ಭಾರತೀಶನೆ ಎನ್ನ ಭವಜನಿತ ದುಃಖ
ದೂರ ಮಾಡೋ ಶ್ರೀ ಘನ್ನ ಸನ್ನುತವರೇಣ್ಯ ||ಪ||
ವಾರವಾರಕೆ ಭಜಿಪೆ ನಿನ್ನ ಮುರಾರಿ ವಾರಿಜ ಪದವಿ ಎನಮನ
ಸೇರಿ ಶಾಂತದಿ ಮುಕುತಿ ಪಥವನು ತೋರಿ ಪೊರೆ ಕರುಣಾಳು ಉತ್ತಮ ||ಅಪ||
ವಾಯುಸುತ ಹೇ ಧೀರ | ಶ್ರೀ ರಾಮಕಿಂಕರ
ರಾಯ ಮಹಾದುರ್ಧರ | ಸದ್ಗುಣಗಣಾಂಬುಧಿ
ಮಾಯದನುಜವಿದಾರ ಸುಚರಿತ್ರ ಶೂರ
ತೋಯಜಾಂಬಕನಸತಿಯ ಖಳನಾಯಕನು ಕದ್ದೊಯ್ಯೆ ಕಪಟದಿ
ಜೀಯನೆ ವಾರಿಧಿಯ ಲಂಘಿಸಿ ಕಾಯಜನ ಪಡದಾಕೆಗುಂಗುರ |
ಈಯುತಲಿ ವನದೊಳಿಹ ಖಳ ನಾಯಕರು ಬಂದ್ಹಿಡಿಯೆ ಅವರ
ಕಾಯ ಖಂಡಿಸಿ ತಿರುಗಿ ದಶರಥ ಪ್ರಿಯ ರಾಮನಿಗೆ ಸುಕ್ಷೇಮ ತಿಳುಹಿದಿ ||೧||
ಕುರುಕುಲಾಂಬುಧಿ ಸೋಮ ಎಂದೆನಿಸಿದನೆ ಮಹಾ
ಗುರು ಪರಾಕ್ರಮ ಭೀಮ | ದ್ರೌಪದಿ ಮನೋಜಯ
ಕರುಣಾ ವಾರಿಧಿ ಸ್ತೋಮ ರಣರಂಗ ಧಾಮ |
ದುರುಳ ದುರ್ಯೋಧನನು ನಿಮ್ಮನು ಅರಗಿನ ಮನೆಯಲ್ಲಿ ಪೊಗಿಸಲು
ಹಿರಿಯ ಧರ್ಮಾದಿಗಳ ಕೈಗೊಂಡ್ಹರುಷದಿಂದಲಿ ತೆರಳಿ ಬಂದು
ವರಹಿಡಿಂಬಕ ಬಕ ಮುಖಾದ್ಯರ ತರಿದು ಯದುಕುಲ ಜಾತ ಕೃಷ್ಣನ
ಪರಮ ಕಿಂಕರನಾಗಿ ಸತತದಿ ಮೆರೆವ ಪಾಂಡವ ಜಾತ ಖ್ಯಾತ ||೨||
ಮಧ್ಯಗೇಹನೊಳುದಿಸಿ ವರವೀರ ವೈಷ್ಣವ
ಪದ್ಧತಿಗಳನುಸರಿಸಿ ಮಾಯ್ಗಳ ತ್ರಿಭಾಷ್ಯವ
ಗೆದ್ದು ಗುರುವೆಂದೆನಿಸಿ ಮಧ್ವಾಖ್ಯನೆನಿಸಿ
ಸಿದ್ಧ ಮೂರುತಿ ಹರಿಯನುಗ್ರಹ ಬದ್ಧರಾದ ಜನಕೆ ಭೇದವ
ತಿದ್ದಿ ತಿಳುಹಿದಿ ಮುನಿವರೇಂದ್ರ ಪ್ರಸಿದ್ಧವಾದ ಪರಾಜಿತನೆ ಎ
ನ್ನುದ್ಧರಿಸುತಲಿ ಚಂದದಲಿ ಪ್ರಸಿದ್ಧ ಮೌನಗಿರಿಯಲ್ಲಿ ನಿಂದಿಹ
ಮಧ್ವಪತಿ ಪುರಂದರ ವಿಠಲ ದೂತ ಮುದ್ದು ಪ್ಲವಗಾದಿಪರಶೇಖರ ||೩||
BAratISane enna Bavajanita duHKa
dUra mADO SrI Ganna sannutavarENya ||pa||
vAravArake Bajipe ninna murAri vArija padavi enamana
sEri SAMtadi mukuti pathavanu tOri pore karuNALu uttama ||apa||
vAyusuta hE dhIra | SrI rAmakiMkara
rAya mahAdurdhara | sadguNagaNAMbudhi
mAyadanujavidAra sucaritra SUra
tOyajAMbakanasatiya KaLanAyakanu kaddoyye kapaTadi
jIyane vAridhiya laMGisi kAyajana paDadaakeguMgura |
Iyutali vanadoLiha KaLa nAyakaru baMd~hiDiye avara
kAya KaMDisi tirugi daSaratha priya rAmanige sukShEma tiLuhidi ||1||
kurukulAMbudhi sOma eMdenisidane mahA
guru parAkrama BIma | draupadi manOjaya
karuNA vAridhi stOma raNaraMga dhAma |
duruLa duryOdhananu nimmanu aragina maneyalli pogisalu
hiriya dharmAdigaLa kaigoMD~haruShadiMdali teraLi baMdu
varahiDiMbaka baka muKAdyara taridu yadukula jAta kRuShNana
parama kiMkaranAgi satatadi mereva pAMDava jAta KyAta ||2||
madhyagEhanoLudisi varavIra vaiShNava
paddhatigaLanusarisi mAygaLa triBAShyava
geddu guruveMdenisi madhvAKyanenisi
siddha mUruti hariyanugraha baddharAda janake BEdava
tiddi tiLuhidi munivarEMdra prasiddhavAda parAjitane e
nnuddharisutali caMdadali prasiddha maunagiriyalli niMdiha
madhvapati puraMdara viThala dUta muddu plavagAdiparaSEKara ||3||