ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರೋ ಗುರು ರಾಘವೇಂದ್ರ | ಶ್ರೀ ಗುರು ಶ್ರೀಶವಿಠಲ ದಾಸರು | Baaro Guru Raghavendra | Sri Guru Shrisha Vithala


ಸಾಹಿತ್ಯ : ಶ್ರೀ ಗುರು ಶ್ರೀಶವಿಠಲ ದಾಸರು
Kruti:Sri Guru Shrisha Vithala Dasaru


ಬಾರೋ ಗುರು ರಾಘವೇಂದ್ರ | ಬಾರಯ್ಯ ಬಾಬಾ ||ಪ||

ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ 
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು ||ಅಪ||

ಸೇವಕನೆಲೋ ನಾನು ಧಾವಿಸಿ ಬಂದೆನೋ | ಸೇವೆ ನೀಡೆಲೋ ನೀನು ||
ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ ಭಾವವೀಯುತ |
ಠಾವುಗಾಣಿಸಿ ಪೊರೆಯೋ ಜಗದೊಳು ಪಾವನಾತ್ಮಕ ಕಾವ ಕರುಣಿ ||೧||

ಕರೆದರೆ ಬರುವಿಯೆಂದು ಸಾರುವುದು ಡಂಗುರ ತ್ವರಿತದಿ ಒದಗೋ ಬಂದು ||
ಜರಿಯ ಬೇಡವೋ ಬರಿದೇ ನಿನ್ನಯ ವಿರಹ ತಾಳದೆ ಮನದಿ ಕೊರಗುವೆ |
ಹರಿಯ ಸ್ಮರಣೆಯ ನಿರುತದಲಿಯನಗ್ಹರುಷದಲಿ ನೀನಿರುತ ಕೊಡುತಲಿ ||೨||

ನರಹರಿ ಪ್ರಿಯನೇ ಬಾ ಗುರು ಶ್ರೀಶವಿಠಲನ ಕರುಣ ಪಾತ್ರನೆ ಬೇಗ ಬಾ ||
ಗುರುವರನೆ ಪರಿಪೋಷಿಸೆನ್ನನು ಮರೆಯದಲೆ ತವ ಚರಣ |
ಕೋಟೆಯಲಿರಿಸಿ ಚರಣಾಂಬುಜವ ತೋರುತ ತ್ವರಿತದಲಿ ಓಡೋಡಿ ಬಾಬಾ ||೩||  

bArO guru rAGavEMdra | bArayya bAbA ||pa||
 
hiMdu muMdillenage nI gati eMdu naMbide ninna pAdava 
baMdhanava biDisenna karapiDi naMdakaMda mukuMda baMdhu ||apa||
 
sEvakanelO nAnu dhAvisi baMdenO | sEve nIDelO nInu ||
sEvakana sEveyanu sEvisi sEvya sEvaka BAvavIyuta |
ThAvugANisi poreyO jagadoLu pAvanAtmaka kAva karuNi ||1||
 
karedare baruviyeMdu sAruvudu DaMgura tvaritadi odagO baMdu ||
jariya bEDavO baridE ninnaya viraha tALade manadi koraguve |
hariya smaraNeya nirutadaliyanag~haruShadali nIniruta koDutali ||2||
 
narahari priyanE bA guru SrISaviThalana karuNa pAtrane bEga bA ||
guruvarane paripOShisennanu mareyadale tava charaNa |
kOTeyalirisi caraNAMbujava tOruta tvaritadali ODODi bAbA ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru