ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಳವು ಕಲಿಸಿದ್ಯಮ್ಮ ಗೋಪಿ | ಪುರಂದರ ವಿಠಲ | Kalavu Kalisidyamma Gopi | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಕಳವು ಕಲಿಸಿದ್ಯಮ್ಮ ಗೋಪಿ ಕಮಲನಾಭನಿಗೆ ||ಪ||
ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲು ಬೆಣ್ಣೆಯ ||ಅಪ||

ಆರು ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ
ಗೀರು ಗಂಧವ ಹಚ್ಚಿ ಹಾರವ ಹಾಕಿ
ಕೇರಿ ಕೇರಿ ಪಾಲು ಬೆಣ್ಣೆ ಸೂರೆ ಮಾಡಿ ಬಾರೆನ್ನುತ
ವಾರಿಜನಾಭನ ಕಳುಹಿದ್ಯಮ್ಮ ವನಜನಯನನ ||೧||

ಸಣ್ಣ ಮಲ್ಲಿಗೆಯ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ
ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ಹುಣ್ಣಿಮೆ
ಮೀಸಲು ಪಾಲು ಉಣ್ಣು ಮೆಲ್ಲು ಮೆಲ್ಲೆನ್ನುತ್ತ
ಚಿಣ್ಣನ ಕಳುಹಿದ್ಯಮ್ಮ ಉಣಲಿಕ್ಕೆ ||೨||

ಹೊಟ್ಟೆ ಬಾಕನಾದನಿವನು ಬೆಟ್ಟದೊಡೆಯಗೆ ಪ್ರಿಯ
ಇಟ್ಟು ಕೊಂಡಿರೇಳು ಭುವನ ಉದರದಲ್ಲಿಯೆ ಎಷ್ಟು ಹೇಳಿದರು
ಕೇಳ ಏನು ಮಾಡಲಮ್ಮ ನಾನು ಕಟ್ಟು ಮಾಡಿಸಲು
ಬೇಕು ಪುರಂದರ ವಿಠಲಗೆ ||೩||

kaLavu kalisidyamma gOpi kamalanaabhanige ||pa||
uLisikoMDya nimma maneya paalu beNNeya ||apa||

Aru ELada munna ebbisi SRuMgaara maaDi
gIru gaMdhava hacci haarava haaki
kEri kEri paalu beNNe sUre maaDi baarennuta
vaarijanaabhana kaLuhidyamma vanajanayanana ||1||

saNNa malligeya muDisi baNNada valliya hodisi
heNNugaLa olisuvaMte hELi buddhiya huNNime
mIsalu paalu uNNu mellu mellennutta
ciNNana kaLuhidyamma uNalikke ||2||

hoTTe baakanaadanivanu beTTadoDeyage priya
iTTu koMDirELu bhuvana udaradalliye eShTu hELidaru
kELa Enu maaDalamma naanu kaTTu maaDisalu
bEku puraMdara viThalage ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru