|| kaTiyalli karaviTTanu | paMDharIrAya ||pa||   rAjasUya yAgadalli rAjESvara | rAjaru modalAda surarellaru || BOjanavannE mADi eMjalu modalAddu rAjIvAkShanu ettidAyAsadiMdalU ||1||   surapatanayage sArathyava tA mADi | BaradiMda cakrava piDidudariMdalO | pari pari vidhadiMda kuduregaLa tA toLedu | paripari kelasadi AyAsadiMdalU ||2||   mamateyiMdali Bakta janaru tamma charaNa | kamalayugavannu smarisuttaliralu || mamateyiMdali avara Bavava kaLeveneMdu | kamalanABa SrI puraMdara viThal...

ಬಾ ರಂಗ ಎನ್ನ | ಪುರಂದರ ವಿಠಲ | Baa Ranga Enna | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬಾ ರಂಗ ಎನ್ನ ಬಾಯಿಗೆ ಬರಲಿ | ಹರಿನಾರಾಯಣ ನಿನ್ನ ನಾಮದ ಸ್ಮರಣೆ ||ಅಪ||   ಕುಳಿತಿರುವಾಗಲು ನಿಂತಿರುವಾಗಲು |  ಆಡುವಾಗ ನಾ ನಲಿದಾಡುವಾಗ ಕೇಡುಗತನದಿಂದ ಕೂಡಿದ ಭವದೊಳು |  ನಾ ಮಾಡಿದ ಪಾಪ ಓಡಿ ಹೋಗುವ ಹಾಗೆ ||೧|| ಕನಸಿನೊಳಾಗಲಿ ಮನಸಿನೊಳಾಗಲಿ |  ಮನಸು ಕೂಡಿದೊಳು ನಿನ್ನ ನೆನಪಿರಲಿ ||  ಸಂತಸವರ ಶ್ರೀ ಪುರಂದರ ವಿಠಲ |  ಎನ್ನ ಅಂತ್ಯ ಕಾಲಕ್ಕೊಮ್ಮೆ ನಿನ್ನ ನೆನೆಯುವ ಹಾಗೆ ||೨|| bA raMga enna bAyige barali | harinArAyaNa ninna nAmada smaraNe ||apa||   kuLitiruvAgalu niMtiruvAgalu |  ADuvAga nA nalidADuvAga || kEDugatanadiMda kUDida BavadoLu |  nA mADida pApa ODi hOguva hAge ||1|| kanasinoLAgali manasinoLAgali | manasu kUDidoLu ninna nenapirali ||  saMtasavara SrI puraMdara viThala |  enna aMtya kAlakkomme ninna neneyuva hAge ||2||

ಅಂತಕನ ದೂತರಿಗೆ | ಪುರಂದರ ವಿಠಲ | Antakana Dootarige | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ | ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ|| ದಿವ ರಾತ್ರಿಯೆನ್ನದೆ ವಿಷಯ ಲಂಪಟನಾಗಿ ಸವಿಯೂಟ | ಗಳನುಂಡು ಭ್ರಮಿಸಬೇಡ || ಅವನ ಕೊಂದಿವನ ಕೊಂದರ್ಥವನು ಗಳಿಸುವರೆ | ಜವನ ದೂತರು ಬರುವ ಹೊತ್ತ ನೀನರಿಯೆ ||೧|| ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ | ಬಸುರಿ ಹೆಂಡತಿ ಮಗನ ಮದುವೆ ನಾಳೆ || ಹಸನಾಗಿ ಇದೆ ಬದುಕು ಸಾಯಲಾರೆನೋ ಎನಲು | ಕುಸುರಿದರಿಯದೆ ಬಿಡರು ಯಮನವರು ಆಗ ||೨|| ಅಟ್ಟಡುಗೆಯುಣಲಿಲ್ಲ ಇಷ್ಟ ದರುಶನವಿಲ್ಲ | ಕೊಟ್ಟ ಸಾಲವ ಕೇಳ್ವ ಹೊತ್ತನರಿಯೇ || ಕಟ್ಲೆ ತುಂಬಿದ ಮೇಲೆ ಕ್ಷಣ ಮಾತ್ರ ಇರಲಿಲ್ಲ | ಅಷ್ಟರೊಳು ಪುರಂದರ ವಿಠಲ ಎನು ಮನವೆ ||೩|| aMtakana dUtarige kiMcittu dayavilla | ciMteyanu biTTu SrI hariya nene manave ||pa||   diva rAtriyennade viShaya laMpaTanAgi saviyUTa | gaLanuMDu BramisabEDa || avana koMdivana koMdarthavanu gaLisuvare | javana dUtaru baruva hotta nInariye ||1||   hosa maneya kaTTidenu gRuhaSAMti maneyoLage | basuri heMDati magana maduve nALe || hasanAgi ide baduku sAyalArenO enalu | kusuridariyade biDaru yamanavaru Aga ||2|| ...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru