ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಾರಾಯಣ ನಿನ್ನ ನಂಬಿದೆ | ರಂಗವಿಠಲ | Narayana Ninna Nambide | Sri Sripadarajaru


ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)
Kruti: Sri Sripadarajaru (Ranga vittala)


ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ ನಾರಾಯಣ ನಿನ್ನ ನಂಬಿದೆ ||ಪ||

ನಾರಾಯಣ ನಿನ್ನ ನಂಬಿದೆ ನಿನ್ನ ಹೊರತು ಪೊರೆವ ದೈವ ಎಲ್ಲಿದೆ 
ನಾ ಮೀರಿ ದುಷ್ಕರ್ಮವ ಮಾಡಿದೆ ಅಪಾರ ಮಹಿಮ ದಯಾನಿಧೇ ||ಅಪ||

ನಾನಾ ಯೋನಿಗಳಿಂದ ಬಂದೆನೊ ನಾನುಮಾನ ತಾಳಲಾರದೆ ಬಲು ನೊಂದೆನೋ 
ದೀನರಕ್ಷಕ ಎನ್ನ ಗತಿ ಮುಂದೇನೋ ಮಾನದಿಂ ಪಾಲಿಪ ದೊರೆಯೋ ನೀನು ||೧||

ದಾಸರ ಮನ ಉಲ್ಲಾಸನೇ ಶ್ರೀಷ ಆಶ್ರಿತ ಜನರಪೋಷನೇ|| 
ಸಾಸಿರ ಅನಂತ ಮಹಿಮನೆ, ಕ್ಲೇಷ ನಾಶ ಮಾಡಿಸೋ ಶ್ರೀನಿವಾಸನೇ||೨||

ರಂಗನಗರ ಉತ್ತುಂಗನೇ ಗಂಗಾಜನಕ ಗರುಡತುರಗನೇ|| 
ಉತ್ತುಂಗ ಗುಣಗಳ ಅಂತರಂಗನೆ ಅನಂಗನಪೆತ್ತ ಶ್ರೀರಂಗ ವಿಠಲನೇ||೩||

nArAyaNa ninna naMbide lakShmI nArAyaNa ninna naMbide ||pa||

nArAyaNa ninna naMbide ninna horatu poreva daiva ellide 
nA mIri duShkarmava mADide apAra mahima dayAnidhE ||apa||

nAnA yOnigaLiMda baMdeno nAnumAna tALalArade balu noMdenO 
dInarakShaka enna gati muMdEnO mAnadiM pAlipa doreyO nInu ||1||

dAsara mana ullAsanE SrISha ASrita janarapOShanE|| 
sAsira anaMta mahimane, klESha nASa mADisO SrInivAsanE||2||

raMganagara uttuMganE gaMgAjanaka garuDaturaganE|| 
uttuMga guNagaLa aMtaraMgane anaMganapetta SrIraMga viThalanE||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru