ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶೋಭಾನ ಕಾಮಜನಕನಿಗೆ | ಪ್ರಾಣೇಶ ವಿಠಲ | Shobhana Kama Janaka | Pranesha Vithala


ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು
Kruti: Sri Pranesha Vittala Dasaru


ಶೋಭಾನ ಕಾಮಜನಕನಿಗೆ
ಶೋಭಾನ ಶ್ರೀ ಮಹಲಕುಮಿಗೆ
ಶೋಭಾನವೆನ್ನಿ ಬುಧರೆಲ್ಲ 

ಪಾಲ ಸಮುದ್ರವು ಹೆಣ್ಣಿನ ಮನೆ ಮೇಲಾದ ದ್ವಾರಕಿ ಗಂಡಿನ ಮನೆ
ಮೂಲೋಕದೊಳಗಿಹ ನಿಬ್ಬಣದವರು
ಓಲಯ ಒದಗಿದರೂ 

ಅಂಬರ ಚಪ್ಪರ ರವಿ ಚಂದ್ರರು ಸಂಭ್ರಮ ತೋರಣಗಳು ಮದುವಿಗೆ
ಇಂಬಾದ ಮೇದಿನಿ ಪರದಿಯ ಶ್ಯಾಲಿ ಹೊಂಬಣ್ಣದ ಗಿರಿ ಜಗುಲಿ

ಆ ಮಹಾ ಸುರರಂಗನೆಯರು ಬಹಳ ಮುದದಲಿ ಪ್ರಾಣೇಶ ವಿಠಲಗೆ
ಶ್ರೀ ಮಾಯಾ ದೇವಿಗೆ ಕಂಕಣ ನೇಮಿಸಿ ಕಟ್ಟಿದರೂ 

shObhaana kaamajanakanige
shObhaana shrI mahalakumige
shObhaanavenni budharella 

paala samudravu heNNina mane mElaada dwaaraki gaMDina mane
mUlOkadoLagiha nibbaNadavaru
Olaya odagidarU 

aMbara chappara ravi chaMdraru saMbhrama tOraNagaLu maduvige
iMbaada mEdini paradiya shyaali hoMbaNNada giri jaguli

aa mahaa suraraMganeyaru bahaLa mudadali praaNEsha viThalage
shrI maayaa dEvige kaMkaNa nEmisi kaTTidarU 

 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru