ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶರಣು ಭಾರತಿ ದೇವಿಗೆ | ಪುರಂದರ ವಿಠಲ | Sharanu Bharati Devige | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಶರಣು ಭಾರತಿ ದೇವಿಗೆ | ಶರಣು ವಾಯು ರಮಣಿಗೆ ||ಪ||
ಶರಣು ಶರಣರ ಪೊರೆವ ಕರುಣಿಗೆ | ಶರಣು ಸುರವರ ದೇವಿಗೆ ||ಅಪ||

ಸುರರು ಮೊದಲಾದವರಿಗೆಲ್ಲಾ ಪರಮ ಮಂಗಳ ಈವಳೇ
ಚರಣ ಕಮಲಕೆ ಮೊರೆಯ ಹೊಕ್ಕೆನು ಕರುಣಿಸೆನಗೆ ಮತಿಗಳ ||೧||

ಪಿಂಗಳ ರೂಪಳೆ ಮಂಗಳ ಮಹಿಮಳೆ ಹಿಂಗದೆ ಕೊಡು ಹರಿ ಭಕುತಿಯ 
ರಂಗನಾಥ ಪಾದಾಬ್ಜ ಭೃಂಗಳೆ ಅಂತರಂಗದ ಪ್ರೀಯಳೇ ||೨||

ಪಕ್ಷಿವಾಹನ ಲಕ್ಷ್ಮೀ ರಮಣನ ಗುರು ಪುರಂದರ ವಿಠಲನೊಳ್ ||
ಅಕ್ಷಯದಿಂದಲಿ ಕೊಟ್ಟು ಭಜಿಸುತ ರಕ್ಷಿಸೆನ್ನನು ಅನುದಿನ ||೩||

SaraNu BArati dEvige | SaraNu vAyu ramaNige ||pa||
SaraNu SaraNara poreva karuNige | SaraNu suravara dEvige ||apa||
 
suraru modalAdavarigellA parama maMgaLa IvaLE
caraNa kamalake moreya hokkenu karuNisenage matigaLa ||1||
 
piMgaLa rUpaLe maMgaLa mahimaLe hiMgade koDu hari Bakutiya 
raMganAtha pAdAbja BRuMgaLe aMtaraMgada prIyaLE ||2||
 
pakShivAhana lakShmI ramaNana guru puraMdara viThalanoL ||
akShayadiMdali koTTu Bajisuta rakShisennanu anudina ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru