ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪಾಹಿ ಮಾಂ ಪಾಹಿ ಶಿವ | ಗುರುಮಹಿಪತಿ | Pahi Maam Pahi Shiva | Guru Mahipati


ಸಾಹಿತ್ಯ : ಶ್ರೀ ಗುರು ಮಹಿಪತಿ ದಾಸರು
Kruti: Sri Guru Mahipati Dasaru


ಪಾಹಿ ಮಾಂ ಪಾಹಿ ಶಿವ ಹರ ಮೃಡ ಶಂಭೋ ||ಪ||

ಅದ್ರಿಧರಪ್ರಿಯ ಅದ್ರಿಕೃತಾಲಯ
ಅದ್ರಿಜಾಮಾತಾದ್ರಿ ರಿಪುನುತ
ಅದ್ರಿಜೆಪತಿ ಪಾಪಾದ್ರಿ ಕುಲಿಶ ಕನ
ಕಾದ್ರಿಶರಾಸನ ಮುದ್ರಿತ ಪಾಣೀ ||೧||

ಉನ್ಮನದಿಂದಲಿ ಮನ್ಮಥ ಬರಲು ದ
ಹನ್ಮಾಡಿದ ಷಣ್ಮುಖ ಜನಕನೆ
ಉನ್ಮನ ಯೋಗಿ ಸನ್ನುತ ಲೀಲ
ಜನ್ಮರಹಿತ ಘನ ಚಿನ್ಮಯ ರೂಪ ||೨||

ಬರಿಸಿದೆ ಗಂಗೆಯನಿರಿಸಿದೆ ಜಡೆಯೊಳು
ಧರಿಸಿದೆ ಚಂದ್ರನ ಮೆರೆಸಿದೆ ಭಕ್ತರ
ಗುರುಮಹಿಪತಿ ಅಂಕುರಿಸಿದ ಬಾಲನ
ಸಿರಸದಲ್ಲಿಡು ನಿಜ ಪರಸದ ಕೈಯ ||೩||


paahimaaM paahi shiva hara mRuDa shaMbhO ||pa||

adridhara priya adrikRutaalaya
adrijaamaataadri ripunuta
adrijepati paapaadri kulisha kana
kaadrisharaasana mudrita paaNI ||1||

unmanadiMdali manmatha baralu da
hanmaaDida ShaNmukha janakane
unmana yOgi sannuta lIla
janmarahita ghana chinmaya roopa ||2||

bariside gaMgeyaniriside jaDeyoLu
dhariside chaMdrana mereside bhaktara
gurumahipati aMkurisida baalana
sirasadalliDu nija parasada kaiya ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru