ಶ್ರೀರಮಣ ಸರ್ವೇಶ ಸರ್ವಗ | ಸಾರ ಭೋಕ್ತ ಸ್ವತಂತ್ರ ಸರ್ವದಾ ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||
ಸಾರಿದವರಘ ದೂರ ಗೈಸಿ ಸೂರಿ ಜನರಿಗೆ ಸೌಖ್ಯ ನೀಡುವ ಧೀರ ವೆಂಕಟ ರಮಣ ಕರುಣದಿ ಪೊರೆಯೋ ನೀ ಎನ್ನ ||೧||
ಘನ್ನ ಮಹಿಮಾಪನ್ನ ಪಾಲಕ ನಿನ್ನ ಹೊರತಿನನ್ಯ ದೇವರ ಮನ್ನದಲಿ ನಾ ನೆನಿಸನೆಂದಿಗೂ ಬನ್ನ ಬಡಿಸಿದರೂ
ಎನ್ನ ಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ ಚನ್ನ ವೆಂಕಟರಮಣ ಕರುಣದಿ ಪೊರೆಯೋ ನೀ ಎನ್ನ ||೨||
ಲಕುಮಿ ಬೊಮ್ಮ ಭವಾಮರೇಶರು | ಭಕುತಿ ಪೂರ್ವಕ ನಿನ್ನ ಭಜಿಸಿ ಸಕಲ ಲೋಕಕೆನಾಥರೆನಿಪರು ಸರ್ವಕಾಲದಲಿ
ನಿಖಿಳ ಜೀವರ ಪೊರೆವ ದೇವನೆ ಭಕುತಿ ನೀಯೆನಗೀಯದಿರಲು ವ್ಯಕುತ ವಾಗ್ಯಪಕೀರ್ತಿ ಬಪ್ಪುದು ಶ್ರೀನಿಕೇತನನೆ ||೩||
ಯಾಕೆ ಪುಟ್ಟದೊ ಕರುಣ ಎನ್ನೊಳು ಸಾಕಲಾರೆಯ ನಿನ್ನ ಶರಣನ |ನೂಕಿ ಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ||
ನೋಕನೀಯನೆ ನೀನೆ ಎನ್ನನು | ಜೋಕೆ ಯಿಂದಲಿ ಕಾಯೋ ಬಿಡದೆ | ಏಕ ದೇವನು ನೀನೆ ವೆಂಕಟ ಶೇಷಗಿರಿವಾಸ ||೪||
ಅಂಬುಜಾಂಬಕ ನಿನ್ನ ಪದಯುಗ ನಂಬಿಕೊಂಡೀಪರಿಯಲಿರುತಿರೆ | ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ ||
ಬಿಂಬ ಮೂರುತಿ ನಿನ್ನ ಕರಗತ ಕಂಬುವರವೇ ಗತಿಯೋ ವಿಶ್ವ ಕುಟುಂಬಿ ಎನ್ನನು ಸಲಹೋ ಸಂತತ ಶೇಷಗಿರಿವಾಸ ||೫||
ಸಾರ ಶಿರಿ ವೈಕುಂಠ ತ್ಯಜಿಸಿ ಧಾರುಣಿಯೊಳು ಗೊಲ್ಲನಾಗಿ ಚೋರ ಕರ್ಮವ ಮಾಡಿ ಬದುಕಿಹದಾರಿಗರಿಕಿಲ್ಲ ||
ಸಾರಿ ಪೇಳುವೆ ನಿನ್ನ ಗುಣಗಳ ಪಾರವಾಗಿರುತಿಹವೋ ಜನರಿಗೆ ಧೀರ ವೆಂಕಟರಮಣ ಕರುಣದಿ ಪೊರೆಯೋ ನೀ ಎನ್ನ ||೬||
ನೀರ ಮುಳುಗಿ ಭಾರ ಪೊತ್ತು ಧಾರುಣೀ ತಳವಗೆದು ಸಿಟ್ಟಿಲಿ ಕ್ರೂರನುದರವ ಸೀಳಿ ಕರುಳಿನ ಮಾಲೆ ಧರಿಸಿದರೂ
ಪೋರ ವಿಪ್ರ ಕುಠಾರಿ ವನ ವನಚಾರಿ ಗೋಪ ದಿಗಂಬರಾಶ್ವವ ಏರಿ ಪೋದರು ಬಿಡೆನೊ ವೆಂಕಟ ಶೇಷಗಿರಿವಾಸ ||೭||
ಲಕ್ಷ್ಮೀನಾಯಕ ಸಾರ್ವಭೌಮನೆ ಪಕ್ಷಿವಾಹನ ಪರಮ ಪುರುಷನೆ ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ
ಅಕ್ಷಯಾಂಬರವಿತ್ತ ವಿಜಯನ ಪಕ್ಷಪಾತವ ಮಾಡಿ ಕುರುಗಳ ಲಕ್ಷ್ಯ ಮಾಡದೆ ಕೊಂದೆಯೋ ಶ್ರೀ ಶೇಷಗಿರಿವಾಸ ||೮||
ಹಿಂದೆ ನೀ ಪ್ರಹ್ಲಾದಗೋಸುಗ ಎಂದು ನೋಡದ ರೂಪ ಧರಿಸಿ ಬಂದು ದೈತ್ಯನ ಒಡಲ ಬಗೆದು ಪೊರೆದೆ ಬಾಲಕನ ||
ತಂದೆ ತಾಯ್ಗಳ ಬಿಟ್ಟು ವಿಪಿನದಿ ನಿಂದು ತಪಿಸುವ ಪಂಚವತ್ಸರ ಕಂದನಾ ಧ್ರುವಗೊಲಿದು ಪೊರೆದೆಯೊ ಶೇಷಗಿರಿವಾಸ ||೯||
ಮಡುವಿನೊಳಗಿಹ ಮಕರಿ ಕಾಲನು ಪಿಡಿದು ಬಾಧಿಸೆ ಕರಿಯು ತ್ರಿಜಗದ್ವಡೆಯ ಪಾಲಿಸೋ ಎನಲು ತಕ್ಷಣ ಬಂದು ಪಾಲಿಸಿದೆ ||
ಮಡದಿ ಮಾತನು ಕೇಳಿ ಬಲು ಪರಿ ಬಡವ ಬ್ರಾಹ್ಮಣ ಧಾನ್ಯ ಕೊಡಲು ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ ||೧೦||
ಪಿಂತೆ ಮಾಡಿದ ಮಹಿಮೆಗಳ ನಾನೆಂತು ವರ್ಣಿಸಲೇನು ಫಲ ಶ್ರೀಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ ||
ಕಂತು ಜನಕನೆ ಎನ್ನ ಮನಸಿನ ಅಂತರಂಗದಿ ನೀನೇ ಸರ್ವದ ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ ||೧೧||
ಶ್ರೀನಿವಾಸನೆ ಭಕ್ತ ಪೋಷನೆ ಜ್ಞಾನಿ ಕುಲಗಳಿಗಭಯದಾಯಕ | ದೀನ ಬಾಂಧವ ನೀನೆ ಎನ ಮನದರ್ಥ ಪೂರೈಸೋ ||
ಅನುಪಮೋಪಮ ಜ್ಞಾನ ಸಂಪದ ವಿನಯಪೂರ್ವಕವಿತ್ತು ಪಾಲಿಸೋ ಜನುಮ ಜನುಮಕೆ ಮರೆಯಬೇಡವೋ ಶೇಷಗಿರಿವಾಸ ||೧೨||
ಮದವು ಮತ್ಸರ ಲೋಭ ಮೋಹವು ಒದಗಬಾರದು ಎನ್ನ ಮನದಲಿ ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು ||
ಹೃದಯ ಮಧ್ಯದಿ ನಿನ್ನ ರೂಪವು ವದನದಲಿ ತವ ನಾಮ ಮಂತ್ರವು | ಸದಯ ಪಾಲಿಸು ಬೇಡಿಕೊಂಬೆನೊ ಶೇಷಗಿರಿವಾಸ ||೧೩||
ಅಂದ ನುಡಿ ಪುಸಿಯಾಗಬಾರದು ಬಂದ ಭಾಗ್ಯವು ಪೋಗಬಾರದು | ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ ||
ನಿಂದೆ ಮಾಡುವ ಜನರ ಸಂಗವು ಎಂದಿಗಾದರು ದೊರೆಯಬಾರದು ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ ||೧೪||
ಏನು ಬೇಡಲಿ ಎನ್ನ ದೇವನೆ ಸಾನುರಾಗದಿ ಎನ್ನ ಪಾಲಿಸೋ | ನಾನಾ ವಿಧವಿಧ ಸೌಖ್ಯ ನೀಡುವುದಿಹಪರಂಗಳಲಿ ||
ಶ್ರೀನಿವಾಸನೆ ನಿನ್ನ ದಾಸಗೆ ಏನು ಕೊರತಿಲ್ಲೆಲ್ಲಿ ನೋಡಲು | ನೀನೇ ನಿಂತೀ ವಿಧದಿ ಪೇಳಿಸು ಶೇಷಗಿರಿವಾಸ ||೧೫||
ಆರು ಮುನಿದವರೇನು ಮಾಳ್ಪರೋ | ಆರು ಒಲಿದವರೇನು ಮಾಳ್ಪರು | ಆರು ನೇಹಿಗರಾರು ದ್ವೇಷಿಗಳಾರುದಾಶಿನರು ||
ಕ್ರೂರ ಜೀವರ ಹಣಿದು ಸಾತ್ವಿಕ ಧೀರ ಜೀವರ ಪೊರೆದು ನಿನ್ನಲಿ ಸಾರ ಭಕುತಿಯನಿತ್ತು ಪಾಲಿಸೋ ಶೇಷಗಿರಿವಾಸ ||೧೬||
ನಿನ್ನ ಸೇವೆಯನಿತ್ತು ಎನಗೆ ನಿನ್ನ ಪದಯುಗ ಭಕ್ತಿ ನೀಡಿ | ನಿನ್ನ ಗುಣಗಳ ಸ್ತವನ ಮಾಡುವ ಜ್ಞಾನ ನೀನಿತ್ತು ||
ಎನ್ನ ಮನದಲಿ ನೀನೇ ನಿಂತು ಘನ್ನ ಕಾರ್ಯವ ಮಾಡಿ ಮಾಡಿಸು ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ ||೧೭||
ಜಯ ಜಯತು ಶಠ ಕೂರ್ಮರೂಪನೆ | ಜಯ ಜಯತು ಕಿಟಿ ಸಿಂಹ ವಾಮನ| ಜಯ ಜಯತು ಭೃಗುರಾಮ ರಘುಕುಲ ಸೋಮ ಶ್ರೀರಾಮ ||
ಜಯ ಜಯತು ಶಿರಿ ಯದುವರೇಣ್ಯನೆ ಜಯ ಜಯತು ಜನ ಮೋಹ ಬುದ್ಧನೆ | ಜಯ ಜಯತು ಕಲಿ ಕಲ್ಮಷಘ್ನನೆ ಕಲ್ಕಿ ನಾಮಕನೆ ||೧೮||
ಕರುಣ ಸಾಗರ ನೀನೆ ನಿಜಪದ ಶರಣ ವತ್ಸಲ ನೀನೆ ಶಾಶ್ವತ ಶರಣ ಜನ ಮಂದಾರ ಕಮಲಾಕಾಂತ ಜಯವಂತ ||
ನಿರುತ ನಿನ್ನನು ನುತಿಸಿ ಪಾಡುವೆ ವರದ ಗುರು ಜಗನ್ನಾಥ ವಿಠ್ಠಲ ಪರಮ ಪ್ರೇಮದಿ ಪೊರೆಯೋ ಎನ್ನನು ಶೇಷಗಿರಿವಾಸ ||೧೯||
SrIramaNa sarvESa sarvaga | sAra BOkta svataMtra sarvadA pAra mahimOdAra sadguNa pUrNa gaMBIra ||
sAridavaraGa dUra gaisi sUri janarige sauKya nIDuva dhIra veMkaTa ramaNa karuNadi poreyO nI enna ||1||
Ganna mahimApanna pAlaka ninna horatinanya dEvara mannadali nA nenisaneMdigU banna baDisidarU
enna pAlaka nIne irutire innu Bava BayavEke enage canna veMkaTaramaNa karuNadi poreyO nI enna ||2||
lakumi bomma BavAmarESaru | Bakuti pUrvaka ninna Bajisi sakala lOkakenAthareniparu sarvakAladali
niKiLa jIvara poreva dEvane Bakuti nIyenagIyadiralu vyakuta vAgyapakIrti bappudu SrInikEtanane ||3||
yAke puTTado karuNa ennoLu sAkalAreya ninna SaraNana |nUki biTTare ninage lOkadi KyAti bappuvudE ||
nOkanIyane nIne ennanu | jOke yiMdali kAyO biDade | Eka dEvanu nIne veMkaTa SEShagirivAsa ||4||
aMbujAMbaka ninna padayuga naMbikoMDIpariyalirutire | DoMbegArana teradi nI nirBAgya sthiti tOre ||
biMba mUruti ninna karagata kaMbuvaravE gatiyO viSva kuTuMbi ennanu salahO saMtata SEShagirivAsa ||5||
sAra Siri vaikuMTha tyajisi dhAruNiyoLu gollanAgi cOra karmava mADi badukihadArigarikilla ||
sAri pELuve ninna guNagaLa pAravAgirutihavO janarige dhIra veMkaTaramaNa karuNadi poreyO nI enna ||6||
nIra muLugi BAra pottu dhAruNI taLavagedu siTTili krUranudarava sILi karuLina mAle dharisidarU
pOra vipra kuThAri vana vanacAri gOpa digaMbarASvava Eri pOdaru biDeno veMkaTa SEShagirivAsa ||7||
lakShmInAyaka sArvaBaumane pakShivAhana parama puruShane mOkShadAyaka prANajanakane viSvavyApakane
akShayAMbaravitta vijayana pakShapAtava mADi kurugaLa lakShya mADade koMdeyO SrI SEShagirivAsa ||8||
hiMde nI prahlAdagOsuga eMdu nODada rUpa dharisi baMdu daityana oDala bagedu porede bAlakana ||
taMde tAygaLa biTTu vipinadi niMdu tapisuva paMcavatsara kaMdanA dhruvagolidu poredeyo SEShagirivAsa ||9||
maDuvinoLagiha makari kAlanu piDidu bAdhise kariyu trijagadvaDeya pAlisO enalu takShaNa baMdu pAliside ||
maDadi mAtanu kELi balu pari baDava brAhmaNa dhAnya koDalu poDavigasadaLa BAgya nIDide SEShagirivAsa ||10||
piMte mADida mahimegaLa nAneMtu varNisalEnu Pala SrIkAMta ennanu poreye kIruti ninage Palavenage ||
kaMtu janakane enna manasina aMtaraMgadi nInE sarvada niMtu prEraNe mALpe sarvada SEShagirivAsa ||11||
SrInivAsane Bakta pOShane j~jAni kulagaLigaBayadAyaka | dIna bAMdhava nIne ena manadartha pUraisO ||
anupamOpama j~jAna saMpada vinayapUrvakavittu pAlisO januma janumake mareyabEDavO SEShagirivAsa ||12||
madavu matsara lOBa mOhavu odagabAradu enna manadali padumanABane j~jAna Bakti virakti nInittu ||
hRudaya madhyadi ninna rUpavu vadanadali tava nAma maMtravu | sadaya pAlisu bEDikoMbeno SEShagirivAsa ||13||
aMda nuDi pusiyAgabAradu baMda BAgyavu pOgabAradu | kuMdu bArade ninna karuNavu dinadi vardhisali ||
niMde mADuva janara saMgavu eMdigAdaru doreyabAradu eMdu ninnanu bEDikoMbeno SEShagirivAsa ||14||
Enu bEDali enna dEvane sAnurAgadi enna pAlisO | nAnA vidhavidha sauKya nIDuvudihaparaMgaLali ||
SrInivAsane ninna dAsage Enu koratillelli nODalu | nInE niMtI vidhadi pELisu SEShagirivAsa ||15||
Aru munidavarEnu mALparO | Aru olidavarEnu mALparu | Aru nEhigarAru dvEShigaLArudASinaru ||
krUra jIvara haNidu sAtvika dhIra jIvara poredu ninnali sAra Bakutiyanittu pAlisO SEShagirivAsa ||16||
ninna sEveyanittu enage ninna padayuga Bakti nIDi | ninna guNagaLa stavana mADuva j~jAna nInittu ||
enna manadali nInE niMtu Ganna kAryava mADi mADisu dhanyaneMdenisenna lOkadi SEShagirivAsa ||17||
jaya jayatu SaTha kUrmarUpane | jaya jayatu kiTi siMha vAmana| jaya jayatu BRugurAma raGukula sOma SrIrAma ||
jaya jayatu Siri yaduvarENyane jaya jayatu jana mOha buddhane | jaya jayatu kali kalmaShaGnane kalki nAmakane ||18||
karuNa sAgara nIne nijapada SaraNa vatsala nIne SASvata SaraNa jana maMdAra kamalAkAMta jayavaMta ||
niruta ninnanu nutisi pADuve varada guru jagannAtha viThThala parama prEmadi poreyO ennanu SEShagirivAsa ||19||