ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿನಗೆ ನೀನೆ ಕೃಷ್ಣ | ಹಯವದನ ಅಂಕಿತ | Ninage Neene Krishna | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)



ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯ
ಎನಗೊಂದು ಸಾಧನ ಲೇಸು ಕಾಣಬಾರದು ||ಪ||

ಸ್ನಾನಮಾಡಿಯೆ ನಿನ್ನ ಸಂಪಾದಿಸೇನೆಂದರೆ
ಸ್ನಾನಮಾಡದೇ ಕಪ್ಪೆ ಸರ್ವಕಾಲದಲಿ
ಧ್ಯಾನ ಮಾಡಿಯೇ ನಿನ್ನ ಸಂಪಾದಿಸೇನೆಂದರೆ
ಧ್ಯಾನ ಮಾಡದೇ ಬಕಪಕ್ಷಿಯು ಸರ್ವದಾ ||೧||

ಜಪವ ಮಾಡಿಯೇ ನಿನ್ನ ಕೃಪೆಗೊಳಗಾಗುವೆನೆನೆ
ಜಪದಲ್ಲಿ ಮನಸ್ಸೆನ್ನಾಧೀನವಿಲ್ಲ
ಉಪವಾಸವೇ ಉಚಿತ ಸಾಧನವೆಂಬೆನೆ
ಉಪವಾಸವೇ ಇರದೆ ಉರಗನು ತಾ ಸರ್ವದಾ ||೨||

ಸಂನ್ಯಾಸ ಸುಖಸಾಧನವು ಎಂತೆಂಬೆನೆ
ಸಂನ್ಯಾಸಿಯಾಗಿರನೆ ರಾವಣನು
ಕನ್ಯಾದಾನವೆ ಮುಖ್ಯ ಸಾಧನವೆಂಬೆನೆ
ಕನ್ಯಾದಾನವ ಕೊಡನೆ ಕಂಸಗೆ ಜರಾಸಂಧ ||೩||

ಜಾತಿಲಿ ನಿಮ್ಮ ದಯ ಸಂಪಾದಿಸೇನೆಂದರೆ
ಜಾತಿಲಿ ಕಶ್ಯಪಸುತರು ದೈತ್ಯರಾಗಿರರೆ
ಭೂತಿ ನಿಮ್ಮ ದಯ ಸಂಪಾದಿಸೇನೆಂದರೆ
ಭೂತಿಯಾಗಿರನೆ ಈ ದುರುಳ ದುರ್ಯೋಧನ  ||೪||

ಬಂಧುತ್ವವೇ ಗತಿ ಸಾಧನವೆಂಬೆನೆ
ಬಂಧುತ್ವವಿರದೆ ಶಿಶುಪಾಲನಿಗೆ
ಒಂದಲಿಂದುಚಿತ ಕಾಣೆ ಹಯವದನರಾಯನೆ
ಎಂದೆಂದಿಗೂ ದಾಸನೆಂದೆನಿಸೊ ||೫||

ninage nIne kRuShNa dayamaaDi salahayya
enagoMdu saadhana lEsu kaaNabaaradu ||pa||

snaanamaaDiye ninna saMpaadisEneMdare
snaanamaaDadE kappe sarvakaaladali
dhyaana mADiyE ninna saMpaadisEneMdare
dhyaana maaDadE bakapakShiyu sarvadaa ||1||

japava maaDiyE ninna kRupegoLagaaguvenene
japadalli manassennaadhInavilla
upavaasavE ucita saadhanaveMbene
upavaasavE irade uraganu taa sarvadaa ||2||

saMnyaasa sukhasaadhanavu eMteMbene
saMnyaasiyaagirane raavaNanu
kanyaadaanave mukhya saadhanaveMbene
kanyaadaanava koDane kaMsage jaraasaMdha ||3||

jaatili nimma daya saMpaadisEneMdare
jaatili kaSyapasutaru daityaraagirare
bhUti nimma daya saMpaadisEneMdare
bhUtiyaagirane I duruLa duryOdhana  ||4||

baMdhutvavE gati saadhanaveMbene
baMdhutvavirade SiSupaalanige
oMdaliMducita kaaNe hayavadanaraayane
eMdeMdigU daasaneMdeniso ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru