ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜೋ ಜೋ ಜೋ ಜೋಜೋ ರಂಗಧಾಮ | ರಂಗವಿಠಲ | Jo Jo Jo Jo Jo Rangadhama | Sri Sripadarajaru


ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)
Kruti: Sri Sripadarajaru (Ranga vittala)


ಜೋ ಜೋ ಜೋ ಜೋ ಜೋ ರಂಗಧಾಮ 
ಜೋ ಜೋ ಜೋ ಜೋ ಜೋ ರಣಭೀಮ || ಪ ||

ಜೋ ಜೋ ಭಕ್ತರ ಕಷ್ಟನಿರ್ಧೂಮ 
ಜೋ ಜೋ ದಶರಥ ರಾಮ ನಿಸ್ಸೀಮ || ಅಪ ||

ಭೂಮಿಯ ಚಿನ್ನದ ತೊಟ್ಟಿಲ ಮಾಡಿ 
ಸೋಮಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ 
ಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ ||೧||

ಸರಸಿಜೋದ್ಭವ ಸರಸ್ವತಿ ಭಾರತಿ 
ಗರುಡಶೇಷ ರುದ್ರರಿವರ ಸತಿಯರು
ಸುರರು ಕಿನ್ನರರು ಕಿಂಪುರುಷ ನಾರದರು 
ಪರಿಪರಿ ಗೀತದಿ ಸ್ತುತಿಸಿ ಪಾಡಿದರು ||೨||

ವಸುದೇವಸುತನಾದ ಮುದ್ದುಮುರಾರಿ 
ಅಸುರೆ ಪೂತನಿಯ ಪ್ರಾಣಾಪಹಾರಿ
ಅಸಮ ಸಾಹಸಮಲ್ಲ ದೈತ್ಯರ ವೈರಿ 
ಶಿಶುವಾಗಿ ದೇವಕೀಗಾನಂದ ತೋರಿ ||೩||

ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿ 
ಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿ
ನಿಗಮಗೋಚರ ನಿತ್ಯಾನಂದನೆ ತ್ರುವ್ವಿ 
ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ ||೪||

ತಮನ ಮರ್ದಿಸಿ ವೇದತತಿಗಳನು ತಂದೆ 
ಸುಮನಸರಿಗಾಗಿ ಮಂದರಪೊತ್ತು ನಿಂದೆ
ಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆ 
ನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ ||೫||

ತರಳನಾಗಿ ಬಲಿಯ ದಾನವ ಬೇಡ್ದೆ 
ಪರಶು ಧರಿಸಿ ಕ್ಷತ್ರಿಯರ ಸವರಿದೆ
ದುರುಳ ರಾವಣನ ಶಿರವ ಚೆಂಡಾಡಿದೆ 
ಚರಿಸಿ ಮನೆಗಳ ಪಾಲು ಮೊಸರನ್ನು ಕುಡಿದೆ ||೬||

ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲ 
ಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲ
ಪದ್ಮನಾಭ ಸಿರಿ ಭಕ್ತವತ್ಸಲ 
ನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ ||೭||

jO jO jO jO jO raMgadhAma 
jO jO jO jO jO raNaBIma || pa ||

jO jO Baktara kaShTanirdhUma 
jO jO daSaratha rAma nissIma || apa ||

BUmiya cinnada toTTila mADi 
sOmasUryareMba kalaSava hUDi
nEmadi vEdagaLa sarapaNi mADi 
A mahAkASakke koMDigaLa hAki ||1||

sarasijOdBava sarasvati BArati 
garuDaSESha rudrarivara satiyaru
suraru kinnararu kiMpuruSha nAradaru 
paripari gItadi stutisi pADidaru ||2||

vasudEvasutanAda muddumurAri 
asure pUtaniya prANApahAri
asama sAhasamalla daityara vairi 
SiSuvAgi dEvakIgAnaMda tOri ||3||

jagavanu hoTTeyoLiMbiTTe truvvi 
jagavella nirmANa mADide truvvi
nigamagOcara nityAnaMdane truvvi 
maguveMdu nAv tUgaballeve truvvi ||4||

tamana mardisi vEdatatigaLanu taMde 
sumanasarigAgi maMdarapottu niMde
kShamegAgi pOgi hiraNyakana koMde 
namisi karedare kaMbadiMd~horaTu baMde ||5||

taraLanAgi baliya dAnava bEDde 
paraSu dharisi kShatriyara savaride
duruLa rAvaNana Sirava ceMDADide 
carisi manegaLa pAlu mosarannu kuDide ||6||

buddhanAgi pativrateranALideyalla 
muddu turagavanEri kalkyanAdyalla
padmanABa siri Baktavatsala 
nidreya mADayya SrI raMgaviThala ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru