ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬರಿದೆ ವ್ಯರ್ಥವಾಗಿ ಹೋಗುತಿದೆ ಹೊತ್ತು | ಹಯವದನ | Baride Vyarthavagi | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti: Sri Vadirajaru (Hayavadana)


ಬರಿದೆ ವ್ಯರ್ಥವಾಗಿ ಹೋಗುತಿದೆ ಹೊತ್ತು
ಹರಿಗುರುಗಳ ನೆನೆಯದೆ ||ಪ||

ನರರ ನೂರ ಮೂವತ್ತೆರಡು ಕೋಟಿ
ವರುಷ ದಿವಸವೊಂದೆ ಬೊಮ್ಮಗೆ
ಪರೀಕ್ಷಿಸಲು ಬ್ರಹ್ಮಕಲ್ಪ ಸಾಸಿರಕೋಟಿ
ನರಕದೊಳಗೆ ಬಿದ್ದು ಮರಳಿ ಭವದಿ ಬಂದು ||೧||

ಒಂದೊಂದಕೆ ಇಪ್ಪತ್ತೊಂದು ಲಕ್ಷಯೋನಿ
ಎಂದೆನಿಸುವ ಸ್ವೇದಜ ಉದ್ಭಿಜ
ಬಂದು ಜರಾಯುಜಾಂಡಜ ಕುಲದಿ ಪುಟ್ಟಿ
ನೊಂದೆ ಎಂಬತ್ತು ನಾಲ್ಕು ಲಕ್ಷ ಯೋನಿಯಲಿ||೨||

ಮಾಸ ಒಂಬತ್ತು ಮತಿಗೆಟ್ಟು ಗರ್ಭದಿ
ಹೇಸದೆ ಬಂದು ಜೀವಿಸಿ ಬಳಲಿ
ಮೋಸವನರಿಯದೆ ಮುನ್ನಿನ ಕರ್ಮದಿ
ಘಾಸಿಯಾದೆನೊ ಯೌವನ ಮದದಿ ಸೊಕ್ಕಿ ||೩||

ಕೆಲಹೊತ್ತು ಚದುರಂಗ ಪಗಡೆ ಆಟಗಳಿಂದ
ಕೆಲಹೊತ್ತು ಹಸಿವು ನಿದ್ರೆಗಳಿಂದಲಿ
ಕೆಲಹೊತ್ತು ಕಾಕ ಪೋಕರ ಕತೆಗಳಿಂದ
ಕೆಲಹೊತ್ತು ಪರನಿಂದೆ ಪರವಾರ್ತೆಗಳಿಂದ ||೪||

ಕಾಲವು ಕಡೆಯಾಗಿ ಹರಿ ನಿಮ್ಮನರ್ಚಿಸೆ
ವೇಳೆಯಿಲ್ಲದೆ ಹೋಯ್ತು ಬಂಜೆಯಾಗಿ
ಜಾಲಿಸಿ ಹೋಗುತಿದೆ ಈ ವಿಧದಿ ಹೊತ್ತು ಬೇಗನೆ
ಪಾಲಿಸಿ ದಯಮಾಡೊ ಸಿರಿಹಯವದನ ||೫||

baride vyarthavaagi hOgutide hottu
harigurugaLa neneyade ||pa||

narara noora moovatteraDu kOTi
varuSha divasavoMde bommage
parIkShisalu brahmakalpa saasirakOTi
narakadoLage biddu maraLi bhavadi baMdu ||1||

oMdoMdake ippattoMdu lakShayOni
eMdenisuva swEdaja udbhija
baMdu jaraayujaaMDaja kuladi puTTi
noMde eMbattu naalku lakSha yOniyali||2||

maasa oMbattu matigeTTu garbhadi
hEsade baMdu jIvisi baLali
mOsavanariyade munnina karmadi
ghaasiyaadeno youvana madadi sokki ||3||

kelahottu chaduraMga pagaDe aaTagaLiMda
kelahottu hasivu nidregaLiMdali
kelahottu kaaka pOkara kategaLiMda
kelahottu paraniMde paravaartegaLiMda ||4||

kaalavu kaDeyaagi hari nimmanarchise
vELeyillade hOytu baMjeyaagi
jaalisi hOgutide I vidhadi hottu bEgane
paalisi dayamaaDo sirihayavadana ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru