ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಯಂತ್ರೋದ್ಧಾರಕ ಪ್ರಾಣ ದೇವರ ಸುಳಾದಿ | ವಿಜಯ ದಾಸರು | Yantroddharaka Prana Devara Suladi | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಯಂತ್ರೋದ್ಧಾರಕ ಪ್ರಾಣ ದೇವರ ಸುಳಾದಿ 

ಯಂತ್ರೋದ್ಧಾರಕ ಹನುಮ ಸುರಸಾರ್ವಭೌಮ 
ಯಂತ್ರಧಾರಕ ಎನಗೆ ಮನಸಿನೊಳಗೆ 
ಯಂತ್ರ ವಾಹನನ ಪೂರ್ಣದಯದಿಂದ ಸಕ-
ಲಾಂತರಿಯಾಮಿಯಾಗಿ ಚರಾಚರದಲ್ಲಿ 
ತಂತ್ರವನು ನಡಿಸುವ ಮಂತ್ರಿ ಈತನು ಕಾಣೊ ಸ್ವಾ-
ತಂತ್ರ ಪುರುಷ ವಿಜಯವಿಠಲನ್ನ ನಿಜ ಭಕ್ತ 
ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ || ೧ ||

ಮಟ್ಟತಾಳ 
ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಧಿ-
ದ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು 
ಆ ಸಮಯದೊಳು ನೀ ಸುಳಿದು ನಿಂದು 
ಈ ಶಿಲೆಯೊಳಗೆ ಪ್ರಕಾಶಮಾನವಾಗೆ 
ತ್ರಿಸಾಮಾ ವಿಜಯವಿಠಲನ ಸೇವೆ ಹಾ- 
ರೈಸಿ ಇಲ್ಲೆ ಮೆರೆದೆ ದಾಸರನ ಪೊರೆದೆ || ೨ ||

ತ್ರಿವಿಡಿತಾಳ 
ಮೂರುಕೋಟಿ ಬೀಜಾಕಾರ ಮಂತ್ರವ ಜಪಿಸಿ 
ಧಾರಿಯನು ಎರೆದು ನಿನ್ನಯ ಸುಂದರ 
ಮೂರುತಿಯನು ನಿರ್ಮಾಣವನು ಮಾಡಿದರು 
ಆರುಕೋಣೆ ವಲಯಾಕಾರ ವಾನರ ಬದ್ಧ 
ಚಾರು ಶೋಭಿತ ತುಂಗಾತೀರದಲ್ಲಿ ವಾಸ 
ವೀರ ವಿಜಯವಿಠಲನ್ನ 
ಕಾರುಣ್ಯದಲ್ಲಿ ಅನುಗುಣವಾಗಿ ನಿಂದೆ || ೩ ||

ಧೃವತಾಳ 
ಒಂದು ಕೋಟಿ ಬೀಜ ಮಂತ್ರದಿಂದ ಸುತ್ತ ಯಂತ್ರವ ಬರಿಸಿ 
ಅಂದು ಪ್ರಾಣ ಪ್ರತಿಷ್ಠೆಯ ಮಾಡಿ ನಿಂದಿರಿಸಿದರು ನಿನ್ನ 
ಮಂದಹಾಸದಿ ವ್ಯಾಸ ಮುನಿಗಳು ಒಂದು ಕರದಲಿ ಜಪದಮಾಲೆ 
ಒಂದು ಕರ ನಾಭಿ ಕೆಳಗೆ ಚಂದದಿಂದ 
ಪದುಮಾಸನದಿಂದ ಕುಳಿತು ನಿತ್ಯ ನಿತ್ಯಾನಂದ ವಿಜಯವಿಠಲನ್ನ 
ವಂದಿಸಿ ವರಗಳ ಕೊಡುತ ಬಂದ ನರರ ಪಾಲಿಸುತ್ತ || ೪ ||

ಆದಿತಾಳ 
ಭೂತ ಪ್ರೇತ ಪಿಶಾಚ ಪೀಡೆ ವಾತ ಶೀತ ಜ್ವರ ಮಿಕ್ಕಾದ 
ಯಾತನೆ ನಾನಾ ಕಠಿಣ ಭೀತಿ ಮತ್ತೆ 
ಯಾತರ್ಯಾತರರ್ಥಪೇಕ್ಷಿತ ತೆರದಲೆ 
ಆತುರದಿಂದಲೆ ಕೊಟ್ಟು ಪಾತಕವ ಹರಿಸಿ 
ಭೂತಭೃತ್ ವಿಜಯವಿಠಲನ 
ದೂತರೊಳು ಶ್ರೇಷ್ಠನೀತ || ೫ ||

ಜತೆ 
ವ್ಯಾಸಮುನಿ ಪೂಜಿಪ ಯಂತ್ರೋದ್ಧಾರಕ ಹನುಮ 
ಈಶಾನಾ ವಿಜಯವಿಠಲನ ದಾಸರ ಪ್ರೇಮ || ೬ ||


Yantroddharaka Prana Devara Suladi

yaMtrOddhAraka hanuma surasArvaBauma 
yaMtradhAraka enage manasinoLage 
yaMtra vAhanana pUrNadayadiMda saka-
lAMtariyAmiyAgi carAcaradalli 
taMtravanu naDisuva maMtri Itanu kANo svA-
taMtra puruSha vijayaviThalanna nija Bakta 
aMtravillada tanna stutiparanna poreva || 1 ||

maTTatALa 
vyAsarAyaru tamma mIsala manadalli nidhi-
dyAsana dhyAnadali SrISana pUjisalu 
A samayadoLu nI suLidu niMdu 
I SileyoLage prakASamAnavAge 
trisAmA vijayaviThalana sEve hA- 
raisi ille merede dAsarana porede || 2 ||

triviDitALa 
mUrukOTi bIjAkAra maMtrava japisi 
dhAriyanu eredu ninnaya suMdara 
mUrutiyanu nirmANavanu mADidaru 
ArukONe valayAkAra vAnara baddha 
cAru SOBita tuMgAtIradalli vAsa 
vIra vijayaviThalanna 
kAruNyadalli anuguNavAgi niMde || 3 ||

dhRuvatALa 
oMdu kOTi bIja maMtradiMda sutta yaMtrava barisi 
aMdu prANa pratiShTheya mADi niMdirisidaru ninna 
maMdahAsadi vyAsa munigaLu oMdu karadali japadamAle 
oMdu kara nABi keLage caMdadiMda 
padumAsanadiMda kuLitu nitya nityAnaMda vijayaviThalanna 
vaMdisi varagaLa koDuta baMda narara pAlisutta || 4 ||

AditALa 
BUta prEta piSAca pIDe vAta SIta jvara mikkAda 
yAtane nAnA kaThiNa BIti matte 
yAtaryAtararthapEkShita teradale 
AturadiMdale koTTu pAtakava harisi 
BUtaBRut vijayaviThalana 
dUtaroLu SrEShThanIta || 5 ||

jate 
vyAsamuni pUjipa yaMtrOddhAraka hanuma 
ISAnA vijayaviThalana dAsara prEma || 6 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru