ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಾದಿರಾಜ ಧೀರ | ಶ್ರೀ ವಿಜಯ ವಿಠಲ | Vadiraja Dheera | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ವಾದಿರಾಜ ಧೀರ  ವಾದದಲ್ಲಿ ಶೂರ ||ಪ||

ಮೋದತೀರ್ಥರ ಮತವ ಹೊಂದಿದ
ಸಾಧುಗಳನು ಉದ್ಧಾರ ಮಾಡುವ ||೧||

ಕಡಲೆ ಹೂರಣವ ಮಾಡಿ ಕಡಲಶಯನನಿಗೆ 
ಬಿಡದೆ ಅವನ ಪಾದ ಅಡಿಗಡಿಗಾರಾಧಿಸುವ ||೨||

ರಂಗ ಸರ್ವೋತ್ತಮನು ಮಂಗಳ ಮಹಿಮನೆಂದು 
ಶೃಂಗೇರಿ ಮಠದಲ್ಲಿ ಧ್ವಜವ ತಾ ಸ್ಥಾಪಿಸಿದ ||೩||

ವಾದಿಗಜ ಪಂಕಜನೆನಿಸಿ ಮೇದಿನಿಯೊಳಗೆ ಮೆರೆದ
ಮಾಧವನ ಪ್ರಿಯದಾಸ ಸದಾನಂದದಲಿರುವ ||೪||

ಅಜನಪದಕೆ ಅರ್ಹ ಋಜುಗಣ ಜೀವೋತ್ತಮನು  
ನಿಜಪದವಿಗೆ ಬರುವ ವಿಜಯ ವಿಠಲನ ದಾಸ ||೫||

vaadiraaja dhIra  vaadadalli shUra ||pa||

mOdatIrthara matava hoMdida
saadhugaLanu uddhaara maaDuva ||1||

kaDale hUraNava mADi kaDalashayananige 
biDade avana paada aDigaDigaaraadhisuva ||2||

raMga sarvOttamanu maMgaLa mahimaneMdu 
shRuMgEri maThadalli dhvajava taa sthaapisida ||3||

vaadigaja paMkajanenisi mEdiniyoLage mereda
maadhavana priyadaasa sadaanaMdadaliruva ||4||

ajanapadake arha RujugaNa jIvOttamanu  
nijapadavige baruva vijaya viThalana daasa ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru