ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿತ್ಯ ನಿಗಮನಿಕರ ನಿಶ್ಚಿತ | ಹಯವದನ | Nitya Nigamanikara Nischita | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನಿತ್ಯ ನಿಗಮನಿಕರ ನಿಶ್ಚಿತ ನಿರ್ಮಲ ನಿನ್ನವನ್ನ
ಸತ್ಯಸಂಧ ಹಯವದನ್ನ ಸಲಹಬೇಕೆನ್ನ ||ಪ||

ಉದಧಿಸುತೆಯ ಉರದಿ ಧರಿಸಿ ಉತ್ತಮೋತ್ತಮ
ಸುಧೆಯನುಣಿಸಿ ಸುರರ ಪೊರೆದೆ ಸುಜನ ಸುಖಕರ
ಮಧುರವಚನ ಮಾನ್ಯರಚನ ಮೃತ್ಯುಮೋಚನ
ಕದನಕರ್ಕಶ ಕಲಿಮಲಘ್ನ ಕಮಲಲೋಚನ ||೧||

ಮಂಗಳಾಂಗ ಮಧ್ಯರಹಿತ ಮದನಮೋಹನ
ಕಣ್ಗೆ ಎನಗೆ ಕಾಣಿಸು ನಿನ್ನ ಕಾಯ ಕಾಂತಿಯ
ಭಂಗರಹಿತ ಭವ್ಯಚರಿತ ಭಯಕೆ ಭಯಹರ
ರಂಗರಾಯ ರಸಿಕರರಸ ರಕ್ಷಿಸಬೇಕೆನ್ನ ||೨||

ಮಧುಕೈಟಭರ ಮರ್ದಿಸಿ ಮತಿಯ ಮಗಗಿತ್ತನ
ಅದರಿಂದ ಅಮರರೆಲ್ಲ ಅರಿತುಕೊಂಡರು
ಇದುರುಗೊಂಡು ಇವನ ನೋಡಿ ಇರವ ಮರೆತರು
ಹೃದಯಸದನ ಹಯವದನ್ನ ಹೊರೆಯಬೇಕೆನ್ನ ||೩||

nitya nigamanikara nishchita nirmala ninnavanna
satyasaMdha hayavadanna salahabEkenna ||pa||

udadhisuteya uradi dharisi uttamOttama
sudheyanuNisi surara porede sujana sukhakara
madhuravachana maanyarachana mRutyumOchana
kadanakarkasha kalimalaghna kamalalOchana ||1||

maMgaLaaMga madhyarahita madanamOhana
kaNge enage kaaNisu ninna kaaya kaaMtiya
bhaMgarahita bhavyacharita bhayake bhayahara
raMgaraaya rasikararasa rakShisabEkenna ||2||

madhukaiTabhara mardisi matiya magagittana
adariMda amararella aritukoMDaru
idurugoMDu ivana nODi irava maretaru
hRudayasadana hayavadanna horeyabEkenna ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru