ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶೇಷಗಿರಿ ದೊರೆ ನಮ್ಮ | ವೆಂಕಟವಿಠಲ ದಾಸರು | Sheshagiri Dore | Sri Venkatavithala Dasaru


ಸಾಹಿತ್ಯ : ಶ್ರೀ ವೆಂಕಟವಿಠಲ ದಾಸರು 
Kruti: Sri Venkatavittala Dasaru


ಶೇಷಗಿರಿ ದೊರೆ ನಮ್ಮ ಶ್ರೀನಿವಾಸನ ಕಂಡೆ ಶ್ರೀನಿವಾಸನ |ಪ|
ಶ್ರೀನಿವಾಸನ ಕಂಡೆ ಶ್ರೀನಿವಾಸನ 
ಜ್ಞಾನ ಗುರು ಮಧ್ವಮುನಿ ಮಾನಸ ಹಂಸನ ಕಂಡೆ ||ಅಪ||

ಗರುಡ ಶೇಷ ಗಿರಿಜಾರಮಣ ಸುರಭಾರರೆಲ್ಲ |
ನಿರುತ ಸೇವಿಸುವ ಪಾದ ಸರಸಿಜಯುಗಳನ್ನ ಕಂಡೆ ||೧||

ಮಾನಿನೀ ರಮಾದೇವಿ ಬಣ್ಣಿಸುತ್ತಲೀ |
ದಾನವಾಂತಕನ ಪಾದ ಜಾನು ಜಂಘಗಳನ್ನು ಕಂಡೆ ||೨||

ಪರಮಾತ್ಮನ್ನ ಗುಣಗಳನ್ನ ವರ್ಣಿಸುತ್ತಲೀ |
ಸಿರಿದೇವಿ ಇರುವ ವಕ್ಷಸ್ಥಳವನ್ನು ಕಣ್ಣಾರೆ ಕಂಡೆ ||೩||

ವಾಸವಾರ್ಜುನನ ರಥದ ಮುಂದೆ ನಿಲ್ಲುವನಾ |
ಏಸು ಮಹಿಮೆಯಿಂದ ಇರುವ ಹರಿಯ ಹಸ್ತಗಳನ್ನು ಕಂಡೆ ||೪||

ಹಾರಪದಕ ಉಂಗುರ ಕಿರೀಟ ಕುಂಡಲ |
ಮಾರ ಜನಕ ಧರಿಸಿದ ಆಭರಣದ ಸೊಬಗನ್ನು ಕಂಡೆ ||೫||

ಮಂದಗಮನೆ ಗೋಪಿಕಂದ ಬಾಯೆಂದತ್ತಲೂ ||
ಮಂದಹಾಸದಿಂದ ನಗುವ ಸುಂದರ ವದನನನ್ನು ಕಂಡೆ ||೬||

ಕುಕ್ಷಿಯೋಳೀರೇಳು ಜಗವ ರಕ್ಷಿಸುವವನ ||
ಪಕ್ಷಿಯ ಮೇಲೇರಿ ಬರುವ ಲಕ್ಷ್ಮೀಯ ರಮಣನ್ನ ಕಂಡೆ ||೭||

ಮಂಡೂಕಾರಿ ಪರ್ವತದಲ್ಲಿ ನೆಲೆಯಾಗಿಪ್ಪವನ 
ಪುಂಡರೀಕಾಕ್ಷ ಸಿರಿ ವೆಂಕಟವಿಠಲನ್ನ ಕಂಡೆ ||೮||

SEShagiri dore namma SrInivAsana kaMDe SrInivAsana |pa|
SrInivAsana kaMDe SrInivAsana 
j~jAna guru madhvamuni mAnasa haMsana kaMDe ||apa||
 
garuDa SESha girijAramaNa suraBArarella |
niruta sEvisuva pAda sarasijayugaLanna kaMDe ||1||
 
mAninI ramAdEvi baNNisuttalI |
dAnavAMtakana pAda jAnu jaMGagaLannu kaMDe ||2||
 
paramAtmanna guNagaLanna varNisuttalI |
siridEvi iruva vakShasthaLavannu kaNNAre kaMDe ||3||
 
vAsavArjunana rathada muMde nilluvanA |
Esu mahimeyiMda iruva hariya hastagaLannu kaMDe ||4||
 
hArapadaka uMgura kirITa kuMDala |
mAra janaka dharisida ABaraNada sobagannu kaMDe ||5||
 
maMdagamane gOpikaMda bAyeMdattalU ||
maMdahAsadiMda naguva suMdara vadananannu kaMDe ||6||
 
kukShiyOLIrELu jagava rakShisuvavana ||
pakShiya mElEri baruva lakShmIya ramaNanna kaMDe ||7||
 
maMDUkAri parvatadalli neleyAgippavana 
puMDarIkAkSha siri veMkaTaviThalanna kaMDe ||8||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru