ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹನುಮ ಭೀಮ ಮಧ್ವರಾಯರ ರೂಪು | ಹೆಳವನಕಟ್ಟೆ ರಂಗ | Hanuma Bhima Madhwarayara Roopu | Helavanakatte Giriyamma


ಸಾಹಿತ್ಯ :    ಹೆಳವನಕಟ್ಟೆ ಗಿರಿಯಮ್ಮ 
Kruti: Helavanakatte Giriyamma


ಹನುಮ ಭೀಮ ಮಧ್ವರಾಯರ ರೂಪು ಕಂಡೆನು ಕನಸಿನಲಿ || ಪ ||
ಸನ್ನುತವು ಶ್ರೀ ಶ್ರೀನಿವಾಸನ ಧ್ಯಾನನಿರತ ಮಹಾತ್ಮರ || ಅಪ ||

ಅಂಜಿಕಿಲ್ಲದೆ ಲಂಕೆಗ್ಹಾರಿದ 
ಅಂಜನಿ ಮಹಾನಂದನ
ಅಂಜಲಿಯ ಮುಗಿದಂಕಿತದಿ ಪದ-
ಕಂಜಗೆರಗಿದ ಆಂಜನೇಯನ || ೧ ||

ಕಾಂತೆ ಮುಡಿಗೆ ಹೂವನಿರಿಸಿದ 
ಕುಂತಿನಂದನ ಭೀಮನ
ಕಂತುಪಿತನತ್ಯಂತ ಭಕ್ತಿಲಿ 
ಸಂತತವೂ ಸೇವಿಪ ಸಂತನ || ೨ ||

ವೇದವತಿಯ ತನಯ ಮಧ್ವರ 
ಬಾದರಾಯಣ ಪ್ರಿಯರ
ಆದಿ ಹೆಳವನಕಟ್ಟೆ ರಂಗನ 
ಪಾದಸ್ಮರಿಪ ಪ್ರಸಿದ್ಧರ || ೩ ||

hanuma bheema madhwaraayara roopu kaMDenu kanasinali || pa ||
sannutavu shrI shrInivaasana dhyaananirata mahaatmara || apa ||

aMjikillade laMkeg~haarida 
aMjani mahaanaMdana
aMjaliya mugidaMkitadi pada-
kaMjageragida AMjanEyana || 1 ||

kaaMte muDige hUvanirisida 
kuMtinaMdana bhImana
kaMtupitanatyaMta bhaktili 
saMtatavU sEvipa saMtana || 2 ||

vEdavatiya tanaya madhvara 
baadaraayaNa priyara
Adi heLavanakaTTe raMgana 
paadasmaripa prasiddhara || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru