Posts

Showing posts from July, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನೆ ಬಂದಿತಮ್ಮಾ | ಪುರಂದರ ವಿಠಲ | Aane Banditamma | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಆನೆ ಬಂದಿತಮ್ಮಾ| ಮರಿಯಾನೆ ಬಂದಿತಮ್ಮಾ|  |ಪ| ತೊಲಗಿರಿ ತೊಲಗಿರಿ ಪರಬ್ರಹ್ಮ ಬಲು ಸರಪಣಿ ಕಡಕೊಂಡು ಬಂತಮ್ಮಾ |ಅಪ| ಕಪಟನಾಟಕದ ಮರಿಯಾನೆ| ನಿಕಟ ಸಭೆಯೊಳು ನಿಂತಾನೆ|  ಶಕಟನ ಬಂಡಿಯ ಮುರಿದಾನೆ ಕಪಟನಾಟಕದಿಂದ  ಸೋದರ ಮಾವನ ನಟಕಟ ಎನ್ನದೆ ಕೊಂದಾನೆ |೧| ಏಳು ಭುವನವನುಂಡಾನೆ ಸ್ವಾಮಿ ಬಾಲಕನೆಂಬ ಚೆಲ್ವಾನೆ|  ಮದಗೋವುಗಳ ಕೂಡಿ ನಲಿದಾನೆ| ಚೆಲುವ ಕಾಳಿಂಗನ ಹೆಡೆಯೊಳಾಡುತ ಮದಸೊಕ್ಕಿ ಬರುತಾನಮ್ಮ |೨| ಭೀಮ ಅರ್ಜುನರನು ಗೆಲಿಸ್ಯಾನೆ ಪರಮ ಭಾಗವತರ  ಪ್ರಿಯದಾನೆ ಮುದದಿಂದ ಮಥುರೆಲಿ ನಿಂತಾನೆ| ಮದಮುಖಾಸುರರ ದಿಗಿಲಿಟ್ಟು ಕೊಂಡು  ಪದುಮಲೋಚನ ಶ್ರೀ ಪುರಂದರ ವಿಠಲ ಎಂಬಾನೆ |೩| Ane baMditammA| mariyAne baMditammA| celvAne baMditammA |pa| tolagiri tolagiri parabrahma balu sarapaNi kaDakoMDu baMtammA |apa|   kapaTanATakada mariyAne| nikaTa saBeyoLu niMtAne|  SakaTana baMDiya muridAne kapaTanATakadiMda  sOdara mAvana naTakaTa ennade koMdAne |1|   ELu BuvanavanuMDAne svAmi bAlakaneMba celvAne|  madagOvugaLa kUDi nalidAne| celuva kALiMgana heDeyoLADuta madasokki barutAnamma ...

ಹನುಮ ಭೀಮ ಮಧ್ವರಾಯರ ರೂಪು | ಹೆಳವನಕಟ್ಟೆ ರಂಗ | Hanuma Bhima Madhwarayara Roopu | Helavanakatte Giriyamma

Image
ಸಾಹಿತ್ಯ :    ಹೆಳವನಕಟ್ಟೆ ಗಿರಿಯಮ್ಮ  Kruti: Helavanakatte Giriyamma ಹನುಮ ಭೀಮ ಮಧ್ವರಾಯರ ರೂಪು ಕಂಡೆನು ಕನಸಿನಲಿ || ಪ || ಸನ್ನುತವು ಶ್ರೀ ಶ್ರೀನಿವಾಸನ ಧ್ಯಾನನಿರತ ಮಹಾತ್ಮರ || ಅಪ || ಅಂಜಿಕಿಲ್ಲದೆ ಲಂಕೆಗ್ಹಾರಿದ  ಅಂಜನಿ ಮಹಾನಂದನ ಅಂಜಲಿಯ ಮುಗಿದಂಕಿತದಿ ಪದ- ಕಂಜಗೆರಗಿದ ಆಂಜನೇಯನ || ೧ || ಕಾಂತೆ ಮುಡಿಗೆ ಹೂವನಿರಿಸಿದ  ಕುಂತಿನಂದನ ಭೀಮನ ಕಂತುಪಿತನತ್ಯಂತ ಭಕ್ತಿಲಿ  ಸಂತತವೂ ಸೇವಿಪ ಸಂತನ || ೨ || ವೇದವತಿಯ ತನಯ ಮಧ್ವರ  ಬಾದರಾಯಣ ಪ್ರಿಯರ ಆದಿ ಹೆಳವನಕಟ್ಟೆ ರಂಗನ  ಪಾದಸ್ಮರಿಪ ಪ್ರಸಿದ್ಧರ || ೩ || hanuma bheema madhwaraayara roopu kaMDenu kanasinali || pa || sannutavu shrI shrInivaasana dhyaananirata mahaatmara || apa || aMjikillade laMkeg~haarida  aMjani mahaanaMdana aMjaliya mugidaMkitadi pada- kaMjageragida AMjanEyana || 1 || kaaMte muDige hUvanirisida  kuMtinaMdana bhImana kaMtupitanatyaMta bhaktili  saMtatavU sEvipa saMtana || 2 || vEdavatiya tanaya madhvara  baadaraayaNa priyara Adi heLavanakaTTe raMgana  paadasmaripa prasiddhara || 3 ||

ಮಧುಕರ ವೃತ್ತಿ ಎನ್ನದು | ಪುರಂದರ ವಿಠಲ | Madhukara Vrutti Ennadu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಮಧುಕರ ವೃತ್ತಿ ಎನ್ನದು ಬಲು ಚೆನ್ನದು ||ಪ|| ಪದುಮನಾಭನ ಪಾದ ಪದುಮ ಮಧುಪವೆಂಬ ||ಅಪ|| ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ || ಆಲಾಪಿಸುತ ಬಲು ಓಲಗ ಮಾಡುವಂಥ ||೧|| ರಂಗನಾಥನ ಗುಣ ಹಿಂಗದೆ ಪಾಡುತ್ತ || ಶೃಂಗಾರ ನೋಡುತ್ತ ಕಂಗಳಾನಂದವೆಂಬ ||೨|| ಇಂದಿರಾಪತಿ ಪುರಂದರ ವಿಠಲನಲ್ಲಿ || ಚಂದದ ಭಕ್ತಿಯಿಂದ ಆನಂದ ಪಡುವಂಥ ||೩|| madhukara vRutti ennadu balu cennadu ||pa||   padumanABana pAda paduma madhupaveMba ||apa||   kAlige gejje kaTTi nIlavarNana guNa || AlApisuta balu Olaga mADuvaMtha ||1||   raMganAthana guNa hiMgade pADutta || SRuMgAra nODutta kaMgaLAnaMdaveMba ||2||   iMdirApati puraMdara viThalanalli || caMdada BaktiyiMda AnaMda paDuvaMtha ||3||

ಸಾರಿ ಭಜಿಸಿರೋ ಟೀಕಾರಾಯರಂಘ್ರಿಯ | ವಿಜಯ ವಿಠಲ| Saari Bhajisiro Teekarayara | Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಸಾರಿ ಭಜಿಸಿರೋ ಟೀಕಾರಾಯರಂಘ್ರಿಯ ಘೋರ ಪಾತಕಾಂಬುಧಿಯ ದೂರ ಮಾಳ್ಪರಾ ||ಪ|| ಮೋದ ತೀರ್ಥರ ಮತವ ಸಾಧಿಸುವರ | ಪಾದಸೇವ್ಯರ ದುರ್ಭೋಧ ಕಳೆವರ ||೧|| ಭಾಷ್ಯ ತತ್ವವ ಸುವಿಶೇಷ ಮಾಳ್ಪರ |  ದೋಷದೂರರ ವಾಸವಾದಿ ರೂಪರ ||೨|| ಶ್ಯಾಮಸುಂದರ ಹರಿಗೆ ಪ್ರೇಮ ಪೂರ್ಣರ | ನೇಮ ನಿತ್ಯದ ನಿಷ್ಕಾಮ ನಾವರ ||೩|| ಮೋಕ್ಷದಾತರ ಅಕ್ಷೋಭ್ಯ ತೀರ್ಥರ ಅ ಶಿಕ್ಷಿತಾದರ ಅಪೇಕ್ಷರಹಿತರ ||೪|| ವಿಜಯ ವಿಠಲನ ಅಂಘ್ರಿ ಭಜನೆ ಮಾಳ್ಪರ | ಕುಜನ ಭಂಜರ ದಿಗ್ವಿಜಯರಾಯರ ||೫|| sAri BajisirO TIkArAyaraMGriya GOra pAtakAMbudhiya dUra mALparA ||pa||   mOda tIrthara matava sAdhisuvara | pAdasEvyara durBOdha kaLevara ||1||   BAShya tatvava suviSESha mALpara |  dOShadUrara vAsavAdi rUpara ||2||   SyAmasuMdara harige prEma pUrNara | nEma nityada niShkAma nAvara ||3||   mOkShadAtara akShOBya tIrthara a SikShitAdara apEkSharahitara ||4||   vijaya viThalana aMGri Bajane mALpara | kujana BaMjara digvijayarAyara ||5||

ಜಯರಾಯರ ನೋಡಿರೋ | ವಿಜಯ ವಿಠಲ | Jayarayara Nodiro | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಜಯರಾಯರ ನೋಡಿರೋ ಸಜ್ಜನರೆಲ್ಲ ಜಯರಾಯರ ನೋಡಿರೋ ||ಪ|| ಜಯರಾಯರ ನೋಡಿ ಜಪಿಸಿ ಮನದಿ ಪಾಡಿ ಜಯವಾಗುವುದು ನಿಮಗೆ ಭಯನಾಶ ಸಂತತ ||ಅಪ|| ದುರುಳಮತವೆಂಬೊ ಕರಿಗೆ ಅಂಕುಶವಿತ್ತು ಸುರಸಾದ ಗ್ರಂಥ ಆನಂದಮುನಿ ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ- ಸ್ತಾರ ಮಾಡಿದ ಕರದ ಕನ್ನಡಿಯಂತೆ ||೧|| ವಾದಿಗಳನೆಲ್ಲಾ ಜೈಸಿ ಡಂಗುರ ಹೊಯ್ಸಿ ಭೇದಾರ್ಥ ಸುಜ್ಞಾನ ಸತ್ಯವೆನಿಸಿ ಈ ಧರೆಯೊಳಗೆ ಹರಿಪರ ದೈವವೆಂದು ಸಾಧಿಸಿ ಉದ್ಧಂಡವಾದ ಗುರುತಿಲಕ ||೨|| ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ ಪಕ್ಷಿವಾಹನ ಸಿರಿ ವಿಜಯವಿಠ್ಠಲನ್ನ ಈಕ್ಷಿಸುವುದಕೆ ಉಪದೇಶ ಕೊಡುವ ಋಷಿ ||೩|| jayaraayara nODirO sajjanarella jayaraayara nODirO ||pa|| jayaraayara nODi japisi manadi paaDi jayavaaguvudu nimage bhayanaaSa saMtata ||apa|| duruLamataveMbo karige aMkuSavittu surasaada graMtha aanaMdamuni viracisi iralaagi paramabhaktiyiMda vi- staara maaDida karada kannaDiyaMte ||1|| vaadigaLanellaa jaisi DaMgura hoysi bhEdaartha suj~jaana satyavenisi I dhareyoLage haripara daivaveMdu saadhisi uddhaMDavaada gurutilaka ||2|| akShObhyatIrthara karadiMda janisi mOkShake jaya patrike ...

ದೇವ ಬಂದ ನಮ್ಮ ಸ್ವಾಮಿ | ಪುರಂದರ ವಿಠಲ | Deva Banda Namma | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ದೇವ ಬಂದ ನಮ್ಮ ಸ್ವಾಮಿ ಬಂದನೋ |ಪ| ದೇವರ ದೇವ ಶಿಖಾಮಣಿ ಬಂದನೋ |ಅಪ| ಉರಗಶಯನ ಬಂದ ಗರುಡಗಮನ ಬಂದ| ನರಗೊಲಿದವ ಬಂದ ನಾರಾಯಣ ಬಂದ |೧| ಮಂದರೋದ್ಧರ ಬಂದ ಮಾಮನೋಹರ ಬಂದ| ಬೃಂದಾವನ ಪತಿ ಗೋವಿಂದ ಬಂದನೋ |೨| ನಕ್ರಹರನು ಬಂದ ಚಕ್ರಧರನು ಬಂದ| ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ |೩| ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ| ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದನೋ |೪| ನಿಗಮಗೋಚರ ಬಂದ ನಿತ್ಯತೃಪ್ತನು ಬಂದ| ನಗೆಮೊಗ ಪುರಂದರ ವಿಠಲ ಬಂದನೋ |೫| dEva baMda namma svAmi baMdanO |pa| dEvara dEva SiKAmaNi baMdanO |apa|   uragaSayana baMda garuDagamana baMda| naragolidava baMda nArAyaNa baMda |1|   maMdarOddhara baMda mAmanOhara baMda| bRuMdAvana pati gOviMda baMdanO |2|   nakraharanu baMda cakradharanu baMda| akrUragolida trivikrama baMdanO |3|   pakShivAhana baMda lakShmaNAgraja baMda| akShaya Palada SrI lakShmIramaNa baMdanO |4|   nigamagOcara baMda nityatRuptanu baMda| nagemoga puraMdara viThala baMdanO |5|

ಆಡ ಹೋಗೋಣ ಬಾರೋ | ರಂಗ ವಿಠಲ | Aada Hogona Baaro | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಆಡ ಹೋಗೋಣ ಬಾರೋ ರಂಗ | ಕೂಡಿ ಯಮುನಾ ತೀರದಲ್ಲಿ ||ಪ|| ಜಾಹ್ನವೀಯ ತೀರವಂತೆ | ಜನಕರಾಯನ ಕುವರಿಯಂತೆ | ಜಾನ್ಹಕಿಯ ವಿವಾಹವಂತೆ | ಜಾಣ ನೀನು ಬರಬೇಕಂತೆ ||೧|| ಕುಂಡಿನೀಯ ನಗರವಂತೆ | ಭೀಷ್ಮಕರಾಯನ ಕುವರಿಯಂತೆ | ಶಿಶುಪಾಲನ ಒಲ್ಲಳಂತೆ  ನಿನಗೆ ಓಲೆ ಬರೆದಳಂತೆ ||೨|| ಪಾಂಡವರು ಕೌರವರಿಗೆ  ಪಗಡೆಯಾಡಿ ಸೋತರಂತೆ | ರಾಜ್ಯವನ್ನು ಬಿಡಬೇಕಂತೆ | ರಂಗವಿಠಲ ಬರಬೇಕಂತೆ ||೩|| ADa hOgONa bArO raMga | kUDi yamunA tIradalli ||pa||   jAhnavIya tIravaMte | janakarAyana kuvariyaMte | jAnhakiya vivAhavaMte | jANa nInu barabEkaMte ||1||   kuMDinIya nagaravaMte | BIShmakarAyana kuvariyaMte | SiSupAlana ollaLaMte  ninage Ole baredaLaMte ||2||   pAMDavaru kauravarige  pagaDeyADi sOtaraMte | rAjyavannu biDabEkaMte | raMgaviThala barabEkaMte ||3||

ಎಂದು ಕಾಂಬೆನು ಪಾಂಡುರಂಗ | ಜಗನ್ನಾಥ ವಿಠಲ | Endu Kambenu Panduranga | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಎಂದು ಕಾಂಬೆನು ಪಾಂಡುರಂಗ ಮೂರುತಿಯ ||ಪ|| ಇಂದು ಭಾಗ ನಿವಾಸ ನರನ ಸಾರಥಿಯ ||ಅಪ|| ಅರುಣಾಬ್ಜೋಪಮ ಚಾರುಚರಣಾಂಗುಲಿ ನಖರ | ತರುಣೇಂದುಚ್ಛವಿ ತಿರಸ್ಕರಿಸುವ ಪ್ರಖರ || ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ | ತೆರ ಜಂಘೆ ಜಾನು ಭಾಸುರ ರತ್ನ ಮುಕುರ ||೧|| ರಂಭಾ ಪೋಲುವ ಊರು ಪೊಂಬಣ್ಣಾಂಬರವ | ಕುಂಭಿ ಮಸ್ತಕದೋಲ್ ನಿತಂಬಾದಿ ಪೊಳೆವ || ಕಂಬುಮೇಖಳ ಕಂಜ ಗಂಭೀರ ನಾಭಿ | ಅಂಬುಧಿಶಾಯಿ ವಿಧಿ ಶಂಭು ಪೂಜಿತನ ||೨|| ಪದಕ ಸರಿಗೆಯು ಜಾಂಬೂನದ ಕಂಬುಕಂಠ | ರದನೀಕರ ಬಾಹು ಚದುರ ಭುಜಕೀರ್ತಿ || ಬದರ ಸಂಕಾಶ ಅಂಗದ ರತ್ನ ಕಟಕ | ಪದುಮಾರುಣ ಕರಯುಗ್ಮ ಕಟಿಯಲ್ಲಿಟ್ಟವನ ||೩|| ಕಲಿತ ಕುಂಡಲಕರ್ಣ ಸುಲತಾ ಭ್ರೂಯುಗಳ | ಲಲಿತ ಬಾಲಶಶಾಂಕ ತಿಲಕಾಂಕಿತ ಫಾಲ || ಅಳಿಜಾಲವೆನಿಪ ಕುಂತಲ ರತ್ನ ಖಚಿತ | ಕಲಧೌತ ಮಕುಟ ದಿಗ್ವಲಯ ಬೆಳಗುವನ ||೪|| ಶಠಕೂರ್ಮರೂಪಿಯ ಕಿಟಮಾನವ ಹರಿಯ | ವಟು ಭಾರ್ಗವ ಕಾಕುಸ್ಥ ಶಠಕಂಸ ದ್ವೇಷಿಯ || ನಿಟಿಲಾಂಬಕ ಸಹಾಯ ಖಳಕಟಕಾರಿ ಭೀಮಾ | ತಟವಾಸ ಜಗನ್ನಾಥ ವಿಠಲನಾಕೃತಿಯ ||೫|| eMdu kAMbenu pAMDuraMga mUrutiya ||pa|| iMdu BAga nivAsa narana sArathiya ||apa||   aruNAbjOpama cArucaraNAMguli naKara | taruNEMducCavi tiraskarisuva praKara || kirugejje kaDaga nUpura peMDe SaPar...

ಈತನೇ ಲೋಕಗುರು | ಹಯವದನ | Itane Lokaguru Vedavikhyata | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಈತನೇ ಲೋಕಗುರು ವೇದವಿಖ್ಯಾತ ||ಪ|| ಭೂತಳದಿ ಶ್ರೀರಾಮದೂತನೆಂಬಾತ ||ಅಪ|| ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನು ಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದ ಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತು ಬಂದು ರಾಮರ ಪಾದಕೆರಗಿ ನಿಂದಾತ ||೧|| ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನ  ಲಜ್ಜೆಯನೆ ಕೆಡಿಸಿ ಷಡ್ರಥಿಕರನು ಗೆಲಿದ ಮೂಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದ ಸಜ್ಜನಪ್ರಿಯ ಭೀಮಸೇನನೆಂಬಾತ ||೨|| ಮೂರಾರು ಎರಡೊಂದು ಮೂಢಮತಗಳ ಜರಿದು ಸಾರ ಮಧ್ವಶಾಸ್ತ್ರವನು ಸಜ್ಜನರಿಗೊರೆದು ಕೂರ್ಮ ಶ್ರೀಹಯವದನನ ಪೂರ್ಣ ಸೇವಕನಾದ ಧೀರ ಮಧ್ವಾಚಾರ್ಯ ಲೋಕದೊಳು ಮೆರೆದ ||೩|| ItanE lOkaguru vEdavikhyaata ||pa|| bhootaLadi shrIraamadUtaneMbaata ||apa|| aMdu hanumaMtanaagi akhiLa dikkellavanu oMdu nimiShadali pOgi udadhi laMghisida iMdIvaraakShige vaMdisi mudrikeyanittu baMdu raamara paadakeragi niMdaata ||1|| arjunage aNNanaagi aMdu duryOdhanana  lajjeyane keDisi ShaDrathikaranu gelida moojagavu mechchalu munna maagadhana sILida sajjanapriya bhImasEnaneMbaata ||2|| mooraaru eraDoMdu mooDhamatagaLa jaridu saara madhwashaastravanu sajjanari...

ಆರಿಗಾರೋ ಕೃಷ್ಣ | ಹಯವದನ | Aarigaaro Krishna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಆರಿಗಾರೋ ಕೃಷ್ಣ ಶೂರಕುಮಾರನೆ ||ಪ|| ಆರಿಗಾರೋ ನಿನ್ನ ಹೊರತು ಪೊರೆವರೆನ್ನ ಶೂರ ಮಾರಜನಕ ಅಕ್ರೂರವರದ ದೊರೆಯೆ ||ಅಪ|| ಸತಿ ಸುತರು ಹಿತರೇನೊ ಮತಿಭ್ರಾಂತಿಬಡಿಸುವರು ಗತಿ ಯಾರೊ ಮುಂದೆ ಗರುಡವಾಹನ ದೇವ  ||೧|| ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳ ವಾಸುದೇವನೆ ನಿನ್ನ ದಾಸನೆಂದೆನಿಸಯ್ಯ  ||೨|| ಮಾಯಮಡುವಿನೊಳ್ಮುಳುಗಿ ಗಾಯವಾಯಿತೊ ಕಾಯ ಉ- ಪಾಯ ಯಾವುದೊ ಮುಂದೆ ರಾಯ ಹಯವದನ ||೩|| ArigaarO kRuShNa SUrakumaarane ||pa|| ArigaarO ninna horatu porevarenna SUra maarajanaka akrUravarada doreye ||apa|| sati sutaru hitarEno matibhraaMtibaDisuvaru gati yaaro muMde garuDavaahana dEva  ||1|| ASapaaSadi siluki ghaasipaTTeno bahaLa vaasudEvane ninna daasaneMdenisayya  ||2|| maayamaDuvinoLmuLugi gaayavaayito kaaya u- paaya yaavudo muMde raaya hayavadana ||3||

ಏನು ಕಾರಣ ಬಾಯ ತೆರೆದೀ | ಕಾಗಿನೆಲೆ ಆದಿಕೇಶವ | Enu Karana Baya Teredi | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಏನು ಕಾರಣ ಬಾಯ ತೆರೆದೀ ಪೇಳೆಲೋ  ದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರನ ಕೊಲಲು ತೆರೆದೆಯೋ ಬಾಯ ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯ ಜಗವರಿಯೆ ಪೇರೂರವಿರಿದ ಪ್ರಹ್ಲಾದ ವರದ ||೧|| ಬಲಿಯ ದಾನವ ಬೇಡಲೆಂದು ತೆರೆದೆಯೋ ಬಾಯ ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೋ ಬಾಯ  ಕುಲಸತಿಯ ಅರಸಿ ಕಾಣದೆ ತೆರೆದೆಯೋ ಬಾಯ ಮಲೆತು ಮಾವನ ಕೊಂದು ನಿಂದೆ ಶ್ರೀನಾರಸಿಂಹ ||೨|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೋ ಬಾಯ ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೋ ಬಾಯ ಮಾರಪಿತ ಕಾಗಿನೆಲೆಯಾದಿ ಕೇಶವ ರಂಗ ಧೀರ ಶ್ರೀನಾಥ ಭವನಾಶ ಪೇಳೆಲೋ ||೩|| Enu kaaraNa baaya teredI pELelO  daanavaaMtaka ahObala naarasiMha ||pa|| nigama cOrana kolalu teredeyO baaya nagava bennali hottu naDugi teredeyO baaya bhUmigaLLana koMdu baLali teredeyO baaya jagavariye pErUravirida prahlaada varada ||1|| baliya daanava bEDaleMdu teredeyO baaya CaladiMda kShatriyara kolalu teredeyO baaya  kulasatiya arasi kaaNade teredeyO baaya maletu maavana koMdu niMde SrInaarasiMha ||2|| naariyara celvikeya nODi teredeyO baaya Eri aSvava m...

ಇತ್ತ ಬಾರೊ ಒಲವುತ್ತ ಬಾರೊ | ಹಯವದನ | Itta Baaro Olavutta Baaro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಇತ್ತ ಬಾರೊ ಒಲವುತ್ತ ಬಾರೊ ಹತ್ತವತಾರದ ಚಿತ್ರಚಾರಿತ್ರ ಎ- ನ್ನತ್ತ ಬಾರೊ ||ಪ|| ಒದ್ದು ಶಕಟನ ಮುರಿದ್ದ ಶಿಶುವೆ ನೀನೆದ್ದು ಬಾರೊ ಅ- ಳದ್ದು ಬ್ರಹ್ಮಾಂಡವ ಸೀಳ್ದ ಮಹಿಮೆ ಸಾಲದ್ದೆ ಬಾರೊ ಕದ್ದು ಬೆಣ್ಣೆನೇಕೆ ಮೆದ್ದೆ ದಾರಿದ್ರ್ಯವೆ ಮುದ್ದೆ ಬಾರೊ ಆಡು- ತಿದ್ದ ಮಕ್ಕಳ ನೀನು ಗುದ್ದಿ ದೂರನು ತರುತಿದ್ದೆ ಬಾರೊ||೧|| ಹಿಂದೆ ಬಾಯೆಂದರೆ ಮುಂದೆ ಬಾಹೆ ಗೋವಿಂದ ಬಾರೊ ಎನ್ನ ಕಂದ ಬಾಯೆಂದರೆ ಮುಂದೆ ನಿಲುವೆ ಮುಕುಂದ ಬಾರೊ ಬಂದೆನ್ನ ಮುಂದೆ ನೀ ನಿಂದಿರು ನಿತ್ಯಾನಂದ ಬಾರೊ ಎಂದೆಂದು ಭಕುತರ ಹೊರೆದಿಹ ಕಾರುಣ್ಯಸಿಂಧು ಬಾರೊ||೨|| ಮಂಥನ ಮಾಡಲು ನಿಂತ ಕಡೆಗೋಲ ನೇಣಾಂತೆ ಬಾರೊ ಸಂತರಿಗನುದಿನ ಸಂತೋಷವೀವ ನಿಶ್ಚಿಂತ ಬಾರೊ ಅಂತವಿಲ್ಲದ ಮಾರಾಂತನ ಗೆಲಿದ ಕೃತಾಂತ ಬಾರೊ ಅಂತಿಂತೆನದೆ ಮಾಕಾಂತ ಹಯವದನನಂತ ಬಾರೊ||೩||  itta baaro olavutta baaro hattavataarada chitrachaaritra e- nnatta baaro ||pa|| oddu shakaTana muridda shishuve nIneddu baaro a- Laddu brahmaaMDava sILda mahime saaladde baaro kaddu beNNenEke medde daaridryave mudde baaro aaDu- tidda makkaLa nInu guddi dUranu tarutidde bAro||1|| hiMde baayeMdare muMde baahe gOviMda baaro enna kaMda baayeMdare muMde niluve mukuM...

ಅಮ್ಮ ನಿಮ್ಮ ಮನೆಗಳಲ್ಲಿ | ಪುರಂದರ ವಿಠಲ | Amma nimma manegalalli | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪ|| ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅಪ|| ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಗಮ್ಮ ಲೇಸಾಗಿ ತುಳಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ ||೧|| ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ  ಅರಳೆಲೆ ಕನಕಕುಂಡಲ ಕಾಲಲಂದುಗೆ ಉರಗಶಯನ ಬಂದ ಕಾಣಿರೇನೆ ||೨|| ಕುಂಕುಮ ಕಸ್ತೂರಿ ಕರಿನಾಮ ತಿದ್ದಿ ಶಂಖ ಚಕ್ರಂಗಳ ಧರಿಸಿಹನಮ್ಮ  ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷನು ಬಂದ ಕಾಣಿರೇನೆ ||೩|| ಮಾವನ ಮಡುಹಿದ ಶಕಟನ ಕೆಡಹಿದ ಗೋವರ್ಧನಗಿರಿ ಎತ್ತಿದನಮ್ಮ ಆವ ತಾಯಿಗೆ ಈರೇಳು ಜಗ ತೋರಿದ  ಕಾವನಯ್ಯ ಬಂದ ಕಾಣಿರೇನೆ ||೪|| ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣನು ನಾಟ್ಯವಾಡುತಲಿ ಮೇಲಾಗಿ ಬಾಯಲ್ಲಿ ಜಗವನು ತೋರಿದ ಮೂಲೋಕದೊಡೆಯನ ಕಾಣಿರೇನೆ ||೫|| ಹದಿನಾರು ಸಾವಿರ ಗೋಪ್ಯರ ಕೂಡಿ ಚದುರಂಗ ಪಗಡೆಯನಾಡುವನಮ್ಮ  ಮದನ ಮೋಹನರೂಪ ಎದೆಯಲ್ಲಿ ಕೌಸ್ತುಭ ಮಧುಸೂದನ ಬಂದ ಕಾಣಿರೇನೆ ||೬|| ತೆತ್ತೀಸಕೋಟಿ ದೇವರ್ಕಳ ಒಡಗೂಡಿ ಹತ್ತಾವತಾರವೆತ್ತಿದನಮ್ಮ  ಸತ್ಯಭಾಮಾಪ್ರಿಯ ಪುರಂದರವಿಠಲ ನಿತ್ಯೋತ್ಸವ ಬಂದ ಕಾಣಿರೇನೆ ||೭|| amma nimma manegaLalli namma raMgana kaM...

ಪಾಹಿ ಮಾಂ ಪಾಹಿ ಶಿವ | ಗುರುಮಹಿಪತಿ | Pahi Maam Pahi Shiva | Guru Mahipati

Image
ಸಾಹಿತ್ಯ : ಶ್ರೀ ಗುರು ಮಹಿಪತಿ ದಾಸರು Kruti: Sri Guru Mahipati Dasaru ಪಾಹಿ ಮಾಂ ಪಾಹಿ ಶಿವ ಹರ ಮೃಡ ಶಂಭೋ ||ಪ|| ಅದ್ರಿಧರಪ್ರಿಯ ಅದ್ರಿಕೃತಾಲಯ ಅದ್ರಿಜಾಮಾತಾದ್ರಿ ರಿಪುನುತ ಅದ್ರಿಜೆಪತಿ ಪಾಪಾದ್ರಿ ಕುಲಿಶ ಕನ ಕಾದ್ರಿಶರಾಸನ ಮುದ್ರಿತ ಪಾಣೀ ||೧|| ಉನ್ಮನದಿಂದಲಿ ಮನ್ಮಥ ಬರಲು ದ ಹನ್ಮಾಡಿದ ಷಣ್ಮುಖ ಜನಕನೆ ಉನ್ಮನ ಯೋಗಿ ಸನ್ನುತ ಲೀಲ ಜನ್ಮರಹಿತ ಘನ ಚಿನ್ಮಯ ರೂಪ ||೨|| ಬರಿಸಿದೆ ಗಂಗೆಯನಿರಿಸಿದೆ ಜಡೆಯೊಳು ಧರಿಸಿದೆ ಚಂದ್ರನ ಮೆರೆಸಿದೆ ಭಕ್ತರ ಗುರುಮಹಿಪತಿ ಅಂಕುರಿಸಿದ ಬಾಲನ ಸಿರಸದಲ್ಲಿಡು ನಿಜ ಪರಸದ ಕೈಯ ||೩|| paahimaaM paahi shiva hara mRuDa shaMbhO ||pa|| adridhara priya adrikRutaalaya adrijaamaataadri ripunuta adrijepati paapaadri kulisha kana kaadrisharaasana mudrita paaNI ||1|| unmanadiMdali manmatha baralu da hanmaaDida ShaNmukha janakane unmana yOgi sannuta lIla janmarahita ghana chinmaya roopa ||2|| bariside gaMgeyaniriside jaDeyoLu dhariside chaMdrana mereside bhaktara gurumahipati aMkurisida baalana sirasadalliDu nija parasada kaiya ||3||

ತಾ ತಾ ತಾ ರಂಗ | ರಂಗ ವಿಠಲ | Taa Taa Taa Ranga | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti:Sri Sripadarajaru (Ranga vittala) ತಾ ತಾ ತಾ ತಾ ತಾ ರಂಗ ನಿನ್ನ ಪಾದ ಥೈ ಥೈ ಥೈ ಥೈ ಥೈ ಯೆಂದು ಕುಣಿಯುತ ||ಪ|| ನಿಗಮವ ತಂದು ನಗವ ಬೆನ್ನಲಿ ಪೊತ್ತು ಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು ||೧|| ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿ ಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ ||೨|| ಅಂಗನೆಯರ ವ್ರತಭಂಗವ ಮಾಡಿ  ತುಂಗ ಕುದುರೆಯೇರಿದ ರಂಗವಿಠಲನೆ ||೩|| taa taa taa taa taa raMga ninna paada thai thai thai thai thai yeMdu kuNiyuta ||pa|| nigamava taMdu nagava bennali pottu agedu bEru tiMdu baalana salahide aMdu ||1|| poDavi IraDi maaDi koDali piDidu muni maDadiya salahide ennoDeya shrIkRuShNa ||2|| aMganeyara vratabhaMgava maaDi  tuMga kudureyErida raMgaviThalane ||3||

ಹನುಮನ ಮತವೇ ಹರಿಯ ಮತವು | ಪುರಂದರ ವಿಠಲ | Hanumana Matave | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹನುಮನ ಮತವೇ ಹರಿಯ ಮತವು | ಹರಿಯ ಮತವೇ ಹನುಮನ ಮತವು ||ಪ|| ಹನುಮನು ಒಲಿದರೆ ಹರಿ ತಾನೊಲಿವ | ಹನುಮನು ಮುನಿದರೆ ಹರಿ ತಾ ಮುನಿವಾ ||೧|| ಹನುಮನ ನಂಬಿದ ಸುಗ್ರೀವ ಗೆದ್ದ | ಹನುಮನ ನಂಬದ ವಾಲಿಯು ಬಿದ್ದ ||೨|| ಹನುಮನು ಒಲಿಯಲು ವಿಭೀಷಣ ಗೆದ್ದ | ಹನುಮನು ಮುನಿಯಲು ರಾವಣ ಬಿದ್ದ ||೩|| ಹನುಮನು ಪುರಂದರ ವಿಠಲನ ದಾಸ | ಪುರಂದರ ವಿಠಲನು ಹನುಮನೊಳ್ವಾಸ ||೪|| hanumana matavE hariya matavu | hariya matavE hanumana matavu ||pa||   hanumanu olidare hari tAnoliva | hanumanu munidare hari tA munivA ||1||   hanumana naMbida sugrIva gedda | hanumana naMbada vAliyu bidda ||2||   hanumanu oliyalu viBIShaNa gedda | hanumanu muniyalu rAvaNa bidda ||3||   hanumanu puraMdara viThalana dAsa | puraMdara viThalanu hanumanoLvAsa ||4||

ಅಂಬೆಗಾಲಿಕ್ಕುತಲಿ ಬಂದ | ಪುರಂದರ ವಿಠಲ | Ambegalikkutali Banda | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅಂಬೆಗಾಲಿಕ್ಕುತಲಿ ಬಂದ ಗೋವಿಂದ ||ಪ|| ಅಂಬುಜನಾಭ ದಯದಿಂದ ನಮ್ಮಾ ಮನೆಗೆ ||ಅಪ|| ಜಲಚರ ಜಲವಾಸ ಧರಣಿಧರ ಮೃಗರೂಪ|  ನೆಲನಳೆದು ಮೂರಡಿ ಮಾಡಿ ಬಂದ| ಕುಲನಾಶ ವನವಾಸ ನವನೀತ ಚೋರನಿವ  ಲಲನೆಯರ ವ್ರತ ಭಂಗ ವಾಹನ ತುರಂಗ ||೧|| ಕಣ್ಣ ಬಿಡುವನು ತನ್ನ ಬೆನ್ನು ತಗ್ಗಿಸುವನು|  ಮಣ್ಣು ಕೆದರಿ ಕೋರೆ ಬಾಯಿ ತೆರೆದು| ಚಿಣ್ಣ ಭಾರ್ಗವ ಲಕ್ಷ್ಮಣ ಅಣ್ಣ  ಬೆಣ್ಣೆಯ ಕಳ್ಳ ಮಾನವ ಬಿಟ್ಟ ಕುದುರೆಯ ನೇರಿದ ||೨|| ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು|  ನರಮೃಗ ಬಲಿಬಂಧ ಕೊರಳುಗೊಯಿಗೆ| ಶರಮುರಿದು ಒರಳೆಳೆದು ನಿರವಾಣಿ ಹಯಹತ್ತಿ  ಪುರಂದರ ವಿಠಲ ಮನೆಗೆ ತಾ ಬಂದ ||೩|| aMbegAlikkutali baMda gOviMda ||pa|| aMbujanABa dayadiMda nammA manege ||apa||   jalacara jalavAsa dharaNidhara mRugarUpa|  nelanaLedu mUraDi mADi baMda| kulanASa vanavAsa navanIta cOraniva  lalaneyara vrata BaMga vAhana turaMga ||1||   kaNNa biDuvanu tanna bennu taggisuvanu|  maNNu kedari kOre bAyi teredu| ciNNa BArgava lakShmaNa aNNa  beNNeya kaLLa mAnava biTTa kudureya nErida ||2||   nIra pok...

ಬಾಲಕೃಷ್ಣನೆ ಬಾರೋ | ಪುರಂದರ ವಿಠಲ | Balakrishnane Baaro | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬಾಲಕೃಷ್ಣನೆ ಬಾರೋ ಬೇಗ ಬಾರೋ|  ಬಾಲಕೃಷ್ಣನೆ ಬಾರೋ ಬೇಗ ಬಾರೋ ||ಪ|| ಬಾಲಕೃಷ್ಣನೆ ಬಾರೋ ಕಾಲಕಡಗವನಿಡುವೆನು  ಕೋಲು ಬುಗುರಿ ಚಂಡು ನಿನಗೆ ಇಟ್ಟಿರುವೆ ||ಅ.ಪ|| ಅಣ್ಣಯ್ಯ ಬಲರಾಮ ಬೇಡುವೆನಯ್ಯಾ|  ಅಣ್ಣಯ್ಯ ನೀ ಬಾರೆಯಾ| ಎನ್ನ ಸಾಕು ಮಾಡದೆ ಓಡಬೇಡವೋ ಈಗ|  ಬಣ್ಣಿಸಿ ತೂಗುವೆ ಗಮ್ಮನೆ ಮಲಗಯ್ಯಾ || ೧ || ಯೋಗಿಗಳರಸನೇ ನಿನಗೆ ನಾ|  ಜೋಗುಳ ಪಾಡುವೆನು|  ನಾಗಭೂಷಣ ಬಂದು ಅಂಜಿಸುವ ನಿನ್ನನ್ನು|  ಜೋಗಿ ಹಣಕಿ ಹಾಕುವ ಕಣ್ಣು ಮುಚ್ಚಿಕೊಳ್ಳೊ ||೨|| ಭಕ್ತವತ್ಸಲನೆನಲೇ ನಿನ್ನ ನಾ|  ಮಗುವೆಂದು ಕರೆಯಲೇ  ಅಗಣಿತ ಮಹಿಮನೆ ಜಗವ ಮೋಹಿಪ ರಂಗ  ಮಗುವಲ್ಲವೋ ತಂದೆ ಪುರಂದರ ವಿಠಲಯ್ಯಾ  ||೩|| bAlakRuShNane bArO bEga bArO|  bAlakRuShNane bArO bEga bArO ||pa|| bAlakRuShNane bArO kAlakaDagavaniDuvenu  kOlu buguri caMDu ninage iTTiruve ||a.pa||   aNNayya balarAma bEDuvenayyA|  aNNayya nI bAreyaa| enna sAku mADade ODabEDavO Iga|  baNNisi tUguve gammane malagayyA || 1 ||   yOgigaLarasanE ninage nA|  jOguLa pADuvenu|  nAgaBUShaNa baMdu aMjis...

ಶರಣು ಭಾರತಿ ದೇವಿಗೆ | ಪುರಂದರ ವಿಠಲ | Sharanu Bharati Devige | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಶರಣು ಭಾರತಿ ದೇವಿಗೆ | ಶರಣು ವಾಯು ರಮಣಿಗೆ ||ಪ|| ಶರಣು ಶರಣರ ಪೊರೆವ ಕರುಣಿಗೆ | ಶರಣು ಸುರವರ ದೇವಿಗೆ ||ಅಪ|| ಸುರರು ಮೊದಲಾದವರಿಗೆಲ್ಲಾ ಪರಮ ಮಂಗಳ ಈವಳೇ ಚರಣ ಕಮಲಕೆ ಮೊರೆಯ ಹೊಕ್ಕೆನು ಕರುಣಿಸೆನಗೆ ಮತಿಗಳ ||೧|| ಪಿಂಗಳ ರೂಪಳೆ ಮಂಗಳ ಮಹಿಮಳೆ ಹಿಂಗದೆ ಕೊಡು ಹರಿ ಭಕುತಿಯ  ರಂಗನಾಥ ಪಾದಾಬ್ಜ ಭೃಂಗಳೆ ಅಂತರಂಗದ ಪ್ರೀಯಳೇ ||೨|| ಪಕ್ಷಿವಾಹನ ಲಕ್ಷ್ಮೀ ರಮಣನ ಗುರು ಪುರಂದರ ವಿಠಲನೊಳ್ || ಅಕ್ಷಯದಿಂದಲಿ ಕೊಟ್ಟು ಭಜಿಸುತ ರಕ್ಷಿಸೆನ್ನನು ಅನುದಿನ ||೩|| SaraNu BArati dEvige | SaraNu vAyu ramaNige ||pa|| SaraNu SaraNara poreva karuNige | SaraNu suravara dEvige ||apa||   suraru modalAdavarigellA parama maMgaLa IvaLE caraNa kamalake moreya hokkenu karuNisenage matigaLa ||1||   piMgaLa rUpaLe maMgaLa mahimaLe hiMgade koDu hari Bakutiya  raMganAtha pAdAbja BRuMgaLe aMtaraMgada prIyaLE ||2||   pakShivAhana lakShmI ramaNana guru puraMdara viThalanoL || akShayadiMdali koTTu Bajisuta rakShisennanu anudina ||3||

ಹರಿಯ ನೆನೆಯದಂಥ | ಪುರಂದರ ವಿಠಲ | Hariya Neneyadantha | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹರಿಯ ನೆನೆಯದಂಥ ನರಜನ್ಮವೇಕೆ | ನರ | ಹರಿಯ ಕೊಂಡಾಡದ ನಾಲಿಗೆ ಏಕೆ ||ಪ|| ವೇದವನೋದದ ವಿಪ್ರ ತಾನೇಕೆ | ಕಾಳಗವನರಿಯದ ಕ್ಷತ್ರಿಯನೇಕೆ || ಕ್ರೋಧವ ಬಿಡದ ಸನ್ಯಾಸಿ ತಾನೇಕೆ | ಆದರವಿಲ್ಲದ ಅಮೃತಾನ್ನವೇಕೆ ||೧|| ಸತ್ಯ ಶೌಚವಿಲ್ಲದ ಆಚಾರವೇಕೆ | ನಿತ್ಯ ನೇಮವಿಲ್ಲದ ಜಪತಪವೇಕೆ || ಭಕ್ತೀಲಿ ಮಾಡದ ಹರಿಪೂಜೆಯೇಕೆ | ಉತ್ತಮರಿಲ್ಲದ ಸಭೆಯೂ ತಾನೇಕೆ ||೨|| ಅಳಿದಳಿದು ಹೋಗುವ ಮಕ್ಕಳೇಕೆ | ತಿಳಿದೂ ಬುದ್ಧಿಯ ಹೇಳದ ಗುರುವೇಕೆ || ನಳಿನನಾಭ ಶ್ರೀ ಪುರಂದರ ವಿಠಲನ ಮೂರುತಿಯ ನೋಡದ ಕಂಗಳೇಕೆ ||೩|| hariya neneyadaMtha narajanmavEke | nara | hariya koMDADada nAlige Eke ||pa||   vEdavanOdada vipra tAnEke | kALagavanariyada kShatriyanEke || krOdhava biDada sanyAsi tAnEke | Adaravillada amRutAnnavEke ||1||   satya Saucavillada AcAravEke | nitya nEmavillada japatapavEke || BaktIli mADada haripUjeyEke | uttamarillada saBeyU tAnEke ||2||   aLidaLidu hOguva makkaLEke | tiLidU buddhiya hELada guruvEke || naLinanABa SrI puraMdara viThalana mUrutiya nODada kaMgaLEke ||3||

ಸುಲಭ ಪೂಜೆಯ ಮಾಡಿ | ಪುರಂದರ ವಿಠಲ | Sulabha Poojeya Madi | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸುಲಭ ಪೂಜೆಯ ಮಾಡಿ ಬಲವಿಲ್ಲದವರು ||ಪ|| ನಳಿನನಾಭನ ಪಾದ ನಳಿನ ಸೇವಕರು ||ಅಪ|| ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು | ಮರೆಯ ಮಾಡುವ ವಸ್ತ್ರ ಪರಮ ಮಡಿಯು | ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯು | ಹೊರಳಿ ಮಲಗುವುದೆಲ್ಲಾ ಹರಿಗೆ ವಂದನೆಯು ||೧|| ನುಡಿವ ಮಾತುಗಳೆಲ್ಲ ಕಡಲ ಶಯನನ ಜಪವು | ಮಡದಿ ಮಕ್ಕಳು ಮತ್ತೆ ಒಡನೆ ಪರಿವಾರ || ನಡುಮನೆಯು ಅಂಗಳವು ಉಡುಪಿ ವೈಕುಂಠಗಳು | ಎಡಬಲದ ಮನೆಯವರು ಕಡು ಭಾಗವತರು ||೨|| ಹೀಗೆ ಅನುದಿನ ನುಡಿದು ಹಿಗ್ಗುವ ಜನರ ಭವರೋಗ ಪರಿಹರವು | ಮೂರ್ಜಗದಿ ಸುಖವು ||  ಪೋಗುತಿದೆ ಈ ಆಯು ಬೇಗದಿಂದಲಿ ನಮ್ಮಾ | ಯೋಗೀಶ ಪುರಂದರ ವಿಠಲನ ನೆನೆ ನೆನೆದು ||೩|| sulaBa pUjeya mADi balavilladavaru ||pa|| naLinanABana pAda naLina sEvakaru ||apa||   iruLu haccuva dIpa harige nIlAMjanavu | mareya mADuva Bakta parama maDiyu | tirugADi daNiyuvude harige pradakShiNeyu | horaLi malaguvudellA harige vaMdaneyu ||1||   nuDiva mAtugaLella kaDala Sayanana japavu | maDadi makkaLu matte oDane parivAra || naDumaneyu aMgaLavu uDupi vaikuMThagaLu | eDabalada maneyavaru kaDu BAgavataru ||2||...

ನೋಡುವುದೇ ಕಣ್ಣು | ಪುರಂದರ ವಿಠಲ | Noduvude Kannu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನೋಡುವುದೇ ಕಣ್ಣು, ಕೇಳುವುದೇ ಕಿವಿ, ಪಾಡುವುದೇ ವದನಾ ||ಪ|| ಗಾಡಿಕಾರ ಶ್ರೀ ವೇಣುಗೋಪಾಲನ | ಕೂಡಿ ಕೊಂಡಾಡುವ ಸುಖದ ಸೊಬಗನು ||ಅಪ|| ಪೊಂಗೊಳಲೂದುತ ಮೃಗಪಕ್ಷಿಗಳನ್ನೆಲ್ಲ ಸಂಗೊಳಿಸುತ್ತಲಿಪ್ಪನಾ || ಅಂಗಜ ಜನಕ ಗೋಪಾಂಗನೆರೊಡನೆ ಬೆಳದಿಂಗಳೊಳಗೆ ಸುಳಿದಾಡೋ ರಂಗಯ್ಯನ ||೧|| ನವಿಲಂತೆ ಕುಣಿಯುವ ಹಂಸೆಯಂತೆ ನಲಿಯುವ ಮರಿ ಕೋಗಿಲೆಯಂತೆ ಕೂಗುವ ಎರಳೆಯ ಮರಿಯಂತೆ ಜಿಗಿಜಿಗಿದಾಡುವ ದುಂಬಿ ಝೇಂಕರಿಸುವಂದದಿ ಝೇಂಕರಿಪನ ||೨|| ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ ಸೆರೆಯ ಬಿಡಿಸಿ ಕೊಂಬನ || ಗರುಡ ಗಮನ ಗುರು ಪುರಂದರ ವಿಠಲನ ಶರಣಾಗತ ಸುರಧೇನು ರಂಗಯ್ಯನ ||೩|| nODuvudE kaNNu, kELuvudE kivi, pADuvudE vadanA ||pa|| gADikAra SrI vENugOpAlana | kUDi koMDADuva suKada sobaganu ||apa||   poMgoLalUduta mRugapakShigaLannella saMgoLisuttalippanA || aMgaja janaka gOpAMganeroDane beLadiMgaLoLage suLidADO raMgayyana ||1||   navilaMte kuNiyuva haMseyaMte naliyuva mari kOgileyaMte kUguva eraLeya mariyaMte jigijigidADuva duMbi JEMkarisuvaMdadi JEMkaripana ||2||   muruDu kubjeya DoMku tiddi rUpava mADi sereya bi...

ಗೋವಿಂದ ನಿನ್ನ ನಾಮವೇ ಚೆಂದ | ಪುರಂದರ ವಿಠಲ | Govinda Ninna Namave | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti:Sri Purandara Dasaru (Purandara vittala) ಗೋವಿಂದ ನಿನ್ನ ನಾಮವೇ ಚೆಂದ | ಸಾಧನ ಸಕಲವೂ ನಿನ್ನಾನಂದ ||ಪ|| ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ | ನಿರ್ಮಲಾತ್ಮಕನಾಗಿರುವುದೇ ಆನಂದ ||೧|| ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ | ಈ ಪರಿ ಮಹಿಮೆಯ ತಿಳಿಯೋದೇ ಆನಂದ ||೨|| ಮಂಗಳ ಮಹಿಮ ಶ್ರೀ ಪುರಂದರ ವಿಠಲನ | ಹಿಂಗದೆ ದಾಸರ ಸಲಹೋದೆ ಆನಂದ ||೩|| gOviMda ninna nAmave chenda | sAdhana sakalavU ninnAnaMda ||pa||   aNurENu tRuNakAShTa paripUrNa gOviMda | nirmalanAtmakanAgiruvudE AnaMda ||1||   sRuShTi sthiti laya kAraNa gOviMda | I pari mahimeya tiLiyOdE AnaMda ||2||   maMgaLa mahima SrI puraMdara viThalana | hiMgade dAsara salahOde AnaMda ||3||

ಶೋಭಾನ ಕಾಮಜನಕನಿಗೆ | ಪ್ರಾಣೇಶ ವಿಠಲ | Shobhana Kama Janaka | Pranesha Vithala

Image
ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು Kruti: Sri Pranesha Vittala Dasaru ಶೋಭಾನ ಕಾಮಜನಕನಿಗೆ ಶೋಭಾನ ಶ್ರೀ ಮಹಲಕುಮಿಗೆ ಶೋಭಾನವೆನ್ನಿ ಬುಧರೆಲ್ಲ  ಪಾಲ ಸಮುದ್ರವು ಹೆಣ್ಣಿನ ಮನೆ ಮೇಲಾದ ದ್ವಾರಕಿ ಗಂಡಿನ ಮನೆ ಮೂಲೋಕದೊಳಗಿಹ ನಿಬ್ಬಣದವರು ಓಲಯ ಒದಗಿದರೂ  ಅಂಬರ ಚಪ್ಪರ ರವಿ ಚಂದ್ರರು ಸಂಭ್ರಮ ತೋರಣಗಳು ಮದುವಿಗೆ ಇಂಬಾದ ಮೇದಿನಿ ಪರದಿಯ ಶ್ಯಾಲಿ ಹೊಂಬಣ್ಣದ ಗಿರಿ ಜಗುಲಿ ಆ ಮಹಾ ಸುರರಂಗನೆಯರು ಬಹಳ ಮುದದಲಿ ಪ್ರಾಣೇಶ ವಿಠಲಗೆ ಶ್ರೀ ಮಾಯಾ ದೇವಿಗೆ ಕಂಕಣ ನೇಮಿಸಿ ಕಟ್ಟಿದರೂ  shObhaana kaamajanakanige shObhaana shrI mahalakumige shObhaanavenni budharella  paala samudravu heNNina mane mElaada dwaaraki gaMDina mane mUlOkadoLagiha nibbaNadavaru Olaya odagidarU  aMbara chappara ravi chaMdraru saMbhrama tOraNagaLu maduvige iMbaada mEdini paradiya shyaali hoMbaNNada giri jaguli aa mahaa suraraMganeyaru bahaLa mudadali praaNEsha viThalage shrI maayaa dEvige kaMkaNa nEmisi kaTTidarU   

ನಾರಾಯಣ ನಿನ್ನ ನಂಬಿದೆ | ರಂಗವಿಠಲ | Narayana Ninna Nambide | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ ನಾರಾಯಣ ನಿನ್ನ ನಂಬಿದೆ ||ಪ|| ನಾರಾಯಣ ನಿನ್ನ ನಂಬಿದೆ ನಿನ್ನ ಹೊರತು ಪೊರೆವ ದೈವ ಎಲ್ಲಿದೆ  ನಾ ಮೀರಿ ದುಷ್ಕರ್ಮವ ಮಾಡಿದೆ ಅಪಾರ ಮಹಿಮ ದಯಾನಿಧೇ ||ಅಪ|| ನಾನಾ ಯೋನಿಗಳಿಂದ ಬಂದೆನೊ ನಾನುಮಾನ ತಾಳಲಾರದೆ ಬಲು ನೊಂದೆನೋ  ದೀನರಕ್ಷಕ ಎನ್ನ ಗತಿ ಮುಂದೇನೋ ಮಾನದಿಂ ಪಾಲಿಪ ದೊರೆಯೋ ನೀನು ||೧|| ದಾಸರ ಮನ ಉಲ್ಲಾಸನೇ ಶ್ರೀಷ ಆಶ್ರಿತ ಜನರಪೋಷನೇ||  ಸಾಸಿರ ಅನಂತ ಮಹಿಮನೆ, ಕ್ಲೇಷ ನಾಶ ಮಾಡಿಸೋ ಶ್ರೀನಿವಾಸನೇ||೨|| ರಂಗನಗರ ಉತ್ತುಂಗನೇ ಗಂಗಾಜನಕ ಗರುಡತುರಗನೇ||  ಉತ್ತುಂಗ ಗುಣಗಳ ಅಂತರಂಗನೆ ಅನಂಗನಪೆತ್ತ ಶ್ರೀರಂಗ ವಿಠಲನೇ||೩|| nArAyaNa ninna naMbide lakShmI nArAyaNa ninna naMbide ||pa|| nArAyaNa ninna naMbide ninna horatu poreva daiva ellide  nA mIri duShkarmava mADide apAra mahima dayAnidhE ||apa|| nAnA yOnigaLiMda baMdeno nAnumAna tALalArade balu noMdenO  dInarakShaka enna gati muMdEnO mAnadiM pAlipa doreyO nInu ||1|| dAsara mana ullAsanE SrISha ASrita janarapOShanE||  sAsira anaMta mahimane, klESha nASa mADisO SrInivAsanE||2|| raMganagara uttuMganE g...

ದಯ ಮಾಡೋ ರಂಗ | ಪುರಂದರ ವಿಠಲ | Daya Mado Ranga | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ದಯ ಮಾಡೋ ರಂಗ ದಯ ಮಾಡೋ | ದಯ ಮಾಡೋ ನಿನ್ನ ದಾಸನು ನಾನೆಂದು ||ಅಪ|| ಹಲವು ಕಾಲದಿ ನಿನ್ನ ಹಂಬಲ ಎನಗೆ || ಒಲಿದು ಪಾಲಿಸಬೇಕು ವಾರಿಜನಾಭನೆ ||೧|| ಇಹಪರ ಗತಿ ನೀನೇ ಇಂದಿರಾರಮಣ | ಸಹಾಯ ನಿನ್ನದೇ ಸರ್ವದಾ ತೋರಿ ಕರುಣ ||೨|| ಕರಿರಾಜ ವರದನೆ ಕಾಮಿತ ಫಲದನೆ | ಪುರಂದರ ವಿಠಲ ಹರಿ ಸಾರ್ವಭೌಮನೆ ||೩|| daya mADO raMga daya mADO | daya mADO ninna dAsanu nAneMdu ||apa||   halavu kAladi ninna haMbala enage || olidu pAlisabEku vArijanABane ||1||   ihapara gati nInE iMdirAramaNa | sahAya ninnadE sarvadA tOri karuNa ||2||   karirAja varadane kAmita Paladane | puraMdara viThala hari sArvaBaumane ||3||

ಬುದ್ಧಿ ಮಾತು ಹೇಳಿದರೆ | ಪುರಂದರ ವಿಠಲ| Buddhi Matu Helidare | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ || ಮಗಳೆ ಮನಃ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ ||ಪ|| ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ | ಚಿತ್ತದೊಲ್ಲಭನಕ್ಕರೆಯನ್ನು ಪಡೆಯಬೇಕಮ್ಮ | ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ | ಹತ್ತು ಮಂದಿ ಒಪ್ಪುವ ಹಾಗೆ ನಡೆಯಬೇಕಮ್ಮ ||೧|| ಕೊಟ್ಟು ಕೊಂಬುವ ನೆಂಟರೊಡನೆ ದ್ವೇಷ ಬೇಡಮ್ಮ ಅಟ್ಟು ಉಂಬುವ ಕಾಲದಲ್ಲಿ ಆಟಬೇಡಮ್ಮ || ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ | ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ ||೨|| ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ | ಗರ್ವ ಕೋಪ ಮತ್ಸರವನ್ನು ಮಾಡಬೇಡಮ್ಮ | ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ | ಗುರು ಪುರಂದರ ವಿಠಲನ ಸ್ಮರಣೆ ಮರೆಯಬೇಡಮ್ಮ ||೩|| buddhi mAtu hELidare kELabEkamma || magaLe manaH SuddhaLAgi gaMDanoDane bALabEkamma ||pa||   atte mAvagaMjikoMDu naDeyabEkamma | cittadollaBanakkareyannu paDeyabEkamma | hottu hottige maneya kelasa mADabEkamma | hattu maMdi oppuva hAge naDeyabEkamma ||1||   koTTu koMbuva neMTaroDane dvESha bEDamma aTTu uMbuva kAladalli ATabEDamma || haTTi bAgilalli baMdu nillabEDamma | kaTTi ALuva gaMD...

ಬಿಡೆನು ಬಿಡೆನು ನಿನ್ನ | ಹಯವದನ | Bidenu Bidenu Ninna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಿಡೆನು ಬಿಡೆನು ನಿನ್ನ ಚರಣ ಕಮಲವ| ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ||ಪ|| ಬಲಿಯ ದಾನವ ಬೇಡಿ  ಅಳೆಯೆ ಬ್ರಹ್ಮಾಂಡವ| ನಳಿನೋದ್ಭವ ಬಂದು ಪಾದವ ತೊಳೆಯೇ| ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ| ಹರಿ ಪಾದ ತೀರ್ಥವೆಂದು ಹರ ಧರಿಸಿದನಾಗ ||೧|| ಆ ಪತಿ ಶಾಪದಿ ಅಹಲ್ಯ ಸಾಸಿರಯುಗ| ಪಾಶಾಣವಾಗುತ್ತ ಪಥದೊಳಗಿರಲು| ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು| ಪಾಪ ರಹಿತಳಾಗಿ ಪದವಿ ಕಂಡಾಳಾಗ ||೨|| ವಜ್ರಾಂಕುಶ ಧ್ವಜ ಪದುಮ ರೇಖೆಗಳಿಂದ| ಪ್ರಜ್ವಲಿಸುವ ನಿನ್ನ ಪಾದ ಪದ್ಮವನು| ಗರ್ಜಿಸಿ ಭಜಿಸುವೆ ಹಯವದನನೆ| ಭವ ಜರ್ಜರ ಬಿಡಿಸುವನೆಂದು ನಂಬಿಹಲಾಗಿ ||೩|| biDenu biDenu ninna caraNa kamalava| enna hRudaya madhyadoLiTTu Bajisuve anudina ||pa||   baliya dAnava bEDi  aLeye brahmAMDava| naLinOdBava baMdu pAdava toLeyE| ugurina koneyiMda udisidaLA gaMge| hari pAda tIrthaveMdu hara dharisidanAga ||1||   A pati SApadi ahalya sAsirayuga| pASANavAgutta pathadoLagiralu| SrIpati ninnaya SrIpAda sOkalu| pApa rahitaLAgi padavi kaMDALAga ||2||   vajrAMkuSa dhvaja paduma rEKegaLiMda| prajvalisuva ninna pAda padmavanu| garjisi ...

ಸ್ಮರಿಸೊ ಸರ್ವದ ಹರಿಯ | ಪುರಂದರ ವಿಠಲ | Smariso Sarvada Hariya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸ್ಮರಿಸೊ ಸರ್ವದ ಹರಿಯ ||ಪ||  ಸುರವರ ದೊರೆಯ ಕರುಣಾನಿಧಿಯ ||ಅಪ|| ಮುನಿಜನವಂದ್ಯನ ಮನಸಿಜನಯ್ಯನ  ಮನದಲಿ ಅನುದಿನ ನೆನೆಯೊ ಹರಿಯ ||೧|| ನಂದನ ಕಂದನ ಇಂದಿರೆಯರಸನ ಮಂದರೋದ್ಧರನ ಚಂದದಿಂದಲಿ ಹರಿಯ ||೨|| ವರಗುಣಪೂರ್ಣನ ಸರಸಿಜನೇತ್ರನ ಪರವಾಸುದೇವನ ಪ್ರಾಣನ ಪ್ರಿಯನ ||೩|| ಕಂಜದಳೇಕ್ಷಣ ಮಂಜುಳಹಾರನ ಅರ್ಜುನಸಾರಥಿ ಸಜ್ಜನಪ್ರಿಯನ ||೪|| ವೇಂಕಟರಮಣನ ಸಂಕಟಹರಣನ ಲಕ್ಷ್ಮೀರಮಣನ ಪುರಂದರವಿಠಲನ ||೫||  smariso sarvada hariya ||pa||  suravara doreya karuNaanidhiya ||apa|| munijanavaMdyana manasijanayyana manadali anudina neneyo hariya ||1|| naMdana kaMdana iMdireyarasana maMdarOddharana caMdadiMdali hariya ||2|| varaguNapUrNana sarasijanEtrana paravaasudEvana praaNana priyana ||3|| kaMjadaLEkShaNa maMjuLahaarana arjunasaarathi sajjanapriyana ||4|| vEMkaTaramaNana saMkaTaharaNana lakShmIramaNana puraMdaraviThalana ||5|| 

ಇದು ಏನೋ ಚರಿತ | ಗೋಪಾಲ ವಿಠಲ | Idu Eno Charitha | Sri Gopala Dasaru

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ಇದು ಏನೋ ಚರಿತ ಯಂತ್ರೋದ್ಧಾರ ||ಪ|| ಇದು ಏನು ಚರಿತ ಶ್ರೀಪದುಮನಾಭನ ದೂತ|  ಸದಾಕಾಲದಲಿ ಸರ್ವರ ಹೃದಯಾಂತರ್ಗತ ||ಅಪ|| ವಾರಿಧಿಗೋಷ್ಪಾದ ನೀರಂತೆ ದಾಟಿದ | ಧೀರ ಯೋಗಾಸನಧಾರಿಯಾಗಿಪ್ಪುದು ||೧|| ದುರುಳ ಕೌರವರನ್ನು ವರಗದೆಯಲಿ ಕೊಂದ ಕರದಲಿ ಜಪಮಾಲೆ ಧರಿಸಿ ಎಣಿಸುವುದು ||೨|| ಹೀನ ಮತಗಳನ್ನು ವಾಣಿಲಿ ತಡೆದಂಥ | ಜ್ಞಾನವಂತನೆ ಹೀಗ ಮೌನವಾಗಿಪ್ಪುದು ||೩|| ಸರ್ವವ್ಯಾಪಕ ನೀನು ಪೂರ್ವಿಕ ದೇವನೇ ಶರ್ವನ ಪಿತ ಬಂದು ಪರ್ವತ ಸೇರಿದ್ದು ||೪|| ಗೋಪಾಲ ವಿಠಲಗೆ ನೀ ಪ್ರೀತಿ ಮಂತ್ರಿಯು ವ್ಯಾಪಾರ ಮಾಡದೆ ಈ ಪರಿ ಕುಳಿತಿಹೆ ||೫|| idu EnO carita yaMtrOddhAra ||pa|| idu Enu carita SrIpadumanABana dUta|  sadAkAladali sarvara hRudayAMtargata ||apa||   vAridhigOShpAda nIraMte dATida | dhIra yOgAsanadhAriyAgippudu ||1||   duruLa kauravarannu varagadeyali koMda karadali japamAle dharisi eNisuvudu ||2||   hIna matagaLannu vANili taDedaMtha | j~jAnavaMtane hIga maunavAgippudu ||3|| sarvavyApaka nInu pUrvika dEvanE Sarvana pita baMdu parvata sEriddu ||4||   gOpAla viThalage nI prIti maMtriyu vyApAra m...

ಕಳವು ಕಲಿಸಿದ್ಯಮ್ಮ ಗೋಪಿ | ಪುರಂದರ ವಿಠಲ | Kalavu Kalisidyamma Gopi | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಳವು ಕಲಿಸಿದ್ಯಮ್ಮ ಗೋಪಿ ಕಮಲನಾಭನಿಗೆ ||ಪ|| ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲು ಬೆಣ್ಣೆಯ ||ಅಪ|| ಆರು ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ ಗೀರು ಗಂಧವ ಹಚ್ಚಿ ಹಾರವ ಹಾಕಿ ಕೇರಿ ಕೇರಿ ಪಾಲು ಬೆಣ್ಣೆ ಸೂರೆ ಮಾಡಿ ಬಾರೆನ್ನುತ ವಾರಿಜನಾಭನ ಕಳುಹಿದ್ಯಮ್ಮ ವನಜನಯನನ ||೧|| ಸಣ್ಣ ಮಲ್ಲಿಗೆಯ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ಹುಣ್ಣಿಮೆ ಮೀಸಲು ಪಾಲು ಉಣ್ಣು ಮೆಲ್ಲು ಮೆಲ್ಲೆನ್ನುತ್ತ ಚಿಣ್ಣನ ಕಳುಹಿದ್ಯಮ್ಮ ಉಣಲಿಕ್ಕೆ ||೨|| ಹೊಟ್ಟೆ ಬಾಕನಾದನಿವನು ಬೆಟ್ಟದೊಡೆಯಗೆ ಪ್ರಿಯ ಇಟ್ಟು ಕೊಂಡಿರೇಳು ಭುವನ ಉದರದಲ್ಲಿಯೆ ಎಷ್ಟು ಹೇಳಿದರು ಕೇಳ ಏನು ಮಾಡಲಮ್ಮ ನಾನು ಕಟ್ಟು ಮಾಡಿಸಲು ಬೇಕು ಪುರಂದರ ವಿಠಲಗೆ ||೩|| kaLavu kalisidyamma gOpi kamalanaabhanige ||pa|| uLisikoMDya nimma maneya paalu beNNeya ||apa|| Aru ELada munna ebbisi SRuMgaara maaDi gIru gaMdhava hacci haarava haaki kEri kEri paalu beNNe sUre maaDi baarennuta vaarijanaabhana kaLuhidyamma vanajanayanana ||1|| saNNa malligeya muDisi baNNada valliya hodisi heNNugaLa olisuvaMte hELi buddhiya huNNime mIsalu paalu uNNu mellu mellennutta ciNN...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru