ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಮ್ಮ ನಿಮ್ಮ ಮನೆಗಳಲ್ಲಿ | ಪುರಂದರ ವಿಠಲ | Amma nimma manegalalli | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪ||
ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅಪ||

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ
ಲೇಸಾಗಿ ತುಳಸಿಯ ಮಾಲೆಯ ಧರಿಸಿದ
ವಾಸುದೇವನು ಬಂದ ಕಾಣಿರೇನೆ ||೧||

ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ 
ಅರಳೆಲೆ ಕನಕಕುಂಡಲ ಕಾಲಲಂದುಗೆ
ಉರಗಶಯನ ಬಂದ ಕಾಣಿರೇನೆ ||೨||

ಕುಂಕುಮ ಕಸ್ತೂರಿ ಕರಿನಾಮ ತಿದ್ದಿ
ಶಂಖ ಚಕ್ರಂಗಳ ಧರಿಸಿಹನಮ್ಮ 
ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ
ಪಂಕಜಾಕ್ಷನು ಬಂದ ಕಾಣಿರೇನೆ ||೩||

ಮಾವನ ಮಡುಹಿದ ಶಕಟನ ಕೆಡಹಿದ
ಗೋವರ್ಧನಗಿರಿ ಎತ್ತಿದನಮ್ಮ
ಆವ ತಾಯಿಗೆ ಈರೇಳು ಜಗ ತೋರಿದ 
ಕಾವನಯ್ಯ ಬಂದ ಕಾಣಿರೇನೆ ||೪||

ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ
ನೀಲವರ್ಣನು ನಾಟ್ಯವಾಡುತಲಿ
ಮೇಲಾಗಿ ಬಾಯಲ್ಲಿ ಜಗವನು ತೋರಿದ
ಮೂಲೋಕದೊಡೆಯನ ಕಾಣಿರೇನೆ ||೫||

ಹದಿನಾರು ಸಾವಿರ ಗೋಪ್ಯರ ಕೂಡಿ
ಚದುರಂಗ ಪಗಡೆಯನಾಡುವನಮ್ಮ 
ಮದನ ಮೋಹನರೂಪ ಎದೆಯಲ್ಲಿ ಕೌಸ್ತುಭ
ಮಧುಸೂದನ ಬಂದ ಕಾಣಿರೇನೆ ||೬||

ತೆತ್ತೀಸಕೋಟಿ ದೇವರ್ಕಳ ಒಡಗೂಡಿ
ಹತ್ತಾವತಾರವೆತ್ತಿದನಮ್ಮ 
ಸತ್ಯಭಾಮಾಪ್ರಿಯ ಪುರಂದರವಿಠಲ
ನಿತ್ಯೋತ್ಸವ ಬಂದ ಕಾಣಿರೇನೆ ||೭||

amma nimma manegaLalli namma raMgana kaMDirEnamma ||pa||
brahma mUruti namma kRuShNanu nimma kEriyoLillave ||apa||

kaashi pItaaMbara kaiyalli koLalu
pUsida SrIgaMdha maiyoLagamma
lEsaagi tuLasiya maaleya dharisida
vaasudEvanu baMda kaaNirEne ||1||

karadalli kaMkaNa beraLalli uMgura
koraLalli haakida huliyuguramma 
araLele kanakakuMDala kaalalaMduge
uragaSayana baMda kaaNirEne ||2||

kuMkuma kastUri karinaama tiddi
SaMKa cakraMgaLa dharisihanamma 
biMkadiMdali koLalUdutta paaDutta
paMkajaakShanu baMda kaaNirEne ||3||

maavana maDuhida SakaTana keDahida
gOvardhanagiri ettidanamma
Ava taayige IrELu jaga tOrida 
kaavanayya baMda kaaNirEne ||4||

kaalali kirugejje nIlada baavuli
nIlavarNanu naaTyavaaDutali
mElaagi baayalli jagavanu tOrida
mUlOkadoDeyana kaaNirEne ||5||

hadinaaru saavira gOpyara kUDi
caduraMga pagaDeyanaaDuvanamma 
madana mOhanarUpa edeyalli kaustubha
madhusUdana baMda kaaNirEne ||6||

tettIsakOTi dEvarkaLa oDagUDi
hattaavataaravettidanamma 
satyabhaamaapriya puraMdaraviThala
nityOtsava baMda kaaNirEne ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru