ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇದು ಏನೋ ಚರಿತ | ಗೋಪಾಲ ವಿಠಲ | Idu Eno Charitha | Sri Gopala Dasaru


ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala Dasaru (Gopala vittala)


ಇದು ಏನೋ ಚರಿತ ಯಂತ್ರೋದ್ಧಾರ ||ಪ||
ಇದು ಏನು ಚರಿತ ಶ್ರೀಪದುಮನಾಭನ ದೂತ| 
ಸದಾಕಾಲದಲಿ ಸರ್ವರ ಹೃದಯಾಂತರ್ಗತ ||ಅಪ||

ವಾರಿಧಿಗೋಷ್ಪಾದ ನೀರಂತೆ ದಾಟಿದ |
ಧೀರ ಯೋಗಾಸನಧಾರಿಯಾಗಿಪ್ಪುದು ||೧||

ದುರುಳ ಕೌರವರನ್ನು ವರಗದೆಯಲಿ ಕೊಂದ
ಕರದಲಿ ಜಪಮಾಲೆ ಧರಿಸಿ ಎಣಿಸುವುದು ||೨||

ಹೀನ ಮತಗಳನ್ನು ವಾಣಿಲಿ ತಡೆದಂಥ |
ಜ್ಞಾನವಂತನೆ ಹೀಗ ಮೌನವಾಗಿಪ್ಪುದು ||೩||

ಸರ್ವವ್ಯಾಪಕ ನೀನು ಪೂರ್ವಿಕ ದೇವನೇ
ಶರ್ವನ ಪಿತ ಬಂದು ಪರ್ವತ ಸೇರಿದ್ದು ||೪||

ಗೋಪಾಲ ವಿಠಲಗೆ ನೀ ಪ್ರೀತಿ ಮಂತ್ರಿಯು
ವ್ಯಾಪಾರ ಮಾಡದೆ ಈ ಪರಿ ಕುಳಿತಿಹೆ ||೫||

idu EnO carita yaMtrOddhAra ||pa||
idu Enu carita SrIpadumanABana dUta| 
sadAkAladali sarvara hRudayAMtargata ||apa||
 
vAridhigOShpAda nIraMte dATida |
dhIra yOgAsanadhAriyAgippudu ||1||
 
duruLa kauravarannu varagadeyali koMda
karadali japamAle dharisi eNisuvudu ||2||
 
hIna matagaLannu vANili taDedaMtha |
j~jAnavaMtane hIga maunavAgippudu ||3||

sarvavyApaka nInu pUrvika dEvanE
Sarvana pita baMdu parvata sEriddu ||4||
 
gOpAla viThalage nI prIti maMtriyu
vyApAra mADade I pari kuLitihe ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru