Posts

Showing posts from October, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆರ ಮಕ್ಕಳಾರ ರಾಣಿ | ಶ್ರೀ ಪ್ರಸನ್ನ ವೇಂಕಟ | Aara Makkalaara Raani | Sri Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಆರ ಮಕ್ಕಳಾರ ರಾಣಿ ಆರ ಸಂಪದ ವಾರಿಜಾಕ್ಷ ನಿಟ್ಟ ತೆರದಿ ಇರು ಎಲೆಲೆ ಆತ್ಮಾ || ಪ || ಬೇಡಿದರೆ ಕೊಡ ದೇವ ಬೇಡದಿದ್ದರೀವ ದೇವ ನೋಡುತಿಹ ಸುಮ್ಮನೆ ತಾನಾಡಿಪ ಜಗವ ರೂಢಿಯಲ್ಲಿ ಎಳೆ ಮಕ್ಕಳಾಡುವಂತೆ ಕೊಟ್ಟು ಕಳೆದು‌     ಓಡಿಸಾಡುತಿಹ ಯಂತ್ರಾರೂಢನ ಬಳಗಿದೆಲ್ಲ ||೧ || ಕಂದನ್ನಿಟ್ಟು ತಂದೆ ತಾಯಿ ಮುಂದೆ ಕಂದನ ಹಿಂದೆ ಮುಂದೊಯ್ಯುವನ್ಯಮ ಸಂಬಂಧರಿಗ್ಹೇಳಿ ಚಂದದಿ ಜಗಜ್ಜೀವರು ದಂದುಗದಿ ತೊಳಲೆ ಕಂಡು ಮಂದಸ್ಮಿತದೊಳಿಪ್ಪ ಮುಕುಂದನ ಮಾಯವಲ್ಲದೆ || ೨ || ಹಾವು ಹಾರವಕ್ಕು ಮೃತ ಜೀವರು ಸಂಜೀವರಕ್ಕು ಪಾವಕತಂಪಕ್ಕು ವಿಷ ಪೀಯೂಷಮಕ್ಕು ಆವಕಾಲದಿ ಶ್ರೀ ಪ್ರಸನ್ವೆಂಕಟೇಶನಂಘ್ರಿಯ ಭಾವದೊಳರ್ಚಿಸು ಕ್ಷುದ್ರ ಜೀವಿಗಳಾಸೆ ಸಲ್ಲ || ೩ || Ara makkaLAra rANi Ara saMpadavArijAkSha niTTa teradi iru elele AtmA || pa || bEDidare koDa dEva bEDadiddarIva dEva nODutiha summane tAnADipa jagava rUDhiyalli eLe makkaLADuvaMte koTTu kaLedu ODisADutiha yaMtrArUDhana baLagidella ||1 || kaMdanniTTu taMde tAyi muMde kaMdana hiMde muMdoyyuvanyama saMbaMdharig~hELi caMdadi jagajjIvaru daMdugadi toLale kaMDu maMdasmitadoLippa mukuMdana mAyavallade || 2 || hAvu h...

ಬಂದಾ ಶ್ರೀ ಕೃಷ್ಣ | ಹಯವದನ | Banda Sri Krishna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಂದಾ ಶ್ರೀ ಕೃಷ್ಣ ನಲಿಯುತ್ತ ನಸು ನಗೆ- ಯಿಂದ ಬೇಗ ಯಶೋದೆಯಿದ್ದೆಡೆಗೆ ||ಪ|| ಉದಯದೊಳೆದ್ದು ಮೊಸರ ಕಡೆವಾಗ ತನ್ನ ಅದುಭುತ ಬಾಲಲೀಲೆಗಳ ಪಾಡೆ ಮುದದಿ ನಯನದಿ ಜಲ ತುಳುಕಾಡುತಿರೆ ಕಂಡು ಮದನನಯ್ಯನು ನಚ್ಚಿ ಬೆಣ್ಣೆಯ ಬೇಡುತ್ತ||೧|| ಮಕ್ಕಳುಗಳ ಕೂಡಿ ಮನೆಮನೆಯೊಳಗಾಡಿ ಮಿಕ್ಕುಮೀರಿದ ರಕ್ಕಸರನೀಡ್ಯಾಡಿ ಅಕ್ಕರಿಂದಲಿ ತಾಯಮುಖವನೀಕ್ಷಿಸುತಲಿ ಗಕ್ಕನೆ ಸೆರಗ ಪಿಡಿದು ಮೊಲೆಯ ಕೊಡೆನ್ನುತ||೨|| ಕುರುಳಕೂದಲು ಅರಳೆಲೆ ಮಾಗಾಯಿ ಕೊರಳ ಪದಕಹಾರ ಎಸೆಯುತಿರೆ ಚರಣದಂದುಗೆ ಗೆಜ್ಜೆ ಘಲುಘಲುಕೆನ್ನುತಲಿ ಸಿರಿಯರಸ ಹಯವದನನೆನಿಪ ಮೋಹನಾಂಗ||೩|| baMdA SrI kRuShNa naliyutta nasu nage- yiMda bEga yaSOdeyiddeDege ||pa||     udayadoLeddu mosara kaDevaaga tanna adubhuta baalalIlegaLa paaDe mudadi nayanadi jala tuLukaaDutire kaMDu madananayyanu nachchi beNNeya bEDutta||1|| makkaLugaLa kUDi manemaneyoLagaaDi mikkumIrida rakkasaranIDyaaDi akkariMdali taayamukhavanIkShisutali gakkane seraga piDidu moleya koDennuta||2|| kuruLakUdalu araLele maagaayi koraLa padakahaara eseyutire charaNadaMduge gejje ghalughalukennutali siriyarasa hayavadananenipa m...

ಭಾರತೀಶನೆ ಎನ್ನ | ಪುರಂದರ ವಿಠಲ | Bharateeshane Enna | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಭಾರತೀಶನೆ ಎನ್ನ ಭವಜನಿತ ದುಃಖ  ದೂರ ಮಾಡೋ ಶ್ರೀ ಘನ್ನ ಸನ್ನುತವರೇಣ್ಯ ||ಪ||    ವಾರವಾರಕೆ ಭಜಿಪೆ ನಿನ್ನ ಮುರಾರಿ ವಾರಿಜ ಪದವಿ ಎನಮನ  ಸೇರಿ ಶಾಂತದಿ ಮುಕುತಿ ಪಥವನು ತೋರಿ ಪೊರೆ ಕರುಣಾಳು ಉತ್ತಮ ||ಅಪ||    ವಾಯುಸುತ ಹೇ ಧೀರ | ಶ್ರೀ ರಾಮಕಿಂಕರ  ರಾಯ ಮಹಾದುರ್ಧರ | ಸದ್ಗುಣಗಣಾಂಬುಧಿ  ಮಾಯದನುಜವಿದಾರ ಸುಚರಿತ್ರ ಶೂರ  ತೋಯಜಾಂಬಕನಸತಿಯ ಖಳನಾಯಕನು ಕದ್ದೊಯ್ಯೆ ಕಪಟದಿ  ಜೀಯನೆ ವಾರಿಧಿಯ ಲಂಘಿಸಿ ಕಾಯಜನ ಪಡದಾಕೆಗುಂಗುರ |   ಈಯುತಲಿ ವನದೊಳಿಹ ಖಳ ನಾಯಕರು ಬಂದ್ಹಿಡಿಯೆ ಅವರ  ಕಾಯ ಖಂಡಿಸಿ ತಿರುಗಿ ದಶರಥ ಪ್ರಿಯ ರಾಮನಿಗೆ ಸುಕ್ಷೇಮ ತಿಳುಹಿದಿ ||೧||    ಕುರುಕುಲಾಂಬುಧಿ ಸೋಮ ಎಂದೆನಿಸಿದನೆ ಮಹಾ  ಗುರು ಪರಾಕ್ರಮ ಭೀಮ | ದ್ರೌಪದಿ ಮನೋಜಯ  ಕರುಣಾ ವಾರಿಧಿ ಸ್ತೋಮ ರಣರಂಗ ಧಾಮ |  ದುರುಳ ದುರ್ಯೋಧನನು ನಿಮ್ಮನು ಅರಗಿನ ಮನೆಯಲ್ಲಿ ಪೊಗಿಸಲು  ಹಿರಿಯ ಧರ್ಮಾದಿಗಳ ಕೈಗೊಂಡ್ಹರುಷದಿಂದಲಿ ತೆರಳಿ ಬಂದು  ವರಹಿಡಿಂಬಕ ಬಕ ಮುಖಾದ್ಯರ ತರಿದು ಯದುಕುಲ ಜಾತ ಕೃಷ್ಣನ  ಪರಮ ಕಿಂಕರನಾಗಿ ಸತತದಿ ಮೆರೆವ ಪಾಂಡವ ಜಾತ ಖ್ಯಾತ ||೨||  ಮಧ್ಯಗೇಹನೊಳುದಿಸಿ ವರವೀರ ವೈಷ್ಣವ  ಪದ್ಧತಿಗಳನುಸರಿಸಿ ಮಾಯ್ಗಳ ...

ಈಗ ಮಾಡೆಲೋ ರಾಮ ಧ್ಯಾನವ | ಪುರಂದರ ವಿಠಲ | Iga Madelo Rama Dhyanava | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಈಗ ಮಾಡೆಲೋ ರಾಮ ಧ್ಯಾನವ ನೀ | ಮೂಗನಾಗಿರಬೇಡ ಎಲೆ ಮಾನವ ||ಪ|| ಕಾಲನ ದೂತರು ಕರೆವಾಗ ನೀ  ಕಾಲಗೆಟ್ಟು ಕಣ್ಣು ಬಿಡುವಾಗ || ನಾಲಿಗೆ ಸೆಳಕೊಂಡು ಜ್ಞಾನಗೆಟ್ಟಿರುವಾಗ  ನೀಲವರ್ಣನ ಧ್ಯಾನ ಒದಗುವುದೇನಯ್ಯಾ ||೧|| ಸತಿಸುತರೆಂಬ ಸಂದಣಿಯೊಳು ನೀ  ಮತಿ ಭ್ರಷ್ಟನಾಗಿ ಮನದೊಳು || ಸತತ ಶ್ರೀಲಕ್ಷ್ಮೀ ಪತಿಯ ನೆನೆದರೆ ಸ- ದ್ಗತಿ ಸನ್ಮಾರ್ಗ ಪಾರಂಪದವೀವನಯ್ಯಾ ||೨|| ಯಮನ ದೂತರು ಬಂದು ಎಳೆವಾಗ ನೀ  ನವೆವುತ್ತ ಹೊತ್ತು ಕಳೆವಾಗ || ಸಮದರ್ಶಿ ಪುರಂದರ ವಿಠಲನ ನಾಮವಾ  ಸಮಯಕ್ಕೆ ಒದಗಿ ತಾ ಬರುವುದೇನಯ್ಯಾ ||೩|| Iga mADelO rAma dhyAnava nI | mUganAgirabEDa ele mAnava ||pa||   kAlana dUtaru karevAga nI  kAlageTTu kaNNu biDuvAga || nAlige seLakoMDu j~jAnageTTiruvAga  nIlavarNana dhyAna odaguvudEnayyA ||1||   satisutareMba saMdaNiyoLu nI  mati BraShTanAgi manadoLu || satata SrIlakShmI patiya nenedare sa- dgati sanmArga pAraMpadavIvanayyA ||2||   yamana dUtaru baMdu eLevAga nI  navevutta hottu kaLevAga || samadarSi puraMdara viThalana nAmavaa  samaya...

ಯಾರೆತ್ತ ಪೋದರೇನು | ಶ್ರೀ ಪುರಂದರ ವಿಠಲ | Yaretta Podarenu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಯಾರೆತ್ತ ಪೋದರೇನು ಊರೆತ್ತ ಬೆಂದರೇನು|  ಪೂರ್ವ ಪ್ರಾಪ್ತಿ ತನಗಲ್ಲದುಂಟೆ ಮನವೆ |ಪ| ಹಗಲೆ ತಾರಕೆಗಳು ಹಾರಿ ಆಡಿದರೇನು  ಬೈಗು ಭಾಸ್ಕರ ಮೂಡಿ ಬೆಳಗಾದರೇನು| ಹಗೆಯವರ ಮನೆಯಲ್ಲಿ ಹಗರಣವಾದರೆ ಏನು|  ನಿಗಮಗೋಚರನಂಘ್ರಿ ನೆನೆ ಕಂಡ್ಯ ಮನವೆ |೧| ಚೆಂಡು ಮುಳುಗಿದರೇನು ಗುಂಡು ತೇಲಿದರೇನು|  ಭಂಡ ನಾಲಿಗೆ ಎರಡು ತುಂಡಾದರೇನು|  ಉಂಡ ಮನೆಗೆ ಎರಡೆಣಿಪ ಮುರಿದು ಬಿದ್ದರೆ ಏನು|  ಪುಂಡರೀಕಾಕ್ಷನ್ನ ನೆನೆ ಕಂಡ್ಯ ಮನವೆ |೨| ವೆಚ್ಚಕಿಲ್ಲದ ಹಣವು ವ್ಯರ್ಥವಾದರೆ ಏನು  ಮಚ್ಚರಿಸುವರೆಲ್ಲ ಮಡಿದರೇನು| ಅಚ್ಯುತಾನಂತ ಶ್ರೀ ಪುರಂದರ ವಿಠಲನ  ನಿಶ್ಚಲ ಭಕುತಿಯಿಂದ ನೆನೆ ಕಂಡ್ಯ ಮನವೆ |೩| yAretta pOdarEnu Uretta beMdarEnu|  pUrva prApti tanagalladuMTe manave |pa|   hagale tArakegaLu hAri ADidarEnu  baigu BAskara mUDi beLagAdarEnu| hageyavara maneyalli hagaraNavAdare Enu|  nigamagOcaranaMGri nene kaMDya manave |1|   ceMDu muLugidarEnu guMDu tElidarEnu|  BaMDa nAlige eraDu tuMDAdarEnu|  uMDa manege eraDeNipa muridu biddare Enu|  puMDarIkAkShanna nene kaMD...

ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ | ಶ್ರೀ ಪುರಂದರ ವಿಠಲ | Hari Hariyennalikke | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ ಈ ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ|| ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ ನಿರತ ಯಾತ್ರೆಯಲ್ಲಿ ಶಾಕದ ಚಿಂತೆ ಸರುವ ಸತ್ಕಾರ್ಯದಿ ಧನದ ಮೇಲಿನ ಚಿಂತೆ ಪುರಾಣ ಕೇಳುವಾಗ ಗೃಹದ ಚಿಂತೆ ||೧|| ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ ಪೆರ್ಮನ ಮಾಡಲು ಬಲು ಚಿಂತೆ ವರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ ದುರ್ಮದದಿ ನಡೆಯೆ ಪ್ರಾಣದ ಚಿಂತೆ ||೨|| ಗಂಗೆ ಮುಳುಗುವಾಗ ಚೆಂಬು ಮೇಲಿನ ಚಿಂತೆ ಸಂಗಡದವರು ಪೋಗುವ ಚಿಂತೆ ಪನ್ನಗಶಯನ ಶ್ರೀಪುರಂದರವಿಠಲನ್ನ ಹಿಂಗದೆ ಭಜಿಸಲು ಸತತ ನಿಶ್ಚಿಂತೆ ||೩|| hari hariyennalikke hottilla I narajanma vyarthavaagi hOgutadalla ||pa|| hari jaagaraNeyalli paaraNe ciMte nirata yaatreyalli Saakada ciMte saruva satkaaryadi dhanada mElina ciMte puraaNa kELuvaaga gRuhada ciMte ||1|| karmadi oMdu ciMte dharmadi oMdu ciMte permana maaDalu balu ciMte varma vairadi ciMte Irmanassaage ciMte durmadadi naDeye praaNada ciMte ||2|| gaMge muLuguvaaga ceMbu mElina ciMte saMgaDadavaru pOguva ciMte pannagaSayana SrIpuraMdaraviThalanna hiMgade bhajisalu sat...

ನಿನಗೆ ನೀನೆ ಕೃಷ್ಣ | ಹಯವದನ ಅಂಕಿತ | Ninage Neene Krishna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯ ಎನಗೊಂದು ಸಾಧನ ಲೇಸು ಕಾಣಬಾರದು ||ಪ|| ಸ್ನಾನಮಾಡಿಯೆ ನಿನ್ನ ಸಂಪಾದಿಸೇನೆಂದರೆ ಸ್ನಾನಮಾಡದೇ ಕಪ್ಪೆ ಸರ್ವಕಾಲದಲಿ ಧ್ಯಾನ ಮಾಡಿಯೇ ನಿನ್ನ ಸಂಪಾದಿಸೇನೆಂದರೆ ಧ್ಯಾನ ಮಾಡದೇ ಬಕಪಕ್ಷಿಯು ಸರ್ವದಾ ||೧|| ಜಪವ ಮಾಡಿಯೇ ನಿನ್ನ ಕೃಪೆಗೊಳಗಾಗುವೆನೆನೆ ಜಪದಲ್ಲಿ ಮನಸ್ಸೆನ್ನಾಧೀನವಿಲ್ಲ ಉಪವಾಸವೇ ಉಚಿತ ಸಾಧನವೆಂಬೆನೆ ಉಪವಾಸವೇ ಇರದೆ ಉರಗನು ತಾ ಸರ್ವದಾ ||೨|| ಸಂನ್ಯಾಸ ಸುಖಸಾಧನವು ಎಂತೆಂಬೆನೆ ಸಂನ್ಯಾಸಿಯಾಗಿರನೆ ರಾವಣನು ಕನ್ಯಾದಾನವೆ ಮುಖ್ಯ ಸಾಧನವೆಂಬೆನೆ ಕನ್ಯಾದಾನವ ಕೊಡನೆ ಕಂಸಗೆ ಜರಾಸಂಧ ||೩|| ಜಾತಿಲಿ ನಿಮ್ಮ ದಯ ಸಂಪಾದಿಸೇನೆಂದರೆ ಜಾತಿಲಿ ಕಶ್ಯಪಸುತರು ದೈತ್ಯರಾಗಿರರೆ ಭೂತಿ ನಿಮ್ಮ ದಯ ಸಂಪಾದಿಸೇನೆಂದರೆ ಭೂತಿಯಾಗಿರನೆ ಈ ದುರುಳ ದುರ್ಯೋಧನ  ||೪|| ಬಂಧುತ್ವವೇ ಗತಿ ಸಾಧನವೆಂಬೆನೆ ಬಂಧುತ್ವವಿರದೆ ಶಿಶುಪಾಲನಿಗೆ ಒಂದಲಿಂದುಚಿತ ಕಾಣೆ ಹಯವದನರಾಯನೆ ಎಂದೆಂದಿಗೂ ದಾಸನೆಂದೆನಿಸೊ ||೫|| ninage nIne kRuShNa dayamaaDi salahayya enagoMdu saadhana lEsu kaaNabaaradu ||pa|| snaanamaaDiye ninna saMpaadisEneMdare snaanamaaDadE kappe sarvakaaladali dhyaana mADiyE ninna saMpaadisEneMdare dhyaana maaDadE bakapakShiyu sarvadaa ||1|| japava maaDiyE ninna kRu...

ಪಂಪಾತೀರದ ಲಿಂಗಾ | ಶ್ರೀ ವಿಜಯವಿಠ್ಠಲ | Pampa Teerada Linga | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಪಂಪಾತೀರದ ಲಿಂಗಾ ಭವಭಸಿತಾಂಗಾ ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗಾ||ಪ|| ನೀನೆ ಗತಿಯೆಂದು ನಿಧಾನದಿಂದ ಧ್ಯಾನ ಮಾಡಲು ದೈನ್ಯದಲಿಂದ ಹೀನ ಪಾಪಂಗಳು ಕಳೆದು ದಯದಿಂದ ಮಾನಾಭಿಮಾನದೊಡೆಯನೆ ಆನಂದ ||೧|| ಗಜಚರ್ಮಾಂಬರ ಗಂಗಾಧರ ಪುರವೈರಿ ಭಜಿಸಿದೆನೊ ನಿನ್ನ ಭಕ್ತಿಯಲಿ ಸಾರಿ ಕುಜನರೊಳಿಡದೆ ಉತ್ತಮವಾದ ದಾರಿ ನಿಜವಾಗಿ ತೋರಯ್ಯ ದೀನರುಪಕಾರಿ ||೨|| ಹೇಮಗಿರಿಯವಾಸಾ ಈಶ ನಿರೀಶಾ ಸೋಮಶೇಖರನೆ ಪಾರ್ವತಿಯ ವಿಲಾಸಾ ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ ||೩|| paMpaatIrada liMgaa bhavabhasitaaMgaa saMpullaakShana tOrO bhakta kRupaaMgaa||pa|| nIne gatiyeMdu nidhAnadiMda dhyaana maaDalu dainyadaliMda hIna paapaMgaLu kaLedu dayadiMda maanaabhimaanadoDeyane aanaMda ||1|| gajacharmaaMbara gaMgaadhara puravairi bhajisideno ninna bhaktiyali saari kujanaroLiDade uttamavaada daari nijavaagi tOrayya dInarupakaari ||2|| hEmagiriyavaasaa Isha niRrIshaa sOmashEkharane paarvatiya vilaasaa raama shrI vijayaviThThalane nirdOShaa swaamiya nenevaMte koDu enage manasaa ||3||

ನೀ ಮಾಯೆಯೊಳಗೊ | ಕಾಗಿನೆಲೆ ಆದಿಕೇಶ | Ni Maayeyolago | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ||ಪ||  ನೀ ದೇಹದೊಳಗೋ ನಿನ್ನೊಳು ದೇಹವೋ ||ಅಪ||  ಬಯಲು ಆಲಯದೊಳಗೊ ಆಲಯವು ಬಯಲೊಳಗೋ |  ಬಯಲು ಆಲಯವೆರಡು ನಯನದೊಳಗೊ ||  ನಯನ ಬುದ್ಧಿಯ ಒಳಗೋ | ಬುದ್ಧಿ ನಯನದ ಒಳಗೋ |  ನಯನ ಬುದ್ಧಿಗಳೆರಡು ನಿನ್ನೊಳಗೋ ಕೃಷ್ಣಾ ||೧|| ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೋ |  ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೋ ||  ಜಿಹ್ವೆ ಮನಸಿನ ಒಳಗೋ ಮನಸು ಜಿಹ್ವೆಯ ಒಳಗೋ |  ಜಿಹ್ವೆ ಮನಸುಗಳೆರಡು ನಿನ್ನೊಳಗೋ ಕೃಷ್ಣಾ ||೨||  ಕುಸುಮದೊಳು ಗಂಧವೋ ಗಂಧದಲಿ ಕುಸುಮವೋ |  ಕುಸುಮ ಗಂಧಗಳೆರಡು ಆಘ್ರಾಣದೊಳಗೋ |   ಅಸಮಭವ ಕಾಗಿ ನೆಲೆ ಆದಿಕೇಶವರಾಯ |   ಉಸುರುರೆನ್ನಳವಲ್ಲ ಎಲ್ಲ ನಿನ್ನೊಳಗೋ ಕೃಷ್ಣಾ ||೩||  nI mAyeyoLago ninnoLu mAyeyo ||pa||  nI dEhadoLagO ninnoLu dEhavO ||apa||     bayalu AlayadoLago Alayavu bayaloLagO |  bayalu AlayaveraDu nayanadoLago ||  nayana buddhiya oLagO | buddhi nayanada oLagO |  nayana buddhigaLeraDu ninnoLagO kRuShNA ||1||     saviyu sakkareyoLago sakkareyu saviyoLagO |  saviyu sakkareyeraDu jihv...

ಯಂತ್ರೋದ್ಧಾರಕ ಪ್ರಾಣ ದೇವರ ಸುಳಾದಿ | ವಿಜಯ ದಾಸರು | Yantroddharaka Prana Devara Suladi | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಯಂತ್ರೋದ್ಧಾರಕ ಪ್ರಾಣ ದೇವರ ಸುಳಾದಿ  ಯಂತ್ರೋದ್ಧಾರಕ ಹನುಮ ಸುರಸಾರ್ವಭೌಮ  ಯಂತ್ರಧಾರಕ ಎನಗೆ ಮನಸಿನೊಳಗೆ  ಯಂತ್ರ ವಾಹನನ ಪೂರ್ಣದಯದಿಂದ ಸಕ- ಲಾಂತರಿಯಾಮಿಯಾಗಿ ಚರಾಚರದಲ್ಲಿ  ತಂತ್ರವನು ನಡಿಸುವ ಮಂತ್ರಿ ಈತನು ಕಾಣೊ ಸ್ವಾ- ತಂತ್ರ ಪುರುಷ ವಿಜಯವಿಠಲನ್ನ ನಿಜ ಭಕ್ತ  ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ || ೧ || ಮಟ್ಟತಾಳ  ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಧಿ- ದ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು  ಆ ಸಮಯದೊಳು ನೀ ಸುಳಿದು ನಿಂದು  ಈ ಶಿಲೆಯೊಳಗೆ ಪ್ರಕಾಶಮಾನವಾಗೆ  ತ್ರಿಸಾಮಾ ವಿಜಯವಿಠಲನ ಸೇವೆ ಹಾ-  ರೈಸಿ ಇಲ್ಲೆ ಮೆರೆದೆ ದಾಸರನ ಪೊರೆದೆ || ೨ || ತ್ರಿವಿಡಿತಾಳ  ಮೂರುಕೋಟಿ ಬೀಜಾಕಾರ ಮಂತ್ರವ ಜಪಿಸಿ  ಧಾರಿಯನು ಎರೆದು ನಿನ್ನಯ ಸುಂದರ  ಮೂರುತಿಯನು ನಿರ್ಮಾಣವನು ಮಾಡಿದರು  ಆರುಕೋಣೆ ವಲಯಾಕಾರ ವಾನರ ಬದ್ಧ  ಚಾರು ಶೋಭಿತ ತುಂಗಾತೀರದಲ್ಲಿ ವಾಸ  ವೀರ ವಿಜಯವಿಠಲನ್ನ  ಕಾರುಣ್ಯದಲ್ಲಿ ಅನುಗುಣವಾಗಿ ನಿಂದೆ || ೩ || ಧೃವತಾಳ  ಒಂದು ಕೋಟಿ ಬೀಜ ಮಂತ್ರದಿಂದ ಸುತ್ತ ಯಂತ್ರವ ಬರಿಸಿ  ಅಂದು ಪ್ರಾಣ ಪ್ರತಿಷ್ಠೆಯ ಮಾಡಿ ನಿಂದಿರಿಸಿದರು ನಿನ್ನ  ಮಂದಹಾಸದಿ ವ್ಯಾಸ ಮುನಿಗಳು ಒಂದು ಕರದಲಿ ಜಪದಮಾಲೆ  ಒಂದು ಕರ ನಾಭಿ ಕೆಳಗೆ ಚಂದದಿಂದ...

ಶ್ರೀ ವಾದಿರಾಜಯತಿ ವಿರಚಿತ | ಶ್ರೀ ಶ್ರೀಶಗುಣದರ್ಪಣಮ್ | Sri Shrishagunadarpanam | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಶ್ರೀಶಗುಣದರ್ಪಣಮ್ ಯಾ ಸುಗಂಧಸ್ಯನಾಸಾದಿ-ನವದ್ವಾರಾಽಖಿಲೇನ ಯಾ | ದುರಾಧರ್ಷಾ ಸರ್ವಸಸ್ಯೋದಯಾರ್ಥಂ ಯಾ ಕರೀಷಿಣೀ || ೧ || ಯಾ ನಿತ್ಯಪುಷ್ಟಾ ಸರ್ವಾಂಗೈಃ ಸೌಂದರ್ಯಾದಿಗುಣೈರಪಿ | ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ || ೨ || ಮಾತರ್ಲಕ್ಷ್ಮಿ ನಮಸ್ತುಭ್ಯಂ ಮಾಧವಪ್ರಿಯಮಾನಿನಿ | ಯುವಾಂ ವಿಶ್ವಸ್ಯ ಪಿತರಾವಿತರೇತರಯೋಗಿನೌ || ೩ || ಸಮನಾ ಕಿಲ ಮಾತಸ್ತ್ವಮಮುನಾ ತತಯೋಗಿನೀ | ಮಮ ನಾಥೇನ ದೇವಶ್ಚ ವಿಮನಾಶ್ಚ ನ ಸ ತ್ವಯಿ || ೪ || ತ್ವಂ ವೇದಮಾನಿನೀ ವೇದವೇದ್ಯಃ ಕಿಲ ಸ ತೇ ಪ್ರಿಯಃ | ತ್ವಂ ಮೂಲಪ್ರಕೃತಿರ್ದೇವೀ ಸ ಚಾದಿಪುರುಷಃ ಕಿಲ || ೫ || ಯಸ್ತ್ವಾಮುರಸಿ ಧತ್ತೇಽಂಬ ಕೌಸ್ತುಭದ್ಯುತಿಭಾಸಿತೇ | ಸತ್ವಾಂ ನೈವಾಚ್ಯುತಃ ಸರ್ವಸ್ಯಾತ್ಯಯೇ ಸತ್ಯಪಿ ತ್ಯಜೇತ್ || ೬ || ದೇವಿ ತ್ವಂ ಲಲನಾರತ್ನಂ ದೇವೋಽಸೌ ಪುರುಷೋತ್ತಮಃ | ಯುವಾಂ ಯುವಾನೌ ಸತತಂ ಯುವಯೋರ್ನ ವಯೋಽಧಿಕಃ || ೭ || ತ್ವಂ ಪದ್ಮಿನೀಪದ್ಮವಕ್ತ್ರಾ ಪದ್ಮಾಕ್ಷೀ ಪದ್ಮವಿಷ್ಟರಾ | ಪದ್ಮದ್ವಯಧರಾ ಪದ್ಮ ಕೋಶೋದ್ಯತ್‍ಸ್ತನಶೋಭನಾ || ೮ || ಪದ್ಮಹಸ್ತಾ ಪದ್ಮಪಾದಾ ಪದ್ಮನಾಭಮನಃಪ್ರಿಯಾ | ಪದ್ಮೋದ್ಭವಸ್ಯ ಜನನೀ ಪದ್ಮಾ ಚ ವರವರ್ಣಿನೀ || ೯ || ಅಂಬಾಂ ಪೀತಾಂಬರಶ್ರೋಣೀಂ ಲಂಬಾಲಕಲಸನ್ಮುಖೀಂ | ಬಿಂಬಾಧರೋಷ್ಠೀಂ ಕಸ್ತೂರಿ-ಜಂಬಾಲತಿಲಕಾಂ ಭಜೇ || ೧೦ || ರತ್ನೋದ್ದೀಪ್ತಸುಮಾಂಗಲ್ಯ-ಸೂತ್ರಾವೃತಶಿರೋಧರ...

ವರಗುರು ಉಪದೇಶ | ಪುರಂದರ ವಿಠಲ | Varaguru Upadesha | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವರಗುರು ಉಪದೇಶ ನೆರವಾಯಿತೆನಗೀಗ ಇನ್ನೇನಿನ್ನೇನು ||ಪ|| ಹರಿದಾಸರ ಸಂಗ ದೊರಕಿತು ಎನಗೀಗ ಇನ್ನೇನಿನ್ನೇನು ||ಅಪ|| ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು || ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲೆಸಿತು ಇನ್ನೇನಿನ್ನೇನು ||೧|| ಹಲವು ದೈವಗಳೆಂಬೊ ಹಂಬಲ ಬಿಟ್ಟಿತು ಇನ್ನೇನಿನ್ನೇನು || ಜಲಜನಾಭನ ನಾಮ ಹೃದಯದೊಳ್ ನೆಲೆಸಿತು ಇನ್ನೇನಿನ್ನೇನು ||೨|| ತಂದೆ ತಾಯಿ ಮುಚುಕುಂದ ವರದನಾದ ಇನ್ನೇನಿನ್ನೇನು || ಸಂದೇಹವಿಲ್ಲ ಮುಕುಂದ ದಯ ಮಾಡಿದ ಇನ್ನೇನಿನ್ನೇನು ||೩|| ಏನೆಂದು ಪೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು || ನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು ||೪|| ಎನ್ನ ವಂಶಗಳೆಲ್ಲ ಪಾವನವಾದವು ಇನ್ನೇನಿನ್ನೇನು || ಚಿನ್ಮಯ ಪುರಂದರ ವಿಠಲಯ್ಯ ದೊರಕಿದ ಇನ್ನೇನಿನ್ನೇನು ||೫|| varaguru upadESa neravAyitenagIga innEninnEnu ||pa|| haridAsara saMga dorakitu enagIga innEninnEnu ||apa||   mAyada saMsAra mamakAra hiMgitu innEninnEnu || tOyajAkShana nAma jihveyoL nelesitu innEninnEnu ||1||   halavu daivagaLeMbo haMbala biTTitu innEninnEnu || jalajanABana nAma hRudayadoL nelesitu innEninnEnu ||2||   taMde tAyi mucukuMda varad...

ನಿನ್ನ ನಾಮವಿದ್ದರೆ ಸಾಕೋ | ಪುರಂದರ ವಿಠಲ | Ninna Namaviddare Sako | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನಿನ್ನ ನಾಮವಿದ್ದರೆ ಸಾಕೋ ||ಪ|| ಮುನಿದರೆ ಮುನಿ ನಿನ್ನಾಣೆ ಶ್ರೀ ರಾಮ ||ಅಪ|| ಹೊದ್ದಿದ ಪಾಪವನೆಲ್ಲ ಛಿನ್ನ   ಛಿದ್ರವ ಮಾಡಿ ಖಂಡಿಸಿ ಬಿಡುವ  ಎದ್ದರೆ ಸಂಗಡ ಬರುವ ಎನ್ನ   ಮುದ್ದಿಸಿ ಮುಂದಕೆ ಮುಕ್ತಿಯ ಕೊಡುವ ||೧|| ಸಾರೆ ಸಂಗಡ ಬರುವ ಎನ್ನ   ಸೇರಿದ ಪಾಪವ ಕೋಪದಿ ತರಿವ  ಝಾಢಿಸಿ ಕರ್ಮವ ಕಳೆವ ಎನ್ನ ಸಂ- ಗಡ ಕೂಡಿಕೊಂಡು ವೈಕುಂಠಕ್ಕೆ ನಡೆವ ||೨|| ಪರಮಾನಂದವನೀವ ನಿನ್ನ  ಸ್ಮರಣೆ ಎಂಬುದು ಎನ್ನ ಜೀವಕ್ಕೆ ಜೀವ   ವರ ಕೊಡುವುದೊಂದು ಭಾವ ಈ  ಪರಿಪುಸಿಯಲ್ಲ ಪುರಂದರ ವಿಠಲ ||೩|| ninna naamaviddare saakO ||pa|| munidare muni ninnaaNe shrI raama ||apa|| hoddida paapavanella Cinna   Cidrava maaDi KaMDisi biDuva  eddare saMgaDa baruva enna   muddisi muMdake muktiya koDuva ||1|| saare saMgaDa baruva enna   sErida paapava kOpadi tariva  JADhisi karmava kaLeva enna saM- gaDa kUDikoMDu vaikuMThakke naDeva ||2|| paramaanaMdavanIva ninna  smaraNe eMbudu enna jIvakke jIva   vara koDuvudoMd...

ಜಾಲಿಯ ಮರದಂತೆ | ಪುರಂದರ ವಿಠಲ | Jaaliya Maradante | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಜಾಲಿಯ ಮರದಂತೆ ಧರೆಯೊಳಗೆ ದುರ್ಜನರು ||ಪ|| ಮೂಲಾಗ್ರ ಪರ್ಯಂತ ಮುಳ್ಳು ಕೂಡಿಪ್ಪಂತೆ ||ಅಪ|| ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ | ಹಸಿದು ಬಂದವರಿಗೆ ಹಣ್ಣು ಇಲ್ಲ |  ಕುಸುಮ ವಾಸನೆ ಇಲ್ಲ | ಕೂಡಲು ಸ್ಥಳವಿಲ್ಲ |  ರಸದಲ್ಲಿ ಸ್ವಾದವು ವಿಷದಂತೆ ಇರುತಿಹ || ೧ || ಊರ ಹಂದಿಗೆ ಷಡ್ರಸಾನ್ನವನಿಕ್ಕಲು    ನಾರುವ ದುರ್ಗಂಧ ಬಿಡುವುದುಂಟೇ ||   ಘೋರಪಾಪಿಗೆ ತತ್ವಜ್ಞಾನವ ಹೇಳಿದರೆ     ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ ||೨||   ತನ್ನಿಂದ ಉಪಕಾರ ತೊಟಕಾದರೂ ಇಲ್ಲ | ಬಿನ್ನಾಣದ ಮಾತಿಗೆ ಕೊನೆಯಿಲ್ಲವೋ  ||   ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ |  ಇನ್ನಿವರ ಕಾರ್ಯವು ಪುರಂದರವಿಠಲ ||೩||  jAliya maradaMte dhareyoLage durjanaru ||pa|| mUlAgra paryaMta muLLu kUDippaMte ||apa||   bisilali baLali baMdavarige neraLilla | hasidu baMdavarige haNNu illa |  kusuma vAsane illa | kUDalu sthaLavilla |  rasadalli svAdavu vishadante irutiha || 1 ||   Ura haMdige shaDrasAnnavanikkalu nAruva durgaMdha biDuvudunte || ghOra paapi...

ದಾಸನಾಗಬೇಕು ಸದಾಶಿವನ | ಕಾಗಿನೆಲೆಯಾದಿ ಕೇಶವ | Dasanagabeku Sadashivana | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ದಾಸನಾಗಬೇಕು ಸದಾಶಿವನ ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶ ಪಂಚಕವಳಿದು ಆಶೆಯಲಿ ಮನಸೂಸದೆ ಸರ್ವದಾ ||ಅಪ|| ಮನದ ಕಲ್ಮಷ ಕಳೆದು ಮಹಾದೇ- ವನ ಮಹಿಮೆಯ ತಿಳಿದು  ಇನಿತು ಈ ಜಗವೆಲ್ಲ ಈಶ್ವರಮಯವೆಂದು  ಘನವಾದ ಮೋಹದ ಗಡಿಯನ್ನು ದಾಟುತ್ತ ||೧|| ತನುವು ಅಸ್ಥಿರವೆನ್ನುತ ತಿಳಿದು ಶಂಕ- ರನ ಹೃದಯದಿ ಕಾಣುತ  ಘನವಾದ ಇಂದ್ರಜಾಲದ ಮಾಯೆಯೆನ್ನುತ  ಬಿನುಗು ಸಂಸಾರದ ಮಮತೆಯನು ಬಿಡುತ ||೨|| ಆರು ಚಕ್ರದಿ ಮೆರೆವ ಅಖಂಡನ  ಮೂರು ಗುಣವ ತಿಳಿದು  ಆರು ಮೂರು ಹದಿನಾರು ತತ್ತ್ವವ ಮೀರಿ  ತೋರುವ ಕಾಗಿನೆಲೆಯಾದಿ ಕೇಶವನಡಿ ||೩|| daasanaagabEku sadaaSivana daasanaagabEku ||pa|| daasanaagabEku klESa paMcakavaLidu ASeyali manasUsade sarvadaa ||apa|| manada kalmaSha kaLedu mahaadE- vana mahimeya tiLidu  initu I jagavella IshvaramayaveMdu  Ganavaada mOhada gaDiyannu daaTutta ||1|| tanuvu asthiravennuta tiLidu SaMka- rana hRudayadi kaaNuta  Ganavaada iMdrajaalada maayeyennuta  binugu saMsaarada mamateyanu biDuta ||2|| Aru chakradi mereva aKaMDana  mUru guNawa tiLidu  Aru mUru hadinaaru tattvava mIri...

ಜೋ ಜೋ ಜೋ ಜೋಜೋ ರಂಗಧಾಮ | ರಂಗವಿಠಲ | Jo Jo Jo Jo Jo Rangadhama | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಜೋ ಜೋ ಜೋ ಜೋ ಜೋ ರಂಗಧಾಮ  ಜೋ ಜೋ ಜೋ ಜೋ ಜೋ ರಣಭೀಮ || ಪ || ಜೋ ಜೋ ಭಕ್ತರ ಕಷ್ಟನಿರ್ಧೂಮ  ಜೋ ಜೋ ದಶರಥ ರಾಮ ನಿಸ್ಸೀಮ || ಅಪ || ಭೂಮಿಯ ಚಿನ್ನದ ತೊಟ್ಟಿಲ ಮಾಡಿ  ಸೋಮಸೂರ್ಯರೆಂಬ ಕಲಶವ ಹೂಡಿ ನೇಮದಿ ವೇದಗಳ ಸರಪಣಿ ಮಾಡಿ  ಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ ||೧|| ಸರಸಿಜೋದ್ಭವ ಸರಸ್ವತಿ ಭಾರತಿ  ಗರುಡಶೇಷ ರುದ್ರರಿವರ ಸತಿಯರು ಸುರರು ಕಿನ್ನರರು ಕಿಂಪುರುಷ ನಾರದರು  ಪರಿಪರಿ ಗೀತದಿ ಸ್ತುತಿಸಿ ಪಾಡಿದರು ||೨|| ವಸುದೇವಸುತನಾದ ಮುದ್ದುಮುರಾರಿ  ಅಸುರೆ ಪೂತನಿಯ ಪ್ರಾಣಾಪಹಾರಿ ಅಸಮ ಸಾಹಸಮಲ್ಲ ದೈತ್ಯರ ವೈರಿ  ಶಿಶುವಾಗಿ ದೇವಕೀಗಾನಂದ ತೋರಿ ||೩|| ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿ  ಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿ ನಿಗಮಗೋಚರ ನಿತ್ಯಾನಂದನೆ ತ್ರುವ್ವಿ  ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ ||೪|| ತಮನ ಮರ್ದಿಸಿ ವೇದತತಿಗಳನು ತಂದೆ  ಸುಮನಸರಿಗಾಗಿ ಮಂದರಪೊತ್ತು ನಿಂದೆ ಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆ  ನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ ||೫|| ತರಳನಾಗಿ ಬಲಿಯ ದಾನವ ಬೇಡ್ದೆ  ಪರಶು ಧರಿಸಿ ಕ್ಷತ್ರಿಯರ ಸವರಿದೆ ದುರುಳ ರಾವಣನ ಶಿರವ ಚೆಂಡಾಡಿದೆ  ಚರಿಸಿ ಮನೆಗಳ ಪಾಲು ಮೊಸರನ್ನು ಕುಡಿದೆ ||೬|| ಬುದ್ಧನಾಗಿ ಪತಿವ್ರತೆರನಾಳಿ...

ಶ್ರೀ ವೆಂಕಟೇಶ್ವರ ಲೋಚನ ಸುಳಾದಿ | ಶ್ರೀ ವಿಜಯ ದಾಸರು | Sri Venkateshwara Lochana Suladi | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಶ್ರೀ ವೆಂಕಟೇಶ್ವರ ಲೋಚನ ಸುಳಾದಿ ಚಂದ್ರಮಂಡಲ ಪೋಲುವ ಇಂದಿರಾ ಮೊಗವನು ಚಂದದಿಂದಲಿ ಬಿಡದೆ ಈಕ್ಷಿಸುವ ಲೋಚನ ಮಂದಹಾಸ ಶೀತಳವಾಗಿ ಪಾದವನು  ಪೊಂದಿದ ಭಕ್ತರನ ನೋಡುವ ಲೋಚನ ವಂದಿಸಿ ಕೊಂಡಾಡಿ ಒಂದೇ ಭಕುತಿಯಲ್ಲಿ ದೇವನ ನಂಬಲು  ನಂದದಿಂದಲಿ ಸುಧಾ ಬಿಂದುಗರೆವ ಲೋಚನ ಅಂದು ಪ್ರಹ್ಲಾದಗೆ ಕಂಭದಿಂದಲಿ ಒಲಿದು  ಬಂದು ಹೇರಳವಾಗಿ ಕಿಡಿ ತೋರಿದ ಲೋಚನ ವೃಂದಾದೊಳಗೆ ಸಕಲ ವೃಕ್ಷ ಜಾತಿಗೆ ಮಿಗಿಲು ಎಂದೆನಿಸುವ ತುಳಸಿ ಪೆತ್ತ ಲೋಚನ ಕಂದರ್ಪ ಪಿತ ನಮ್ಮ ವಿಜಯ ವಿಠಲ ನಿನ್ನ  ದ್ವಂದ್ವಾನಂತ ಪೊಳೆವ ಸುಲೋಚನ ||೧|| ಸರಸೀರುಹ ದಳಮರಿಸಿದ ಲೋಚನ ಕರಿಯ ಮೇಲೆ ದಯಾ ಹರಿಸಿದ ಲೋಚನ ಕುರುಬಲದಾಯುಷ್ಯ ಹರಿಸಿದ ಲೋಚನ ಅರುಣ ವರುಣದ ರೇಖೆ ಸ್ಫುರಿತದ ಲೋಚನ ಕರುಣಿ ಜಿತಾಮನ್ಯು ವಿಜಯವಿಠಲ ಸರ್ವ ವರ್ಣಾಶ್ರಮದಲ್ಲಿ ಭರಿತ ಲೋಚನ ||೨|| ಜಲನಿಧಿಯ ಮೇಲೆ ತಿರಹಿದ ಲೋಚನ ಸುಲಲಿತವಾಗಿದ್ದ ಸುಂದರ ಲೋಚನ ಜಲಜಾಪ್ತ ಶಶಿಯಂತೆ ಒಪ್ಪುವ ಲೋಚನ ಕಳಂಕವಿಲ್ಲದ ನಿರ್ದೋಷ ಲೋಚನ ಒಳಗೆ ಹೊರಗೆ ನೋಟ ತುಂಬಿದ ಲೋಚನ ಸಲೆ ವಿಶಾಲವಾಗಿ ಮಿರುಗುವ ಲೋಚನ ಬಲು ದೈವಾ ಸುಕೃತ ವಿಜಯ ವಿಠಲ ತಿಮ್ಮ  ಕೆಲಕಾಲ ಜಾಗರವಾಗಿದ್ದ ಲೋಚನ ||೩|| ದಟ್ಟದಾರಿದ್ರ್ಯನ್ನ ದೃಷ್ಟಿಯಿಂದ ನೋಡೆ ಅಷ್ಟ ಭಾಗ್ಯದ ನೀವಾಭೀಷ್ಟದ ಲೋಚನ ಕಷ್ಟವಾದರು ಮನ್ನಿಸಿದರೂ ನಿಮಿಷಕ್ಕೆ  ಶ್ರೇಷ್ಠನ್ನ ಮಾಡುವ ಸ್ವಾತಂತ್ರ್ಯ ಲೋಚನ ಸೃಷ್ಟಿಯೊಳಗೆ...

ಮಧ್ವರಾಯರ ಕರುಣೆ | ಶ್ರೀ ವಿಜಯ ವಿಠಲ | Madhwarayara Karune | Sri Vijaya Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಂಡೆ ನಾ ಉಡುಪಿಯ ಕೃಷ್ಣರಾಯನ ||ಪ|| ಭೂ ಮಂಡಲದೊಳಗೆ ಉದ್ಧಂಡ ಮೋಹಿಪನ ||ಅಪ|| ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ | ಚಂದ್ರ ಮೌಳೀಶ್ವರನ ಚರಣಕ್ಕೆರಗಿ || ಆಮೇಲೆ ನಾ ಬಂದು ಅನಂತೇಶ್ವರನ ಕಂಡು  ಹನುಮಂತನ ಪಾಡಿ ಮನದಿ ನಿಲ್ಲಿಸಿ ||೧|| ಸುತ್ತು ನದಿಯ ಕಂಡೆ ಸೂರ್ಯಪ್ರಭೆಯ ಕಂಡೆ | ಅಲ್ಲಿದ್ದ ಮಧ್ವಸರೋವರವ ಕಂಡೆ || ಮಧ್ವಮತದ ಅಷ್ಟ ಯತಿಗಳ ನಾ ಕಂಡೆ | ಪ್ರಸಿದ್ಧವಾಗಿರುವ ಶ್ರೀ ಉಡುಪಿ ಕೃಷ್ಣನ ಕಂಡೆ ||೨|| ಉಂಗುರ ಉಡಿದಾರ ಉಡಿಗಂಟೆ ನಾ ಕಂಡೆ | ರಂಗು ಮಾಣಿಕ್ಯದ ನವರತ್ನ ಮಾಲೆ ಕಂಡೆ || ದಿಂಧಿಮಿ ಧಿಮಿಕೆಂದು ಕುಣಿವ ಕೃಷ್ಣನ ಕಂಡೆ | ಪುರಂದರ ವಿಠಲನ ಪಾದ ಕಮಲವ ಕಂಡೆ ||೩|| kaMDe nA uDupiya kRuShNarAyana ||pa|| BU maMDaladoLage uddhaMDa mOhipana ||apa||   samudrava nA kaMDu snAnAdigaLa mADi | caMdra mauLISvarana caraNakkeragi || AmEle nA baMdu anaMtESvarana kaMDu  hanumaMtana pADi manadi nillisi ||1||   suttu nadiya kaMDe sUryapraBeya kaMDe | allidda madhvasarOvarava kaMDe || madhvamatada aShTa yatigaLa nA kaMDe | prasiddhavAgiruva SrI uDupi kRuShNana kaMDe ||2||   uMgura uDidAra uDiga...

ಶರಣು ಶರಣು | ಶ್ರೀ ಹಯವದನ | Sharanu Sharanu | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶರಣು ಶರಣು ಶರಣು ||ಪ|| ಶರಣು ಶ್ರೀ ವೈಕುಂಠ ನಾಯಕ ಶರಣು ಶ್ರೀ ಪುರುಷೋತ್ತಮ ಶರಣು ಶ್ರೀಧರ ಗರುಡ ವಾಹನ ಶರಣು ವೇಂಕಟನಾಯಕ ||೧|| ಆದಿದೇವ ಮುನೀಂದ್ರ ವಂದಿತ ಸಾಧು ಸುರಗಣ ಸೇವಿತ ||  ವೇದವೇದ್ಯ ವಿರಿಂಚಿ ಸನ್ನುತ ಶ್ರೀದ ಶ್ರೀ ವೆಂಕಟೇಶ ನಮೋ ||೨||  ಶರಣು ಸುರಮುನಿ ಹೃದಯಪಾಲಕ ಶರಣು ಭಕ್ತರ ರಕ್ಷಕ || ಶರಣು ಶ್ರೀ ಹಯವದನ ಮೌಕ್ತಿಕ ಶರಣು ಓಂಕಾರ ನಾಮಕ ||೩||   SharaNu SharaNu SharaNu ||pa||   SaraNu SrI vaikuMTha nAyaka SaraNu SrI puruShOttama SaraNu SrIdhara garuDa vAhana SaraNu vEMkaTanAyaka ||1||   AdidEva munIMdra vaMdita sAdhu suragaNa sEvita || vEdavEdya viriMci sannuta SrIda SrI vEMkaTESa namO ||2||   SaraNu suramuni hRudayapAlaka SaraNu Baktara rakShaka || SaraNu SrI hayavadana mouktika SaraNu OMkAra nAmaka ||3||

ಕಾಯೆ ದುರ್ಗಾಂಭ್ರಣಿಯೆ | ಶ್ಯಾಮಸುಂದರ | Kaaye Durgambhraniye | Sri Shyamasundara

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು Kruti: Sri Shyamasundara Dasaru ಕಾಯೆ ದುರ್ಗಾಂಭ್ರಣಿಯೆ ತಾಯೇ ಕಾಯೇ ಶ್ರೀ ರುಕ್ಮಿಣಿಯೆ ||ಪ|| ಕಾಯೆ ಕಾಯೆ ಶುಭಕಾಯೆ ದಯದಿ ಹರಿಕಾಯ ನಿಲಯೆ ವಿಧಿ ಕಾಯಜ ತಾಯೇ ||ಅಪ|| ಮಾ ಕಮಲೆ ಶ್ರೀಕರಳೆ ತೋತನ ನುಡಿ ಕೇಳೆ ಭೀಕರಳೆನಿಸುತ ವ್ಯಾಕುಲಗೊಳಿಸದೆ  ನೀ ಕರುಣಿಸು ರತ್ನಾಕರನ ಮಗಳೆ||೧|| ಸೀತೆ ಸಾರಸ ನಯನೆ ಶೀತಾಂಶುವಿನ ಭಗಿನಿ ಮಾತೆ ನಮಿಪೆತವ ಘಾತಕ ವ್ರಾತದ  ಭೀತಿಯ ತೋರದೆ ಪ್ರೀತಿಯಿಂದೊಲಿದು ||೨|| ಲಕ್ಷ್ಮೀ ಕೃತಿ ಶಾಂತಿ ಅಕ್ಷರಳೆ ಜಯವಂತಿ  ಈ ಕ್ಷಣ ಕರುಣಾಕಟಾಕ್ಷದಿಂದೀಕ್ಷಿಸು- ಪೇಕ್ಷೆಯ ಮಾಡದೆ ಮೋಕ್ಷದಾಯಕಳೆ ||೩|| ವಟದೆಲೆಯೊಳು ಮಲಗಿರಲು ವಟುರೂಪಿ ಪತಿಪದವ ಪಠಿಸುತಬ್ಜಕರಪುಟದಿ ನಮಿಸುವಂಥ ಕುಟಿಲರಹಿತೆ ಶತತಟಿತ ಸನ್ನಿಭಳೆ ||೪|| ಭಾಮೆ ಶ್ರೀ ಭೂಸುತೆಯೆ ಶ್ಯಾಮಸುಂದರನ ಸತಿಯೆ ನಾ ಮೊರೆ ಹೊಕ್ಕೆನು ಪ್ರೇಮದಿಂದಲಿ ಸು ಕ್ಷೇಮ ಗರೆದು ಮಮಧಾಮದಿ ನೆಲೆಸೆ ||೫|| kaaye durgaaMbhraNiYe taayE kaayE SrI rukmiNiye ||pa|| kaaye kaaye Subhakaaye dayadi harikaaya nilaye vidhi kaayaja taayE ||apa|| maa kamale SrIkaraLe tOtana nuDi kELe bhIkaraLenisuta vyaakulagoLisade  nI karuNisu ratnaakarana magaLe||1|| sIte saarasa nayane SItaaMSuvina bhagini maate namipetava Gaataka vraatada  bhItiya tOra...

ಶ್ರೀ ವೇದವ್ಯಾಸ ಸುಳಾದಿ | ವಿಜಯ ವಿಠಲ | Sri Vedavyaasa Suladi | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಧ್ರುವತಾಳ ಯತಿಗಳ ಶಿರೋರತುನಾ ಸತಿಯ ಅವಿಯೋಗಿ ರತಿಪತಿ ಜನಕಾ ಸ್ವರತ ಸ್ವಪ್ರಕಾಶಿತ ಅತಿತಾದ್ಭುತ ಮಹಿಮ ಪತಿತ ಪಾವನನಾಮಾ ನತಜನ ಸುರಧೇನು ದಿತಿಜತಿಮಿರಭಾನು ಅತಿ ದೂರ ದೂರಸಂತತ ದಯಾಪರ ಚತುರ ನಾನಾ ಸುರತತಿ ಕರಕಮಲಾ- ರ್ಚಿತಪಾದ ಸುಂದರ ದೀನ ಮಂದಾರ ಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ- ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || ೧ || ಮಟ್ಟತಾಳ ಜ್ಞಾನಮಯಾಕಾರ ಜ್ಞಾನಮಯಾನಂದಾ ಜ್ಞಾನಮಯೈಶ್ವರ್ಯ ಜ್ಞಾನಮಯವರ್ನ ಜ್ಞಾನಮಯ ತೇಜಾ ಜ್ಞಾನಮಯ ಶಕ್ತಿ ಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ- ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾ ಮೌನಿ ವ್ರತ ಧೃತನೆ ಜ್ಞಾನ ಸುಖ ಸಾಂದ್ರಾ || ೨ || ತ್ರಿವಿಡಿತಾಳ ಕಲಿಯ ವ್ಯಾಪಾರ ವೆಗ್ಗಳವಾಗಿ ವ್ಯಾಪಿಸಿ ಸಲೆ ಧರ್ಮಾವಳಿಗಳು ಅಳಿದು ಪೋಗಿರಲಾಗಿ ಸುಲಭ ಜ್ಞಾನವೆಲ್ಲ ಮಲಿನದಿಂದಲಿ ಕೆಟ್ಟು ಇಳಿಯೊಳು ಉತ್ತಮ ಸಂಪ್ರದಾಯಕದಾ ಸುಳುವು ಕಾಣದೆ ಪೋಗಿ ಅಳಲಿ ಗೀರ್ವಾಣರು ಜಲಜ ಸಂಭವನು ಒಂದಾಗಿ ನಿಂದೂ ತಲೆವಾಗಿ ಉಸಿರಲು ಬಲವಾಗಿ ವಶಿಷ್ಠ  ಕುಲದಲ್ಲಿ ಜನಿಸೀದ ಬಲುದೈವವೇ ನಳಿನಾಕ್ಷ ಮಹಸಿರಿ ವಿಜಯ ವಿಟ್ಠಲ ಬದರಿ- ನಿಲಯ ನಿನ್ನ ಲೀಲೆಗೆ ನೆಲೆಯಾವುದೋ ಜೀಯಾ || ೩ || ಅಟ್ಟತಾಳ ಪರಾಶರನ ಉದರದಲ್ಲಿ ಬಂದು  ಮೂರಾರು ಪುರಾಣ ವಿರಚಿಸಿ ಅದರೊಳು- ಆರು ಸತ್ವ ಆರು  ರಾಜಸ ತರುವಾಯ ಆರು ತಾಮಸ ಇನಿತಿಷ್ಟ ದಶವೆಂದು ಧಾರುಣಿ ತುಂಬಲು ಕರುಣದಿಂದ ಸೂರಿ ಮುಕ್ತರಿಗೆ ನ...

ನಲಿದಾಡೆ ಎನ್ನ ನಾಲಿಗೆ ಮೇಲೆ | ರಂಗವಿಠಲ | Nalidade Enna Nalige | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ನಲಿದಾಡೆ ಎನ್ನ ನಾಲಿಗೆ ಮೇಲೆ ಶಾರದಾದೇವಿ | ಕುಣಿದಾಡೆ ಎನ್ನ ನಾಲಿಗೆ ಮೇಲೆ ||ಪ|| ಘಿಲು ಘಿಲು ಘಿಲು ಗೆಜ್ಜೆಯ ನಾದ |  ಪೊಳೆವ ಅಂದುಗೆರುಳಿ ಪೈಜಣವಿಟ್ಟ ಪುಟ್ಟ ಪಾದ | ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೇ ಕರುಣದಿಂದ ಪರಿಪಾಲಿಸು ಮಾತೇ ||ಅ|| ನಸು ನಗೆ ಮುಖವು ನಾಸಾಭರಣ | ಎಸೆವ ಕಪೋಲ ಹೊಸ ಮುತ್ತಿನ ಚಳು ತುಂಬಿಟ್ಟಾ ಶ್ರವಣಾ | ತಿಲಕವು ಹಸನಾ ಶಶಿ ಸೂರ್ಯರ ಆಭರಣ ಶೋಭಿತಳೇ | ಕುಸುಮ ಮುಡಿದ ಮೂರ್ಧ್ವಜವುಳ್ಳವಳೇ ||೨|| ಶೃಂಗಾರವಾದ ಜಡೆ ಬಂಗಾರ, ರಾಗುಟಿ ಚೌರಿ | ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ರಂಗು ಮನೋಹರ | ಮಂದಗಮನೆ ಅರವಿಂದನಯನೆ ಸಿರಿ ರಂಗ ವಿಠಲನ್ನ ತೋರೇ ಶುಭಾಂಗಿ ||೩|| nalidADe enna nAlige mEle SAradAdEvi | kuNidADe enna nAlige mEle ||pa||   Gilu Gilu Gilu gejjeya nAda |  poLeva aMdugeruLi paijaNaviTTa puTTa pAda | suravaranuta pAda sarasijOdBavana vadana nilayaLE karuNadiMda paripAlisu mAtE ||a||   nasu nage muKavu nAsABaraNa | eseva kapOla hosa muttina caLu tuMbiTTA SravaNA | tilakavu hasanA SaSi sUryara ABaraNa SOBitaLE | kusuma muDida mUrdhvajavuLLavaLE ||2|| SRuMgAravAda jaDe ba...

ಹರಿಕಥಾ ಶ್ರವಣ ಮಾಡೋ | ವಿಜಯ ವಿಠಲ | Hari Katha Shravana Mado | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti:Sri Vijaya Dasaru ಹರಿಕಥಾ ಶ್ರವಣ ಮಾಡೋ ||ಪ|| ಪಥಾ ವೈಕುಂಠಕ್ಕಿದು ನೋಡೋ ||ಅಪ|| ಪತಿತ ಪಾವನನ ಪದಾಬ್ಜದಲ್ಲಿ |  ಹಿತದಿಂದ ಭಕುತಿಯ ಮಾಡೋ ||೧|| ಜ್ಞಾನ ಭಕುತಿ ವೈರಾಗ್ಯವ ನೀವ |  ಆನಂದ ತೀರ್ಥರ ಪಾಡೋ ||೨|| ಅಜಭವಾದಿಗಳ ಅರಸನಾದ |  ಶ್ರೀ ವಿಜಯ ವಿಠಲನ ಸೇರೋ ||೩|| harikathA SravaNa mADO ||pa|| pathA vaikuMThakkidu nODO ||apa||   patita pAvanana padAbjadalli |  hitadiMda Bakutiya mADO ||1||   j~jAna Bakuti vairAgyava nIva |  AnaMda tIrthara pADO ||2||   ajaBavAdigaLa arasanAda |  sri vijaya viThalana sErO ||3||

ಭಕುತಿ ಸುಖವೋ ರಂಗ | ವಿಜಯವಿಠಲ | Bhakuti Sukhavo Ranga | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಭಕುತಿ ಸುಖವೋ ರಂಗ  ಮುಕುತಿ ಸುಖವೋ ||ಪ|| ಭಕುತಿ ಸುಖವೋ ಮುಕುತಿ ಸುಖವೋ  ಯುಕುತಿವಂತರೆಲ್ಲ ಹೇಳಿ ||ಅಪ|| ಭಕುತಿ ಮಾಡಿದ ಪ್ರಹ್ಲಾದ,  ಮುಕುತಿಯನ್ನು ಪಡೆದುಕೊಂಡ || ಮುಕುತಿ ಬೇಡಿದ ಧ್ರುವರಾಯ  ಯುಕುತಿಯಿಂದ ಹರಿಯ ಕಂಡ ||೧|| ಭಕುತಿ ಮಾಡಿದ ಅಜಮಿಳನು  ಅಂತ್ಯದಲ್ಲಿ ಹರಿಯ ಕಂಡ || ಮುಕುತಿ ಬೇಡಿ‌ದ ಕರಿರಾಜ  ದುರಿತಗಳನ್ನು ಕಳೆದುಕೊಂಡ ||೨|| ಭಕುತಿ ಮುಕುತಿದಾತ ನಮ್ಮ  ಲಕುಮಿಯರಸ ವಿಜಯ ವಿಠಲ ಶಕುತನೆನುತ ತಿಳಿದು ನಿತ್ಯ  ಭಕುತಿಯಿಂದ ಭಜನೆ ಮಾಡಿರೋ ||೩|| Bakuti suKavO raMga  mukuti suKavO ||pa|| Bakuti suKavO mukuti suKavO  yukutivaMtarella hELi ||apa||   Bakuti mADida prahlAda,  mukutiyannu paDedukoMDa || mukuti bEDida dhruvarAya  yukutiyiMda hariya kaMDa ||1||   Bakuti mADida ajamiLanu  aMtyadalli hariya kaMDa || mukuti bEDi^^da karirAja  duritagaLannu kaLedukoMDa ||2||   Bakuti mukutidAta namma  lakumiyarasa vijaya viThala Sakutanenuta tiLidu nitya  BakutiyiMda Bajane mADirO ||3||  

ಹೊತ್ತು ಹೋಯಿತಲ್ಲಾ | ಶ್ರೀ ಗುರು ಶ್ರೀಶ ವಿಠಲ ದಾಸರು | Hottu Hoyitalla | Sri Guru Shreesha Vithala

Image
ಸಾಹಿತ್ಯ : ಶ್ರೀ ಗುರು ಶ್ರೀಶ ವಿಠಲ ದಾಸರು  Kruti:  Sri Guru Shreesha Vithala Dasaru ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ| ಮತ್ತೆ ಮತ್ತೆ ಉನ್ಮತ್ತರ ಸಂಗದಿ  ಉತ್ತಮರಿಗೆ ಕರವೆತ್ತಿ ಮುಗಿಯದೆಲೆ |ಪ| ಕುಜನರ ಬಳಿ ಪಿಡಿದು ಸುಕರ್ಮವು  ಯಜನಾದಿಗಳ ಜರಿದು| ಭುಜಗಶಯನ ನಿನ್ನ ಭಜನೆಯ ಮಾಡುವ  ಸುಜನರ ಚರಣಾಂಬುಜವನೆ ಪಿಡಿಯದೆ |೧| ಜ್ಞಾನವಂತರ ಸಂಗ ಮಂದ  ಜ್ಞಾನಿಗೇನೋ ರಂಗ| ದೀನ ವತ್ಸಲನೇ ದೀನರಿಗಲ್ಲದಲೇ  ಹೀನ ಗುಣದವರಿಗೇನೋ ಗತಿಯೋ ಕೃಷ್ಣ |೨| ಪರಮ ಪುರುಷ ಹರಿಯೇ ಎನ್ನ ನೀ  ಕರ ಪಿಡಿಯೋ ದೊರೆಯೇ| ಅರೆಘಳಿಗ್ಯಾದರು ಗುರು ಶ್ರೀಶ ವಿಠಲ  ಪರಮ ಪಾವನ ನಿನ್ನ ಚರಣವ ಸ್ಮರಿಸದೆ |೩| hottu hOyitallA hari ninna BRutyanAgalilla| matte matte unmattara saMgadi  uttamarige karavetti mugiyadele |pa|   kujanara baLi piDidu sukarmavu  yajanAdigaLa jaridu| BujagaSayana ninna Bajaneya mADuva  sujanara caraNAMbujavane piDiyade |1|   j~jAnavaMtara saMga maMda  j~jAnigEnO raMga| dIna vatsalanE dInarigalladalE  hIna guNadavarigEnO gatiyO kRuShNa |2|   parama puruSha hariyE enna nI  kara piDiyO doreyE| areghaLigyAdaru g...

ಗೋಪಗೋಪನೆಂಬ ಕೋಗಿಲೆ | ಪುರಂದರ ವಿಠಲ | Gopa Gopanemba Kogile | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಗೋಪಗೋಪನೆಂಬ ಕೋಗಿಲೆ ನಮ್ಮ  ಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ||ಪ|| ಮಧುಮಾಸದಿ ಮಾಧವ ಬರಲು  ಸುದತಿಯರು ಸಮ್ಮೇಳದಿಂದಲಿ ಒದಗಿ ವಸಂತದಲ್ಲಾಡುವ ಸಮಯದಿ  ಪದುಮನಾಭನ ಕಂಡರೆ ಬರಹೇಳೆ ಕೋಗಿಲೆ ||೧|| ಅಂಗಜನಯ್ಯನ ಅಗಣಿತನ  ಮಂಗಳ ಮಹಿಮನ ಮೂರುತಿಯಾ ಸಂಗೀತ ಸೊಬಗಿನ ಸೊಲ್ಲು ನುಡಿಯಲಿ  ರಂಗನ ಕಂಡರೆ ಬರಹೇಳೆ ಕೋಗಿಲೆ ||೨|| ಇಟ್ಟಾಡುವ ಶೃತಿಕೃತಿಗಳಾ  ಬಟ್ಟೆಯ ಕಾಣೆವು ಪರಬೊಮ್ಮನ ಸೃಷ್ಟಿಯೊಳಗೆ ನಮ್ಮ ಪುರಂದರ ವಿಠಲನ  ಥಟ್ಟನೆ ಕಂಡರೆ ಬರಹೇಳೆ ಕೋಗಿಲೆ ||೩|| gOpagOpaneMba kOgile namma  shrIpatiya kaMDare barahELe kOgile ||pa|| madhumaasadi maadhava baralu  sudatiyaru sammELadiMdali odagi vasaMtadallaaDuva samayadi  padumanaabhana kaMDare barahELe kOgile ||1|| aMgajanayyana agaNitana  maMgaLa mahimana mUrutiyaa saMgIta sobagina sollu nuDiyali  raMgana kaMDare barahELe kOgile ||2|| iTTADuva shRutikRutigaLaa  baTTeya kaaNevu parabommana sRuShTiyoLage namma puraMdara viThalana  thaTTane kaMDare barahELe kOgile ||3||  

ಧರ್ಮಕ್ಕೆ ಕೈ ಬಾರದೀ ಕಾಲ | ಪುರಂದರ ವಿಠಲ | Dharmakke Kai Baradikala | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಧರ್ಮಕ್ಕೆ ಕೈ ಬಾರದೀ ಕಾಲ  ಪಾಪ ಕರ್ಮಕ್ಕೆ ಮನ ಸೋಲೋದೀ ಕಲಿಕಾಲ ||ಪ|| ದಂಡ ದ್ರೋಹಕೆ ಉಂಟು, ಪುಂಡು ಪೋಕರಿಗುಂಟು  ಹೆಂಡತಿ ಮಕ್ಕಳಿಗಿಲ್ಲೀ ಕಾಲ || ದಿಂಡೇರಿಗುಂಟು ಜಗಭಂಡರಿಗುಂಟು | ಅಂಡಲೆವರಿಗಿಲ್ಲ ಈ ಕಾಲ ||೧|| ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕುಂಟು | ಉತ್ತಮರಿಗಿಲ್ಲ ಈ ಕಾಲ || ತೊತ್ತೇರಿಗುಂಟು ತಾಟಕಿಗುಂಟು | ಹೆತ್ತ ತಾಯಿಗಿಲ್ಲ ಈ ಕಾಲ ||೨|| ಹುಸಿ ದಿಟವಾಯಿತು ರಸಕಸವಾಯಿತು | ಸೊಸೆ ಅತ್ತೆಯ ದಂಡಿಸೋದೀ ಕಾಲ || ಬಿಸಜಾಕ್ಷ ಪುರಂದರ ವಿಠಲನ | ಮನದಲ್ಲಿ ಸ್ತುತಿಸುವವರಿಗಿಲ್ಲ ಈ ಕಾಲ ||೩|| dharmakke kai bAradI kAla  pApa karmakke mana sOlOdI kalikAla ||pa||   daMDa drOhake uMTu, puMDu pOkariguMTu  heMDati makkaLigillI kAla || diMDEriguMTu jagaBaMDariguMTu | aMDalevarigilla I kAla ||1||   matte suLLariguMTu nitya hAdarakuMTu | uttamarigilla I kAla || tottEriguMTu tATakiguMTu | hetta tAyigilla I kAla ||2||   husi diTavAyitu rasakasavAyitu | sose atteya daMDisOdI kAla || bisajAkSha puraMdara viThalana | manadalli stutisuvavarigilla I kAla ||3||

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಪಿತೃಗಣ ಸಂಧಿ  ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರಿದನಾದರದಿ ಕೇಳುವುದು|| ಕೃತಿರಮಣ ಪ್ರದ್ಯುಮ್ನ ವಸುದೇ ವತೆಗಳಹಂಕಾರತ್ರಯದೊಳು ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು ಹುತವಹಾಕ್ಷ ಅಂತರ್ಗತ ಜಯಾ ಪತಿಯು ತಾನೇ ಮೂರಧಿಕ ತ್ರಿಂ ಶತಿ ಸುರೂಪದಿ ಭೋಕ್ತೃಯೆನಿಸುವ ಭೋಕ್ತೃಗಳೊಳಿದ್ದು ||೧|| ಆರಧಿಕಮೂವತ್ತುರೂಪದಿ ವಾರಿಜಾಪ್ತನೊಳಿರುತಿಹನು ಮಾ ಯಾರಮಣ ಶ್ರೀ ವಾಸುದೇವನು ಕಾಲನಾಮದಲಿ ಮೂರುವಿಧ ಪಿತೃಗಳೊಳು ವಸು ತ್ರಿಪು ರಾರಿಯಾದಿತ್ಯಗನಿರುದ್ಧನು ತೋರಿಕೊಳ್ಳದೆ ಕರ್ತೃಕರ್ಮ ಕ್ರಿಯನೆನಿಸಿಕೊಂಬ ||೨|| ಸ್ವವಶ ನಾರಾಯಣನು ತಾ ಷ ಣ್ಣವತಿ ನಾಮದಿ ಕರೆಸುತಲಿ ವಸು  ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು ನೆವನವಿಲ್ಲದೆ ನಿತ್ಯದಲಿ ತ ನ್ನವರು ಮಾಡುವ ಸೇವೆ ಕೈಕೊಂ ಡವರ ಪಿತೃಗಳಿಗೀವನಂತಾನಂತ ಸುಖಗಳನು ||೩|| ತಂತು ಪಟದಂದದಲಿ ಲಕುಮೀ ಕಾಂತ ಪಂಚಾತ್ಮಕನೆನಿಸಿ ವಸು ಕಂತುಹರ ರವಿ ಕರ್ತೃಗಳೊಳಿದ್ದನವರತ ತನ್ನ  ಚಿಂತಿಸುವ ಸಂತರನು ಗುರು ಮ ಧ್ವಾಂತರಾತ್ಮಕ ಸಂತಯಿಸುವನು ಸಂತತಖಿಳಾರ್ಥಗಳ ಪಾಲಿಸಿ ಇಹಪರಂಗಳಲಿ ||೪|| ತಂದೆತಾಯ್ಗಳ ಪ್ರೀತಿಗೋಸುಗ ನಿಂದ್ಯ ಕರ್ಮವ ತೊರೆದು ವಿಹಿತಗ ಳೊಂದು ಮೀರದೆ ಸಾಂಗಕರ್ಮಗಳಾಚರಿಸುವವರು ವಂದನೀಯರಾಗಿಳೆಯೊಳಗೆ ದೈ ನಂದಿನದಿ ದೈಶಿಕ ದಹಿಕ ಸುಖ ದಿಂ...

ಬರಿದೆ ವ್ಯರ್ಥವಾಗಿ ಹೋಗುತಿದೆ ಹೊತ್ತು | ಹಯವದನ | Baride Vyarthavagi | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti: Sri Vadirajaru (Hayavadana) ಬರಿದೆ ವ್ಯರ್ಥವಾಗಿ ಹೋಗುತಿದೆ ಹೊತ್ತು ಹರಿಗುರುಗಳ ನೆನೆಯದೆ ||ಪ|| ನರರ ನೂರ ಮೂವತ್ತೆರಡು ಕೋಟಿ ವರುಷ ದಿವಸವೊಂದೆ ಬೊಮ್ಮಗೆ ಪರೀಕ್ಷಿಸಲು ಬ್ರಹ್ಮಕಲ್ಪ ಸಾಸಿರಕೋಟಿ ನರಕದೊಳಗೆ ಬಿದ್ದು ಮರಳಿ ಭವದಿ ಬಂದು ||೧|| ಒಂದೊಂದಕೆ ಇಪ್ಪತ್ತೊಂದು ಲಕ್ಷಯೋನಿ ಎಂದೆನಿಸುವ ಸ್ವೇದಜ ಉದ್ಭಿಜ ಬಂದು ಜರಾಯುಜಾಂಡಜ ಕುಲದಿ ಪುಟ್ಟಿ ನೊಂದೆ ಎಂಬತ್ತು ನಾಲ್ಕು ಲಕ್ಷ ಯೋನಿಯಲಿ||೨|| ಮಾಸ ಒಂಬತ್ತು ಮತಿಗೆಟ್ಟು ಗರ್ಭದಿ ಹೇಸದೆ ಬಂದು ಜೀವಿಸಿ ಬಳಲಿ ಮೋಸವನರಿಯದೆ ಮುನ್ನಿನ ಕರ್ಮದಿ ಘಾಸಿಯಾದೆನೊ ಯೌವನ ಮದದಿ ಸೊಕ್ಕಿ ||೩|| ಕೆಲಹೊತ್ತು ಚದುರಂಗ ಪಗಡೆ ಆಟಗಳಿಂದ ಕೆಲಹೊತ್ತು ಹಸಿವು ನಿದ್ರೆಗಳಿಂದಲಿ ಕೆಲಹೊತ್ತು ಕಾಕ ಪೋಕರ ಕತೆಗಳಿಂದ ಕೆಲಹೊತ್ತು ಪರನಿಂದೆ ಪರವಾರ್ತೆಗಳಿಂದ ||೪|| ಕಾಲವು ಕಡೆಯಾಗಿ ಹರಿ ನಿಮ್ಮನರ್ಚಿಸೆ ವೇಳೆಯಿಲ್ಲದೆ ಹೋಯ್ತು ಬಂಜೆಯಾಗಿ ಜಾಲಿಸಿ ಹೋಗುತಿದೆ ಈ ವಿಧದಿ ಹೊತ್ತು ಬೇಗನೆ ಪಾಲಿಸಿ ದಯಮಾಡೊ ಸಿರಿಹಯವದನ ||೫|| baride vyarthavaagi hOgutide hottu harigurugaLa neneyade ||pa|| narara noora moovatteraDu kOTi varuSha divasavoMde bommage parIkShisalu brahmakalpa saasirakOTi narakadoLage biddu maraLi bhavadi baMdu ||1|| oMdoMdake ippattoMdu lakShayOni eMdenisuva swEdaja udbhija baMdu ja...

ವವ್ವಾರೆ ಮೆಣಸಿನ ಕಾಯಿ | ಪುರಂದರ ವಿಠಲ | Vavvare Menasinakayi | Sri Purandara Dasaru

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವವ್ವಾರೆ ಮೆಣಸಿನ ಕಾಯಿ ಒಣರೊಟ್ಟಿಗೆ ತಂದೆನು ಕಾಯಿ ||ಪ|| ಹುಟ್ಟತಲಿ ಹಸಿರಾಗುತ ಕಂಡೆ | ನಟ್ಟನಡುವೆ ಕೆಂಪಾಗುತ ಕಂಡೆ | ಕಟ್ಟೆರಾಯಗದು ಬಲು ರುಚಿ ಎಂಬೆ ||೧|| ಒಂದೆರಡೆರೆದರೆ ಬಹುರುಚಿ ಎಂಬೆ | ಮೇಲೆರಡೆರೆದರೆ ತುಸು ಖಾರೆಂಬೆ | ಮತ್ತೆರಡೆರೆದರೆ ಅತಿ ಖಾರೆಂಬೆ |೨| ಬಡವರಿಗೆಲ್ಲಾ ನಿನ್ನಾಧಾರ | ಅಡುಗೆ ಊಟಕ್ಕೆ ನಿನ್ನದೆ ಸಾರ | ಬಾಯಲ್ಲಿ ಕಡಿದರೆ ಬೆಂಕಿಯ ಖಾರ ಪುರಂದರ ವಿಠಲನ ನೆನೆಯೋದೆ ಭಾರ ||೩|| vavvAre meNasina kAyi oNaroTTige taMdenu kAyi ||pa||   huTTatali hasirAguta kaMDe | naTTanaDuve keMpAguta kaMDe | kaTTerAyagadu balu ruci eMbe ||1||   oMderaDeredare bahuruci eMbe | mEleraDeredare tusu KAreMbe | matteraDeredare ati KAreMbe |2|   baDavarigellA ninnAdhAra | aDuge UTakke ninnade sAra | bAyalli kaDidare beMkiya KAra puraMdara viThalana neneyOde BAra ||3||

ನಿತ್ಯ ನಿಗಮನಿಕರ ನಿಶ್ಚಿತ | ಹಯವದನ | Nitya Nigamanikara Nischita | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಿತ್ಯ ನಿಗಮನಿಕರ ನಿಶ್ಚಿತ ನಿರ್ಮಲ ನಿನ್ನವನ್ನ ಸತ್ಯಸಂಧ ಹಯವದನ್ನ ಸಲಹಬೇಕೆನ್ನ ||ಪ|| ಉದಧಿಸುತೆಯ ಉರದಿ ಧರಿಸಿ ಉತ್ತಮೋತ್ತಮ ಸುಧೆಯನುಣಿಸಿ ಸುರರ ಪೊರೆದೆ ಸುಜನ ಸುಖಕರ ಮಧುರವಚನ ಮಾನ್ಯರಚನ ಮೃತ್ಯುಮೋಚನ ಕದನಕರ್ಕಶ ಕಲಿಮಲಘ್ನ ಕಮಲಲೋಚನ ||೧|| ಮಂಗಳಾಂಗ ಮಧ್ಯರಹಿತ ಮದನಮೋಹನ ಕಣ್ಗೆ ಎನಗೆ ಕಾಣಿಸು ನಿನ್ನ ಕಾಯ ಕಾಂತಿಯ ಭಂಗರಹಿತ ಭವ್ಯಚರಿತ ಭಯಕೆ ಭಯಹರ ರಂಗರಾಯ ರಸಿಕರರಸ ರಕ್ಷಿಸಬೇಕೆನ್ನ ||೨|| ಮಧುಕೈಟಭರ ಮರ್ದಿಸಿ ಮತಿಯ ಮಗಗಿತ್ತನ ಅದರಿಂದ ಅಮರರೆಲ್ಲ ಅರಿತುಕೊಂಡರು ಇದುರುಗೊಂಡು ಇವನ ನೋಡಿ ಇರವ ಮರೆತರು ಹೃದಯಸದನ ಹಯವದನ್ನ ಹೊರೆಯಬೇಕೆನ್ನ ||೩|| nitya nigamanikara nishchita nirmala ninnavanna satyasaMdha hayavadanna salahabEkenna ||pa|| udadhisuteya uradi dharisi uttamOttama sudheyanuNisi surara porede sujana sukhakara madhuravachana maanyarachana mRutyumOchana kadanakarkasha kalimalaghna kamalalOchana ||1|| maMgaLaaMga madhyarahita madanamOhana kaNge enage kaaNisu ninna kaaya kaaMtiya bhaMgarahita bhavyacharita bhayake bhayahara raMgaraaya rasikararasa rakShisabEkenna ||2|| madhukaiTabhara mardisi matiya magagittana ad...

ದಾನವನ ಕೊಂದದ್ದಲ್ಲ | ಪುರಂದರ ವಿಠಲ | Danavana Kondaddalla | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti:   Sri Purandara Dasaru ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರವೆಯ ನಾರಸಿಂಹ ||ಅಪ|| ಅಚ್ಚ ಪುರುಷನೆಂಬ ಸ್ವಚ್ಛ ರತ್ನ ಒಡಲೊಳು | ಬಿಚ್ಚಿ ಬೆರಗಿ ನೋಡಿದರೆ ಎಷ್ಟು ಇದ್ದಾವೋ ಎಂದು ||೧|| ನೆಂಟತನ ಬೆಳೆಯಬೇಕೆಂದು ಕರುಳ ಕೊರಳೊಳು | ಗಂಟು ಹಾಕಿ ಕೊಂಡನೆಷ್ಟು ದೇಹ ಸಂಬಂಧದಿಂದ ||೨|| ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕ | ಉರಿಮೋರೆ ದೈವ ನಮ್ಮ ಪುರಂದರ ವಿಠಲ ||೩|| dAnavana koMdaddalla kANirO ||pa|| gAna vinOdi namma toraveya nArasiMha ||apa||   acca puruShaneMba svacCa ratna oDaloLu | bicci beragi nODidare eShTu iddAvO eMdu ||1||   neMTatana beLeyabEkeMdu karuLa koraLoLu | gaMTu hAki koMDaneShTu dEha saMbaMdhadiMda ||2||   toraveya nArasiMha prahlAda pAlaka | urimOre daiva namma puraMdara viThala ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru