ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೃಷ್ಣ ನೀ ಬೇಗನೇ ಬಾರೋ | ಶ್ರೀ ಕೃಷ್ಣ | Krishna Nee Begane Baro | Sri Vyasarajaru


ಸಾಹಿತ್ಯ :  ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti:    Sri Vyasarajaru (Sri Krishna)


ಕೃಷ್ಣ ನೀ ಬೇಗನೇ ಬಾರೋ ||ಪ||
ಬೇಗನೇ ಬಾರೋ ಮುಖವನ್ನು ತೋರೋ ||ಅಪ||  

ಹುಟ್ಟಿದ್ದು ಮಧುರೆಲಿ ಬೆಳೆದದ್ದು ಗೋಕುಲ|
ಜಲಕ್ರೀಡೆಯಾಡಿದ್ದು ಯಮುನಾ ನದೀ ತೀರ ||೧||

ಕಾಲಲಂದುಗೆ ಗೆಜ್ಜೆ ನೀಲಾದ ಬಾವುಲಿ|
ನೀಲವರ್ಣನೆ ಶ್ಯಾಮ ನಾಟ್ಯವಾಡುತ ಬಾರೋ ||೨||  

ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ|
ಕೊರಳಲ್ಲಿ ಹಾಕಿದ ವೈಜಯಂತಿ ಮಾಲೆ ||೩||

ಕಾಶೀಪೀತಾಂಬರ ಕೈಯಲ್ಲಿ ಕೊಳಲು |
ಪೂಸಿದ ಶ್ರೀಗಂಧ ಮೈಯೊಳು ಘಮ ಘಮ ||೪||  

ತಾಯಿಗೆ ಬಾಯಲ್ಲಿ ಮೂರ್ಜಗ ತೋರಿದ|  
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ ||೫||

kRuShNa nI bEganE bArO ||pa||
bEganE bArO muKavannu tOrO ||apa||
 
huTTiddu madhureli beLedaddu gOkula|
jalakrIDeyADiddu yamunA nadI tIra ||1||
 
kAlalaMduge gejje nIlAda bAvuli|
nIlavarNane SyAma nATyavADuta bArO ||2||
 
uDiyalli uDugejje beraLalli uMgura|
koraLalli hAkida vaijayaMti mAle ||3||
 
kASIpItAMbara kaiyalli koLalu|
pUsida shrIgaMdha maiyoLu ghama ghama ||4||
 
tAyige bAyalli moorjaga tOrida|
jagadOddhAraka namma uDupi SrIkRuShNa ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru