Posts

Showing posts from February, 2022

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೀಲಕಂಧರ ಶೈಲಜಾಧವ | ಶ್ರೀ ಪ್ರಸನ್ನ ವೆಂಕಟ ದಾಸರು | Neelakandhara Shaila | Sri Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ನೀಲಕಂಧರ ಶೈಲಜಾಧವ ರುಂಡಮಾಲಧರಾ ||ಪ|| ಶೂಲಿ ಪನ್ನಗಧರ ಕಪಾಲಿ ಪಾಲಿಸೆನ್ನ ಹರಾ ||ಅಪ|| ಚಂಚಲತೆ ದೂರಿಟ್ಟು ನಿರ್ವಂಚನೆಯಲಿ ಇಂಚು ಬಿಡದೆ ಕಂಚಿವರದನ ಚರಿತೆ ಬರೆಸು ಮುಂಚಿನಾ ಪರಮೇಷ್ಠಿ ಮಧ್ವರ ಪಂಚಭೇದ ಪ್ರ- ಪಂಚ ಜ್ಞಾನದ ಭಿಕ್ಷೆ ಕೊಡಿಸು ಪಂಚಾಕ್ಷರಿಯೆ ||೧|| ಜಡೆಯೊಳೆಲ್ಲವು ಜಲವು ಕಡು ಸುಡುಗಾಡುಮನೆ ಅಡವಿ ಪ್ರಾಣಿಯ ಚರ್ಮದುಡುಗೆ ತೊಟ್ಟವನೆ ಒಡಲ್ಹರಕ ಗಜಮುಖನ ಜನಕನೆ ಮೃಡಹರನೆ ಒಡನೆ ರಾಮನ ನಾಮ ಜಾಡನು ಪಿಡಿದು ತಿರುಗುವ ||೨|| ಬೊಮ್ಮನ ಸುತ ಪರಬೊಮ್ಮನ ಪೌತ್ರ ಕಮ್ಮಗೋಲನ ತರಿದ ಕಾಮದಹನೇ ಸುಮಾಸ್ತ್ರನಯ್ಯ ಪ್ರಸನ್ವೆಂಕಟನೊಮ್ಮೆ ಸುಮ್ಮನದಲಿ ನೆನೆವಂತೆ ಮಾಡೈ ಶಿವನೆ ||೩|| nIlakaMdhara shailajaadhava ruMDamaaladharaa ||pa|| shUli pannagadhara kapaali paalisenna haraa ||apa|| chaMchalate dUriTTu nirvaMchaneyali iMchu biDade kaMchivaradana charite baresu muMchinaa paramEShThi madhwara paMchabhEda pra- paMcha j~jaanada bhikShe koDisu paMchaakShariye ||1|| jaDeyoLellavu jalavu kaDu suDugaaDumane aDavi praaNiya charmaduDuge toTTavane oDalharaka gajamukhana janakane mRuDaharane oDane raamana naama jaaDanu piDidu tiruguva ||2|| bom...

ಅನುಗಾಲವೂ ಚಿಂತೆ | ಪುರಂದರ ವಿಠಲ | Anugalavu Chinte | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅನುಗಾಲವೂ ಚಿಂತೆ ಜೀವಕ್ಕೆ ಮನವು | ಶ್ರೀ ರಂಗನೊಳು ಮೆಚ್ಚುವ ತನಕ ||ಪ|| ಸತಿಯಿದ್ದರೂ ಚಿಂತೆ ಸತಿಯಿಲ್ಲದ ಚಿಂತೆ | ಮತಿಹೀನ ಸತಿಯೂ ಆದರೂ ಚಿಂತೆ || ಪೃಥ್ವಿಯೊಳಗೆ ಸತಿ ಕಡು ಚೆಲ್ವೆ ಯಾದರೇ | ಮಿತಿ ಮೇರೆಯಿಲ್ಲದ ಮೋಹದ ಚಿಂತೆ ||೧|| ಮಕ್ಕಳಿಲ್ಲದ  ಚಿಂತೆ ಮಕ್ಕಳಾದರೂ ಚಿಂತೆ | ಒಕ್ಕಾಳು ಹೊನ್ನು ಕೊಡುವ ಚಿಂತೆ | ಅಕ್ಕರೆಯಿಂದಲಿ ತುರುಗಳ ಕಾಯ್ದರು | ಕಕ್ಕುಲತೆಯು ಬಿಟ್ಟು ಹೋಗದ ಚಿಂತೆ ||೨|| ಬಡವನಾದರೂ ಚಿಂತೆ ಬಲ್ಲಿದನಾದರೂ ಚಿಂತೆ ಹಿಡಿ ಹೊನ್ನು ಕೈಯೊಳಾದರೂ ಚಿಂತೆ ಪೊಡವಿಯೊಳಗೆ ನಮ್ಮ ಪುರಂದರ ವಿಠಲನ ಬಿಡದೆ ಧ್ಯಾನಿಸು ಚಿಂತೆ ನಿಶ್ಚಿಂತೆ ||೩|| anugAlavU ciMte jIvakke manavu | SrI raMganoLu meccuva tanaka ||pa||   satiyiddarU ciMte satiyillada ciMte | matihIna satiyU AdarU ciMte || pRuthviyoLage sati kaDu celve yAdarE | miti mEreyillada mOhada ciMte ||1||   makkaLillada  ciMte makkaLaadarU ciMte | okkALu honnu koDuva ciMte | akkareyiMdali turugaLa kAydaru | kakkulateyu biTTu hOgada ciMte ||2||   baDavanAdarU ciMte ballidanaadarU ciMte hiDi honnu kaiyoLaadarU ciMte poDaviyoLa...

ಕುರುಡು ನಾಯಿ ಸಂತೆಗೆ | ಶ್ರೀ ಪುರಂದರ ವಿಠಲ | Kurudu Nayi Santege | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕುರುಡು ನಾಯಿ ಸಂತೆಗೆ ಬಂತಂತೆ | ಅದು ಯಾಕೆ ಬಂತೋ ||ಪ|| ಖಂಡ ಸಕ್ಕರೆ ಹಿತವಿಲ್ಲವಂತೆ ಖಂಡ ಎಲುಬು ಕಡಿದಿತಂತೆ | ಹೆಂಡಿರು ಮಕ್ಕಳ ನೆಚ್ಚಿತಂತೆ ಕೊಂಡು ಹೋಗುವಾಗ ಯಾರಿಲ್ಲವಂತೆ ||೧|| ಭರದಿ ಅಂಗಡಿ ಹೊಕ್ಕಿತಂತೆ ತಿರುಗಿ ದೊಣ್ಣೆಲಿ ಇಕ್ಕಿದರಂತೆ | ಮರೆತರಿನ್ನು ವ್ಯರ್ಥವಂತೆ ನರಕದೊಳಗೆ ಬಿದ್ದಿತಂತೆ ||೨|| ವೇದ ಶಾಸ್ತ್ರಗಳನೋದಿತಂತೆ ಗಾದೆ ಮಾಡಿ ಬಿಟ್ಟಿತಂತೆ |   ಹಾದಿ ತಪ್ಪಿ ನಡೆದು ಯಮನ ಬಾಧೆಗೆ ತಾ ಗುರಿಯಾಯಿತಂತೆ ||೩|| ನಾನಾ ಜನ್ಮವನ್ನೆತ್ತಿತಂತೆ ಮಾನವನಾಗಿ ಹುಟ್ಟಿತಂತೆ | ಕಾನನ ಕಾನನ ತಿರುಗಿತಂತೆ ತನ್ನನು ತಾನೆ ಮರೆಯಿತಂತೆ ||೪|| ಮಂಗನ ಕೈಯ ಮಾಣಿಕ್ಯದಂತೆ ಹಾಂಗೂ ಹೀಂಗೂ ಕಳೆದೀತಂತೆ | ರಂಗ ಪುರಂದರ ವಿಠಲನ ಮರೆತು ಭಂಗ ಬಹಳ ಪಟ್ಟಿತಂತೆ ||೫|| kuruDu nAyi saMtege baMtaMte | adu yAke baMtO ||pa||   KaMDa sakkare hitavillavaMte KaMDa elubu kaDiditaMte | heMDiru makkaLa neccitaMte koMDu hOguvAga yArillavaMte ||1||   Baradi aMgaDi hokkitaMte tirugi doNNeli ikkidaraMte | maretarinnu vyarthavaMte narakadoLage bidditaMte ||2||   vEda SAstragaLanOditaMte gAde mADi biTTitaMte | hAdi tappi naDedu yam...

ಬಾರೋ ಮನಕೆ ಹೇ ಶ್ರೀನಿವಾಸ | ವರದ ಗೋಪಾಲವಿಠಲ | Baaro Manake He Srinivasa | Sri Varada Gopalavithala

Image
ರಚನೆ :  ಶ್ರೀ ವರದ ಗೋಪಾಲ ವಿಠಲ ದಾಸರು  Krithi : Sri Varada Gopala Vithala Dasaru ಬಾರೋ ಮನಕೆ ಹೇ ಶ್ರೀನಿವಾಸ |ಪ| ಪಾಪಿ ನಾನೆಂಬೆಯ ಶ್ರೀಪತಿ ನಿನ್ನ ನಾಮಕೆ  ಕೋಪದ ಪಾಪವ ಮಾಡಲಾಪೆನೆ ಎಂದು || ಅಪ|| ನೀನು ಕುಣಿಸಿದಂತೆ ನಾನು ಕುಣಿವೆನಯ್ಯಾ  ಏನು ಇದಕೆ ಅನುಮಾನವಿಲ್ಲವೋ ದೇವಾ || ೧ || ಸಿರಿಯಿಂದೊಪ್ಪುತ ಪರಿವಾರ ಸಹಿತಾಗಿ  ವರದ ಗೋಪಾಲ ವಿಠಲರೇಯ ಬೇಗ || ೨ || bArO manake hE SrInivAsa |pa| pApi nAneMbeya SrIpati ninna nAmake  kOpada pApava mADalApene eMdu || apa||   nInu kuNisidaMte nAnu kuNivenayyA  Enu idake anumAnavillavO dEvA || 1 ||   siriyiMdopputa parivAra sahitAgi  varada gOpAla viThalarEya bEga || 2 ||

ಬಿಟ್ಟು ಬನ್ನಿರೋ ಸಂಸಾರದ್ಹಂಬಲ | ಹಯವದನ | Bittu Banniro Samsara | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಿಟ್ಟು ಬನ್ನಿರೋ ಸಂಸಾರದ್ಹಂಬಲ | ಸೃಷ್ಟಿಪತಿಯ ಸೇರಿ ನೀವು ಸುಖಿಸಬನ್ನಿರೋ ||ಪ|| ಹೆಂಡಿರು ಮಕ್ಕಳು ಎಂಬೋ ಹಂಬಲ ಬಿಡಿರೋ || ಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯನು ||೧|| ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೋ || ನಷ್ಟ ಮಾಡಿ ಇವನ ಬದುಕು ಎಲ್ಲ ತಿಂಬರು ||೨|| ನಡು ಬೀದಿಯಲಿ ಇವನ ಎಳೆದು ಸೆಳೆವರೋ || ಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ ||೩|| ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೋ ಚಂಡ ಯಮನ ದೂತರು ಬಂದು ಎಳೆದು ಒಯ್ವರೋ ||೪|| ಮುಟ್ಟಿ ಭಜಿಸಿರೋ ಹಯವದನ ನಂಘ್ರಿಯ | ನೆಟ್ಟನೆ ಮುಕ್ತಿ ಮಾರ್ಗ ತೋರಿಕೊಡುವನೋ ||೫|| biTTu bannirO saMsArad~haMbala | sRuShTipatiya sEri nIvu suKisabannirO ||pa||   heMDiru makkaLu eMbO haMbala biDirO || koMDavaralla koDuvaralla muMdina gatiyanu ||1||   eShTu mADi gaLisi taMdaru sAladeMbarO || naShTa mADi ivana baduku ella tiMbaru ||2||   naDu bIdiyali ivana eLedu seLevarO || kaDegaNNu kuDihubbu nOTadiMdali ||3||   uMDu uTTu guMDinaMte maneyaliruvarO caMDa yamana dUtaru baMdu eLedu oyvarO ||4|| muTTi BajisirO hayavadana naMGriya | neTTane mukti mArga tOrikoDuv...

ರಾಯರೇ ಗತಿಯು ನಮಗೆ | ಶ್ರೀ ಶ್ಯಾಮಸುಂದರವಿಠಲ | Rayare Gatiyu Namage | Sri Shyamasundara Vithala

Image
ಸಾಹಿತ್ಯ : ಶ್ರೀ ಶ್ಯಾಮಸುಂದರವಿಠಲ ದಾಸರು  Kruti: Sri Shyamasundaravittala Dasaru ರಾಯರೇ ಗತಿಯು ನಮಗೆ  ವಾಯುಸುಮತೋದ್ಧಾರ ಶ್ರೀ ರಾಘವೇಂದ್ರಗುರು ||ಪ|| ಶುಕಪಿಕಮೊದಲಾದ ವಿಕುಲಕ್ಕೆ ಮಧುರಫಲ ಯುಕುತಮಾಗಿಹ ಚೂತಸುಕುಜ ಗತಿಯು ಮುಕುತಿಗೆ ಸುಜ್ಞಾನ ಭಕುತಿ ವಿರಕುತಿ ಗತಿಯು ಅಕಳಂಕಶ್ರೀಮಂತ್ರಮಂದಿರದಿ ನೆಲೆಸಿಪ್ಪ  ||೧|| ಋಷಿಗಳಿಗೆ ಪ್ರಣವಗತಿ ಝಷಗಳಿಗೆ ಜಲವೆ ಗತಿ ಸಸಿಗಳಭಿವೃದ್ಧಿಗೆ ಶಶಿರವಿಯೆ ಗತಿಯು ಶಿಶುಗಳಿಗೆ ಜನನಿ ಗತಿ ಪಶುಗಳಿಗೆ ತೃಣವೆ ಗತಿ ಅಸಮಮಹಿಮೆಯೊಳ್ ಮೆರೆವ ಮಿಸುನಿಶಯ್ಯಜರಾದ ||೨|| ಕಾಮಿನಿಮಣಿಯರಿಗೆ ಕೈಪಿಡಿದ ಕಾಂತಗತಿ ಭೂಮಿಬುಧರಿಗೆ ಮಧ್ವಶಾಸ್ತ್ರಗತಿಯು ತಾಮರಸಸಖಸುತನ ಧಾಮ ಭಯಪೋಪುದಕೆ ಶ್ಯಾಮಸುಂದರವಿಠಲಸ್ವಾಮಿ ನಾಮವೆ ಗತಿಯು ||೩|| raayarE gatiyu namage  vaayusumatOddhaara SrI raaGavEMdraguru ||pa|| shukapikamodalaada vikulakke madhuraphala yukutamaagiha cUtasukuja gatiyu mukutige suj~jaana bhakuti virakuti gatiyu akaLaMkaSrImaMtramaMdiradi nelesippa  ||1|| RuShigaLige praNavagati JaShagaLige jalave gati sasigaLabhivRuddhige SaSiraviye gatiyu shiSugaLige janani gati paSugaLige tRuNave gati asamamahimeyoL mereva misuniSayyajaraada ||2|| kaaminimaNiyarige kaipiDida k...

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕಂಕಣಾಕಾರವನ್ನು ಬರೆದು ಅದರ ಮಧ್ಯ | ಓಂಕಾರ ಎರಡು ಎಡ-ಬಲದಿ ರಚಿಸಿ | ಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ | ನಾಂಕನಯ್ಯನ ಪೀಠಸ್ಥಳವಿದೆಂದು | ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆ ಎರಡಾ | ಲಂಕಾರವನೆ ಮಾಡಿ ಅದರ ಬಳಿಯ | ಕಂಕಣಾಕಾರವನ್ನು ಒಳಗೆ ಮಾಡಿಟ್ಟುಕೊಂಡು | ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ | ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ | ಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ | ಪಂಕಜ ಪಾಣಿಯು ಶ್ರೀ - ಭೂ - ದುರ್ಗಾನಾಮಕಳು | ಪಂಕಜಾಕ್ಷನ ರೂಪ ಮೂರು ಉಂಟು | ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು | ಸಂಕೋಚವಾಗಿ ಇದೆ ದ್ವಿತೀಯ ವಲಯ | ಪಂಕಜ ಮಿತ್ರ ಸೋಮ ಅಗ್ನಿ ಜನರ ನಾಗ ಕಂಕಣ ಅನಲ ವರುಣ ದಿಕ್ಕಿಗೆ ರಚಿಸಿ | ಕಿಂಕರ ಜನಪಾಲ ವಿಜಯ ವಿಠ್ಠಲ ಅಕ | ಳಂಕನ ಭಜಿಸುವುದು ಹೃದಯದಲಿ ತಿಳಿದು ||೧|| ಮಟ್ಟ ತಾಳ ಕರಿ ಅಜ ರಥ ವೀಥಿ ಎಂದೆಂಬುವ ಮೂರು | ಬರೆದು ಇದಕೆ ಹನ್ನೆರಡು ರಾಶಿಗಳು ವಿ- | ಸ್ತರವಾಗಿ ಉಂಟು ಎರಡೆರಡೊಂದು ಕಡೆ | ಅರಿವದು ಸ್ಥಿಮಿತ ಸಮಗತಿ ತ್ವರಗತಿ ಸೂರ್ಯನ್ನ | ಎರಡು ನಾಲಕು ಕೋಣೆ ವಿರಚಿಸಿ ಅದರ ಮೇಲೆ | ಮರಳೆ ಮಧು - ಮಾಧವಾ ಕರೆಸುವ ಋತು ಒಂದು | ಬರೆದು ಪ್ರಣವ ವಿವರ ಹೃದಯದಲ್ಲಿ ನಮ | ಸ್ಕರಿಸು ಜ್ಞಾನಾತ್ಮನೆಂದು | ಧರಿಸು ಈ ಪರಿ ಮೂರು ಎರಡು ಕೋಣಿಯ ಮಧ್ಯ | ತರುವಾಯ ಮಾಸ - ಋತು ವರುಷ ತಾರಕ ಸಂ | ಸ್ಮರಿಸಿ ಕ್ರಮ ವರ್...

ಭಾರತಿ ದೇವಿಯ ನೆನೆ ನೆನೆ | ಶ್ರೀ ಪುರಂದರ ದಾಸರು | Bharati Deviya Nene Nene |Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಭಾರತಿ ದೇವಿಯ ನೆನೆ ನೆನೆ | ನಿರುತ ಭಕುತಿಗಿದು ಮನೆ ಮನೆ ||ಪ|| ಮಾರುತನರ್ಧಾಂಗಿ ಸುಚರಿತ್ರ ಕೋಮಲಾಂಗಿ  ಸಾರಸಾಕ್ಷಿ ಕೃಪಾಂಗಿ ಅಪಾಂಗಿ ||೧|| ಕಿಂಕಿಣಿ ಕಿಣಿ ಪಾದ ಪಂಕಜ ನೂಪುರ | ಕಂಕಣ ಕುಂಡಲ ಅಲಂಕೃತ ದೇಹ ||೨|| ಶಂಕರ ಸುರವರ ವಂದಿತ ಚರಣೆ | ಕಿಂಕರಿ ಪುರಂದರ ವಿಠಲನ ಕರುಣೆ ||೩|| BArati dEviya nene nene | niruta Bakutigidu mane mane ||pa||   mArutanardhAMgi sucaritra kOmalAMgi  sArasAkShi kRupAMgi apAMgi ||1||   kiMkiNi kiNi pAda paMkaja nUpura | kaMkaNa kuMDala alaMkRuta dEha ||2||   SaMkara suravara vaMdita caraNe | kiMkari puraMdara viThalana karuNe ||3||

ಕೃಷ್ಣ ಬಾರೋ ಶ್ರೀಕೃಷ್ಣ ಬಾರೋ | ಶ್ರೀ ಪುರಂದರ ವಿಠಲ | Krishna Baaro Sri Krishna | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕೃಷ್ಣ ಬಾರೋ ಶ್ರೀಕೃಷ್ಣ ಬಾರೋ| ಕೃಷ್ಣಯ್ಯ ನೀ ಬಾರಯ್ಯ| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ಕೃಷ್ಣಾ ನೀ ಬಾರಯ್ಯ |ಪ| ಮನ್ಮಥ ಜನಕನೆ ಬೇಗನೆ ಬಾರೋ| ಕಮಲಾಪತಿ ನೀ ಬಾರೋ| ಅಮಿತ ಪರಾಕ್ರಮ ಶಂಕರ ಬಾರೋ| ಕಮನೀಯಗಾತ್ರನೆ ಬಾರಯ್ಯ ದೊರೆಯೆ |೧| ಕುರುಳು ಕೇಶಗಳ ಒಲಿವ ಅಂದ ಭರದ ಕಸ್ತೂರಿಯ ತಿಲಕದ ಚಂದ| ಶಿರದಿ ಒಪ್ಪುವ ನವಿಲು ಕಣ್ಗಳಿಂದ ತರ ತರದಾಭರಣ ಧರಿಸಿ ನೀ ಬಾರೋ |೨| ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ| ಮೇಲಾಗಿ ಭಕ್ಷ್ಯಗಳ  ಮುಚ್ಚಿಟ್ಟು ತರುವೆ| ಜಾಲ ಮಾಡದೆ ಬಾರಯ್ಯ ಮರಿಯೆ| ಬಾಲ ಎನ್ನ ತಂದೆ ಶ್ರೀ ಪುರಂದರ ವಿಠಲ |೩| kRuShNa bArO SrIkRuShNa bArO| kRuShNayya nI bArayya| saNNa hejjeyaniTTu gejjenAdagaLiMda kRuShNA nI bArayya |pa|   manmatha janakane bEgane bArO| kamalApati nI bArO| amita parAkrama SaMkara bArO| kamanIyagAtrane bArayya doreye |1|   kuruLu kESagaLa oliva aMda Barada kastUriya tilakada caMda| Siradi oppuva navilu kaNgaLiMda tara taradABaraNa dharisi nI bArO |2|   hAlu beNNegaLa kaiyalli koDuve| mElAgi BakShyagaLa  mucciTTu taruve| jAla mADade bArayya mariye|...

ಎಂಥಾ ಪಾವನ ಪಾದವೊ | ಶ್ರೀ ವಾದಿರಾಜರು | Entha Pavana Padavo | Sri Vadirajara kruti

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎಂಥಾ ಪಾವನ ಪಾದವೊ ಕೃಷ್ಣಯ್ಯ ಇ- ನ್ನೆಂಥಾ ಚೆಲುವ ಪಾದವೊ ||ಪ|| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿದ್ದ ಕುರುಪತಿಯ ಉರುಳಿಸಿದ ||ಅಪ||  ಹಲವು ಕಾಲಗಳಿಂದಲ್ಲಿ ಮಾರ್ಗದಿ ಶಿಲೆ ಶಾಪ ಪಡೆದಿರಲು ಒಲಿದು ರಜದಿ ಪಾವನಗೈದು ಕರುಣದಿಂದ ಬಾಲೆಯ ಮಾಡಿ ಸಲಹಿದ ಶ್ರೀಹರಿಯ  ||೧|| ಬಲಿಯ ದಾನವ ಬೇಡಿ ತ್ರೈಲೋಕವ- ನಳೆದು ಏಕಾಂಘ್ರಿಯಲಿ ಬೆಳೆದು ಭೇದಿಸಲಾಗ ನಳಿನಜಾಂಡವ ಸೋಕಿ ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ ||೨|| ಚೆಂಡು ತರುವ ನೆವದಿ ಕಾಳಿಂಗನು- ದ್ದಂಡ ಮಡುವ ಧುಮುಕಿ ಚಂಡ ಕಾಳಿಂಗನ ಮಂಡೆಯೊಳು ಪಾದ_ ಪುಂಡರೀಕವನಿಟ್ಟು ತಾಂಡವನಾಡಿದ ||೩|| ಸಂತತ ಸೌಖ್ಯವೀವ ಕಾವೇರಿಯ ಅಂತರಂಗದಿ ನೆಲೆಸಿ ಸಂತೋಷದಿಂದ ಅನಂತನ ಮ್ಯಾಲೆ ನಿ- ಶ್ಚಿಂತೆಯೊಳು ಲಕುಮಿ ಭೂಕಾಂತೇರು ಸೇವಿಪ ||೪|| ಒಲಿದು ಗಯಾಸುರನ ಶಿರದೊಳಿಟ್ಟು ಹಲವು ಭಕ್ತರ ಪೊರೆದೆ ನೆಲೆಸಿ ಉಡುಪಿಲಿ ಎನ್ನ ಹೃದಯಕಮಲದಲ್ಲಿ ತೊಲಗದೆ ಇರುತಿಪ್ಪ ಸುಲಭ ಹಯವದನನ ||೫|| eMthaa paavana paadavo kRuShNayya i- nneMthaa cheluva paadavo ||pa|| eMthaa paavana paada iMtu jagadi kELu paMthadoLidda kurupatiya uruLisida ||apa||  halavu kaalagaLiMdalli maargadi shile shaapa paDediralu olidu rajadi paavanagaidu karuNadiMda baaleya maaDi sala...

ಏಳು ಹನುಮಂತ | ಶ್ರೀ ಪುರಂದರ ವಿಠಲ | Elu Hanumantha | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಏಳು ಹನುಮಂತ ಎಷ್ಟು ನಿದ್ದೆ ||ಪ|| ಮಾತನಾಡಲು ಬೇಕು ಮುದ್ರಿಕೆ ತರಬೇಕು | ಹರಿ ಕುಶಲ ಜಾನಕಿಗೆ ತಿಳಿಸಬೇಕು || ವನವ ಕೀಳಲು ಬೇಕು ಚೂಡಾಮಣಿ ತರಬೇಕು | ಹರಿ ಹರುಷದಿಂದಲಿ ಖ್ಯಾತಿ ಪಡೆಯಲು ಬೇಕು ||೧|| ಶರಧಿ ಲಂಘಿಸಬೇಕು ರಘುಪತಿಯ ಕೂಡಿರಬೇಕು | ದುರುಳ ಇಂದ್ರಾಜಿತ್ತನ ಗೆಲ್ಲಬೇಕು || ಅನುಜ ಲಕ್ಷ್ಮಣಗೆ ಸಂಜೀವನ ತಂದು ಕೊಡಲುಬೇಕು | ಹನುಮಂತ ಬಲವಂತ ಎಂದೆನಿಸಬೇಕು ||೨|| ದುಷ್ಟರಕ್ಕಸರನ್ನೆಲ್ಲ ಕುಟ್ಟಿ ಕೆಡಹಲು ಬೇಕು | ಹತ್ತು ತಲೆ ರಾವಣನ ಬಲ ಇಳಿಸಬೇಕು || ಭಕ್ತ ವಿಭೀಷಣಗೆ ಪಟ್ಟಗಟ್ಟಲು ಬೇಕು | ಲಕ್ಷ್ಮೀ ಸಹಿತಾ ಅಯೋಧ್ಯಗೆ ತೆರಳಬೇಕು ||೩|| ಕುರುಕುಲದಲಿ ಕುಂತಿ ಸುತನಾಗಿ ಜನಿಸಬೇಕು | ರಣದಲ್ಲಿ ಕೌರವರ ಗೆಲ್ಲಬೇಕು || ವನದೊಳಗೆ ಘನ ತೃಷೆಯ ಘಾತಿ ಪಡಿಸಲು ಬೇಕು | ಮಡದಿಗೆ ಸೌಗಂಧವ ತರಲುಬೇಕು ||೪|| ಯತಿಯಾಗಿ ಬರಬೇಕು ಕುಮತ ಖಂಡಿಸಬೇಕು | ಅನೃತ ವಾದಿಗಳ ಗೆಲಿಯಬೇಕು || ಮಧ್ವ ಶಾಸ್ತ್ರವ ಲೋಕಕ್ಕೆಲ್ಲಾ ಬೋಧಿಸಲು ಬೇಕು ಮುದ್ದು ಪುರಂದರ ವಿಠಲ ಎಂದೆನಿಸಬೇಕು ||೫|| ELu hanumaMta eShTu nidde ||pa||   mAtanADalu bEku mudrike tarabEku | hari kuSala jAnakige tiLisabEku || vanava kILalu bEku cUDAmaNi tarabEku | hari haruShadiMdali KyAti paDeyalu bEku ||1||   Saradh...

ಕೃಷ್ಣ ಬೃಂದಾವನದಿ | ಶ್ರೀ ಪುರಂದರ ವಿಠಲ | Krishna Brundavanadi | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕೃಷ್ಣ ಬೃಂದಾವನದಿ ಕೊಳಲೂದಲಿಲ್ಲವೇ ||ಪ|| ಅಂದು ಗೋಪಿಯರನ್ನು ಕರೆಯಲಿಲ್ಲವೇ  ಇಂದೇಕೆ ಮರೆತೆಯೋ ಮಾಧವಾ| ನೀ ಬಂದು ಕಾಯೋ ಎನ್ನ ಕೇಶವಾ ||ಅಪ|| ನೀರೊಳಾಟವ ನೀನಾಡಲಿಲ್ಲವೇ| ನೀ ಭಾರವ ಬೆನ್ನೊಳೆತ್ತಲಿಲ್ಲವೇ| ಕೋರೆಯ ಮಸೆಯುತ್ತ ತಿರುಗಲಿಲ್ಲವೇ| ನೀ ಪೋರನ ಮಾತಿಗೆ ಬರಲಿಲ್ಲವೇ ||೧|| ಪೊಡವಿ ದಾನವ ನೀ ಬೇಡಲಿಲ್ಲವೇ| ನೀ ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ| ಮಡದಿಯ ಕಟ್ಟಿಕೊಂಡು ಪೋಗಲಿಲ್ಲವೇ| ನೀ ಕಡಗೋಲು ಕೈಯಲ್ಲಿ ಪಿಡಿಯಲಿಲ್ಲವೇ ||೨|| ಬೆತ್ತಲೆ ಬೌದ್ಧನಾಗಿ ನಿಲ್ಲಲಿಲ್ಲವೇ| ನೀ ಉತ್ತಮ ತೇಜಿಯ ನೇರಲಿಲ್ಲವೇ| ಹತ್ತಾವತಾರವ ತೋರಲಿಲ್ಲವೇ| ನೀ ಮತ್ತೆ ಶ್ರೀ ಪುರಂದರ ವಿಠಲನಲ್ಲವೇ ||೩|| kRuShNa bRuMdAvanadi koLalUdalillavE ||pa|| aMdu gOpiyarannu kareyalillavE  iMdEke mareteyO mAdhavA| nI baMdu kAyO enna kESavA ||apa|| nIroLATava nInADalillavE| nI BArava bennoLettalillavE| kOreya maseyutta tirugalillavE| nI pOrana mAtige baralillavE ||1|| poDavi dAnava nI bEDalillavE| nI baDava brAhmaNanAgi tirugalillavE| maDadiya kaTTikoMDu pOgalillavE| nI kaDagOlu kaiyalli piDiyalillavE ||2|| bettale bauddhanAgi nillali...

ಬಾರೋ ಗುರು ರಾಘವೇಂದ್ರ | ಶ್ರೀ ಗುರು ಶ್ರೀಶವಿಠಲ ದಾಸರು | Baaro Guru Raghavendra | Sri Guru Shrisha Vithala

Image
ಸಾಹಿತ್ಯ : ಶ್ರೀ ಗುರು ಶ್ರೀಶವಿಠಲ ದಾಸರು Kruti:Sri Guru Shrisha Vithala Dasaru ಬಾರೋ ಗುರು ರಾಘವೇಂದ್ರ | ಬಾರಯ್ಯ ಬಾಬಾ ||ಪ|| ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ  ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು ||ಅಪ|| ಸೇವಕನೆಲೋ ನಾನು ಧಾವಿಸಿ ಬಂದೆನೋ | ಸೇವೆ ನೀಡೆಲೋ ನೀನು || ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ ಭಾವವೀಯುತ | ಠಾವುಗಾಣಿಸಿ ಪೊರೆಯೋ ಜಗದೊಳು ಪಾವನಾತ್ಮಕ ಕಾವ ಕರುಣಿ ||೧|| ಕರೆದರೆ ಬರುವಿಯೆಂದು ಸಾರುವುದು ಡಂಗುರ ತ್ವರಿತದಿ ಒದಗೋ ಬಂದು || ಜರಿಯ ಬೇಡವೋ ಬರಿದೇ ನಿನ್ನಯ ವಿರಹ ತಾಳದೆ ಮನದಿ ಕೊರಗುವೆ | ಹರಿಯ ಸ್ಮರಣೆಯ ನಿರುತದಲಿಯನಗ್ಹರುಷದಲಿ ನೀನಿರುತ ಕೊಡುತಲಿ ||೨|| ನರಹರಿ ಪ್ರಿಯನೇ ಬಾ ಗುರು ಶ್ರೀಶವಿಠಲನ ಕರುಣ ಪಾತ್ರನೆ ಬೇಗ ಬಾ || ಗುರುವರನೆ ಪರಿಪೋಷಿಸೆನ್ನನು ಮರೆಯದಲೆ ತವ ಚರಣ | ಕೋಟೆಯಲಿರಿಸಿ ಚರಣಾಂಬುಜವ ತೋರುತ ತ್ವರಿತದಲಿ ಓಡೋಡಿ ಬಾಬಾ ||೩||   bArO guru rAGavEMdra | bArayya bAbA ||pa||   hiMdu muMdillenage nI gati eMdu naMbide ninna pAdava  baMdhanava biDisenna karapiDi naMdakaMda mukuMda baMdhu ||apa||   sEvakanelO nAnu dhAvisi baMdenO | sEve nIDelO nInu || sEvakana sEveyanu sEvisi sEvya sEvaka BAvavIyuta | ThAvugANisi poreyO jagadoLu pA...

ನಮ್ಮಮ್ಮ ಶಾರದೆ | ಶ್ರೀ ಕನಕದಾಸರು | Nammamma Sharade | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ||ಪ|| ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೈಯ ಗಣನಾಥನೆ ||ಅಪ|| ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ | ಕೋರೆದಾಡೆಯನ್ಯಾರಮ್ಮ || ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ | ಧೀರ ತಾ ಗಣನಾಥನೆ ಅಮ್ಮಯ್ಯ ||೧|| ಉಟ್ಟ ದಟ್ಟಿಯು ಬಿಗಿದುಟ್ಟ ಚಲ್ಲಣದ | ದಿಟ್ಟ ತಾನಿವನ್ಯಾರಮ್ಮ || ಪಟ್ಟದ ರಾಣಿ ಪಾರ್ವತಿಯ ಕುಮಾರನು | ಹೊಟ್ಟೆಯ ಗಣನಾಥನೆ ಅಮ್ಮಯ್ಯ ||೨|| ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ | ಭಾಷಿಗನಿವನ್ಯಾರಮ್ಮ || ಲೇಸಾಗಿ ಜನರ ಸಲಹುವ | ಕಾಗಿನೆಲೆಯಾದಿ ಕೇಶವನ ದಾಸ ಕಣೆ ಅಮ್ಮಯ್ಯ ||೩|| nammamma SArade umA mahESvari nimmoLagihanyAramma ||pa|| kammagOlana vairi sutanAda soMDila hemmaiya gaNanAthane ||apa||   mOre kappina BAva moradagalada kivi | kOredADeyanyAramma || mUru kaNNana suta muridiTTa caMdrana | dhIra tA gaNanAthane ammayya ||1||   uTTa daTTiyu bigiduTTa callaNada | diTTa tAnivanyAramma || paTTada rANi pArvatiya kumAranu | hoTTeya gaNanAthane ammayya ||2||   rASi vidyeya balla ramaNi haMbalanolla | BAShiganivanyAramma || lEsAgi janara salahuva | kAgineleyAdi ...

ದಾಸನಾಗು ವಿಶೇಷನಾಗು | ಶ್ರೀ ಕನಕದಾಸರು | Dasanagu Visheshanagu | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ದಾಸನಾಗು ವಿಶೇಷನಾಗು |ಪ| ಏಸು ಕಾಯಂಗಳ ಕಳೆದು ೮೪ ಲಕ್ಷ ಜೀವ ರಾಶಿಯನ್ನು ದಾಟಿಬಂದ |  ಈ ಶರೀರ ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹೋದಲ್ಲ |ಅಪ| ಆಶಾ ಕ್ಲೇಶ ದೋಷವೆಂಬೋ ಅಬ್ಧಿಯೊಳು ಮುಳುಗಿ ಯಮನ  ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು| ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ  ಈಸು ದೇಶ ತಿರುಗಿದರೆ ಬಾಹೋದೇನು ಅಲ್ಲಿ ಹೋದೇನು |  ದೋಷನಾಶಿ ಕೃಷ್ಣವೇಣಿ ಗಂಗೆ ಗೋದಾವರಿ ಭವ  ನಾಶೆ ತುಂಗೆ ಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ   ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ|  ಏಸು ಬಾರಿ ಮಾಡಿದರು ಫಲವೇನು ಈ ಛಲವೇನು |೧| ಅಂದಿಗೂ ಇಂದಿಗೂ ಒಮ್ಮೆ ಸಿರಿಕಮಲೇಶನನ್ನ  ಒಂದು ಬಾರಿ ಅರುಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ|  ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಲುಕಿ  ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಪಾಪ ಕಳೆಯಲಿಲ್ಲ| ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು |  ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಅಲ್ಲಿ ಬ್ರಹ್ಮಾಂಡ|  ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ | ಮು- ಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ |೨| ನೂರು ಬಾರಿ ಶರಣು ಮಾಡಿ ನೀರಲ್ ಮುಳುಗಲ್ಲ್ಯಾಕೆ  ಪರನಾರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ ಸೂರೆಯೊಳು ಸೂರೆ ತುಂಬಿ ಮ್ಯಾಲೆ...

ವಾದಿರಾಜ ಧೀರ | ಶ್ರೀ ವಿಜಯ ವಿಠಲ | Vadiraja Dheera | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ವಾದಿರಾಜ ಧೀರ  ವಾದದಲ್ಲಿ ಶೂರ ||ಪ|| ಮೋದತೀರ್ಥರ ಮತವ ಹೊಂದಿದ ಸಾಧುಗಳನು ಉದ್ಧಾರ ಮಾಡುವ ||೧|| ಕಡಲೆ ಹೂರಣವ ಮಾಡಿ ಕಡಲಶಯನನಿಗೆ  ಬಿಡದೆ ಅವನ ಪಾದ ಅಡಿಗಡಿಗಾರಾಧಿಸುವ ||೨|| ರಂಗ ಸರ್ವೋತ್ತಮನು ಮಂಗಳ ಮಹಿಮನೆಂದು  ಶೃಂಗೇರಿ ಮಠದಲ್ಲಿ ಧ್ವಜವ ತಾ ಸ್ಥಾಪಿಸಿದ ||೩|| ವಾದಿಗಜ ಪಂಕಜನೆನಿಸಿ ಮೇದಿನಿಯೊಳಗೆ ಮೆರೆದ ಮಾಧವನ ಪ್ರಿಯದಾಸ ಸದಾನಂದದಲಿರುವ ||೪|| ಅಜನಪದಕೆ ಅರ್ಹ ಋಜುಗಣ ಜೀವೋತ್ತಮನು   ನಿಜಪದವಿಗೆ ಬರುವ ವಿಜಯ ವಿಠಲನ ದಾಸ ||೫|| vaadiraaja dhIra  vaadadalli shUra ||pa|| mOdatIrthara matava hoMdida saadhugaLanu uddhaara maaDuva ||1|| kaDale hUraNava mADi kaDalashayananige  biDade avana paada aDigaDigaaraadhisuva ||2|| raMga sarvOttamanu maMgaLa mahimaneMdu  shRuMgEri maThadalli dhvajava taa sthaapisida ||3|| vaadigaja paMkajanenisi mEdiniyoLage mereda maadhavana priyadaasa sadaanaMdadaliruva ||4|| ajanapadake arha RujugaNa jIvOttamanu   nijapadavige baruva vijaya viThalana daasa ||5||

ವಾದಿರಾಜನೆ ನಿನ್ನ | ಶ್ರೀ ವೇಣುಗೋಪಾಲ ವಿಠಲ ದಾಸರು | Vadirajane Ninna | Sri Venugopala Vithala

Image
ಸಾಹಿತ್ಯ : ಶ್ರೀ ವೇಣುಗೋಪಾಲ ವಿಠಲ ದಾಸರು  Kruti: Sri Venugopala Vithala Dasaru ವಾದಿರಾಜನೆ ನಿನ್ನ ಪಾದಕ್ಕೆರಗಿ ನಾ  ಮೋದದಿಂ ಬೇಡುವೆ ಮಾಧವನ ತೋರೋ ||ಪ|| ಸಕಲ ವೇದ ಪುರಾಣ ಶಾಸ್ತ್ರಗಳ  ಪ್ರಕಟಿಸಿದಿ ಕನ್ನಡದಿ ಪ್ರೇಮದಿಂದ |  ನಿಖಿಳ ಜನರು ತಾವಾನಕದುಂಧುಭಿಸುತನ  ಭಕುತಿಯ ಪಡೆದು ಮೇಣ್ಮುಕುತಿಯೈದಲಿಯೆಂದು ||೧|| ಗಣನೆಯಿಲ್ಲದೆ ಕೀರ್ತನೆ ಸುಳಾದಿಯನ್ನು  ಮನವೊಲಿದು ಮಾಡಿದ್ದು ಜನರು ಪಠಿಸಿ |  ವನಜನಾಭನ ಕರುಣವನು ಪಡೆದು ತಾ-  ವನುಭವಿಸಲಾನಂದವನೆನುತಲಿ ||೨|| ನಿನ್ನ ನೆನೆಯೆ ಧನ್ಯ ನಿನ್ನ ಪಾಡಲು ಮಾನ್ಯ  ನಿನ್ನ ಕೊಂಡಾಡಲು ಪಾಪ ಶೂನ್ಯ |  ನಿನ್ನವನೆನೆ ವೇಣುಗೋಪಾಲ ವಿಠಲ  ಮನ್ನಿಸಿ ಸದ್ಗತಿಯ ಪಾಲಿಪ ಮುದದಿ ||೩|| vaadiraajane ninna paadakkeragi naa  mOdadiM bEDuve maadhavana tOrO ||pa|| sakala vEda puraaNa shaastragaLa  prakaTisidi kannaDadi prEmadiMda |  niKiLa janaru taavaanakaduMdhubhisutana  bhakutiya paDedu mENmukutiyaidaliyeMdu ||1|| gaNaneyillade kIrtane suLaadiyannu  manavolidu maaDiddu janaru paThisi |  vanajanaabhana karuNavanu paDedu taa-  vanubhavisalAnaMdavanenutali ||2|| ninna neneye dhanya ninn...

ಬಿಡುವೆನೇನಯ್ಯಾ ಹನುಮ | ಶ್ರೀ ಪುರಂದರ ವಿಠಲ | Biduvenenayya Hanuma | Sri Purandara Dasaru

Image
ಸಾಹಿತ್ಯ :    ಶ್ರೀ ಪುರಂದರ ದಾಸರು  Kruti: Sri Purandara Dasaru ಬಿಡುವೆನೇನಯ್ಯಾ ಹನುಮ ಬಿಡುವೆನೇನಯ್ಯಾ ||ಪ|| ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಬಾಗಿ ಜ್ಞಾನ ಭಕ್ತಿ ವೈರಾಗ್ಯವನು ಕೊಡುವೋ ತನಕ ಸುಮ್ಮನೆ ನಾನು ||ಅಪ|| ಹಸ್ತವನ್ನೆತ್ತಿದರೇನು ಹಾರಕಾಲು ಹಾಕಿದರೇನು | ಭಕ್ತನೂ ನಿನ್ನವನು ನಾನು ಹಸ್ತಿವರದನ ತೋರುವ ತನಕ ||೧|| ಹಲ್ಲು ಮುಡಿಯ ಕಟ್ಟಿದರೇನು ಅಂಜುವೆನೇನು ನಿನಗೆ ನಾನು | ಪುಲ್ಲನಾಭನಲ್ಲಿ ಮನಸು ನಿಲ್ಲಿಸೋ ತನಕ ಸುಮ್ಮನೆ ನಾನು ||೨|| ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ | ಕಿಂಕರರ ಕಿಂಕರನು ನಾನು ಪುರಂದರ ವಿಠಲನ ತೋರುವ ತನಕ ||೩|| biDuvenEnayyA hanuma biDuvenEnayyA ||pa|| biDuvenEnO hanuma ninna aDigaLige Sirava bAgi j~jAna Bakti vairAgyavanu koDuvO tanaka summane nAnu ||apa||   hastavannettidarEnu hArakAlu hAkidarEnu | BaktanU ninnavanu nAnu hastivaradana tOruva tanaka ||1||   hallu muDiya kaTTidarEnu aMjuvenEnu ninage nAnu | pullanABanalli manasu nillisO tanaka summane nAnu ||2||   DoMku mOre bAlava tiddi hUMkarisidare aMjuvanalla | kiMkarara kiMkaranu nAnu puraMdara viThalana tOruva tanaka ||3||

ರೊಕ್ಕ ಎರಡಕ್ಕು ದುಃಖ ಕಾಣಕ್ಕ | ಶ್ರೀ ಪುರಂದರದಾಸರು | Rokka Eradakku | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ರೊಕ್ಕ ಎರಡಕ್ಕು ದುಃಖ ಕಾಣಕ್ಕ ||ಪ|| ಮಕ್ಕಳ ಮರಿಗಳ ಮಾಡೋದು ರೊಕ್ಕ | ಸಕ್ಕರೆ ತುಪ್ಪವ ತಿನಿಸೋದು ರೊಕ್ಕ | ಕಕ್ಕುಲಾತಿಯನ್ನು ಬಿಡಿಸೋದು ರೊಕ್ಕ | ಘಕ್ಕನೆ ಹೋದರೆ ಘಾತ ಕಾಣಕ್ಕ ||೧|| ನೆಂಟರ ಇಷ್ಟರ ಮರೆಸೋದು ರೊಕ್ಕ | ಕಂಟಕಗಳ ಪರಿಹರಿಸೋದು ರೊಕ್ಕ | ಗಂಟು ಕಟ್ಟಲಿಕ್ಕೆ ಕಲಿಸೋದು ರೊಕ್ಕ | ತುಂಟತನಗಳನ್ನು ಬಲಿಸೋದು ರೊಕ್ಕ ||೨|| ಇಲ್ಲದ ಗುಣಗಳ ತರಿಸೋದು ರೊಕ್ಕ | ಸಲ್ಲದ ನಾಣ್ಯವ ನಡೆಸೋದು ರೊಕ್ಕ | ಬೆಲ್ಲಕ್ಕಿಂತಲೂ ಬಹು ಸವಿಯಾದ ರೊಕ್ಕ | ಇಲ್ಲದಿರಲು ಬಹು ದುಃಖ ಕಾಣಕ್ಕ ||೩|| ಉಂಟಾದ ಗುಣಗಳ ಮರೆಸೋದು ರೊಕ್ಕ | ಭಂಟರನೆಲ್ಲರ ಬರಿಸೋದು ರೊಕ್ಕ | ಕಂಠಿ ಸರಿಗೆಯನ್ನು ಗಳಿಸೋದು ರೊಕ್ಕ | ಒಂಟೆ ಕುದುರೆ ಆನೆ ತರಿಸೋದು ರೊಕ್ಕ ||೪|| ವಿದ್ಯದ ಮನುಜರ ಕರೆಸೋದು ರೊಕ್ಕ | ಹೊದ್ದಿದ್ದ ಜನರನ್ನು ಬಿಡಿಸೋದು ರೊಕ್ಕ || ಮುದ್ದು ಪುರಂದರ ವಿಠಲನ ಮರೆಸುವ | ಬಿದ್ಹೋಗೋ ರೊಕ್ಕವ ಸುಡು ನೀನಕ್ಕ ||೫|| rokka eraDakku duHKa kANakka ||pa||   makkaLa marigaLa mADOdu rokka | sakkare tuppava tinisOdu rokka | kakkulAtiyannu biDisOdu rokka | Gakkane hOdare GAta kANakka ||1||   neMTara iShTara maresOdu rokka | kaMTakagaLa pariharisOdu rokka | gaMTu kaTTalikke kal...

ಮಧ್ವಮತದ ಸಿದ್ಧಾಂತದ | ಪುರಂದರ ದಾಸರು | Madhwa Navami Prayukta |Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti: Sri Purandara Dasaru ಮಧ್ವಮತದ ಸಿದ್ಧಾಂತದ ಪದ್ಧತಿ |  ಬಿಡಬ್ಯಾಡಿ ಬಿಟ್ಟು ಕೆಡಬ್ಯಾಡಿ || ಪ || ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |  ತಾರತಮ್ಯದಿಂದ ತಿಳಿವೊ ಸನ್ಮಾರ್ಗ ||೧|| ಘೋರ ಯಮನ ಭಯ ದೂರ ಮಾಡಿ |  ಮುರಾರಿಯ ಚರಣವ ಸೇರೋ ಸನ್ಮಾರ್ಗ ||೨|| ಭಾರತೀಶ ಮುಖ್ಯಪ್ರಾಣಂತರ್ಗತ |  ನೀರಜಾಕ್ಷ ನಮ್ಮ ಪುರಂದರ ವಿಠಲನ ||೩|| madhvamatada siddhAMtada paddhati |  biDabyADi biTTu keDabyADi || pa || hari sarvOttamanahudeMbo j~jAnava |  tAratamyadiMda tiLivo sanmArga ||1|| GOra yamana Baya dUra maaDi |  murAriya caraNava sErO sanmArga ||2|| BAratISa muKyaprANaMtargata |  nIrajAkSha namma puraMdara viThalana ||3||

ದುಡು ದುಡು ಓಡಿ ಬಾರೋ | ಶ್ರೀ ಪುರಂದರ ವಿಠಲ | Dudu Dudu Odi Baaro | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ದುಡು ದುಡು ಓಡಿ ಬಾರೋ ದುಡುಕಗಾರ| ದುಡು ದುಡು ಓಡಿ ಬಾರೋ |ಪ|  ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ|  ಪಾಡಿ ಮೈ ಮರೆತು ನಾ ನೋಡಿ ನಲಿಯುವೆನು |ಅಪ| ನಲಿವೆನು ನಿನ್ನಾ ನೋಡಿ ನಾಲ್ಮೊಗರೆಯ ಲಲನೆಯರ ಮಧ್ಯದಲ್ಲಿ|  ಕಾಲ್ ಗೆಜ್ಜೆ ಪೆಂಡೆಗಳು ಘಲುಘಲುರೆನುತಲಿ|  ಸುಲಲಿತಮಹಿಮನೆ ಕೊಳಲ ಕೈಯಲಿ ಪಿಡಿದು |೧| ಪಿಡಿಯೋದು ತರವಲ್ಲವೋ ಪಾಂಡವ ಪಕ್ಷ|  ತಡವೇಕೆ ಮಾಡುವಿಯೋ| ಪಿಡಿಯೋದು ತರವಲ್ಲ ಬಿಡಬೇಡ ಬಿಡಬೇಡ|  ಪಂಡರಿಯಲಿ ನಿಂತ ಪುಂಡಲೀಕ ವರದನೆ |೨| ಗುರು ತಂದೆ ಪುರಂದರ ವಿಠಲ ರಾಯ  ವರ ಪೀತಾಂಬರಧರ ನೀರಜದಳನೇತ್ರ ನಿಗಮಾರ ಸುಂದರ| ನಲಿವೇನು ನಿನ್ನ ನೋಡಿ ಗುರುವಂತರ್ಗತ ಸ್ವಾಮಿ |೩| duDu duDu ODi bArO duDukagAra| duDu duDu ODi bArO |pa|  duDu duDu ODi bA nODi muddADuve|  pADi mai maretu nA nODi naliyuvenu |apa|   nalivenu ninnA nODi nAlmogareya lalaneyara madhyadalli|  kAl gejje peMDegaLu GaluGalurenutali|  sulalitamahimane koLala kaiyali piDidu |1|   piDiyOdu taravallavO pAMDava pakSha|  taDavEke mADuviyO| piDiyOdu taravalla biDabEDa biDabEDa| ...

ಎಂದಿಗಾಹುದೋ ನಿನ್ನ ದರುಶನ | ಶ್ರೀ ವಿಜಯ ದಾಸರು | Endigahudo Ninna | Sri Vijaya Dasaru

Image
ರಚನೆ :  ಶ್ರೀ ವಿಜಯ ದಾಸರು  Kriti : Sri Vijaya Dasaru ಎಂದಿಗಾಹುದೋ ನಿನ್ನ ದರುಶನ ||ಪ|| ಅಂದಿಗಲ್ಲದೆ ಬಂಧ ನೀಗದೋ ||ಅಪ|| ಗಾನಲೋಲ ಶ್ರೀವತ್ಸಲಾಂಛನ  ದಾನವಾಂತಕ ದೀನ ರಕ್ಷಕ ||೧|| ಯಾರಿಗೆ ಮೊರೆ ಇಡಲೋ ದೇವನೇ  ಸಾರಿ ಬಂದು ನೀ ಕಾಯೋ ಬೇಗನೇ ||೨|| ಗಜವ ಪೊರೆದೆಯೋ ಗರುಡಗಮನನೇ | ತ್ರಿಜಗಭರಿತ ಶ್ರೀ ವಿಜಯ ವಿಠಲ ||೩|| eMdigAhudO ninna daruSana ||pa||   aMdigallade baMdha nIgadO ||apa||   gAnalOla SrIvatsalAMChana  dAnavAMtaka dIna rakShaka ||1||   yArige more iDalO dEvanE  sAri baMdu nI kAyO bEganE ||2||   gajava poredeyO garuDagamananE | trijagabharita SrI vijaya viThala ||3||

ಮೂಷಿಕ ವಾಹನ ದೋಷ ವಿನಾಶನ | ಶ್ರೀ ಗುರುಜಗನ್ನಾಥ ದಾಸರು | Mooshika Vahana | Sri Guru Jagannatha Dasaru

Image
ಸಾಹಿತ್ಯ : ಶ್ರೀ ಗುರುಜಗನ್ನಾಥ ದಾಸರು  Kruti:Sri Guru Jagannatha Dasaru ಮೂಷಿಕ ವಾಹನ ದೋಷ ವಿನಾಶನ  ದೋಷವ ನೋಡದೆ ಪೋಷಿಸು ಎನ್ನ ||ಪ|| ಶೇಷಶಯನನ ವಿಶೇಷ ಜ್ಞಾನವನಿತ್ತು |  ಈಶಣತ್ರಯ ಭವ ಸೋಸವಗೈಸೋ ದೇವಾ ||೧|| ನವ ವಿಧ ಭಕುತಿಯು ಸವಣತ್ರಿ ಪೂಜೆಯು |  ನವ ನವ ಪಾಲಿಸೋ ಭವಹರ ಪುತ್ರನೇ ||೨|| ಪಾತಕವನ ಧೂಮಕೇತನೆ ಗುರು ಜಗನ್ನಾಥ  ವಿಠಲ ಸಂಪ್ರೀತಿ ಪಾತ್ರನು ನೀನೇ ||೩|| mUShika vaahana dOSha vinaashana  dOShava nODade pOShisu enna ||pa|| shEShashayanana vishESha j~jaanavanittu |  IshaNatraya bhava sOsavagaisO dEvaa ||1|| nava vidha bhakutiyu savaNatri pUjeyu |  nava nava paalisO bhavahara putranE ||2|| paatakavana dhUmakEtane guru jagannaatha  viThala saMprIti paatranu nInE ||3||

ಸುಂದರಿ ರಂಗಾನ ತಂದು | ಶ್ರೀ ಕನಕದಾಸರು | Sundari Rangana Tandu | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ಸುಂದರಿ | ರಂಗಾನ ತಂದು ತೋರಾ ಒಂದಾರ ಘಳಿಗ್ಯಾರ |ಪ| ನೀರೊಳು ಮೀನನಾಗಿ ಒಲಿವ ಧರೆ ಭಾರವನ್ಹೊರುವಾ... ವರಾಹನಾಗಿ ನರಕಾಸುರನ ತರಿವ ಕೋರೆಲಿ ಮಣ್ಣು ಬಗಿವಾ.... ಒಡಮೂಡಿ ಕಂಭದಿಂದ ಗುಡುಗುಡಿಸುತ್ತಾ ಬರುವ ದೃಢವುಳ್ಳ ಬಲಿ  ಚಕ್ರವರ್ತಿ ಪಾಲಿಸಿದ ವರವ | ಕೊಡಲಿ ಪಿಡಿದು ಹಡೆದ ತಾಯ ಕಡಿತಾಲಿರುವ |  ಮಡದಿ ಒಯ್ದ ರಾವಣನ ಹೊಡೆದು ದಶಶಿರವ ಭೂಮಿ  ಬಿಟ್ಟು ತಿರುಗುವಂತ ತ್ರಿಪುರಾಂತಪುರವ| ಏರಿಸಿದ ಅಶ್ವಮೇಧ ಅರ್ತಿಯಿಂದ ಮೆರೆವಾ ||೧|| ಮತ್ಸ್ಯನಾಗಿ ಮೊದಲಿನಲ್ಲಿ ಕೂರ್ಮನಾಗಿ ಬಂದೂ...  ಓರೆಲಿ ಕಾಯ್ದ ದೈತ್ಯನ ಕೊಂದು ಬಹುಕ್ರೋಧದಿಂದ...  ದುರುಳ ಹಿರಣ್ಯಕನ ಕರುಳು ಬಗೆದು ತೋಡಿ ಕೊರಳೊಳಗೆ ಧರಿಸಿದನು  ಸರಗಳನ್ನೇ ಮಾಡಿ ಕೊರಳು ಕೊಯ್ದು ಎಲ್ಲಮ್ಮನ ಪುತ್ರನಾಗಿ ಕಾಯ್ದಿ  ಸರಳು ಬಾಣವನ್ನೆ ಹೂಡಿ ಲಂಕಾ ಮಥನ ಮಾಡಿ ಎರಳೆ ಗಂಗಳೆ  ಪತಿವ್ರತೆಯರ ಕೆಡಿಸಿದನು ಕೂಡಿ ಮರುಳುತನದಿಂದ ಸಿಗದೆ ಹಯವನೇರಿ ಓಡಿ ||೨|| ಬ್ರಹ್ಮಾಂಗೆ ಒಲಿದು ವೇದವ ತರುವ ಬ್ರಹ್ಮಾಂಡವನ್ಹೊರುವಾ...  ಘಮ್ಮೀಲೆ ಕಾಯ್ದವನಾಗಿರುವ ಸುಮ್ಮನೆ ಹೋಗಿಬರುವ...  ಸಿಟ್ಟಿನಿಂದ ನಾರಸಿಂಹ ರೂಪನಾಗಿ ಬಂದ ಸೃಷ್ಟಿಯೊಳು ಪರಶುರಾಮ  ರೇಣುಕೆಯ ಕಂದ ಕಷ್ಟಾಚರಿಸಿದನು ರಾಮ ವನವಾಸದಿಂದ  ಕೃಷ್ಣಾವತಾರ ಬೌದ್ಧ ಕಲ್ಕಿ ರೂಪ ಒಂದೊಂದ ಇಷ್ಟುಪರಿ ವರ್ಣಿಸ್ತಾರ  ಹತ್ತವ...

ಶ್ರೀ ವೆಂಕಟೇಶ ಸ್ತವರಾಜ | ಶ್ರೀ ಗುರುಜಗನ್ನಾಥವಿಠಲ ದಾಸರು | Sri Venkatesha Stavaraja | Guru Jagannatha Vithala

Image
ಸಾಹಿತ್ಯ : ಶ್ರೀ ಗುರು ಜಗನ್ನಾಥ ವಿಠಲ ದಾಸರು Kruti:Sri Guru Jagannatha Vithala Dasaru ಶ್ರೀರಮಣ ಸರ್ವೇಶ ಸರ್ವಗ | ಸಾರ ಭೋಕ್ತ ಸ್ವತಂತ್ರ ಸರ್ವದಾ ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||  ಸಾರಿದವರಘ ದೂರ ಗೈಸಿ ಸೂರಿ ಜನರಿಗೆ ಸೌಖ್ಯ ನೀಡುವ ಧೀರ ವೆಂಕಟ ರಮಣ ಕರುಣದಿ ಪೊರೆಯೋ ನೀ ಎನ್ನ ||೧|| ಘನ್ನ ಮಹಿಮಾಪನ್ನ ಪಾಲಕ ನಿನ್ನ ಹೊರತಿನನ್ಯ ದೇವರ ಮನ್ನದಲಿ ನಾ ನೆನಿಸನೆಂದಿಗೂ ಬನ್ನ ಬಡಿಸಿದರೂ  ಎನ್ನ ಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ ಚನ್ನ ವೆಂಕಟರಮಣ ಕರುಣದಿ ಪೊರೆಯೋ ನೀ ಎನ್ನ ||೨|| ಲಕುಮಿ ಬೊಮ್ಮ ಭವಾಮರೇಶರು | ಭಕುತಿ ಪೂರ್ವಕ ನಿನ್ನ ಭಜಿಸಿ ಸಕಲ ಲೋಕಕೆನಾಥರೆನಿಪರು ಸರ್ವಕಾಲದಲಿ  ನಿಖಿಳ ಜೀವರ ಪೊರೆವ ದೇವನೆ ಭಕುತಿ ನೀಯೆನಗೀಯದಿರಲು ವ್ಯಕುತ ವಾಗ್ಯಪಕೀರ್ತಿ ಬಪ್ಪುದು ಶ್ರೀನಿಕೇತನನೆ ||೩|| ಯಾಕೆ ಪುಟ್ಟದೊ ಕರುಣ ಎನ್ನೊಳು ಸಾಕಲಾರೆಯ ನಿನ್ನ ಶರಣನ |ನೂಕಿ ಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ||  ನೋಕನೀಯನೆ ನೀನೆ ಎನ್ನನು | ಜೋಕೆ ಯಿಂದಲಿ ಕಾಯೋ ಬಿಡದೆ | ಏಕ ದೇವನು ನೀನೆ ವೆಂಕಟ ಶೇಷಗಿರಿವಾಸ ||೪|| ಅಂಬುಜಾಂಬಕ ನಿನ್ನ ಪದಯುಗ ನಂಬಿಕೊಂಡೀಪರಿಯಲಿರುತಿರೆ | ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ ||  ಬಿಂಬ ಮೂರುತಿ ನಿನ್ನ ಕರಗತ ಕಂಬುವರವೇ ಗತಿಯೋ ವಿಶ್ವ ಕುಟುಂಬಿ ಎನ್ನನು ಸಲಹೋ ಸಂತತ ಶೇಷಗಿರಿವಾಸ ||೫|| ಸಾರ ಶಿರಿ ವೈಕುಂಠ ತ್ಯಜಿಸಿ ಧಾರುಣಿಯೊಳು ...

ಬೆಳಗು ಝಾವದಿ ಬಾರೊ | ಹಯವದನ | Belagu Jhavadi Baaro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬೆಳಗು ಝಾವದಿ ಬಾರೊ ಹರಿಯೆ ಚರಣ ತೊಳೆದು ಜಲದಿ ತೀರ್ಥಪಾನ ಮಾಡುವೆನೊ ||ಪ|| ನೀರ ಒಳಗೆ ನಿಂತುಕೊಂಡು ಬೆನ್ನ ಭಾರ ಪೊತ್ತು ನಿನ್ನವರ ಕಾದುಕೊಂಬೆ ಮೋರೆ ತಗ್ಗಿಸಿದರೇನೆಂಬೆ ಜಗದಿ ನಾರಸಿಂಹನಾಗಿ ಪೂಜೆಯಗೊಂಬೆ ||೧|| ಬಲಿಯ ದಾನವ ಬೇಡಿದೆಲ್ಲೊ ಕ್ಷತ್ರಿ ಕುಲವ ಸವರಿ ಕೊಡಲಿಯ ಪಿಡಿದೆಲ್ಲೊ ಬಲವಂತ ನಿನಗಿದಿರಿಲ್ಲೊ ನಿನ್ನ ಲಲನೆಯ ತಂದು ರಾಜ್ಯವನ್ನಾಳಿದೆಲ್ಲೊ ||೨|| ಗೋಕುಲದೊಳು ಪುಟ್ಟಿದೆಲ್ಲೊ ಲೋಕ ಕಾಕು ಮಾಡಲು ಬುದ್ಧರೂಪನಾದೆಲ್ಲೊ ಯಾಕೆ ಹಯವನೇರಿದೆಲ್ಲೊ ನಮ್ಮ ಸಾಕುವ ಹಯವದನ ನೀನೆ ಬಲ್ಲೆಲ್ಲೊ ||೩|| beLagu Jaavadi baaro hariye caraNa toLedu jaladi tIrthapaana maaDuveno ||pa|| nIra oLage niMtukoMDu benna bhaara pottu ninnavara kaadukoMbe mOre taggisidarEneMbe jagadi naarasiMhanaagi pUjeyagoMbe ||1|| baliya daanava bEDidello kShatri kulava savari koDaliya piDidello balavaMta ninagidirillo ninna lalaneya taMdu raajyavannaaLidello ||2|| gOkuladoLu puTTidello lOka kaaku maaDalu buddharUpanaadello yaake hayavanEridello namma saakuva hayavadana nIne ballello ||3||

ಶರಣರ ಸುರಭೂಜ | ಕಮಲೇಶ ವಿಠಲ | Sharanara Surabhooja | Sri Kamalesha Vithala Dasaru

Image
ಸಾಹಿತ್ಯ : ಶ್ರೀ ಕಮಲೇಶ ವಿಠಲ ದಾಸರು Kruti:Sri Kamalesha Vittala Dasaru ಶರಣರ ಸುರಭೂಜ ಗುರುರಾಜ ||ಪ|| ವರ ಮಂತ್ರಾಲಯ ಪುರಮಂದಿರ ತವ | ಸುಂದರ ಮುನೀಂದ್ರ ಭಾಸ್ಕರ ಸಮತೇಜ ||೧|| ಕಾಮಿತಾರ್ಥಗಳ ಕಾಮಧೇನುವಿನ | ಸೀಮ ಮೀರಿ ಕೊಡುವ ಮಹಾರಾಜ ||೨|| ಭೇಶ ಕೋಟಿ ಸಂಕಾಶನಾದ  ಕಮಲೇಶ ವಿಠಲನ ದಾಸನೇ ಸಹಜ ||೩|| SaraNara suraBUja gururAja ||pa||   vara maMtrAlaya puramaMdira tava | suMdara munIMdra BAskara samatEja ||1||   kAmitArthagaLa kAmadhEnuvina | sIma mIri koDuva mahArAja ||2||   BESa kOTi saMkASanAda  kamalESa viThalana dAsanE sahaja ||3||

ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ | ಶ್ರೀ ಪುರಂದರ ವಿಠಲ | Hyange Bareditto | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ, ಹಾಂಗೆ ಇರಬೇಕು ಸಂಸಾರದಲ್ಲಿ ||ಪ|| ಹಕ್ಕಿ ಅಂಗಳದಲ್ಲಿ ಬಂದು ಕೂತಂತೆ, ಆ ಕ್ಷಣದಲ್ಲಿ ಹಾರಿ ಹೋದಂತೆ ||೧|| ನಾನಾ ಪರಿಯಲಿ ಸಂತೆ ನೆರೆದಂತೆ, ನಾನಾ ಪಂಥವ ಹಿಡಿದು ಹೋದಂತೆ ||೨|| ಮಕ್ಕಳಾಡಿ ಮನೆ ಕಟ್ಟಿದಂತೆ, ಆಟ ಸಾಕೆಂದು ಅಳಿಸಿ ಹೋದಂತೆ ||೩|| ವಸತಿಕಾರನು ವಸತಿ ಕಂಡಂತೆ, ಹೊತ್ತಾರೆದ್ದು ವಲಸೆ ಹೋದಂತೆ ||೪|| ಸಂಸಾರ ಪಾಶವ ನೀನೇ ಬಿಡಿಸಯ್ಯ, ಕಂಸಾರಿ ಪುರಂದರ ವಿಠಲರಾಯ ||೫|| hyAMge baredittO prAcInadalli, hAMge irabEku saMsAradalli ||pa|| hakki aMgaLadalli baMdu kUtaMte, A kShaNadalli hAri hOdaMte ||1|| nAnA pariyali saMte neredaMte, nAnA paMthava hiDidu hOdaMte ||2|| makkaLADi mane kaTTidaMte, ATa sAkeMdu aLisi hOdaMte ||3|| vasatikAranu vasati kaMDaMte, hottAreddu valase hOdaMte ||4|| saMsAra pASava nInE biDisayya, kaMsAri puraMdara viThalarAya ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru