ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಂಬೆಗಾಲಿಕ್ಕುತಲಿ ಬಂದ | ಪುರಂದರ ವಿಠಲ | Ambegalikkutali Banda | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಅಂಬೆಗಾಲಿಕ್ಕುತಲಿ ಬಂದ ಗೋವಿಂದ ||ಪ||
ಅಂಬುಜನಾಭ ದಯದಿಂದ ನಮ್ಮಾ ಮನೆಗೆ ||ಅಪ||

ಜಲಚರ ಜಲವಾಸ ಧರಣಿಧರ ಮೃಗರೂಪ| 
ನೆಲನಳೆದು ಮೂರಡಿ ಮಾಡಿ ಬಂದ|
ಕುಲನಾಶ ವನವಾಸ ನವನೀತ ಚೋರನಿವ 
ಲಲನೆಯರ ವ್ರತ ಭಂಗ ವಾಹನ ತುರಂಗ ||೧||

ಕಣ್ಣ ಬಿಡುವನು ತನ್ನ ಬೆನ್ನು ತಗ್ಗಿಸುವನು| 
ಮಣ್ಣು ಕೆದರಿ ಕೋರೆ ಬಾಯಿ ತೆರೆದು|
ಚಿಣ್ಣ ಭಾರ್ಗವ ಲಕ್ಷ್ಮಣ ಅಣ್ಣ 
ಬೆಣ್ಣೆಯ ಕಳ್ಳ ಮಾನವ ಬಿಟ್ಟ ಕುದುರೆಯ ನೇರಿದ ||೨||

ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು| 
ನರಮೃಗ ಬಲಿಬಂಧ ಕೊರಳುಗೊಯಿಗೆ|
ಶರಮುರಿದು ಒರಳೆಳೆದು ನಿರವಾಣಿ ಹಯಹತ್ತಿ 
ಪುರಂದರ ವಿಠಲ ಮನೆಗೆ ತಾ ಬಂದ ||೩||

aMbegAlikkutali baMda gOviMda ||pa||
aMbujanABa dayadiMda nammA manege ||apa||
 
jalacara jalavAsa dharaNidhara mRugarUpa| 
nelanaLedu mUraDi mADi baMda|
kulanASa vanavAsa navanIta cOraniva 
lalaneyara vrata BaMga vAhana turaMga ||1||
 
kaNNa biDuvanu tanna bennu taggisuvanu| 
maNNu kedari kOre bAyi teredu|
ciNNa BArgava lakShmaNa aNNa 
beNNeya kaLLa mAnava biTTa kudureya nErida ||2||
 
nIra pokkanu giriya negahi dharaNiya taMdu| 
naramRuga balibaMdha koraLugoyige|
Saramuridu oraLeLedu niravANi hayahatti 
puraMdara viThala manege tA baMda ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru