ದಾಸನಾಗು ವಿಶೇಷನಾಗು |ಪ|
ಏಸು ಕಾಯಂಗಳ ಕಳೆದು ೮೪ ಲಕ್ಷ ಜೀವ ರಾಶಿಯನ್ನು ದಾಟಿಬಂದ |
ಈ ಶರೀರ ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹೋದಲ್ಲ |ಅಪ|
ಆಶಾ ಕ್ಲೇಶ ದೋಷವೆಂಬೋ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು|
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಈಸು ದೇಶ ತಿರುಗಿದರೆ ಬಾಹೋದೇನು ಅಲ್ಲಿ ಹೋದೇನು |
ದೋಷನಾಶಿ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶೆ ತುಂಗೆ ಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ|
ಏಸು ಬಾರಿ ಮಾಡಿದರು ಫಲವೇನು ಈ ಛಲವೇನು |೧|
ಅಂದಿಗೂ ಇಂದಿಗೂ ಒಮ್ಮೆ ಸಿರಿಕಮಲೇಶನನ್ನ
ಒಂದು ಬಾರಿ ಅರುಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ|
ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಲುಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಪಾಪ ಕಳೆಯಲಿಲ್ಲ|
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು |
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಅಲ್ಲಿ ಬ್ರಹ್ಮಾಂಡ|
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ | ಮು-
ಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ |೨|
ನೂರು ಬಾರಿ ಶರಣು ಮಾಡಿ ನೀರಲ್ ಮುಳುಗಲ್ಲ್ಯಾಕೆ
ಪರನಾರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ
ಸೂರೆಯೊಳು ಸೂರೆ ತುಂಬಿ ಮ್ಯಾಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ|
ಗಾರುಡಿಯ ಮತವ ಬಿಟ್ಟು ನಾದ ಬ್ರಹ್ಮನ ಪಿಡಿದು
ಸಾರೆ ಸೂರಿ ಮುಕ್ತಿ ಕೊಳ್ಳೋ ಶಮನದಿಂದ ಮತ್ತೆ ಸುಮನದಿಂದ|
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನುಂಡು ಸ್ತುತಿಸೋ ಲಂಡ ಜೀವವೇ ಎಲೆ ಭಂಡ ಜೀವವೆ |೩|
dAsanAgu viSEShanAgu |pa|
Esu kAyaMgaLa kaLedu 84 lakSha jIva rASiyannu dATibaMda |
I SarIra tAnalla tannadalla Ase taravalla muMde bAhOdalla |apa|
ASaa klESa dOShaveMbO abdhiyoLu muLugi yamana
pASakkoLagAgade nirdOShiyAgu saMtOShiyAgu|
kASi vAraNAsi kaMci kALahasti rAmESvara
Isu dESa tirugidare bAhOdEnu alli hOdEnu |
dOShanASi kRuShNavENi gaMge gOdAvari Bava
nAShe tuMge Badre yamune vAsadalli upavAsadalli
mIsalAgi miMdu japa tapa hOma nEmagaLa|
Esu bAri mADidaru PalavEnu I CalavEnu |1|
aMdigU iMdigU omme sirikamalESananna
oMdu bAri aruhiMda neneyalilla mana daNiyalilla|
baMdu baMdu BramegoMDu mAyA mOhakke siluki
noMdu beMdu oMdariMda uLiyalilla pApa kaLeyalilla|
saMdEhava mADadiru arivu eMba dIpaviTTu |
iMdu kaMDya dEhadalli piMDAMDa alli brahmAMDa|
iMdu hariya dhyAnavannu mADi vivEkadi | mu-
kuMdaniMda mukti bEDu kaMDya nI nODu kaMDya |2|
nUru bAri SaraNu mADi nIral muLugalyAke
paranAriyara nOTakke guriya mADidi mana sereya mADidi
sUreyoLu sUre tuMbi myAle hUvina hAra
gIru gaMdha akShateya dharisidaMte nI meresidaMte|
gAruDiya matava biTTu nAda brahmana piDidu
sAre sUri mukti koLLo SamanadiMda matte sumanadiMda|
nArAyaNa acyuta anaMtAdi kESavana
sArAmRutavanuMDu stutisO laMDa jIvavE ele BaMDa jIvave |3|