ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದುಡು ದುಡು ಓಡಿ ಬಾರೋ | ಶ್ರೀ ಪುರಂದರ ವಿಠಲ | Dudu Dudu Odi Baaro | Sri Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ದುಡು ದುಡು ಓಡಿ ಬಾರೋ ದುಡುಕಗಾರ| ದುಡು ದುಡು ಓಡಿ ಬಾರೋ |ಪ| 
ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ| 
ಪಾಡಿ ಮೈ ಮರೆತು ನಾ ನೋಡಿ ನಲಿಯುವೆನು |ಅಪ|

ನಲಿವೆನು ನಿನ್ನಾ ನೋಡಿ ನಾಲ್ಮೊಗರೆಯ ಲಲನೆಯರ ಮಧ್ಯದಲ್ಲಿ| 
ಕಾಲ್ ಗೆಜ್ಜೆ ಪೆಂಡೆಗಳು ಘಲುಘಲುರೆನುತಲಿ| 
ಸುಲಲಿತಮಹಿಮನೆ ಕೊಳಲ ಕೈಯಲಿ ಪಿಡಿದು |೧|

ಪಿಡಿಯೋದು ತರವಲ್ಲವೋ ಪಾಂಡವ ಪಕ್ಷ| 
ತಡವೇಕೆ ಮಾಡುವಿಯೋ| ಪಿಡಿಯೋದು ತರವಲ್ಲ ಬಿಡಬೇಡ ಬಿಡಬೇಡ| 
ಪಂಡರಿಯಲಿ ನಿಂತ ಪುಂಡಲೀಕ ವರದನೆ |೨|

ಗುರು ತಂದೆ ಪುರಂದರ ವಿಠಲ ರಾಯ 
ವರ ಪೀತಾಂಬರಧರ ನೀರಜದಳನೇತ್ರ ನಿಗಮಾರ ಸುಂದರ|
ನಲಿವೇನು ನಿನ್ನ ನೋಡಿ ಗುರುವಂತರ್ಗತ ಸ್ವಾಮಿ |೩|

duDu duDu ODi bArO duDukagAra| duDu duDu ODi bArO |pa| 
duDu duDu ODi bA nODi muddADuve| 
pADi mai maretu nA nODi naliyuvenu |apa|
 
nalivenu ninnA nODi nAlmogareya lalaneyara madhyadalli| 
kAl gejje peMDegaLu GaluGalurenutali| 
sulalitamahimane koLala kaiyali piDidu |1|
 
piDiyOdu taravallavO pAMDava pakSha| 
taDavEke mADuviyO| piDiyOdu taravalla biDabEDa biDabEDa| 
paMDariyali niMta puMDalIka varadane |2|
 
guru taMde puraMdara viThala rAya 
vara pItAMbaradhara nIrajadaLanEtra nigamAra suMdara|
nalivEnu ninna nODi guruvaMtargata svAmi |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru