ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ವೆಂಕಟೇಶ್ವರ ಲೋಚನ ಸುಳಾದಿ | ಶ್ರೀ ವಿಜಯ ದಾಸರು | Sri Venkateshwara Lochana Suladi | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಶ್ರೀ ವೆಂಕಟೇಶ್ವರ ಲೋಚನ ಸುಳಾದಿ

ಚಂದ್ರಮಂಡಲ ಪೋಲುವ ಇಂದಿರಾ ಮೊಗವನು
ಚಂದದಿಂದಲಿ ಬಿಡದೆ ಈಕ್ಷಿಸುವ ಲೋಚನ
ಮಂದಹಾಸ ಶೀತಳವಾಗಿ ಪಾದವನು 
ಪೊಂದಿದ ಭಕ್ತರನ ನೋಡುವ ಲೋಚನ
ವಂದಿಸಿ ಕೊಂಡಾಡಿ ಒಂದೇ ಭಕುತಿಯಲ್ಲಿ ದೇವನ ನಂಬಲು 
ನಂದದಿಂದಲಿ ಸುಧಾ ಬಿಂದುಗರೆವ ಲೋಚನ
ಅಂದು ಪ್ರಹ್ಲಾದಗೆ ಕಂಭದಿಂದಲಿ ಒಲಿದು 
ಬಂದು ಹೇರಳವಾಗಿ ಕಿಡಿ ತೋರಿದ ಲೋಚನ
ವೃಂದಾದೊಳಗೆ ಸಕಲ ವೃಕ್ಷ ಜಾತಿಗೆ ಮಿಗಿಲು
ಎಂದೆನಿಸುವ ತುಳಸಿ ಪೆತ್ತ ಲೋಚನ
ಕಂದರ್ಪ ಪಿತ ನಮ್ಮ ವಿಜಯ ವಿಠಲ ನಿನ್ನ 
ದ್ವಂದ್ವಾನಂತ ಪೊಳೆವ ಸುಲೋಚನ ||೧||

ಸರಸೀರುಹ ದಳಮರಿಸಿದ ಲೋಚನ
ಕರಿಯ ಮೇಲೆ ದಯಾ ಹರಿಸಿದ ಲೋಚನ
ಕುರುಬಲದಾಯುಷ್ಯ ಹರಿಸಿದ ಲೋಚನ
ಅರುಣ ವರುಣದ ರೇಖೆ ಸ್ಫುರಿತದ ಲೋಚನ
ಕರುಣಿ ಜಿತಾಮನ್ಯು ವಿಜಯವಿಠಲ ಸರ್ವ
ವರ್ಣಾಶ್ರಮದಲ್ಲಿ ಭರಿತ ಲೋಚನ ||೨||

ಜಲನಿಧಿಯ ಮೇಲೆ ತಿರಹಿದ ಲೋಚನ
ಸುಲಲಿತವಾಗಿದ್ದ ಸುಂದರ ಲೋಚನ
ಜಲಜಾಪ್ತ ಶಶಿಯಂತೆ ಒಪ್ಪುವ ಲೋಚನ
ಕಳಂಕವಿಲ್ಲದ ನಿರ್ದೋಷ ಲೋಚನ
ಒಳಗೆ ಹೊರಗೆ ನೋಟ ತುಂಬಿದ ಲೋಚನ
ಸಲೆ ವಿಶಾಲವಾಗಿ ಮಿರುಗುವ ಲೋಚನ
ಬಲು ದೈವಾ ಸುಕೃತ ವಿಜಯ ವಿಠಲ ತಿಮ್ಮ 
ಕೆಲಕಾಲ ಜಾಗರವಾಗಿದ್ದ ಲೋಚನ ||೩||

ದಟ್ಟದಾರಿದ್ರ್ಯನ್ನ ದೃಷ್ಟಿಯಿಂದ ನೋಡೆ
ಅಷ್ಟ ಭಾಗ್ಯದ ನೀವಾಭೀಷ್ಟದ ಲೋಚನ
ಕಷ್ಟವಾದರು ಮನ್ನಿಸಿದರೂ ನಿಮಿಷಕ್ಕೆ 
ಶ್ರೇಷ್ಠನ್ನ ಮಾಡುವ ಸ್ವಾತಂತ್ರ್ಯ ಲೋಚನ
ಸೃಷ್ಟಿಯೊಳಗೆ ಸಗರ ಕುಲ ಹೆಣಗಲು
ಸುಟ್ಟು ಕಳೆದ ಪರಾಕ್ರಮ ಲೋಚನ
ಶ್ರೇಷ್ಠನಾಮಾ ಸಿರಿ ವಿಜಯ ವಿಠಲರೇಯ
ಇಷ್ಟಾರ್ಥ ಪಾಲಿಪ ಶುಭಕರ ಲೋಚನ ||೪||

ಸರ್ವಬೊಮ್ಮಾಂಡಗಳನ್ನು ಒಳಗಿಟ್ಟ ಲೋಚನ
ಗೀರ್ವಾಣ ಮುನಿ ಜನಕೆ ಮಹಿಮೆ ತೋರಿದ ಲೋಚನ
ಉರ್ವಿಯಾ ಪತಿಗಳನು ಪುಟ್ಟಿಸಿದ ಲೋಚನ
ಸರ್ವಪ್ರಾಣಿಗಳಿಗೆ ಸಾಕಲ್ಯವಾದ ಲೋಚನ
ಚಾರ್ವಾಕ ಖಳರನ್ನು ಜರೆವಂತ ಲೋಚನ
ಸರ್ವಕಾಲದಲ್ಲಿ ಎವೆ ಹಾಕದಿದ್ದ ಲೋಚನ
ಸರ್ವಶಾಸ್ತ್ರಾಭೃತ ವಿಜಯವಿಠಲರೇಯ 
ಗೀರ್ವಾಣ ಭಜನೆಯರಿತು ಭಕ್ತರಿಗೀವ ಲೋಚನ ||೫||

ಗುರು ತನುಜನಾ ನಡುಗಿಸಿಕೊಂಡ ಲೋಚನ
ಸಿರಿರಂಗ ಪ್ರಭುರಂಗ ವಿಜಯ ವಿಠಲನ ಲೋಚನ ||೬||

Sri Venkateshwara Lochana Suladi

caMdramaMDala pOluva iMdiraa mogavanu
caMdadiMdali biDade IkShisuva lOcana
maMdahaasa SItaLavaagi paadavanu 
poMdida bhaktarana nODuva lOcana
vaMdisi koMDADi oMdE bhakutiyalli dEvana naMbalu 
naMdadiMdali sudhaa biMdugareva lOcana
aMdu prahlaadage kaMbhadiMdali olidu 
baMdu hEraLavaagi kiDi tOrida lOcana
vRuMdaadoLage sakala vRukSha jaatige migilu
eMdenisuva tuLasi petta lOcana
kaMdarpa pita namma vijaya viThala ninna 
dvaMdvaanaMta poLeva sulOcana ||1||

sarasIruha daLamarisida lOcana
kariya mEle dayaa harisida lOcana
kurubaladaayuShya harisida lOcana
aruNa varuNada rEKe sphuritada lOcana
karuNi jitaamanyu vijayaviThala sarva
varNaashramadalli bharita lOcana ||2||

jalanidhiya mEle tirahida lOcana
sulalitavaagidda suMdara lOcana
jalajaapta shashiyaMte oppuva lOcana
kaLaMkavillada nirdOSha lOcana
oLage horage nOTa tuMbida lOcana
sale vishaalavaagi miruguva lOcana
balu daivaa sukRuta vijaya viThala timma 
kelakaala jaagaravaagidda lOcana ||3||

daTTadaaridryanna dRuShTiyiMda nODe
aShTa bhaagyada nIvaabhIShTada lOcana
kaShTavaadaru mannisidarU nimiShakke 
shrEShThanna maaDuva svaataMtrya lOcana
sRuShTiyoLage sagara kula heNagalu
suTTu kaLeda paraakrama lOcana
SrEShThanaamaa siri vijaya viThalarEya
iShTaartha paalipa Subhakara lOcana ||4||

sarvabommaaMDagaLannu oLagiTTa lOcana
gIrvaaNa muni janake mahime tOrida lOcana
urviyA patigaLanu puTTisida lOcana
sarvapraaNigaLige saakalyavaada lOcana
caarvaaka KaLarannu jarevaMta lOcana
sarvakaaladalli eve haakadidda lOcana
sarvashaastraabhRuta vijayaviThalarEya 
gIrvaaNa bhajaneyaritu bhaktarigIva lOcana ||5||

guru tanujanaa naDugisikoMDa lOcana
siriraMga prabhuraMga vijaya viThalana lOcana ||6||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru