ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಾಳಿಂಗನಾ ಮೆಟ್ಟಿ | ಶ್ರೀ ಕೃಷ್ಣ | Kalingana Metti | Sri Vyasarajaru


ಸಾಹಿತ್ಯ : ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti:   Sri Vyasarajaru (Sri Krishna)


ಕಾಳಿಂಗನಾ ಮೆಟ್ಟಿ ನಾಟ್ಯವಾಡಿದ ಕಂಜನಾಭ ಕೃಷ್ಣನು ||ಪ||

ಕಾಳಿಂಗನಾ ಮೆಟ್ಟಿ ಆಡಿದ ಭರದಲ್ಲಿ
ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ
ತರಳತನದಲ್ಲಿ ಯಮುನೆಯ ಮಡುವಲ್ಲಿ ||ಅಪ||

ಕಾಲಲಿ ಗೆಜ್ಜೆ ಘಲುಘಲು ಘಲುಕೆಂದು  
ಫಾಲದಿ ತಿಲಕವು ಹೊಳೆ ಹೊಳೆ ಹೊಳೆಯುತ್ತ  
ಕರ್ಣ ಕುಂಡಲವು ಥಳು ಥಳು ಥಳುಕೆಂದು
ಲಲಿತ ಮಣಿಮಯೋ ಜ್ವಲಿತ ಪದಕಹಾರ
ಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ ||೧||  

ಸುರರು ದುಂದುಭಿಯ ಢಣಢಣ ಢಣರೆಂದು
ಮೊರೆಯೆ ತಾಳಗಳು ಝಣಝಣ ಝಣಾರೆಂದು
ಹರಬ್ರಹ್ಮ ಸುರರು ತಥ್ಥೈತಥ್ಥೈಯೆನ್ನಲು
ನಾರದ ತುಂಬುರು ಸಿದ್ಧರು ವಿದ್ಯಾ-  
ಧರರು ಅಂಬರದಲ್ಲಿ ಆಡುತ್ತ ಪಾಡಲು ||೨||

ಯೋಗಿಗಳೆಲ್ಲ ಜಯ ಜಯ ಜಯವೆನ್ನೆ  
ಭೋಗಿಗಳೆಲ್ಲ ಭಯಭಯ ಭಯವೆನ್ನೆ
ನಾಗಕನ್ಯೆಯರು ಅಭಯ ಅಭಯವೆನ್ನೆ
ಜಗದೀಶ ಶ್ರೀ ಕೃಷ್ಣ ಜನನಿಯ ಕಂಡೋಡಿ
ದಿಗಿದಿಗನೆ ಬಂದು ಬಿಗಿ ಬಿಗಿದಪ್ಪುತ ||೩||

kaaLiMganaa meTTi naaTyavaaDida kaMjanaabha kRuShNanu ||pa||

kaaLiMganaa meTTi ADida bharadalli
shrIvatsa uradalli koraLalli vanamaale
taraLatanadalli yamuneya maDuvalli ||apa||

kaalali gejje ghalughalu ghalukendu
Paaladi tilakavu hoLe hoLe hoLeyutta
karNa kunDalavu ThaLu ThaLu ThaLukendu
lalitha maNimayo jvalitha padakahaara
jvalita kaaMti beLaguta dikkugaLalli ||1||

suraru duMdubhiya DhaNaDhaNa DhaNareMdu
moreye taaLagaLu JaNaJaNa JaNaareMdu
harabrahma suraru taththaitaththaiyennalu
naarada tuMburu siddharu vidyaa-
dhararu aMbaradalli ADutta paaDalu ||2||

yOgigaLella jaya jaya jayavenne
bhOgigaLella bhayabhaya bhayavenne
naagakanyeyaru abhaya abhayavenne
jagadeesha sirikRuShNa jananiya kaMDonDi
digidigane bandu bigi bigidapputa ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru