ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಭಕುತಿ ಸುಖವೋ ರಂಗ | ವಿಜಯವಿಠಲ | Bhakuti Sukhavo Ranga | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಭಕುತಿ ಸುಖವೋ ರಂಗ 
ಮುಕುತಿ ಸುಖವೋ ||ಪ||
ಭಕುತಿ ಸುಖವೋ ಮುಕುತಿ ಸುಖವೋ 
ಯುಕುತಿವಂತರೆಲ್ಲ ಹೇಳಿ ||ಅಪ||

ಭಕುತಿ ಮಾಡಿದ ಪ್ರಹ್ಲಾದ, 
ಮುಕುತಿಯನ್ನು ಪಡೆದುಕೊಂಡ ||
ಮುಕುತಿ ಬೇಡಿದ ಧ್ರುವರಾಯ 
ಯುಕುತಿಯಿಂದ ಹರಿಯ ಕಂಡ ||೧||

ಭಕುತಿ ಮಾಡಿದ ಅಜಮಿಳನು 
ಅಂತ್ಯದಲ್ಲಿ ಹರಿಯ ಕಂಡ ||
ಮುಕುತಿ ಬೇಡಿ‌ದ ಕರಿರಾಜ 
ದುರಿತಗಳನ್ನು ಕಳೆದುಕೊಂಡ ||೨||

ಭಕುತಿ ಮುಕುತಿದಾತ ನಮ್ಮ 
ಲಕುಮಿಯರಸ ವಿಜಯ ವಿಠಲ
ಶಕುತನೆನುತ ತಿಳಿದು ನಿತ್ಯ 
ಭಕುತಿಯಿಂದ ಭಜನೆ ಮಾಡಿರೋ ||೩||

Bakuti suKavO raMga 
mukuti suKavO ||pa||
Bakuti suKavO mukuti suKavO 
yukutivaMtarella hELi ||apa||
 
Bakuti mADida prahlAda, 
mukutiyannu paDedukoMDa ||
mukuti bEDida dhruvarAya 
yukutiyiMda hariya kaMDa ||1||
 
Bakuti mADida ajamiLanu 
aMtyadalli hariya kaMDa ||
mukuti bEDi^^da karirAja 
duritagaLannu kaLedukoMDa ||2||
 
Bakuti mukutidAta namma 
lakumiyarasa vijaya viThala
Sakutanenuta tiLidu nitya 
BakutiyiMda Bajane mADirO ||3||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru