ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಾದಿರಾಜನೆ ನಿನ್ನ | ಶ್ರೀ ವೇಣುಗೋಪಾಲ ವಿಠಲ ದಾಸರು | Vadirajane Ninna | Sri Venugopala Vithala


ಸಾಹಿತ್ಯ : ಶ್ರೀ ವೇಣುಗೋಪಾಲ ವಿಠಲ ದಾಸರು 
Kruti: Sri Venugopala Vithala Dasaru


ವಾದಿರಾಜನೆ ನಿನ್ನ ಪಾದಕ್ಕೆರಗಿ ನಾ 
ಮೋದದಿಂ ಬೇಡುವೆ ಮಾಧವನ ತೋರೋ ||ಪ||

ಸಕಲ ವೇದ ಪುರಾಣ ಶಾಸ್ತ್ರಗಳ 
ಪ್ರಕಟಿಸಿದಿ ಕನ್ನಡದಿ ಪ್ರೇಮದಿಂದ | 
ನಿಖಿಳ ಜನರು ತಾವಾನಕದುಂಧುಭಿಸುತನ 
ಭಕುತಿಯ ಪಡೆದು ಮೇಣ್ಮುಕುತಿಯೈದಲಿಯೆಂದು ||೧||

ಗಣನೆಯಿಲ್ಲದೆ ಕೀರ್ತನೆ ಸುಳಾದಿಯನ್ನು 
ಮನವೊಲಿದು ಮಾಡಿದ್ದು ಜನರು ಪಠಿಸಿ | 
ವನಜನಾಭನ ಕರುಣವನು ಪಡೆದು ತಾ- 
ವನುಭವಿಸಲಾನಂದವನೆನುತಲಿ ||೨||

ನಿನ್ನ ನೆನೆಯೆ ಧನ್ಯ ನಿನ್ನ ಪಾಡಲು ಮಾನ್ಯ 
ನಿನ್ನ ಕೊಂಡಾಡಲು ಪಾಪ ಶೂನ್ಯ | 
ನಿನ್ನವನೆನೆ ವೇಣುಗೋಪಾಲ ವಿಠಲ 
ಮನ್ನಿಸಿ ಸದ್ಗತಿಯ ಪಾಲಿಪ ಮುದದಿ ||೩||

vaadiraajane ninna paadakkeragi naa 
mOdadiM bEDuve maadhavana tOrO ||pa||

sakala vEda puraaNa shaastragaLa 
prakaTisidi kannaDadi prEmadiMda | 
niKiLa janaru taavaanakaduMdhubhisutana 
bhakutiya paDedu mENmukutiyaidaliyeMdu ||1||

gaNaneyillade kIrtane suLaadiyannu 
manavolidu maaDiddu janaru paThisi | 
vanajanaabhana karuNavanu paDedu taa- 
vanubhavisalAnaMdavanenutali ||2||

ninna neneye dhanya ninna paaDalu maanya 
ninna koMDaaDalu paapa shUnya | 
ninnavanene vENugOpaala viThala 
mannisi sadgatiya paalipa mudadi ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru