ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಿಡುವೆನೇನಯ್ಯಾ ಹನುಮ | ಶ್ರೀ ಪುರಂದರ ವಿಠಲ | Biduvenenayya Hanuma | Sri Purandara Dasaru


ಸಾಹಿತ್ಯ :    ಶ್ರೀ ಪುರಂದರ ದಾಸರು 
Kruti: Sri Purandara Dasaru


ಬಿಡುವೆನೇನಯ್ಯಾ ಹನುಮ ಬಿಡುವೆನೇನಯ್ಯಾ ||ಪ||

ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಬಾಗಿ
ಜ್ಞಾನ ಭಕ್ತಿ ವೈರಾಗ್ಯವನು ಕೊಡುವೋ ತನಕ ಸುಮ್ಮನೆ ನಾನು ||ಅಪ||

ಹಸ್ತವನ್ನೆತ್ತಿದರೇನು ಹಾರಕಾಲು ಹಾಕಿದರೇನು |
ಭಕ್ತನೂ ನಿನ್ನವನು ನಾನು ಹಸ್ತಿವರದನ ತೋರುವ ತನಕ ||೧||

ಹಲ್ಲು ಮುಡಿಯ ಕಟ್ಟಿದರೇನು ಅಂಜುವೆನೇನು ನಿನಗೆ ನಾನು |
ಪುಲ್ಲನಾಭನಲ್ಲಿ ಮನಸು ನಿಲ್ಲಿಸೋ ತನಕ ಸುಮ್ಮನೆ ನಾನು ||೨||

ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ |
ಕಿಂಕರರ ಕಿಂಕರನು ನಾನು ಪುರಂದರ ವಿಠಲನ ತೋರುವ ತನಕ ||೩||

biDuvenEnayyA hanuma biDuvenEnayyA ||pa||

biDuvenEnO hanuma ninna aDigaLige Sirava bAgi
j~jAna Bakti vairAgyavanu koDuvO tanaka summane nAnu ||apa||
 
hastavannettidarEnu hArakAlu hAkidarEnu |
BaktanU ninnavanu nAnu hastivaradana tOruva tanaka ||1||
 
hallu muDiya kaTTidarEnu aMjuvenEnu ninage nAnu |
pullanABanalli manasu nillisO tanaka summane nAnu ||2||
 
DoMku mOre bAlava tiddi hUMkarisidare aMjuvanalla |
kiMkarara kiMkaranu nAnu puraMdara viThalana tOruva tanaka ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru