ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮಧ್ವರಾಯರ ಕರುಣೆ | ಶ್ರೀ ವಿಜಯ ವಿಠಲ | Madhwarayara Karune | Sri Vijaya Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಕಂಡೆ ನಾ ಉಡುಪಿಯ ಕೃಷ್ಣರಾಯನ ||ಪ||
ಭೂ ಮಂಡಲದೊಳಗೆ ಉದ್ಧಂಡ ಮೋಹಿಪನ ||ಅಪ||

ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ |
ಚಂದ್ರ ಮೌಳೀಶ್ವರನ ಚರಣಕ್ಕೆರಗಿ ||
ಆಮೇಲೆ ನಾ ಬಂದು ಅನಂತೇಶ್ವರನ ಕಂಡು 
ಹನುಮಂತನ ಪಾಡಿ ಮನದಿ ನಿಲ್ಲಿಸಿ ||೧||

ಸುತ್ತು ನದಿಯ ಕಂಡೆ ಸೂರ್ಯಪ್ರಭೆಯ ಕಂಡೆ |
ಅಲ್ಲಿದ್ದ ಮಧ್ವಸರೋವರವ ಕಂಡೆ ||
ಮಧ್ವಮತದ ಅಷ್ಟ ಯತಿಗಳ ನಾ ಕಂಡೆ |
ಪ್ರಸಿದ್ಧವಾಗಿರುವ ಶ್ರೀ ಉಡುಪಿ ಕೃಷ್ಣನ ಕಂಡೆ ||೨||

ಉಂಗುರ ಉಡಿದಾರ ಉಡಿಗಂಟೆ ನಾ ಕಂಡೆ |
ರಂಗು ಮಾಣಿಕ್ಯದ ನವರತ್ನ ಮಾಲೆ ಕಂಡೆ ||
ದಿಂಧಿಮಿ ಧಿಮಿಕೆಂದು ಕುಣಿವ ಕೃಷ್ಣನ ಕಂಡೆ |
ಪುರಂದರ ವಿಠಲನ ಪಾದ ಕಮಲವ ಕಂಡೆ ||೩||

kaMDe nA uDupiya kRuShNarAyana ||pa||
BU maMDaladoLage uddhaMDa mOhipana ||apa||
 
samudrava nA kaMDu snAnAdigaLa mADi |
caMdra mauLISvarana caraNakkeragi ||
AmEle nA baMdu anaMtESvarana kaMDu 
hanumaMtana pADi manadi nillisi ||1||
 
suttu nadiya kaMDe sUryapraBeya kaMDe |
allidda madhvasarOvarava kaMDe ||
madhvamatada aShTa yatigaLa nA kaMDe |
prasiddhavAgiruva SrI uDupi kRuShNana kaMDe ||2||
 
uMgura uDidAra uDigaMTe nA kaMDe |
raMgu mANikyada navaratna mAle kaMDe ||
diMdhimi dhimikeMdu kuNiva kRuShNana kaMDe |
puraMdara viThalana pAda kamalava kaMDe ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru