ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಯಾರೆತ್ತ ಪೋದರೇನು | ಶ್ರೀ ಪುರಂದರ ವಿಠಲ | Yaretta Podarenu | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)



ಯಾರೆತ್ತ ಪೋದರೇನು ಊರೆತ್ತ ಬೆಂದರೇನು| 
ಪೂರ್ವ ಪ್ರಾಪ್ತಿ ತನಗಲ್ಲದುಂಟೆ ಮನವೆ |ಪ|

ಹಗಲೆ ತಾರಕೆಗಳು ಹಾರಿ ಆಡಿದರೇನು 
ಬೈಗು ಭಾಸ್ಕರ ಮೂಡಿ ಬೆಳಗಾದರೇನು|
ಹಗೆಯವರ ಮನೆಯಲ್ಲಿ ಹಗರಣವಾದರೆ ಏನು| 
ನಿಗಮಗೋಚರನಂಘ್ರಿ ನೆನೆ ಕಂಡ್ಯ ಮನವೆ |೧|

ಚೆಂಡು ಮುಳುಗಿದರೇನು ಗುಂಡು ತೇಲಿದರೇನು| 
ಭಂಡ ನಾಲಿಗೆ ಎರಡು ತುಂಡಾದರೇನು| 
ಉಂಡ ಮನೆಗೆ ಎರಡೆಣಿಪ ಮುರಿದು ಬಿದ್ದರೆ ಏನು| 
ಪುಂಡರೀಕಾಕ್ಷನ್ನ ನೆನೆ ಕಂಡ್ಯ ಮನವೆ |೨|

ವೆಚ್ಚಕಿಲ್ಲದ ಹಣವು ವ್ಯರ್ಥವಾದರೆ ಏನು 
ಮಚ್ಚರಿಸುವರೆಲ್ಲ ಮಡಿದರೇನು|
ಅಚ್ಯುತಾನಂತ ಶ್ರೀ ಪುರಂದರ ವಿಠಲನ 
ನಿಶ್ಚಲ ಭಕುತಿಯಿಂದ ನೆನೆ ಕಂಡ್ಯ ಮನವೆ |೩|

yAretta pOdarEnu Uretta beMdarEnu| 
pUrva prApti tanagalladuMTe manave |pa|
 
hagale tArakegaLu hAri ADidarEnu 
baigu BAskara mUDi beLagAdarEnu|
hageyavara maneyalli hagaraNavAdare Enu| 
nigamagOcaranaMGri nene kaMDya manave |1|
 
ceMDu muLugidarEnu guMDu tElidarEnu| 
BaMDa nAlige eraDu tuMDAdarEnu| 
uMDa manege eraDeNipa muridu biddare Enu| 
puMDarIkAkShanna nene kaMDya manave |2|
 
veccakillada haNavu vyarthavAdare Enu 
maccarisuvarella maDidarEnu|
acyutAnaMta SrI puraMdara viThalana 
niScala BakutiyiMda nene kaMDya manave |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru