ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾಲಕೃಷ್ಣನೆ ಬಾರೋ | ಪುರಂದರ ವಿಠಲ | Balakrishnane Baaro | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಬಾಲಕೃಷ್ಣನೆ ಬಾರೋ ಬೇಗ ಬಾರೋ| 
ಬಾಲಕೃಷ್ಣನೆ ಬಾರೋ ಬೇಗ ಬಾರೋ ||ಪ||

ಬಾಲಕೃಷ್ಣನೆ ಬಾರೋ ಕಾಲಕಡಗವನಿಡುವೆನು 
ಕೋಲು ಬುಗುರಿ ಚಂಡು ನಿನಗೆ ಇಟ್ಟಿರುವೆ ||ಅ.ಪ||

ಅಣ್ಣಯ್ಯ ಬಲರಾಮ ಬೇಡುವೆನಯ್ಯಾ| 
ಅಣ್ಣಯ್ಯ ನೀ ಬಾರೆಯಾ|
ಎನ್ನ ಸಾಕು ಮಾಡದೆ ಓಡಬೇಡವೋ ಈಗ| 
ಬಣ್ಣಿಸಿ ತೂಗುವೆ ಗಮ್ಮನೆ ಮಲಗಯ್ಯಾ || ೧ ||

ಯೋಗಿಗಳರಸನೇ ನಿನಗೆ ನಾ| 
ಜೋಗುಳ ಪಾಡುವೆನು| 
ನಾಗಭೂಷಣ ಬಂದು ಅಂಜಿಸುವ ನಿನ್ನನ್ನು| 
ಜೋಗಿ ಹಣಕಿ ಹಾಕುವ ಕಣ್ಣು ಮುಚ್ಚಿಕೊಳ್ಳೊ ||೨||

ಭಕ್ತವತ್ಸಲನೆನಲೇ ನಿನ್ನ ನಾ| 
ಮಗುವೆಂದು ಕರೆಯಲೇ 
ಅಗಣಿತ ಮಹಿಮನೆ ಜಗವ ಮೋಹಿಪ ರಂಗ 
ಮಗುವಲ್ಲವೋ ತಂದೆ ಪುರಂದರ ವಿಠಲಯ್ಯಾ  ||೩||

bAlakRuShNane bArO bEga bArO| 
bAlakRuShNane bArO bEga bArO ||pa||

bAlakRuShNane bArO kAlakaDagavaniDuvenu 
kOlu buguri caMDu ninage iTTiruve ||a.pa||
 
aNNayya balarAma bEDuvenayyA| 
aNNayya nI bAreyaa|
enna sAku mADade ODabEDavO Iga| 
baNNisi tUguve gammane malagayyA || 1 ||
 
yOgigaLarasanE ninage nA| 
jOguLa pADuvenu| 
nAgaBUShaNa baMdu aMjisuva ninnannu| 
jOgi haNaki hAkuva kaNNu muccikoLLo ||2||

BaktavatsalanenalE ninna nA| 
maguveMdu kareyalE 
agaNita mahimane jagava mOhipa raMga 
maguvallavO taMde puraMdara viThalayyA ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru