ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನೆ ಬಂದಿತಮ್ಮಾ | ಪುರಂದರ ವಿಠಲ | Aane Banditamma | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಆನೆ ಬಂದಿತಮ್ಮಾ| ಮರಿಯಾನೆ ಬಂದಿತಮ್ಮಾ|  |ಪ|
ತೊಲಗಿರಿ ತೊಲಗಿರಿ ಪರಬ್ರಹ್ಮ ಬಲು ಸರಪಣಿ ಕಡಕೊಂಡು ಬಂತಮ್ಮಾ |ಅಪ|

ಕಪಟನಾಟಕದ ಮರಿಯಾನೆ| ನಿಕಟ ಸಭೆಯೊಳು ನಿಂತಾನೆ| 
ಶಕಟನ ಬಂಡಿಯ ಮುರಿದಾನೆ ಕಪಟನಾಟಕದಿಂದ 
ಸೋದರ ಮಾವನ ನಟಕಟ ಎನ್ನದೆ ಕೊಂದಾನೆ |೧|

ಏಳು ಭುವನವನುಂಡಾನೆ ಸ್ವಾಮಿ ಬಾಲಕನೆಂಬ ಚೆಲ್ವಾನೆ| 
ಮದಗೋವುಗಳ ಕೂಡಿ ನಲಿದಾನೆ|
ಚೆಲುವ ಕಾಳಿಂಗನ ಹೆಡೆಯೊಳಾಡುತ ಮದಸೊಕ್ಕಿ ಬರುತಾನಮ್ಮ |೨|

ಭೀಮ ಅರ್ಜುನರನು ಗೆಲಿಸ್ಯಾನೆ ಪರಮ ಭಾಗವತರ 
ಪ್ರಿಯದಾನೆ ಮುದದಿಂದ ಮಥುರೆಲಿ ನಿಂತಾನೆ|
ಮದಮುಖಾಸುರರ ದಿಗಿಲಿಟ್ಟು ಕೊಂಡು 
ಪದುಮಲೋಚನ ಶ್ರೀ ಪುರಂದರ ವಿಠಲ ಎಂಬಾನೆ |೩|

Ane baMditammA| mariyAne baMditammA| celvAne baMditammA |pa|
tolagiri tolagiri parabrahma balu sarapaNi kaDakoMDu baMtammA |apa|
 
kapaTanATakada mariyAne| nikaTa saBeyoLu niMtAne| 
SakaTana baMDiya muridAne kapaTanATakadiMda 
sOdara mAvana naTakaTa ennade koMdAne |1|
 
ELu BuvanavanuMDAne svAmi bAlakaneMba celvAne| 
madagOvugaLa kUDi nalidAne|
celuva kALiMgana heDeyoLADuta madasokki barutAnamma |2|
 
BIma arjunaranu gelisyAne parama BAgavatara 
priyadAne mudadiMda mathureli niMtAne|
madamuKAsurara digiliTTu koMDu 
padumalOcana SrI puraMdara viThala eMbAne |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru