ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೃಷ್ಣ ಬಾರೋ ಶ್ರೀಕೃಷ್ಣ ಬಾರೋ | ಶ್ರೀ ಪುರಂದರ ವಿಠಲ | Krishna Baaro Sri Krishna | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಕೃಷ್ಣ ಬಾರೋ ಶ್ರೀಕೃಷ್ಣ ಬಾರೋ| ಕೃಷ್ಣಯ್ಯ ನೀ ಬಾರಯ್ಯ|
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ಕೃಷ್ಣಾ ನೀ ಬಾರಯ್ಯ |ಪ|

ಮನ್ಮಥ ಜನಕನೆ ಬೇಗನೆ ಬಾರೋ| ಕಮಲಾಪತಿ ನೀ ಬಾರೋ|
ಅಮಿತ ಪರಾಕ್ರಮ ಶಂಕರ ಬಾರೋ| ಕಮನೀಯಗಾತ್ರನೆ ಬಾರಯ್ಯ ದೊರೆಯೆ |೧|

ಕುರುಳು ಕೇಶಗಳ ಒಲಿವ ಅಂದ ಭರದ ಕಸ್ತೂರಿಯ ತಿಲಕದ ಚಂದ|
ಶಿರದಿ ಒಪ್ಪುವ ನವಿಲು ಕಣ್ಗಳಿಂದ ತರ ತರದಾಭರಣ ಧರಿಸಿ ನೀ ಬಾರೋ |೨|

ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ| ಮೇಲಾಗಿ ಭಕ್ಷ್ಯಗಳ  ಮುಚ್ಚಿಟ್ಟು ತರುವೆ|
ಜಾಲ ಮಾಡದೆ ಬಾರಯ್ಯ ಮರಿಯೆ| ಬಾಲ ಎನ್ನ ತಂದೆ ಶ್ರೀ ಪುರಂದರ ವಿಠಲ |೩|

kRuShNa bArO SrIkRuShNa bArO| kRuShNayya nI bArayya|
saNNa hejjeyaniTTu gejjenAdagaLiMda kRuShNA nI bArayya |pa|
 
manmatha janakane bEgane bArO| kamalApati nI bArO|
amita parAkrama SaMkara bArO| kamanIyagAtrane bArayya doreye |1|
 
kuruLu kESagaLa oliva aMda Barada kastUriya tilakada caMda|
Siradi oppuva navilu kaNgaLiMda tara taradABaraNa dharisi nI bArO |2|
 
hAlu beNNegaLa kaiyalli koDuve| mElAgi BakShyagaLa  mucciTTu taruve|
jAla mADade bArayya mariye| bAla enna taMde SrI puraMdara viThala |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru