ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಂದು ಕಾಂಬೆನು ಪಾಂಡುರಂಗ | ಜಗನ್ನಾಥ ವಿಠಲ | Endu Kambenu Panduranga | Sri Jagannatha Dasaru


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ಎಂದು ಕಾಂಬೆನು ಪಾಂಡುರಂಗ ಮೂರುತಿಯ ||ಪ||
ಇಂದು ಭಾಗ ನಿವಾಸ ನರನ ಸಾರಥಿಯ ||ಅಪ||

ಅರುಣಾಬ್ಜೋಪಮ ಚಾರುಚರಣಾಂಗುಲಿ ನಖರ |
ತರುಣೇಂದುಚ್ಛವಿ ತಿರಸ್ಕರಿಸುವ ಪ್ರಖರ ||
ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ |
ತೆರ ಜಂಘೆ ಜಾನು ಭಾಸುರ ರತ್ನ ಮುಕುರ ||೧||

ರಂಭಾ ಪೋಲುವ ಊರು ಪೊಂಬಣ್ಣಾಂಬರವ |
ಕುಂಭಿ ಮಸ್ತಕದೋಲ್ ನಿತಂಬಾದಿ ಪೊಳೆವ ||
ಕಂಬುಮೇಖಳ ಕಂಜ ಗಂಭೀರ ನಾಭಿ |
ಅಂಬುಧಿಶಾಯಿ ವಿಧಿ ಶಂಭು ಪೂಜಿತನ ||೨||

ಪದಕ ಸರಿಗೆಯು ಜಾಂಬೂನದ ಕಂಬುಕಂಠ |
ರದನೀಕರ ಬಾಹು ಚದುರ ಭುಜಕೀರ್ತಿ ||
ಬದರ ಸಂಕಾಶ ಅಂಗದ ರತ್ನ ಕಟಕ |
ಪದುಮಾರುಣ ಕರಯುಗ್ಮ ಕಟಿಯಲ್ಲಿಟ್ಟವನ ||೩||

ಕಲಿತ ಕುಂಡಲಕರ್ಣ ಸುಲತಾ ಭ್ರೂಯುಗಳ |
ಲಲಿತ ಬಾಲಶಶಾಂಕ ತಿಲಕಾಂಕಿತ ಫಾಲ ||
ಅಳಿಜಾಲವೆನಿಪ ಕುಂತಲ ರತ್ನ ಖಚಿತ |
ಕಲಧೌತ ಮಕುಟ ದಿಗ್ವಲಯ ಬೆಳಗುವನ ||೪||

ಶಠಕೂರ್ಮರೂಪಿಯ ಕಿಟಮಾನವ ಹರಿಯ |
ವಟು ಭಾರ್ಗವ ಕಾಕುಸ್ಥ ಶಠಕಂಸ ದ್ವೇಷಿಯ ||
ನಿಟಿಲಾಂಬಕ ಸಹಾಯ ಖಳಕಟಕಾರಿ ಭೀಮಾ |
ತಟವಾಸ ಜಗನ್ನಾಥ ವಿಠಲನಾಕೃತಿಯ ||೫||

eMdu kAMbenu pAMDuraMga mUrutiya ||pa||
iMdu BAga nivAsa narana sArathiya ||apa||
 
aruNAbjOpama cArucaraNAMguli naKara |
taruNEMducCavi tiraskarisuva praKara ||
kirugejje kaDaga nUpura peMDe SaPara |
tera jaMGe jAnu bhAsura ratna mukura ||1||
 
raMbhaa pOluva Uru poMbaNNAMbarava |
kuMbhi mastakadOl nitaMbaadi poLeva ||
kaMbumEKaLa kaMja gaMBIra nABi |
aMbudhiSAyi vidhi SaMBu pUjitana ||2||
 
padaka sarigeyu jAMbUnada kaMbukaMTha |
radanIkara bAhu cadura BujakIrti ||
badara saMkASa aMgada ratna kaTaka |
padumAruNa karayugma kaTiyalliTTavana ||3||
 
kalita kuMDalakarNa sulatA BrUyugaLa |
lalita bAlaSaSAMka tilakAMkita PAla ||
aLijAlavenipa kuMtala ratna Kacita |
kaladhauta makuTa digvalaya beLaguvana ||4||
 
SaThakUrmarUpiya kiTamAnava hariya |
vaTu BArgava kAkustha SaThakaMsa dvEShiya ||
niTilAMbaka sahAya KaLakaTakAri BImA |
taTavAsa jagannAtha viThalanAkRutiya ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru