ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸುಂದರಿ ರಂಗಾನ ತಂದು | ಶ್ರೀ ಕನಕದಾಸರು | Sundari Rangana Tandu | Sri Kanaka Dasaru


ಸಾಹಿತ್ಯ : ಶ್ರೀ ಕನಕದಾಸರು
Kruti: Sri Kanakadasaru


ಸುಂದರಿ | ರಂಗಾನ ತಂದು ತೋರಾ ಒಂದಾರ ಘಳಿಗ್ಯಾರ |ಪ|

ನೀರೊಳು ಮೀನನಾಗಿ ಒಲಿವ ಧರೆ ಭಾರವನ್ಹೊರುವಾ...
ವರಾಹನಾಗಿ ನರಕಾಸುರನ ತರಿವ ಕೋರೆಲಿ ಮಣ್ಣು ಬಗಿವಾ....
ಒಡಮೂಡಿ ಕಂಭದಿಂದ ಗುಡುಗುಡಿಸುತ್ತಾ ಬರುವ ದೃಢವುಳ್ಳ ಬಲಿ 
ಚಕ್ರವರ್ತಿ ಪಾಲಿಸಿದ ವರವ | ಕೊಡಲಿ ಪಿಡಿದು ಹಡೆದ ತಾಯ ಕಡಿತಾಲಿರುವ | 
ಮಡದಿ ಒಯ್ದ ರಾವಣನ ಹೊಡೆದು ದಶಶಿರವ ಭೂಮಿ 
ಬಿಟ್ಟು ತಿರುಗುವಂತ ತ್ರಿಪುರಾಂತಪುರವ| ಏರಿಸಿದ ಅಶ್ವಮೇಧ ಅರ್ತಿಯಿಂದ ಮೆರೆವಾ ||೧||

ಮತ್ಸ್ಯನಾಗಿ ಮೊದಲಿನಲ್ಲಿ ಕೂರ್ಮನಾಗಿ ಬಂದೂ... 
ಓರೆಲಿ ಕಾಯ್ದ ದೈತ್ಯನ ಕೊಂದು ಬಹುಕ್ರೋಧದಿಂದ... 
ದುರುಳ ಹಿರಣ್ಯಕನ ಕರುಳು ಬಗೆದು ತೋಡಿ ಕೊರಳೊಳಗೆ ಧರಿಸಿದನು 
ಸರಗಳನ್ನೇ ಮಾಡಿ ಕೊರಳು ಕೊಯ್ದು ಎಲ್ಲಮ್ಮನ ಪುತ್ರನಾಗಿ ಕಾಯ್ದಿ 
ಸರಳು ಬಾಣವನ್ನೆ ಹೂಡಿ ಲಂಕಾ ಮಥನ ಮಾಡಿ ಎರಳೆ ಗಂಗಳೆ 
ಪತಿವ್ರತೆಯರ ಕೆಡಿಸಿದನು ಕೂಡಿ ಮರುಳುತನದಿಂದ ಸಿಗದೆ ಹಯವನೇರಿ ಓಡಿ ||೨||

ಬ್ರಹ್ಮಾಂಗೆ ಒಲಿದು ವೇದವ ತರುವ ಬ್ರಹ್ಮಾಂಡವನ್ಹೊರುವಾ... 
ಘಮ್ಮೀಲೆ ಕಾಯ್ದವನಾಗಿರುವ ಸುಮ್ಮನೆ ಹೋಗಿಬರುವ... 
ಸಿಟ್ಟಿನಿಂದ ನಾರಸಿಂಹ ರೂಪನಾಗಿ ಬಂದ ಸೃಷ್ಟಿಯೊಳು ಪರಶುರಾಮ 
ರೇಣುಕೆಯ ಕಂದ ಕಷ್ಟಾಚರಿಸಿದನು ರಾಮ ವನವಾಸದಿಂದ 
ಕೃಷ್ಣಾವತಾರ ಬೌದ್ಧ ಕಲ್ಕಿ ರೂಪ ಒಂದೊಂದ ಇಷ್ಟುಪರಿ ವರ್ಣಿಸ್ತಾರ 
ಹತ್ತವತಾರ ಚಂದ ಸೃಷ್ಟಿಯೊಳು ಕಾಗಿನೆಲೆಯಾದಿ ಕೇಶವನಿಂದ ||೩||

suMdari | raMgAna taMdu tOrA oMdAra GaLigyAra |pa|

nIroLu mInanAgi oliva dhare BAravan~horuvA... 
varAhanAgi narakAsurana tariva kOreli maNNu bagivA....
oDamUDi kaMBadiMda guDuguDisuttA baruva dRuDhavuLLa bali 
cakravarti pAlisida varava | koDali piDidu haDeda tAya kaDitAliruva | 
maDadi oyda rAvaNana hoDedu daSaSirava BUmi 
biTTu tiruguvaMta tripurAMtapurava| Erisida aSvamEdha artiyiMda merevA ||1||

matsyanAgi modalinalli kUrmanAgi baMdU... 
Oreli kAyda daityana koMdu bahukrOdhadiMda... 
duruLa hiraNyakana karuLu bagedu tODi koraLoLage dharisidanu 
saragaLannE mADi koraLu koydu ellammana putranAgi kAydi 
saraLu bANavanne hUDi laMkA mathana mADi eraLe gaMgaLe 
pativrateyara keDisidanu kUDi maruLutanadiMda sigade hayavanEri ODi ||2||

brahmAMge olidu vEdava taruva brahmAMDavanhoruvA...
GammIle kAydavanAgiruva summane hOgibaruva...
siTTiniMda nArasiMha rUpanAgi baMda sRuShTiyoLu paraSurAma 
rENukeya kaMda kaShTAcarisidanu rAma vanavAsadiMda 
kRuShNAvatAra bauddha kalki rUpa oMdoMda iShTupari varNistAra 
hattavatAra caMda sRuShTiyoLu kAgineleyAdi kESavaniMda ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru