ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೀರೆ ತೋರೆಲೆ ಜಗತ್ಪಾಲ | ಶ್ರೀ ಮಹಿಪತಿಸುತ ದಾಸರು | Neere Torele Jagatpala | Sri Mahipatisuta Dasaru


ಸಾಹಿತ್ಯ : ಶ್ರೀ ಮಹಿಪತಿಸುತ ದಾಸರು   
Kruti:   Sri Mahipatisuta Dasaru


ನೀರೆ ತೋರೆಲೆ ಜಗತ್ಪಾಲ ಮುಕುಂದನ ||ಪ||
ಶೂಲಧರನ ಮಿತ್ರನ ತೋರೇ ||ಅಪ||

ಪಾಂಡವವರದ ಶ್ರೀ ಪುಂಡರೀಕಾಕ್ಷನ 
ಚಂದ್ರಕೋಟಿ ಪ್ರಕಾಶನ
ಕುಂಡಲ ವಿಭೂಷಿತ ಕಂಠಸುಶೋಭಿತ ಪುಂಡಲೀಕ
ವರದ ಶ್ರೀ ಪಾಂಡುರಂಗನ ||೧||

ಪರಮವರಪುರಾಣ ಪುರುಷೋತ್ತಮನ
ನರಕಾಸುರ ಮರ್ದನ ಗೋಪಾಲನ
ಉರಾಗಾರಿ ಗಮನನ ನಿರುಪಮ ಚರಿತನಾ-
ಗ್ರಜನಾದ ವಾಸುದೇವ ಮುಕುಂದನ ||೨||

ಸನಕ ಸನಂದನ ಮುನಿಜನ ಮಾನಸ
ಅನುಪಮ ಅನಂತ ಮಹಿಮನ
ವನರುಹ ಯೋಗಿವಂದ್ಯ ಮುಕುಂದನ
ಘನ ಮಹಿಪತಿಸುತಪ್ರಭು ಶ್ರೀಕೃಷ್ಣನ ||೩||

nIre tOrele jagatpaala mukuMdana ||pa||
SUladharana mitrana tOrE ||apa||

paaMDavavarada SrI puMDarIkaakShana 
chaMdrakOTi prakaaSana
kuMDala vibhUShita kaMThasuSObhita puMDalIka
varada SrI paaMDuraMgana ||1||

paramavarapuraaNa puruShOttamana
narakaasura mardana gOpaalana
uraagaari gamanana nirupama caritanaa-
grajanaada vaasudEva mukuMdana ||2||

sanaka sanaMdana munijana maanasa
anupama anaMta mahimana
vanaruha yOgivaMdya mukuMdana
ghana mahipatisutaprabhu SrIkRuShNana ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru