ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕುರುಡು ನಾಯಿ ಸಂತೆಗೆ | ಶ್ರೀ ಪುರಂದರ ವಿಠಲ | Kurudu Nayi Santege | Sri Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಕುರುಡು ನಾಯಿ ಸಂತೆಗೆ ಬಂತಂತೆ | ಅದು ಯಾಕೆ ಬಂತೋ ||ಪ||

ಖಂಡ ಸಕ್ಕರೆ ಹಿತವಿಲ್ಲವಂತೆ ಖಂಡ ಎಲುಬು ಕಡಿದಿತಂತೆ |
ಹೆಂಡಿರು ಮಕ್ಕಳ ನೆಚ್ಚಿತಂತೆ ಕೊಂಡು ಹೋಗುವಾಗ ಯಾರಿಲ್ಲವಂತೆ ||೧||

ಭರದಿ ಅಂಗಡಿ ಹೊಕ್ಕಿತಂತೆ ತಿರುಗಿ ದೊಣ್ಣೆಲಿ ಇಕ್ಕಿದರಂತೆ |
ಮರೆತರಿನ್ನು ವ್ಯರ್ಥವಂತೆ ನರಕದೊಳಗೆ ಬಿದ್ದಿತಂತೆ ||೨||

ವೇದ ಶಾಸ್ತ್ರಗಳನೋದಿತಂತೆ ಗಾದೆ ಮಾಡಿ ಬಿಟ್ಟಿತಂತೆ |  
ಹಾದಿ ತಪ್ಪಿ ನಡೆದು ಯಮನ ಬಾಧೆಗೆ ತಾ ಗುರಿಯಾಯಿತಂತೆ ||೩||

ನಾನಾ ಜನ್ಮವನ್ನೆತ್ತಿತಂತೆ ಮಾನವನಾಗಿ ಹುಟ್ಟಿತಂತೆ |
ಕಾನನ ಕಾನನ ತಿರುಗಿತಂತೆ ತನ್ನನು ತಾನೆ ಮರೆಯಿತಂತೆ ||೪||

ಮಂಗನ ಕೈಯ ಮಾಣಿಕ್ಯದಂತೆ ಹಾಂಗೂ ಹೀಂಗೂ ಕಳೆದೀತಂತೆ |
ರಂಗ ಪುರಂದರ ವಿಠಲನ ಮರೆತು ಭಂಗ ಬಹಳ ಪಟ್ಟಿತಂತೆ ||೫||

kuruDu nAyi saMtege baMtaMte | adu yAke baMtO ||pa||
 
KaMDa sakkare hitavillavaMte KaMDa elubu kaDiditaMte |
heMDiru makkaLa neccitaMte koMDu hOguvAga yArillavaMte ||1||
 
Baradi aMgaDi hokkitaMte tirugi doNNeli ikkidaraMte |
maretarinnu vyarthavaMte narakadoLage bidditaMte ||2||
 
vEda SAstragaLanOditaMte gAde mADi biTTitaMte |
hAdi tappi naDedu yamana bAdhege tA guriyAyitaMte ||3||
 
nAnA janmavannettitaMte mAnavanAgi huTTitaMte |
kAnana kAnana tirugitaMte tannanu tAne mareyitaMte ||4||
 
maMgana kaiya mANikyadaMte hAMgU hIMgU kaLedItaMte |
raMga puraMdara viThalana maretu BaMga bahaLa paTTitaMte ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru