ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹೊತ್ತು ಹೋಯಿತಲ್ಲಾ | ಶ್ರೀ ಗುರು ಶ್ರೀಶ ವಿಠಲ ದಾಸರು | Hottu Hoyitalla | Sri Guru Shreesha Vithala



ಸಾಹಿತ್ಯ : ಶ್ರೀ ಗುರು ಶ್ರೀಶ ವಿಠಲ ದಾಸರು 
Kruti:  Sri Guru Shreesha Vithala Dasaru


ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ|
ಮತ್ತೆ ಮತ್ತೆ ಉನ್ಮತ್ತರ ಸಂಗದಿ 
ಉತ್ತಮರಿಗೆ ಕರವೆತ್ತಿ ಮುಗಿಯದೆಲೆ |ಪ|

ಕುಜನರ ಬಳಿ ಪಿಡಿದು ಸುಕರ್ಮವು 
ಯಜನಾದಿಗಳ ಜರಿದು|
ಭುಜಗಶಯನ ನಿನ್ನ ಭಜನೆಯ ಮಾಡುವ 
ಸುಜನರ ಚರಣಾಂಬುಜವನೆ ಪಿಡಿಯದೆ |೧|

ಜ್ಞಾನವಂತರ ಸಂಗ ಮಂದ 
ಜ್ಞಾನಿಗೇನೋ ರಂಗ|
ದೀನ ವತ್ಸಲನೇ ದೀನರಿಗಲ್ಲದಲೇ 
ಹೀನ ಗುಣದವರಿಗೇನೋ ಗತಿಯೋ ಕೃಷ್ಣ |೨|

ಪರಮ ಪುರುಷ ಹರಿಯೇ ಎನ್ನ ನೀ 
ಕರ ಪಿಡಿಯೋ ದೊರೆಯೇ|
ಅರೆಘಳಿಗ್ಯಾದರು ಗುರು ಶ್ರೀಶ ವಿಠಲ 
ಪರಮ ಪಾವನ ನಿನ್ನ ಚರಣವ ಸ್ಮರಿಸದೆ |೩|

hottu hOyitallA hari ninna BRutyanAgalilla|
matte matte unmattara saMgadi 
uttamarige karavetti mugiyadele |pa|
 
kujanara baLi piDidu sukarmavu 
yajanAdigaLa jaridu|
BujagaSayana ninna Bajaneya mADuva 
sujanara caraNAMbujavane piDiyade |1|
 
j~jAnavaMtara saMga maMda 
j~jAnigEnO raMga|
dIna vatsalanE dInarigalladalE 
hIna guNadavarigEnO gatiyO kRuShNa |2|
 
parama puruSha hariyE enna nI 
kara piDiyO doreyE|
areghaLigyAdaru guru SrISa viThala 
parama pAvana ninna caraNava smarisade |3|

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru