ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹರಿಯ ನೆನೆಯದಂಥ | ಪುರಂದರ ವಿಠಲ | Hariya Neneyadantha | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಹರಿಯ ನೆನೆಯದಂಥ ನರಜನ್ಮವೇಕೆ | ನರ |
ಹರಿಯ ಕೊಂಡಾಡದ ನಾಲಿಗೆ ಏಕೆ ||ಪ||

ವೇದವನೋದದ ವಿಪ್ರ ತಾನೇಕೆ |
ಕಾಳಗವನರಿಯದ ಕ್ಷತ್ರಿಯನೇಕೆ ||
ಕ್ರೋಧವ ಬಿಡದ ಸನ್ಯಾಸಿ ತಾನೇಕೆ |
ಆದರವಿಲ್ಲದ ಅಮೃತಾನ್ನವೇಕೆ ||೧||

ಸತ್ಯ ಶೌಚವಿಲ್ಲದ ಆಚಾರವೇಕೆ |
ನಿತ್ಯ ನೇಮವಿಲ್ಲದ ಜಪತಪವೇಕೆ ||
ಭಕ್ತೀಲಿ ಮಾಡದ ಹರಿಪೂಜೆಯೇಕೆ |
ಉತ್ತಮರಿಲ್ಲದ ಸಭೆಯೂ ತಾನೇಕೆ ||೨||

ಅಳಿದಳಿದು ಹೋಗುವ ಮಕ್ಕಳೇಕೆ |
ತಿಳಿದೂ ಬುದ್ಧಿಯ ಹೇಳದ ಗುರುವೇಕೆ ||
ನಳಿನನಾಭ ಶ್ರೀ ಪುರಂದರ ವಿಠಲನ
ಮೂರುತಿಯ ನೋಡದ ಕಂಗಳೇಕೆ ||೩||

hariya neneyadaMtha narajanmavEke | nara |
hariya koMDADada nAlige Eke ||pa||
 
vEdavanOdada vipra tAnEke |
kALagavanariyada kShatriyanEke ||
krOdhava biDada sanyAsi tAnEke |
Adaravillada amRutAnnavEke ||1||
 
satya Saucavillada AcAravEke |
nitya nEmavillada japatapavEke ||
BaktIli mADada haripUjeyEke |
uttamarillada saBeyU tAnEke ||2||
 
aLidaLidu hOguva makkaLEke |
tiLidU buddhiya hELada guruvEke ||
naLinanABa SrI puraMdara viThalana
mUrutiya nODada kaMgaLEke ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru