ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಂಥಾ ಪಾವನ ಪಾದವೊ | ಶ್ರೀ ವಾದಿರಾಜರು | Entha Pavana Padavo | Sri Vadirajara kruti


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಎಂಥಾ ಪಾವನ ಪಾದವೊ ಕೃಷ್ಣಯ್ಯ ಇ-
ನ್ನೆಂಥಾ ಚೆಲುವ ಪಾದವೊ ||ಪ||

ಎಂಥಾ ಪಾವನ ಪಾದ ಇಂತು ಜಗದಿ ಕೇಳು
ಪಂಥದೊಳಿದ್ದ ಕುರುಪತಿಯ ಉರುಳಿಸಿದ ||ಅಪ|| 

ಹಲವು ಕಾಲಗಳಿಂದಲ್ಲಿ ಮಾರ್ಗದಿ
ಶಿಲೆ ಶಾಪ ಪಡೆದಿರಲು
ಒಲಿದು ರಜದಿ ಪಾವನಗೈದು ಕರುಣದಿಂದ
ಬಾಲೆಯ ಮಾಡಿ ಸಲಹಿದ ಶ್ರೀಹರಿಯ  ||೧||

ಬಲಿಯ ದಾನವ ಬೇಡಿ ತ್ರೈಲೋಕವ-
ನಳೆದು ಏಕಾಂಘ್ರಿಯಲಿ
ಬೆಳೆದು ಭೇದಿಸಲಾಗ ನಳಿನಜಾಂಡವ ಸೋಕಿ
ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ ||೨||

ಚೆಂಡು ತರುವ ನೆವದಿ ಕಾಳಿಂಗನು-
ದ್ದಂಡ ಮಡುವ ಧುಮುಕಿ
ಚಂಡ ಕಾಳಿಂಗನ ಮಂಡೆಯೊಳು ಪಾದ_
ಪುಂಡರೀಕವನಿಟ್ಟು ತಾಂಡವನಾಡಿದ ||೩||

ಸಂತತ ಸೌಖ್ಯವೀವ ಕಾವೇರಿಯ
ಅಂತರಂಗದಿ ನೆಲೆಸಿ
ಸಂತೋಷದಿಂದ ಅನಂತನ ಮ್ಯಾಲೆ ನಿ-
ಶ್ಚಿಂತೆಯೊಳು ಲಕುಮಿ ಭೂಕಾಂತೇರು ಸೇವಿಪ ||೪||

ಒಲಿದು ಗಯಾಸುರನ ಶಿರದೊಳಿಟ್ಟು
ಹಲವು ಭಕ್ತರ ಪೊರೆದೆ
ನೆಲೆಸಿ ಉಡುಪಿಲಿ ಎನ್ನ ಹೃದಯಕಮಲದಲ್ಲಿ
ತೊಲಗದೆ ಇರುತಿಪ್ಪ ಸುಲಭ ಹಯವದನನ ||೫||

eMthaa paavana paadavo kRuShNayya i-
nneMthaa cheluva paadavo ||pa||

eMthaa paavana paada iMtu jagadi kELu
paMthadoLidda kurupatiya uruLisida ||apa|| 

halavu kaalagaLiMdalli maargadi
shile shaapa paDediralu
olidu rajadi paavanagaidu karuNadiMda
baaleya maaDi salahida shrIhariya  ||1||

baliya daanava bEDi trailOkava-
naLedu EkaaMghriyali
beLedu bhEdisalaaga naLinajaaMDava sOki
cheluva gaMgeya petta jalajaasanaarchita ||2||

cheMDu taruva nevadi kaaLiMganu-
ddaMDa maDuva dhumuki
chaMDa kaaLiMgana maMDeyoLu paada_
puMDarIkavaniTTu taaMDavanaaDida ||3||

saMtata soukhyavIva kaavEriya
aMtaraMgadi nelesi
saMtOShadiMda anaMtana myaale ni-
shchiMteyoLu lakumi bhUkaaMtEru sEvipa ||4||

olidu gayaasurana shiradoLiTTu
halavu bhaktara porede
nelesi uDupili enna hRudayakamaladalli
tolagade irutippa sulabha hayavadanana ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru