ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇತ್ತ ಬಾರೊ ಒಲವುತ್ತ ಬಾರೊ | ಹಯವದನ | Itta Baaro Olavutta Baaro | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಇತ್ತ ಬಾರೊ ಒಲವುತ್ತ ಬಾರೊ
ಹತ್ತವತಾರದ ಚಿತ್ರಚಾರಿತ್ರ ಎ-
ನ್ನತ್ತ ಬಾರೊ ||ಪ||

ಒದ್ದು ಶಕಟನ ಮುರಿದ್ದ ಶಿಶುವೆ ನೀನೆದ್ದು ಬಾರೊ ಅ-
ಳದ್ದು ಬ್ರಹ್ಮಾಂಡವ ಸೀಳ್ದ ಮಹಿಮೆ ಸಾಲದ್ದೆ ಬಾರೊ
ಕದ್ದು ಬೆಣ್ಣೆನೇಕೆ ಮೆದ್ದೆ ದಾರಿದ್ರ್ಯವೆ ಮುದ್ದೆ ಬಾರೊ ಆಡು-
ತಿದ್ದ ಮಕ್ಕಳ ನೀನು ಗುದ್ದಿ ದೂರನು ತರುತಿದ್ದೆ ಬಾರೊ||೧||

ಹಿಂದೆ ಬಾಯೆಂದರೆ ಮುಂದೆ ಬಾಹೆ ಗೋವಿಂದ ಬಾರೊ ಎನ್ನ
ಕಂದ ಬಾಯೆಂದರೆ ಮುಂದೆ ನಿಲುವೆ ಮುಕುಂದ ಬಾರೊ
ಬಂದೆನ್ನ ಮುಂದೆ ನೀ ನಿಂದಿರು ನಿತ್ಯಾನಂದ ಬಾರೊ
ಎಂದೆಂದು ಭಕುತರ ಹೊರೆದಿಹ ಕಾರುಣ್ಯಸಿಂಧು ಬಾರೊ||೨||

ಮಂಥನ ಮಾಡಲು ನಿಂತ ಕಡೆಗೋಲ ನೇಣಾಂತೆ ಬಾರೊ
ಸಂತರಿಗನುದಿನ ಸಂತೋಷವೀವ ನಿಶ್ಚಿಂತ ಬಾರೊ
ಅಂತವಿಲ್ಲದ ಮಾರಾಂತನ ಗೆಲಿದ ಕೃತಾಂತ ಬಾರೊ
ಅಂತಿಂತೆನದೆ ಮಾಕಾಂತ ಹಯವದನನಂತ ಬಾರೊ||೩|| 

itta baaro olavutta baaro
hattavataarada chitrachaaritra e-
nnatta baaro ||pa||

oddu shakaTana muridda shishuve nIneddu baaro a-
Laddu brahmaaMDava sILda mahime saaladde baaro
kaddu beNNenEke medde daaridryave mudde baaro aaDu-
tidda makkaLa nInu guddi dUranu tarutidde bAro||1||

hiMde baayeMdare muMde baahe gOviMda baaro enna
kaMda baayeMdare muMde niluve mukuMda baaro
baMdenna muMde nI niMdiru nityaanaMda baaro
eMdeMdu bhakutara horediha kaaruNyasiMdhu baaro||2||

maMthana maaDalu niMta kaDegOla nENaaMte baaro
saMtariganudina saMtOShavIva nishchiMta baaro
aMtavillada maaraaMtana gelida kRutaaMta baaro
aMtiMtenade maakaaMta hayavadananaMta baaro||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru