ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಲಿದಾಡೆ ಎನ್ನ ನಾಲಿಗೆ ಮೇಲೆ | ರಂಗವಿಠಲ | Nalidade Enna Nalige | Sri Sripadarajaru


ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)
Kruti: Sri Sripadarajaru (Ranga vittala)


ನಲಿದಾಡೆ ಎನ್ನ ನಾಲಿಗೆ ಮೇಲೆ ಶಾರದಾದೇವಿ |
ಕುಣಿದಾಡೆ ಎನ್ನ ನಾಲಿಗೆ ಮೇಲೆ ||ಪ||

ಘಿಲು ಘಿಲು ಘಿಲು ಗೆಜ್ಜೆಯ ನಾದ | 
ಪೊಳೆವ ಅಂದುಗೆರುಳಿ ಪೈಜಣವಿಟ್ಟ ಪುಟ್ಟ ಪಾದ |
ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೇ
ಕರುಣದಿಂದ ಪರಿಪಾಲಿಸು ಮಾತೇ ||ಅ||

ನಸು ನಗೆ ಮುಖವು ನಾಸಾಭರಣ |
ಎಸೆವ ಕಪೋಲ ಹೊಸ ಮುತ್ತಿನ ಚಳು ತುಂಬಿಟ್ಟಾ ಶ್ರವಣಾ |
ತಿಲಕವು ಹಸನಾ ಶಶಿ ಸೂರ್ಯರ ಆಭರಣ ಶೋಭಿತಳೇ |
ಕುಸುಮ ಮುಡಿದ ಮೂರ್ಧ್ವಜವುಳ್ಳವಳೇ ||೨||

ಶೃಂಗಾರವಾದ ಜಡೆ ಬಂಗಾರ, ರಾಗುಟಿ ಚೌರಿ |
ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ರಂಗು ಮನೋಹರ |
ಮಂದಗಮನೆ ಅರವಿಂದನಯನೆ
ಸಿರಿ ರಂಗ ವಿಠಲನ್ನ ತೋರೇ ಶುಭಾಂಗಿ ||೩||

nalidADe enna nAlige mEle SAradAdEvi |
kuNidADe enna nAlige mEle ||pa||
 
Gilu Gilu Gilu gejjeya nAda | 
poLeva aMdugeruLi paijaNaviTTa puTTa pAda |
suravaranuta pAda sarasijOdBavana vadana nilayaLE
karuNadiMda paripAlisu mAtE ||a||
 
nasu nage muKavu nAsABaraNa |
eseva kapOla hosa muttina caLu tuMbiTTA SravaNA |
tilakavu hasanA SaSi sUryara ABaraNa SOBitaLE |
kusuma muDida mUrdhvajavuLLavaLE ||2||

SRuMgAravAda jaDe baMgAra, rAguTi cauri |
hoMgyAdige goMDe muttina hAra raMgu manOhara |
maMdagamane araviMdanayane
siri raMga viThalanna tOrE SuBAMgi ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru