ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಯರೇ ಗತಿಯು ನಮಗೆ | ಶ್ರೀ ಶ್ಯಾಮಸುಂದರವಿಠಲ | Rayare Gatiyu Namage | Sri Shyamasundara Vithala


ಸಾಹಿತ್ಯ : ಶ್ರೀ ಶ್ಯಾಮಸುಂದರವಿಠಲ ದಾಸರು 
Kruti: Sri Shyamasundaravittala Dasaru


ರಾಯರೇ ಗತಿಯು ನಮಗೆ 
ವಾಯುಸುಮತೋದ್ಧಾರ ಶ್ರೀ ರಾಘವೇಂದ್ರಗುರು ||ಪ||

ಶುಕಪಿಕಮೊದಲಾದ ವಿಕುಲಕ್ಕೆ ಮಧುರಫಲ
ಯುಕುತಮಾಗಿಹ ಚೂತಸುಕುಜ ಗತಿಯು
ಮುಕುತಿಗೆ ಸುಜ್ಞಾನ ಭಕುತಿ ವಿರಕುತಿ ಗತಿಯು
ಅಕಳಂಕಶ್ರೀಮಂತ್ರಮಂದಿರದಿ ನೆಲೆಸಿಪ್ಪ  ||೧||

ಋಷಿಗಳಿಗೆ ಪ್ರಣವಗತಿ ಝಷಗಳಿಗೆ ಜಲವೆ ಗತಿ
ಸಸಿಗಳಭಿವೃದ್ಧಿಗೆ ಶಶಿರವಿಯೆ ಗತಿಯು
ಶಿಶುಗಳಿಗೆ ಜನನಿ ಗತಿ ಪಶುಗಳಿಗೆ ತೃಣವೆ ಗತಿ
ಅಸಮಮಹಿಮೆಯೊಳ್ ಮೆರೆವ ಮಿಸುನಿಶಯ್ಯಜರಾದ ||೨||

ಕಾಮಿನಿಮಣಿಯರಿಗೆ ಕೈಪಿಡಿದ ಕಾಂತಗತಿ
ಭೂಮಿಬುಧರಿಗೆ ಮಧ್ವಶಾಸ್ತ್ರಗತಿಯು
ತಾಮರಸಸಖಸುತನ ಧಾಮ ಭಯಪೋಪುದಕೆ
ಶ್ಯಾಮಸುಂದರವಿಠಲಸ್ವಾಮಿ ನಾಮವೆ ಗತಿಯು ||೩||

raayarE gatiyu namage 
vaayusumatOddhaara SrI raaGavEMdraguru ||pa||

shukapikamodalaada vikulakke madhuraphala
yukutamaagiha cUtasukuja gatiyu
mukutige suj~jaana bhakuti virakuti gatiyu
akaLaMkaSrImaMtramaMdiradi nelesippa  ||1||

RuShigaLige praNavagati JaShagaLige jalave gati
sasigaLabhivRuddhige SaSiraviye gatiyu
shiSugaLige janani gati paSugaLige tRuNave gati
asamamahimeyoL mereva misuniSayyajaraada ||2||

kaaminimaNiyarige kaipiDida kaaMtagati
bhUmibudharige madhvaSaastragatiyu
taamarasasakhasutana dhaama bhayapOpudake
SyaamasuMdaraviThalasvaami naamave gatiyu ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru