ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೀಲಕಂಧರ ಶೈಲಜಾಧವ | ಶ್ರೀ ಪ್ರಸನ್ನ ವೆಂಕಟ ದಾಸರು | Neelakandhara Shaila | Sri Prasanna Venkata


ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು 
Kruti: Sri Prasanna Venkata Dasaru


ನೀಲಕಂಧರ ಶೈಲಜಾಧವ ರುಂಡಮಾಲಧರಾ ||ಪ||

ಶೂಲಿ ಪನ್ನಗಧರ ಕಪಾಲಿ ಪಾಲಿಸೆನ್ನ ಹರಾ ||ಅಪ||

ಚಂಚಲತೆ ದೂರಿಟ್ಟು ನಿರ್ವಂಚನೆಯಲಿ
ಇಂಚು ಬಿಡದೆ ಕಂಚಿವರದನ ಚರಿತೆ ಬರೆಸು
ಮುಂಚಿನಾ ಪರಮೇಷ್ಠಿ ಮಧ್ವರ ಪಂಚಭೇದ ಪ್ರ-
ಪಂಚ ಜ್ಞಾನದ ಭಿಕ್ಷೆ ಕೊಡಿಸು ಪಂಚಾಕ್ಷರಿಯೆ ||೧||

ಜಡೆಯೊಳೆಲ್ಲವು ಜಲವು ಕಡು ಸುಡುಗಾಡುಮನೆ
ಅಡವಿ ಪ್ರಾಣಿಯ ಚರ್ಮದುಡುಗೆ ತೊಟ್ಟವನೆ
ಒಡಲ್ಹರಕ ಗಜಮುಖನ ಜನಕನೆ ಮೃಡಹರನೆ
ಒಡನೆ ರಾಮನ ನಾಮ ಜಾಡನು ಪಿಡಿದು ತಿರುಗುವ ||೨||

ಬೊಮ್ಮನ ಸುತ ಪರಬೊಮ್ಮನ ಪೌತ್ರ
ಕಮ್ಮಗೋಲನ ತರಿದ ಕಾಮದಹನೇ
ಸುಮಾಸ್ತ್ರನಯ್ಯ ಪ್ರಸನ್ವೆಂಕಟನೊಮ್ಮೆ
ಸುಮ್ಮನದಲಿ ನೆನೆವಂತೆ ಮಾಡೈ ಶಿವನೆ ||೩||

nIlakaMdhara shailajaadhava ruMDamaaladharaa ||pa||

shUli pannagadhara kapaali paalisenna haraa ||apa||

chaMchalate dUriTTu nirvaMchaneyali
iMchu biDade kaMchivaradana charite baresu
muMchinaa paramEShThi madhwara paMchabhEda pra-
paMcha j~jaanada bhikShe koDisu paMchaakShariye ||1||

jaDeyoLellavu jalavu kaDu suDugaaDumane
aDavi praaNiya charmaduDuge toTTavane
oDalharaka gajamukhana janakane mRuDaharane
oDane raamana naama jaaDanu piDidu tiruguva ||2||

bommana suta parabommana poutra
kammagOlana tarida kaamadahanE
sumaastranayya prasanveMkaTanomme
summanadali nenevaMte maaDai shivane ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru