ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಾಯೆ ದುರ್ಗಾಂಭ್ರಣಿಯೆ | ಶ್ಯಾಮಸುಂದರ | Kaaye Durgambhraniye | Sri Shyamasundara


ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು
Kruti: Sri Shyamasundara Dasaru


ಕಾಯೆ ದುರ್ಗಾಂಭ್ರಣಿಯೆ ತಾಯೇ
ಕಾಯೇ ಶ್ರೀ ರುಕ್ಮಿಣಿಯೆ ||ಪ||

ಕಾಯೆ ಕಾಯೆ ಶುಭಕಾಯೆ ದಯದಿ
ಹರಿಕಾಯ ನಿಲಯೆ ವಿಧಿ ಕಾಯಜ ತಾಯೇ ||ಅಪ||

ಮಾ ಕಮಲೆ ಶ್ರೀಕರಳೆ ತೋತನ ನುಡಿ ಕೇಳೆ
ಭೀಕರಳೆನಿಸುತ ವ್ಯಾಕುಲಗೊಳಿಸದೆ 
ನೀ ಕರುಣಿಸು ರತ್ನಾಕರನ ಮಗಳೆ||೧||

ಸೀತೆ ಸಾರಸ ನಯನೆ ಶೀತಾಂಶುವಿನ ಭಗಿನಿ
ಮಾತೆ ನಮಿಪೆತವ ಘಾತಕ ವ್ರಾತದ 
ಭೀತಿಯ ತೋರದೆ ಪ್ರೀತಿಯಿಂದೊಲಿದು ||೨||

ಲಕ್ಷ್ಮೀ ಕೃತಿ ಶಾಂತಿ ಅಕ್ಷರಳೆ ಜಯವಂತಿ 
ಈ ಕ್ಷಣ ಕರುಣಾಕಟಾಕ್ಷದಿಂದೀಕ್ಷಿಸು-
ಪೇಕ್ಷೆಯ ಮಾಡದೆ ಮೋಕ್ಷದಾಯಕಳೆ ||೩||

ವಟದೆಲೆಯೊಳು ಮಲಗಿರಲು ವಟುರೂಪಿ ಪತಿಪದವ
ಪಠಿಸುತಬ್ಜಕರಪುಟದಿ ನಮಿಸುವಂಥ
ಕುಟಿಲರಹಿತೆ ಶತತಟಿತ ಸನ್ನಿಭಳೆ ||೪||

ಭಾಮೆ ಶ್ರೀ ಭೂಸುತೆಯೆ ಶ್ಯಾಮಸುಂದರನ ಸತಿಯೆ
ನಾ ಮೊರೆ ಹೊಕ್ಕೆನು ಪ್ರೇಮದಿಂದಲಿ ಸು
ಕ್ಷೇಮ ಗರೆದು ಮಮಧಾಮದಿ ನೆಲೆಸೆ ||೫||

kaaye durgaaMbhraNiYe taayE
kaayE SrI rukmiNiye ||pa||

kaaye kaaye Subhakaaye dayadi
harikaaya nilaye vidhi kaayaja taayE ||apa||

maa kamale SrIkaraLe tOtana nuDi kELe
bhIkaraLenisuta vyaakulagoLisade 
nI karuNisu ratnaakarana magaLe||1||

sIte saarasa nayane SItaaMSuvina bhagini
maate namipetava Gaataka vraatada 
bhItiya tOrade prItiyiMdolidu ||2||

lakShmI kRuti SaaMti akSharaLe jayavaMti 
I kShaNa karuNaakaTaakShadiMdIkShisu-
pEkSheya maaDade mOkShadAyakaLe ||3||

vaTadeleyoLu malagiralu vaTurUpi patipadava
paThisutabjakarapuTadi namisuvaMtha
kuTilarahite SatataTita sannibhaLe ||4||

bhaame SrI bhUsuteye SyaamasuMdarana satiye
naa more hokkenu prEmadiMdali su
kShEma garedu mamadhaamadi nelese ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru